Mar 7, 2026 Languages : ಕನ್ನಡ | English

ಸೀರೆಯಲ್ಲಿ ರಾಗಿಣಿ ಪ್ರಜ್ವಲ್ ಸಖತ್ ಸ್ಟೆಪ್ಸ್ - ಗೆಳತಿಯರ ಜೊತೆಗಿನ ಡ್ಯಾನ್ಸ್ ವಿಡಿಯೋ ನೋಡಿ ಫ್ಯಾನ್ಸ್ ಫಿದಾ!!

ಕನ್ನಡಿಗರ ಪ್ರೀತಿಯ ದೇವರಾಜ್ ಅವರ ಕುಟುಂಬವು ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದೆ. ಅವರ ಹಾದಿಯಲ್ಲೇ ಸಾಗುತ್ತಿರುವ ಪ್ರಜ್ವಲ್ ದೇವರಾಜ್, ತಮ್ಮ ಪ್ರತಿಭೆಯಿಂದ ಸ್ಯಾಂಡಲ್‌ವುಡ್‌ನಲ್ಲಿ ವಿಶಿಷ್ಟ ಗುರುತು ಮೂಡಿಸಿದ್ದಾರೆ. ಇತ್ತೀಚೆಗೆ, ಅವರ ಪತ್ನಿ ರಾಗಿಣಿ ಚಂದ್ರನ್ ತಮ್ಮ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು ಅವರ ಸಹಪಾಠಿಗಳ ಜೊತೆ ಸೇರಿ ಡಾನ್ಸ್ ಮಾಡಿದ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. 

ರಾಗಿಣಿ ಚಂದ್ರನ್ ಡ್ಯಾನ್ಸ್ ವಿಡಿಯೋ ವೈರಲ್!! | Photo Credit: Insta@iamraginiprajwal
ರಾಗಿಣಿ ಚಂದ್ರನ್ ಡ್ಯಾನ್ಸ್ ವಿಡಿಯೋ ವೈರಲ್!! | Photo Credit: Insta@iamraginiprajwal

ರಾಗಿಣಿ ಅವರು ಮೂಲತಃ ಒಬ್ಬ ಪ್ರತಿಭಾವಂತ ನೃತ್ಯಗಾರ್ತಿ. ಸಿನಿಮಾಗಳಿಗೆ ಬರಲು ಮುನ್ನವೇ ಅವರು ನೃತ್ಯದಲ್ಲಿ ತರಬೇತಿ ಪಡೆದಿದ್ದರು. ಮದುವೆಯಾದ ನಂತರವೂ ಅವರು ತಮ್ಮ ಹವ್ಯಾಸವನ್ನ ಮುಂದುವರಿಸಿದ್ದಾರೆ. ಶಾಸ್ತ್ರೀಯ ನೃತ್ಯದಿಂದ ಹಿಡಿದು ಪಾಶ್ಚಿಮಾತ್ಯ ಶೈಲಿಯವರೆಗೂ ಅವರು ಸುಲಭವಾಗಿ ಮಾಡುತ್ತಾರೆ. ಅವರ ಸ್ಟೆಪ್‌ಗಳು, ಬಾಡಿ ಲಾಂಗ್ವೇಜ್ ನೋಡಿದರೆ, ಅವರಿಗೆ ನೃತ್ಯದಲ್ಲಿ ವಿಶೇಷ ಕೌಶಲ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ.  

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ರಾಗಿಣಿ ಅವರು ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮುಖದ ಭಾವನೆಗಳು ಮತ್ತು ನೃತ್ಯದ ಶೈಲಿ ಎಲ್ಲರ ಮನಗೆದ್ದಿದೆ.  

ರಾಗಿಣಿ ಅವರು ಕೇವಲ ನೃತ್ಯಗಾರ್ತಿಯಷ್ಟೇ ಅಲ್ಲ, ನಟಿಯೂ ಆಗಿದ್ದಾರೆ. ಅವರು ಕನ್ನಡದ 'ಲಾ' ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅವರ ಅಭಿನಯಕ್ಕೂ ವಿಮರ್ಶಕರಿಂದ ಪ್ರಶಂಸೆ ದೊರಕಿತ್ತು. ಜೊತೆಗೆ ಕೆಲವು ಜಾಹೀರಾತುಗಳು, ಕಿರುಚಿತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.  

ಸೀರೆಯಲ್ಲಿ ರಾಗಿಣಿ ಪ್ರಜ್ವಲ್ ಹಾಕಿರುವ ಸ್ಟೆಪ್‌ಗಳನ್ನು ನೋಡಿದ ನೆಟ್ಟಿಗರು, "ಇವರ ಡ್ಯಾನ್ಸ್‌ಗೆ ಇವರೇ ಸಾಟಿ" ಎಂದು ಹೊಗಳುತ್ತಿದ್ದಾರೆ. ಸ್ಟಾರ್ ಕುಟುಂಬದ ಸೊಸೆಯಾಗಿದ್ದರೂ ಅವರ ಸರಳತೆ ಎಲ್ಲರಿಗೂ ಇಷ್ಟವಾಗಿದೆ. ಗೆಳತಿಯರ ಜೊತೆಗಿನ ರಾಗಿಣಿ ಅವರ ಈ ನೃತ್ಯದ ವಿಡಿಯೋ ಇಲ್ಲಿದೆ ನೋಡಿ. ಈ ಅದ್ಭುತ ಪ್ರದರ್ಶನಕ್ಕೆ ನೀವು ಎಷ್ಟು ಅಂಕ ನೀಡುತ್ತೀರಿ?

Latest News