Jan 25, 2026 Languages : ಕನ್ನಡ | English

ಸ್ನೇಹಿತರ ಜೊತೆ ಇದ್ದಕಿದ್ದಂತೆ ಜಗಳಕ್ಕಿಳಿದ ರಾಜ್ ಬಿ ಶೆಟ್ಟಿ - ಇಲ್ಲಿದೆ ನೋಡಿ ವೈರಲ್ ವಿಡಿಯೋ

ಕನ್ನಡ ಚಿತ್ರರಂಗದ ವಿಭಿನ್ನ ಶೈಲಿಯ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ತಮ್ಮ ಕಲಾತ್ಮಕ ಕೌಶಲ್ಯಕ್ಕಿಂತಲೂ ಹೊರತಾಗಿ ಕ್ರೀಡಾಂಗಣದಲ್ಲಿ ತೋರಿದ ಉತ್ಸಾಹದಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಶೂಟಿಂಗ್ ಮಧ್ಯೆ ಬಿಡುವಿನ ಸಮಯದಲ್ಲಿ ಅವರ ಗೆಳೆಯರ ಜೊತೆ ವಾಲಿಬಾಲ್ ಆಡುತ್ತಿರುವ ರಾಜ್ ಅವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಹೌದು ರಾಜ್ ಬಿ ಶೆಟ್ಟಿ ಅವರಿಗೆ ವಾಲಿಬಾಲ್ ಆಟದ ಮೇಲೆ ವಿಶೇಷ ಆಸಕ್ತಿ ಇದೆ ಎನ್ನಬಹುದು. 

ಕನ್ನಡ ನಟ ರಾಜ್ ಬಿ ಶೆಟ್ಟಿ – ವಾಲಿಬಾಲ್ ಆಟದ ವೈರಲ್ ಕ್ಷಣಗಳು
ಕನ್ನಡ ನಟ ರಾಜ್ ಬಿ ಶೆಟ್ಟಿ – ವಾಲಿಬಾಲ್ ಆಟದ ವೈರಲ್ ಕ್ಷಣಗಳು

ಬಾಲ್ಯದಿಂದಲೇ ಈ ಆಟವನ್ನು ಅಭ್ಯಾಸ ಮಾಡುತ್ತಿದ್ದ ಅವರು, ಇಂದಿಗೂ ತಮ್ಮ ಸ್ನೇಹಿತರೊಂದಿಗೆ ಅವರಿಗೆ ಸಮಯ ಸಿಕ್ಕಾಗಲೆಲ್ಲಾ ವಾಲಿಬಾಲ್ ಆಡಲು ಮುಂದಾಗುತ್ತಾರೆ. ಶೂಟಿಂಗ್ ಸ್ಥಳದಲ್ಲಿಯೇ ಆಟದ ಮೈದಾನ ಸಿದ್ಧಮಾಡಿ, ತಂಡದವರೊಂದಿಗೆ ಕ್ರೀಡೆಯಲ್ಲಿ ತೊಡಗಿರುವುದು ಅವರ ಕ್ರೀಡಾಭಿಮಾನವನ್ನು ತೋರಿಸುತ್ತದೆ. ಚಿತ್ರದ ಚಿತ್ರೀಕರಣದ ಮಧ್ಯೆ ಸಮಯ ಸಿಕ್ಕಾಗಲೆಲ್ಲಾ ರಾಜ್ ಬಿ ಶೆಟ್ಟಿ ವಾಲಿಬಾಲ್ ಆಡುತ್ತಿರುವುದು ತಂಡದವರಿಗೂ ಹೊಸ ಉತ್ಸಾಹ ನೀಡುತ್ತದೆ. ಕ್ರೀಡೆಯಲ್ಲಿ ತೊಡಗಿರುವಾಗ ಅವರ ಮುಖದಲ್ಲಿ ಕಾಣುವ ಸಂತೋಷ, ಅಭಿಮಾನಿಗಳಿಗೆ ಹೊಸ ಅಚ್ಚರಿ ಎಂದೇ ಹೇಳಬಹುದು. 

ಈ ವೀಡಿಯೋವನ್ನು ಸ್ವತಃ ರಾಜ್ ಬಿ ಶೆಟ್ಟಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದಿದೆ. ಆಟದ ವೇಳೆ ಒಂದು ಸಿಂಗಲ್ ಪಾಯಿಂಟ್‌ಗಾಗಿ ರಾಜ್ ಬಿ ಶೆಟ್ಟಿ ತೋರಿದ ಕಿತ್ತಾಟ ಎಲ್ಲರ ಗಮನ ಸೆಳೆದಿದೆ. ಆಟದ ವಿಚಾರದಲ್ಲಿ ಯಾರಾದರೂ ಕೆಣಕಿದರೆ, ರಾಜ್ ಬಿ ಶೆಟ್ಟಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ ಎಂಬುದನ್ನು ಈ ವೀಡಿಯೋ ಸ್ಪಷ್ಟಪಡಿಸಿದೆ. ಕ್ರೀಡಾಂಗಣದಲ್ಲಿ ತೋರಿದ ಅವರ ತೀವ್ರತೆ, ಅವರು ಆಟವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. 

ರಾಜ್ ಬಿ ಶೆಟ್ಟಿಯ ಈ ವೀಡಿಯೋ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. "ನಟನಾಗಿ ಮಾತ್ರವಲ್ಲ, ಕ್ರೀಡಾಪಟುವಾಗಿ ಕೂಡಾ ರಾಜ್ ಬಿ ಶೆಟ್ಟಿ ನಮ್ಮ ಹೃದಯ ಗೆದ್ದಿದ್ದಾರೆ" ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು "ವಾಲಿಬಾಲ್ ಶೆಟ್ಟಿ" ಎಂದು ಹೊಸ ಬಿರುದನ್ನೇ ನೀಡಿರುವುದು ಗಮನಾರ್ಹ.ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರಗಳನ್ನು ನೀಡುತ್ತಿರುವ ರಾಜ್ ಬಿ ಶೆಟ್ಟಿ, ತಮ್ಮ ಕ್ರೀಡಾಭಿಮಾನದಿಂದಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಶೂಟಿಂಗ್ ಮಧ್ಯೆ ವಾಲಿಬಾಲ್ ಆಡುತ್ತಿರುವ ಅವರ ವೀಡಿಯೋ, ಕ್ರೀಡೆ ಮತ್ತು ಕಲೆಯ ನಡುವಿನ ಸಮತೋಲನವನ್ನು ತೋರಿಸುವುದರ ಜೊತೆಗೆ, ಜೀವನದಲ್ಲಿ ಸಂತೋಷವನ್ನು ಹುಡುಕುವ ಅವರ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. 

Latest News