ಹಾಸನ: 63ನೇ ವಯಸ್ಸಿನಲ್ಲೂ ಯುವಕರ ಉತ್ಸಾಹವನ್ನು ತೋರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಲೇಜು ವಿದ್ಯಾರ್ಥಿಗಳೊಂದಿಗೆ ವಾಲಿಬಾಲ್ ಆಡಿದ ಕ್ಷಣ ಎಲ್ಲರ ಮನ ಸೆಳೆದಿತು. ಕಾಲೇಜು ಮೈದಾನದಲ್ಲಿ ನಡೆದ ಈ ಆಟದಲ್ಲಿ, ವಿದ್ಯಾರ್ಥಿಗಳೊಂದಿಗೆ ಬೆರೆತು ಆಡಿದ ಶಿವಕುಮಾರ್ ಅವರ ಚುರುಕುತನ ಎಲ್ಲರಿಗೂ ಆಶ್ಚರ್ಯ ಮೂಡಿಸಿತು.
ಹೌದು, 23ರ ಯುವಕನಂತೆ ಚುರುಕಾಗಿ ಓಡಾಡಿ, ಚೆಂಡನ್ನು ಹೊಡೆದು, ತಂಡದೊಂದಿಗೆ ಬೆರೆತು ಆಟವಾಡಿದ ಡಿಕೆಶಿ ಅವರು, ಕ್ರೀಡೆಗೆ ಇರುವ ತಮ್ಮ ಆಸಕ್ತಿ ಮತ್ತು ಶಕ್ತಿಯನ್ನು ಮತ್ತೊಮ್ಮೆ ತೋರಿಸಿದರು. ವಿದ್ಯಾರ್ಥಿಗಳು ತಮ್ಮೊಂದಿಗೆ ಆಡುತ್ತಿರುವ ಉಪಮುಖ್ಯಮಂತ್ರಿಯನ್ನು ನೋಡಿ ಉತ್ಸಾಹದಿಂದ ಕಣ್ತುಂಬಿಕೊಂಡರು. “ನಮ್ಮೊಂದಿಗೆ ಆಡುತ್ತಿರುವುದು ದೊಡ್ಡ ಪ್ರೇರಣೆ” ಎಂದು ವಿದ್ಯಾರ್ಥಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದರು. ಕ್ರೀಡೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಶಿವಕುಮಾರ್ ತಮ್ಮ ಆಟದ ಮೂಲಕ ಸಾಬೀತುಪಡಿಸಿದರು.
ಈ ಸಂದರ್ಭ, ಕ್ರೀಡೆ ಕೇವಲ ಮನರಂಜನೆಗೆ ಮಾತ್ರವಲ್ಲ, ಆರೋಗ್ಯ ಮತ್ತು ಒಗ್ಗಟ್ಟಿಗೆ ಸಹ ಕಾರಣವಾಗುತ್ತದೆ ಎಂಬ ಸಂದೇಶವನ್ನು ಅವರು ನೀಡಿದರು. ವಿದ್ಯಾರ್ಥಿಗಳೊಂದಿಗೆ ಬೆರೆತು ಆಡಿದ ಕ್ಷಣ, ರಾಜಕೀಯ ನಾಯಕನೊಬ್ಬ ಜನರೊಂದಿಗೆ ಹೇಗೆ ಹತ್ತಿರವಾಗಿರಬಹುದು ಎಂಬುದಕ್ಕೆ ಉದಾಹರಣೆಯಾಯಿತು. ವಿಡಿಯೋ ಇದೀಗ ಎಲ್ಲೆಡೆ ಬಾರಿ ವೈರಲ್ ಆಗುತ್ತಿದೆ. ನೀವು ಕೂಡ ಈ ಸಕತ್ ಆಕ್ಟಿವ್ ಆಟದ ಕ್ಷಣವನ್ನು ಇಲ್ಲಿ ನೋಡಬಹುದು. ಶಿವಕುಮಾರ್ ಅವರ ಈ ಚುರುಕು ಆಟ, ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, “63ರಲ್ಲೂ ಇಷ್ಟು ಶಕ್ತಿ, ನಮ್ಮಿಗೂ ಪ್ರೇರಣೆ” ಎಂದು ಜನರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.