ಇತ್ತೀಚೆಗೆ ನಟಿರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ಭಾವುಕ ಸಂದೇಶ ಅಭಿಮಾನಿಗಳ ಗಮನ ಸೆಳೆದಿದೆ. ಪ್ರೀತಿಯ ಬಗ್ಗೆ ಅವರು ಹೇಳಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ನಟಿ ತಮ್ಮ ಅಭಿಮಾನಿಯೊಬ್ಬರು ಬರೆದಿದ್ದ ಬ್ಲಾಗ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಈ ಮಾತುಗಳನ್ನು ಹಂಚಿಕೊಂಡಿದ್ದಾರೆ. ಧಾಮಿನಿ ಎಂಬ ಅಭಿಮಾನಿ ತನ್ನ ಬ್ಲಾಗ್‌ನಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಬಗ್ಗೆ ಭಾವನಾತ್ಮಕವಾಗಿ ಒಂದು ಬರಹ ಬರೆದಿದ್ದರು. ಆ ಬರಹವನ್ನು ಓದಿದ ರಶ್ಮಿಕಾ ಅದನ್ನು ರಿಟ್ವೀಟ್ ಮಾಡಿದ್ದು, ಅದಕ್ಕೆ ತಮ್ಮ ಮನದಾಳದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಕುರಿತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿವೆ. ಇವರಿಬ್ಬರ ಬಗ್ಗೆ ಹಲವು ರೀತಿಯ ಪ್ರತಿಕ್ರಿಯೆಗಳು ಬರುತ್ತಿರುವ ಈ ಸಮಯದಲ್ಲಿ ರಶ್ಮಿಕಾ ಹಂಚಿಕೊಂಡಿರುವ ಸಂದೇಶ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ತಮ್ಮ ಬಗ್ಗೆ ಬರೆಯಲಾಗಿರುವ ಅನೇಕ ಬರಹಗಳನ್ನು ಇಷ್ಟು ದಿನ ಓದಿದ್ದರೂ ಇಷ್ಟು ಭಾವನಾತ್ಮಕವಾಗಿ ನಾನು ಪ್ರತಿಕ್ರಿಯಿಸಿರುವುದು ಇದೇ ಮೊದಲ ಬಾರಿ ಎಂದು ರಶ್ಮಿಕಾ ಹೇಳಿದ್ದಾರೆ.
ಧಾಮಿನಿ ಬರೆದಿದ್ದ ಬರಹ ಓದಿದ ಬಳಿಕ ತಮ್ಮ ಮನಸ್ಸಿನಲ್ಲಿ ಹಲವಾರು ಭಾವನೆಗಳು ಮೂಡಿದವು ಎಂದು ರಶ್ಮಿಕಾ ತಿಳಿಸಿದ್ದಾರೆ. ಹೇಳಬೇಕಾದದ್ದು ತುಂಬಾ ಇದ್ದರೂ, ಹೇಳಲು ಸಾಧ್ಯವಾಗುವುದೇ ತುಂಬಾ ಕಡಿಮೆ ಎಂದು ಅವರು ಹೇಳಿದ್ದಾರೆ. ಕೆಲವೊಮ್ಮೆ ಜೀವನದಲ್ಲಿ ನಡೆಯುವ ಸಂಗತಿಗಳನ್ನು ಪದಗಳಲ್ಲಿ ಹೇಳುವುದು ತುಂಬಾ ಕಷ್ಟವಾಗುತ್ತದೆ ಎಂದು ಕೂಡ ಅವರು ಸೂಚಿಸಿದ್ದಾರೆ. ತಮ್ಮ ಜೀವನದಲ್ಲಿ ಈಗ ಒಂದು ಹೊಸ ಪ್ರಯಾಣ ನಡೆಯುತ್ತಿದೆ. ಆ ಪ್ರಯಾಣದಲ್ಲಿ ತಮ್ಮದೇ ಆದ ಒಂದು ಜಾಗವನ್ನು ಹುಡುಕಿಕೊಳ್ಳುತ್ತಿರುವೆ ಎಂದು ರಶ್ಮಿಕಾ ಹೇಳಿದ್ದಾರೆ.
ಈ ಪ್ರಯಾಣದ ಭಾಗವಾಗಿರುವ ಪ್ರತಿಯೊಂದು ಅನುಭವಕ್ಕೂ ನಾನು ಕೃತಜ್ಞಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ನನ್ನ ಜೀವನದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಕೆಲವರು ಗಮನಿಸಿ ಅರ್ಥ ಮಾಡಿಕೊಂಡಿರುವುದು ನನಗೆ ಸಂತೋಷ ನೀಡಿದೆ ಎಂದು ರಶ್ಮಿಕಾ ತಿಳಿಸಿದ್ದಾರೆ. ಅದಕ್ಕಾಗಿ ಧಾಮಿನಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.
I have never become so emotional reading something written about me this much in a long long time..
— Rashmika Mandanna (@iamRashmika) March 8, 2026
There is so much I want to say but so little I can say.
I am finding my own room and that’s a journey I am so grateful for..
Thankyou for recognising it..❤️
About love all I… https://t.co/f7W5vv0UJ5
ಪ್ರೀತಿಯ ಬಗ್ಗೆ ಮಾತನಾಡಿದ ರಶ್ಮಿಕಾ, ಜೀವನದಲ್ಲಿ ಪ್ರೀತಿ ಎಂದರೆ ಕೇವಲ ಬಂಧನವಾಗಿರಬಾರದು ಎಂದು ಹೇಳಿದ್ದಾರೆ. ಪ್ರೀತಿ ನಮ್ಮನ್ನು ಬಂಧಿಸುವುದಕ್ಕಿಂತ ನಮ್ಮನ್ನು ಮುಕ್ತಗೊಳಿಸಬೇಕು. ನಾವು ಯಾರು ಎಂಬುದನ್ನು ಅರಿಯಲು ಸಹಾಯ ಮಾಡಬೇಕು. ಅದೇ ನಿಜವಾದ ಪ್ರೀತಿ ಎಂದು ಅವರು ಹೇಳಿದ್ದಾರೆ. ನಿಮ್ಮನ್ನು ಸ್ವತಂತ್ರಗೊಳಿಸುವ ಅಥವಾ ಮುಕ್ತಗೊಳಿಸುವ ಪ್ರೀತಿಯನ್ನು ಹುಡುಕಿಕೊಳ್ಳಿ ಎಂಬುದು ಅವರ ಸಂದೇಶ.
ರಶ್ಮಿಕಾ ಹಂಚಿಕೊಂಡ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳನ್ನು ತಂದಿದೆ. ಅನೇಕ ಅಭಿಮಾನಿಗಳು ಅವರ ಮಾತಿಗೆಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಅವರ ಅಭಿಪ್ರಾಯವನ್ನು ಬೆಂಬಲಿಸಿ ಜೀವನದಲ್ಲಿ ನಿಜವಾದ ಪ್ರೀತಿ ಎಂದರೆ ಪರಸ್ಪರ ಗೌರವ ಮತ್ತು ಸ್ವಾತಂತ್ರ್ಯ ಎಂದು ಹೇಳಿದ್ದಾರೆ.