Apr 25, 2026 Languages : ಕನ್ನಡ | English

ಬರ್ತಿದ್ದಾನೆ ಒರಿಜಿನಲ್ ಖಳನಾಯಕ - ಸಂಜಯ್ ದತ್ ಅಭಿನಯದ 'ಖಳನಾಯಕ ರಿಟರ್ನ್ಸ್' ಫಸ್ಟ್ ಲುಕ್ ರಿಲೀಸ್!!

ಬಾಲಿವುಡ್‌ನಲ್ಲಿ ಎಷ್ಟೇ ಜನ ಹೀರೋಗಳು ಬರಲಿ, ಹೋಗಲಿ.. ಸಂಜಯ್ ದತ್ ಅಲಿಯಾಸ್ 'ಸಂಜು ಬಾಬಾ' ಕ್ರೇಜ್ ಮಾತ್ರ ಯಾವತ್ತೂ ಕಮ್ಮಿ ಆಗಲ್ಲ. ಈಗ ಅವರ ಅಭಿಮಾನಿಗಳಿಗೆ ಹಬ್ಬವೋ ಹಬ್ಬ! ಸುಮಾರು ಮೂರು ದಶಕಗಳ ಹಿಂದೆ ಭಾರತೀಯ ಚಿತ್ರರಂಗವನ್ನೇ ನಡುಗಿಸಿದ್ದ, ಸಂಜಯ್ ದತ್ ಕೆರಿಯರ್ ಅನ್ನೇ ಬದಲಿಸಿದ್ದ 'ಖಳನಾಯಕ' ಸಿನಿಮಾ ಈಗ ಸೀಕ್ವೆಲ್ ಮೂಲಕ ಮತ್ತೆ ಬರ್ತಿದೆ. ಹೌದು, 'ಖಳನಾಯಕ ರಿಟರ್ನ್ಸ್' (Khalnayak Returns) ಚಿತ್ರದ ಟೀಸರ್ ಮತ್ತು ಫಸ್ಟ್ ಲುಕ್ ಅನ್ನು ಸಂಜು ಬಾಬಾ ಸಖತ್ ರಗಡ್ ಆಗಿ ಲಾಂಚ್ ಮಾಡಿದ್ದಾರೆ.

ಖಳನಾಯಕ ರಿಟರ್ನ್ಸ್: ಸಂಜಯ್ ದತ್ ಸರ್ಪ್ರೈಸ್!! | Photo Credit: https://www.instagram.com/duttsanjay/
ಖಳನಾಯಕ ರಿಟರ್ನ್ಸ್: ಸಂಜಯ್ ದತ್ ಸರ್ಪ್ರೈಸ್!! | Photo Credit: https://www.instagram.com/duttsanjay/

ಏನಿದು ಸಂಜು ಬಾಬಾ ಸರ್ಪ್ರೈಸ್?

ಇತ್ತೀಚೆಗೆ ನಡೆದ ವಿಶೇಷ ಇವೆಂಟ್‌ನಲ್ಲಿ ಸಂಜಯ್ ದತ್ ಅವರು ತಮ್ಮ ಐಕಾನಿಕ್ ಪಾತ್ರ 'ಬಲ್ಲೂ' ನವತಾರವನ್ನ ರಿವೀಲ್ ಮಾಡಿದ್ದಾರೆ. 90ರ ದಶಕದಲ್ಲಿ 'ಬಲ್ಲೂ' ಸ್ಟೈಲ್ ನೋಡಿ ಯುವಕರು ಫಿದಾ ಆಗಿದ್ರು. ಈಗ 66ನೇ ವಯಸ್ಸಿನಲ್ಲೂ ಸಂಜಯ್ ದತ್ ಅದೇ ಹಳೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದಾರೆ. ಅಂದಹಾಗೆ, ಈ ಚಿತ್ರವನ್ನ ಸಂಜಯ್ ದತ್ ಅವರ 'ತ್ರೀ ಡೈಮೆನ್ಷನ್ ಮೋಷನ್ ಪಿಕ್ಚರ್ಸ್' ಮತ್ತು ಅಕ್ಷಾ ಕಾಂಬೋಜ್ ಅವರ 'ಆಸ್ಪೆಕ್ಟ್ ಎಂಟರ್ಟೈನ್ಮೆಂಟ್' ಸೇರಿ ನಿರ್ಮಾಣ ಮಾಡ್ತಿವೆ. ಈ ಸೀಕ್ವೆಲ್‌ಗೆ ಜಿಯೋ ಸ್ಟುಡಿಯೋ ಕೂಡ ಸಾಥ್ ಕೊಟ್ಟಿದೆ.

ಜೈಲಿನಲ್ಲೇ ಹುಟ್ಟಿದ 'ಖಳನಾಯಕ'ನ ಕಥೆ!

ಈ ಸಿನಿಮಾದ ಶೂಟಿಂಗ್ ಶುರುವಾಗೋ ಮೊದಲೇ ಈ ಕಥೆ ಹುಟ್ಟಿದ ಜಾಗ ಮಾತ್ರ ಸಖತ್ ಇಂಟರೆಸ್ಟಿಂಗ್ ಆಗಿದೆ. ಈ ಬಗ್ಗೆ ಮಾತಾಡಿರೋ ಸಂಜಯ್ ದತ್, "ನಾನು ಜೈಲಿನಲ್ಲಿದ್ದಾಗ ಈ ಕಥೆಯನ್ನ ರೆಡಿ ಮಾಡಿದ್ದೆ" ಅಂತ ಸತ್ಯ ಬಿಚ್ಚಿಟ್ಟಿದ್ದಾರೆ.

ಸಂಜು ಬಾಬಾ ಜೈಲಿನಲ್ಲಿದ್ದಾಗ ಅಲ್ಲಿರೋ ಸುಮಾರು 4,000 ಜನ ಕೈದಿಗಳ ಹತ್ತಿರ, "ಖಳನಾಯಕ ಪಾರ್ಟ್-2 ಬಂದ್ರೆ ನೀವು ನೋಡ್ತೀರಾ?" ಅಂತ ಕೇಳಿದ್ರಂತೆ. ಅದಕ್ಕೆ ಎಲ್ಲರೂ "ಖಂಡಿತ ನೋಡ್ತೀವಿ" ಅಂತ ಫುಲ್ ಜೋಶ್‌ನಲ್ಲಿ ಹೇಳಿದ್ರು. ಅಷ್ಟೇ ಅಲ್ಲ, ಆ ನಾಲ್ಕು ಸಾವಿರ ಜನರಿಗೂ ತಲಾ ಒಂದು ಪೇಜ್ ಕಥೆ ಬರೆಯೋಕೆ ಹೇಳಿದ್ರಂತೆ ಸಂಜಯ್ ದತ್. ಆ ನಾಲ್ಕು ಸಾವಿರ ಪೇಜ್‌ಗಳನ್ನ ಓದಿದ ಮೇಲೆ, ಸಂಜಯ್ ದತ್ ಪೆರೋಲ್ ಮೇಲೆ ಹೊರಗೆ ಬಂದಾಗ ಸೀದಾ ಸುಭಾಷ್ ಘಾಯ್ ಅವರನ್ನ ಭೇಟಿ ಮಾಡಿ ಈ ವಿಷ್ಯ ತಿಳಿಸಿದ್ದಾರೆ. ಆಮೇಲೆ ಸುಭಾಷ್ ಘಾಯ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಸುಭಾಷ್ ಘಾಯ್ ಏನಂತಾರೆ?

ಒರಿಜಿನಲ್ ಖಳನಾಯಕ ಸಿನಿಮಾವನ್ನ ಡೈರೆಕ್ಟ್ ಮಾಡಿದ್ದು ಲೆಜೆಂಡರಿ ಸುಭಾಷ್ ಘಾಯ್. ಈಗ ತಮ್ಮ ಸಿನಿಮಾದ ರೈಟ್ಸ್ ಅನ್ನ ಸಂಜಯ್ ದತ್‌ಗೆ ಕೊಟ್ಟಿರೋ ಅವರು, "ಸಂಜು ಮತ್ತು ಮಾನ್ಯತಾ ಅವರ ತುಂಬಾ ದಿನದ ಆಸೆ ಇದಾಗಿತ್ತು. ಖಳನಾಯಕ ರಿಟರ್ನ್ಸ್ ಮೊದಲಿನ ಸಿನಿಮಾಕ್ಕಿಂತಲೂ ಅದ್ಭುತವಾಗಿ ಮೂಡಿಬರಲಿದೆ ಅನ್ನೋ ನಂಬಿಕೆ ನನಗಿದೆ. ನಾನು ಯಾವಾಗಲೂ ಅವರ ಜೊತೆ ಇರ್ತೀನಿ" ಅಂತ ಹಾರೈಸಿದ್ದಾರೆ.

ಹಳೆಯ ನೆನಪುಗಳು.. ಹೊಸ ಸವಾಲುಗಳು!

1993ರಲ್ಲಿ ರಿಲೀಸ್ ಆಗಿದ್ದ 'ಖಳನಾಯಕ' ಚಿತ್ರ ಅಕ್ಷರಶಃ ಒಂದು ಮಾಸ್ಟರ್ ಪೀಸ್. ಸಂಜಯ್ ದತ್ ಅವರ ವಿಲನ್ ಶೇಡ್ ಇರೋ ಹೀರೋ ಪಾತ್ರ, ಜಾಕಿ ಶ್ರಾಫ್ ಅವರ ಪೊಲೀಸ್ ಆಫೀಸರ್ ರೋಲ್ ಮತ್ತು ಮಾಧುರಿ ದೀಕ್ಷಿತ್ ಅವರ 'ಗಂಗಾ' ಪಾತ್ರ ಜನಮಾನಸದಲ್ಲಿ ಇಂದಿಗೂ ಹಚ್ಚಹಸಿರಾಗಿದೆ. ಈಗ ಸೀಕ್ವೆಲ್‌ನಲ್ಲಿ ಯಾರೆಲ್ಲಾ ಇರ್ತಾರೆ? ಹಳೆ ಸ್ಟಾರ್ ಕಾಸ್ಟ್ ಇರುತ್ತಾ? ಇಲ್ವಾ? ಅನ್ನೋದು ಸದ್ಯದ ಕುತೂಹಲ.

View this post on Instagram

A post shared by Sanjay Dutt (@duttsanjay)

'ಬಲ್ಲೂ' ಮತ್ತೆ ಜೈಲಿನಿಂದ ಹೊರಗೆ ಬರ್ತಿದ್ದಾನೆ ಅಂದಮೇಲೆ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಗ್ಯಾರಂಟಿ. 90ರ ದಶಕದ ಆಕ್ಷನ್ ಪ್ರಿಯರಿಗೆ ಇದೊಂದು ದೊಡ್ಡ ಗಿಫ್ಟ್ ಅಂದ್ರೆ ತಪ್ಪಾಗಲ್ಲ.

Latest News