ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಇದೀಗ ಜೈಲಿನಲ್ಲಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಕಾಟೇರ ಸಿನಿಮಾ ಇವರ ಹಿಂದಿನ ಸಿನಿಮಾ ಆಗಿದ್ದು ಅತ್ಯದ್ಭುತ ಯಶಸ್ಸು ಕಂಡಿತ್ತು. ಕಾಟೇರ ಮೂಲಕ ಅವರ ಅಭಿಮಾನಿಗಳಿಗೆ ಡಿ ಬಾಸ್ ರಸದೌತಣ ಊಟ ಉಣಬಡಿಸದ್ದು ಎಲ್ಲರಿಗೂ ಗೊತ್ತು. ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಇದರ ನಡುವೆ ನಡೆದ ಆನಂತರದ ಅವರ ಬೆಳವಣಿಗೆ ಇದೀಗ ಜೈಲು ಸೇರುವಂತೆ ಆಗಿದೆ. ಅವರ ಮುಂದಿನ ಸಿನಿಮಾ ಡೆವಿಲ್ ಕೆಲಸಗಳು ಅವರಿಲ್ಲದೆ ನಡೆಯುತ್ತಿವೆ. ಸಿನಿಮಾ ಪ್ರಚಾರ ಸಹ ಅವರಿಲ್ಲದೆ ಚಿತ್ರ ತಂಡದಿಂದ ನಡೆಯುತ್ತಿದೆ. ಡಿ ಬಾಸ್ ಅಭಿನಯದ ಡೆವಿಲ್ ಸಿನಿಮಾ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದ್ದು, ಇದೀಗ ಸಿನಿಮಾದ ರಿಲೀಸ್ ಡೇಟ್ ಬದಲಾಗಿಸಲಾಗಿದೆಯಂತೆ. ಅಸಲಿಗೆ ಇದಕ್ಕೆ ಕಾರಣವೇನು? ಇದು ಯಾಕೆ ಎನ್ನುವ ಪ್ರಶ್ನೆಗೆ ಇದೀಗ ಚಿತ್ರತಂಡ ದೊಡ್ಡ ನಿರ್ಧಾರದ ಬದಲಾವಣೆ ಮಾಹಿತಿಯ ಬಿಟ್ಟುಕೊಟ್ಟಿದ್ದಾರೆ.
ಮೊದಲಿಗೆ, 'ಡೆವಿಲ್' ಸಿನಿಮಾ ಡಿಸೆಂಬರ್ 12ರಂದು ಬಿಡುಗಡೆಯಾಗಬೇಕಿತ್ತು. ಆದರೆ, ದರ್ಶನ್ ಅವರ ಅಭಿಮಾನಿಗಳಿಂದ ಬಂದ ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ ಚಿತ್ರತಂಡವು ಒಂದು ದಿನ ಮುಂಚಿತವಾಗಿ, ಅಂದರೆ ಡಿಸೆಂಬರ್ 11ರಂದು ಡೆವಿಲ್ ಸಿನಿಮಾ ಬಿಡುಗಡೆ ಮಾಡಲು ತೀರ್ಮಾನ ಮಾಡಿದೆ. ಚಿತ್ರದ ಹಾಡಿನ ಲಾಂಚ್ ಕಾರ್ಯಕ್ರಮದಲ್ಲಿ ಅಭಿಮಾನಿಗಳು ತಮ್ಮ ಮನವಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ಎಲ್ಲರೂ ಒಂದೇ ದಿನ ಸಿನಿಮಾ ನೋಡಲು ಅವಕಾಶ ಸಿಗಬೇಕು ಎಂದ ಅಭಿಮಾನಿಗಳು, ಇದನ್ನು ಗೌರವಿಸಿದ ಚಿತ್ರತಂಡವು ಪೇಯ್ಡ್ ಪ್ರಿವ್ಯೂ ಶೋಗಳ ರದ್ದು ಮಾಡಿ, ಎಲ್ಲರಿಗೂ ಒಂದೇ ದಿನ ಸಿನಿಮಾ ನೋಡಲು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. ಇದರಿಂದ ಅಭಿಮಾನಿಗಳಲ್ಲಿ ಇನ್ನಷ್ಟು ಉತ್ಸಾಹ ಜೊತೆಗೆ ಚಿತ್ರತಂಡದ ಮೇಲೆ ಪ್ರೀತಿ ಸಹ ಹೆಚ್ಚಾಗಿದೆ ಎನ್ನಬಹುದು.
ನಟ ದರ್ಶನ್ ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದರೂ, ಅವರ ಅಭಿಮಾನಿಗಳ ಪ್ರೀತಿ ಮತ್ತು ನಿರೀಕ್ಷೆ ಚಿತ್ರತಂಡಕ್ಕೆ ದೊಡ್ಡ ಬೆಂಬಲವಾಗಿದೆ. ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ, 'ಡೆವಿಲ್' ಸಿನಿಮಾ ಈಗ ಡಿಸೆಂಬರ್ 11ರಂದು ನಿಮ್ಮ ಮುಂದೆ ಬರಲಿದೆ. ಅಭಿಮಾನಿಗಳ ಬೇಡಿಕೆ, ಅವರ ಒತ್ತಾಯ, ಮತ್ತು ಚಿತ್ರತಂಡದ ತೀರ್ಮಾನದಿಂದ ಈ ಸಿನಿಮಾ ಡೇಟ್ ಬದಲಾವಣೆ ಕಂಡುಬಂದಿದ್ದು, ಇದು ದರ್ಶನ್ ಅಭಿಮಾನಿಗಳಿಗೆ ಒಂದು ವಿಶೇಷ ಉಡುಗೊರೆಯಂತಾಗಿದೆ. ನೀವು ಈ ಸಿನಿಮಾದಿಂದ ಏನು ನಿರೀಕ್ಷೆ ಮಾಡ್ತಿರಾ ಎಂದು ಕಾಮೆಂಟ್ ಮಾಡಿ, ಹಾಗೆ ಮೊದಲ ದಿನವೇ ಈ ಚಿತ್ರ ವೀಕ್ಷಣೆ ಮಾಡುವ ತವಕದಲ್ಲಿದ್ದರೆ ಡಿ ಬಾಸ್ ಎಂದು ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಮಾನವನ್ನು ಇಲ್ಲಿ ವ್ಯಕ್ತಪಡಿಸಿ, ಧನ್ಯವಾದಗಳು.