ಜೂನ್ 04 ರ ಇಂದಿನ ಪಂಚಾಂಗದ ಪ್ರಕಾರ, ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಗುರುವಾರ ಇದಾಗಿದೆ. ಇವತ್ತಿನ ದಿನ ಕೆಲವರಿಗೆ ದೀರ್ಘಕಾಲದ ಕಿರಿಕಿರಿಗಳಿಂದ ಮುಕ್ತಿ ಸಿಗಲಿದ್ದರೆ, ಇನ್ನು ಕೆಲವರಿಗೆ ಸಂಗಾತಿಯ ಜೊತೆ ಮುನಿಸು, ಮಕ್ಕಳಿಂದ ಬೇಸರ ದೂರವಾಗುವುದು, ಮತ್ತು ಸ್ವಾವಲಂಬನೆಗೆ ಹೆಜ್ಜೆ ಇಡುವ ಯೋಗವಿದೆ.
ಮೇಷ ರಾಶಿ
ನಿಮ್ಮ ಮದುವೆ ಅಥವಾ ಸಂಸಾರ ಜೀವನದಲ್ಲಿ ಏನಾದರೂ ಕಿರಿಕಿರಿಗಳಿದ್ದರೆ, ಇವತ್ತಿಗೆ ಅದಕ್ಕೊಂದು ಮುಕ್ತಿ ಸಿಗಲಿದೆ. ನಿಮ್ಮ ಮೇಲೆ ಬಂದ ಹಳೆಯ ಕಳಂಕವನ್ನು ಹೇಗಾದರೂ ಮಾಡಿ ತೊಳೆದುಕೊಳ್ಳಲು ಪ್ರಯತ್ನಿಸುತ್ತೀರಿ. ಆಫೀಸ್‌ನಲ್ಲಿ ಕೆಲಸದ ಪ್ರೆಶರ್ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು, ಆದರೆ ಮ್ಯಾನೇಜ್ ಮಾಡಬಹುದು. ಇವತ್ತು ಅನಗತ್ಯ ಮಾತುಗಳನ್ನು ಸ್ವಲ್ಪ ಕಡಿಮೆ ಆಡಿದರೆ ಒಳ್ಳೆಯದು. ಅನಿರೀಕ್ಷಿತವಾಗಿ ಬೇಡದ ಸುದ್ದಿಯೊಂದು ಕಿವಿಗೆ ಬೀಳಬಹುದು. ನಿಮ್ಮವರ ಮೇಲೆಯೇ ನಂಬಿಕೆ ಕೊಂಚ ಕಡಿಮೆ ಆಗುವ ಸಾಧ್ಯತೆ ಇದೆ, ಯೋಚಿಸಿ ಹೆಜ್ಜೆ ಇಡಿ.
ವೃಷಭ ರಾಶಿ
ಮನಸ್ಸಿಗೆ ಇಷ್ಟ ಬಂದಂತೆ ನಡೆದುಕೊಳ್ಳಿ, ಆದರೆ ಪ್ರತಿಯೊಂದು ವಿಷಯದಲ್ಲೂ ಕ್ಲಾರಿಟಿ ಇರಲಿ. ದುಡ್ಡಿನ ವಿಚಾರದಲ್ಲಿ ಇವತ್ತು ಧೈರ್ಯವಾಗಿರಬಹುದು, ಹಣಕಾಸಿನ ಸ್ಥಿತಿ ಚೆನ್ನಾಗಿದೆ. ಆದರೂ ಕೆಲವೊಂದು ಕೆಲಸಗಳು ಅಂದುಕೊಂಡಿದ್ದಕ್ಕಿಂತ ಲೇಟ್ ಆಗಬಹುದು. ಎಷ್ಟೇ ಸುಸ್ತಾಗಿದ್ದರೂ ಕೆಲಸಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತವೆ. ಮನೆಯಲ್ಲಿ ಹಿರಿಯರ ಮಾತನ್ನು ಕೇಳಿದರೆ ನಿಮಗೆ ಒಳಿತಾಗಲಿದೆ. ಫ್ರೆಂಡ್ಸ್ ಜೊತೆ ಸ್ವಲ್ಪ ಟೈಮ್ ಸ್ಪೆಂಡ್ ಮಾಡಿ ಎಂಜಾಯ್ ಮಾಡ್ತೀರಾ. ಸಣ್ಣ ಬಿಸಿನೆಸ್ ಮಾಡುವವರಿಗೆ ಇವತ್ತು ಎಕ್ಸ್‌ಟ್ರಾ ಲಾಭ ಸಿಗಲಿದೆ.
ಮಿಥುನ ರಾಶಿ
ಯಾರಿಗಾದರೂ ಸಾಲ ಕೊಟ್ಟಿದ್ದರೆ, ಇವತ್ತು ಅವರು ನಿಮ್ಮ ಹತ್ತಿರ ಕಠೋರವಾಗಿ ಮಾತನಾಡಬಹುದು, ಜಾಗ್ರತೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ಸಣ್ಣಪುಟ್ಟ ಹೆಲ್ತ್ ಪ್ರಾಬ್ಲಮ್ಸ್ ಇವತ್ತು ಸ್ವಲ್ಪ ಕಾಡಬಹುದು. ಮನೆಯಲ್ಲಿ ಜವಾಬ್ದಾರಿಗಳು ಜಾಸ್ತಿ ಆಗಲಿವೆ. ಹಣಕಾಸಿನ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಜಾಣ್ಮೆಯಿಂದ ಇರಿ. ಒಡಹುಟ್ಟಿದವರ ಜೊತೆ ಮಾತನಾಡುವಾಗ ಸ್ವಲ್ಪ ಎಚ್ಚರ ತಪ್ಪಬೇಡಿ. ರಾಜಕೀಯದಲ್ಲಿ ಇರುವವರು ತುಂಬಾ ಅಲರ್ಟ್ ಆಗಿರಬೇಕು. ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ಹತ್ತಾರು ಪ್ಲಾನ್‌ಗಳು ಓಡುತ್ತಿರುತ್ತವೆ.
ಕರ್ಕಾಟಕ ರಾಶಿ
ನಿಮ್ಮ ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಬ್ಯಾಲೆನ್ಸ್ ಮಾಡುವುದು ಇವತ್ತು ತುಂಬಾ ಮುಖ್ಯ. ಆಫೀಸ್‌ನಲ್ಲಿ ಹೊಸ ಆಫರ್‌ಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಯಾವುದನ್ನೇ ಆದರೂ ಧೈರ್ಯವಾಗಿ ಮಾತನಾಡಿ ಮುಗಿಸಿ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ದೂರದ ರಿಲೇಟಿವ್ಸ್ ಕಡೆಯಿಂದ ಗುಡ್ ನ್ಯೂಸ್ ಕೇಳಲಿದ್ದೀರಿ. ಹಣಕಾಸಿನ ವಿಷಯದಲ್ಲಿ ಸದ್ಯಕ್ಕೆ ಸ್ವಲ್ಪ ಟೆನ್ಷನ್ ಇರಬಹುದು. ಮಕ್ಕಳ ಪ್ರೀತಿ ನಿಮಗೆ ಎನರ್ಜಿ ನೀಡುತ್ತದೆ. ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳಬೇಕು ಎಂಬ ಆಸೆ ಇವತ್ತು ನಿಮಗಿರುತ್ತದೆ.
ಸಿಂಹ ರಾಶಿ
ಹಳೆಯದೊಂದು ಸಮಸ್ಯೆ ಇವತ್ತು ಮತ್ತೆ ನಿಮ್ಮ ಮುಂದೆ ಬಂದು ನಿಲ್ಲಬಹುದು. ಧೈರ್ಯದಿಂದ ಫೇಸ್ ಮಾಡಿದರೆ ಖಂಡಿತ ಗೆಲುವು ನಿಮ್ಮದೇ. ಇವತ್ತು ಫ್ರೆಂಡ್ಸ್ ಕೊಡುವ ಐಡಿಯಾಗಳು ನಿಮಗೆ ತುಂಬಾ ಹೆಲ್ಪ್ ಆಗಲಿವೆ. ಮಾತಿನಲ್ಲಿ ಸಾಫ್ಟ್‌ನೆಸ್ ಇದ್ದರೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ನಿಮಗಿಷ್ಟವಿಲ್ಲದ ವಿಚಾರಗಳನ್ನು ಮುಖಾಮುಖಿ ಟೀಕಿಸುತ್ತೀರಿ. ಇವತ್ತು ಸಂಸಾರ ಜೀವನದಲ್ಲಿ ಕೊಂಚ ಬೇಸರ ಮೂಡಬಹುದು. ನಿಮ್ಮ ಕೆಲಸವನ್ನು ಪರ್ಫೆಕ್ಟ್ ಆಗಿ ಮುಗಿಸಿ, ಬೇರೆಯವರಿಗೂ ಹೆಲ್ಪ್ ಮಾಡ್ತೀರಾ. ನೆನಪಿರಲಿ, ಯಾವುದೂ ಜೀವನದ ಕೊನೆಯಲ್ಲ!
ಕನ್ಯಾ ರಾಶಿ
ಇವತ್ತು ಮಾತಿನ ಮೇಲೆ ನಿಗಾ ಇರಲಿ, ಬಾಯಿ ಚಪಲಕ್ಕೆ ಏನನ್ನೋ ಆಡಿ ಆಮೇಲೆ ಪೇಚಿಗೆ ಸಿಲುಕಬೇಡಿ. ಸದಾ ನಗುನಗುತ್ತಾ ಇರಲು ಪ್ರಯತ್ನಿಸಿ. ಸಣ್ಣ ಮನಸ್ತಾಪ ದೊಡ್ಡದಾಗಿ, ಆಸ್ತಿ ಹಂಚಿಕೆಯವರೆಗೂ ಹೋಗುವ ಚಾನ್ಸ್ ಇದೆ. ನಿಮ್ಮ ಮುಂದಿನ ಪ್ಲಾನ್‌ಗಳನ್ನು ಹೇಗೆ ಎಕ್ಸಿಕ್ಯೂಟ್ ಮಾಡಬೇಕು ಎಂದು ಯೋಚಿಸಿ. ಆಫೀಸ್‌ನಲ್ಲಿ ಕೊಲೀಗ್ಸ್‌ನಿಂದ ಪ್ರಶಂಸೆ ಸಿಗಲಿದೆ. ನಿಮಗಿರುವ ಸ್ಟೇಟಸ್ ಬಗ್ಗೆ ಮನಸ್ಸಿನಲ್ಲಿ ಹೆಮ್ಮೆ ಇರಲಿದೆ. ಇನ್ವೆಸ್ಟ್‌ಮೆಂಟ್‌ಗಳಿಂದ ಇವತ್ತು ಒಳ್ಳೆಯ ರಿಟರ್ನ್ಸ್ ನಿರೀಕ್ಷಿಸಬಹುದು. ಆದರೆ ಇಂದಿನ ದೂರದ ಜರ್ನಿ ನಿರಾಶೆ ತರಬಹುದು.
ತುಲಾ ರಾಶಿ
ನೀವು ಊಹಿಸದ ವಿಷಯವೊಂದು ಇವತ್ತು ನಿಮ್ಮ ಮುಂದೆ ಬರಬಹುದು. ನಿಮ್ಮ ನಡವಳಿಕೆಯಲ್ಲಿ ಡಿಸಿಪ್ಲಿನ್ ಇರಲಿ. ದುಡ್ಡಿನ ವಿಚಾರದಲ್ಲಿ ಸ್ವಲ್ಪ ಚಿಂತೆ ಎದುರಾಗಬಹುದು, ಅಜಾಗರೂಕತೆಯಿಂದ ಇವತ್ತು ಹಣ ಕಳೆದುಕೊಳ್ಳುವ ಭೀತಿ ಇದೆ. ಯಾವುದೇ ನಿರ್ಧಾರವನ್ನಾದರೂ ಧೈರ್ಯವಾಗಿ ತಗೊಳ್ಳಿ. ಅನಿರೀಕ್ಷಿತವಾಗಿ ಕೆಲವರಿಂದ ಹೆಲ್ಪ್ ಸಿಗಲಿದೆ. ಯಾವ ವಿಷಯಕ್ಕೇ ಆಗಲಿ ಲಿಮಿಟ್ ಆಗಿ ಮಾತನಾಡಿದರೆ ನಿಮಗೇ ಒಳ್ಳೆಯದು. ನಿಮ್ಮ ಬೆನ್ನ ಹಿಂದೆ ಕೆಲವರು ಆಡಿಕೊಳ್ಳಬಹುದು, ತಲೆ ಕೆಡಿಸಿಕೊಳ್ಳಬೇಡಿ.
ವೃಶ್ಚಿಕ ರಾಶಿ
ನಿಮ್ಮ ಸೋಮಾರಿತನ ಇವತ್ತು ಮಂತ್ರ ಹಾಕಿದ ಹಾಗೆ ಮಾಯವಾಗಿ ಆಕ್ಟಿವ್ ಆಗುತ್ತೀರಿ. ಹಳೆಯ ಲವರ್ ಕಣ್ಣಿಗೆ ಬಿದ್ದರೆ ತುಂಬಾ ಖುಷಿ ಪಡೋಕೆ ಹೋಗಬೇಡಿ! ಕೆಲಸದಲ್ಲಿ ಪರ್ಫೆಕ್ಷನ್ ಮುಖ್ಯ. ಇವತ್ತು ಆದಾಯ ಹೆಚ್ಚಿಸಿಕೊಳ್ಳಲು ಹೊಸ ದಾರಿ ಸಿಗಬಹುದು. ಹಣಕಾಸಿನಲ್ಲಿ ಸಣ್ಣ ವ್ಯತ್ಯಾಸವಾದರೂ ಮನಸ್ಸಿಗೆ ಟೆನ್ಷನ್ ಆಗುತ್ತದೆ. ನಿಮ್ಮ ಎದುರಾಳಿಗಳನ್ನು ಧೈರ್ಯವಾಗಿ ಎದುರಿಸುವ ತಾಕತ್ತು ಇವತ್ತು ನಿಮ್ಮಲ್ಲಿರುತ್ತದೆ. ಇನ್ವೆಸ್ಟ್‌ಮೆಂಟ್ ಬಗ್ಗೆ ಫ್ರೆಂಡ್ಸ್ ಜೊತೆ ಚರ್ಚೆ ಮಾಡ್ತೀರಾ. ಮಕ್ಕಳಿಗೆ ಜವಾಬ್ದಾರಿ ವಹಿಸಿ ನಿರಾಳರಾಗಲಿದ್ದೀರಿ.
ಧನು ರಾಶಿ
ಟೈಮ್ ವೇಸ್ಟ್ ಮಾಡದೆ ಅದನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿಯಿರಿ. ಮುಖ್ಯವಾದ ಕೆಲಸಗಳನ್ನು ಇವತ್ತೇ ಮುಗಿಸಿಕೊಳ್ಳಿ, ಯಾಕಂದ್ರೆ ಆಮೇಲೆ ಹೆಲ್ಪ್ ಪ್ರಾಬ್ಲಮ್ ಕಾಡಬಹುದು. ಫ್ಯಾಮಿಲಿ ಮ್ಯಾಟರ್ಸ್ ಬಗ್ಗೆ ಮನೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ. ಐಷಾರಾಮಿ ಲೈಫ್‌ಗಾಗಿ ಇವತ್ತು ಜೇಬಿನಿಂದ ಭಾರಿ ಹಣ ಖರ್ಚಾಗಬಹುದು. ಹೊಸ ಬಟ್ಟೆ, ವಸ್ತುಗಳ ಶಾಪಿಂಗ್‌ಗೆ ಜಾಸ್ತಿ ಟೈಮ್ ಕೊಡ್ತೀರಾ. ಆದರೆ ಇವತ್ತು ಸಂಗಾತಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ನಿಮಗೆ ನಿಜಕ್ಕೂ ದೊಡ್ಡ ಟಾಸ್ಕ್ ಆಗಲಿದೆ!
ಮಕರ ರಾಶಿ
ಅವಕಾಶಗಳು ತಾವಾಗಿಯೇ ಬರುತ್ತವೆ ಎಂದು ಸುಮ್ಮನೆ ಕಾಯುತ್ತಾ ಕೂರಬೇಡಿ, ಪ್ರಯತ್ನ ಪಡಿ. ಸೆಲ್ಫ್ ಕಾನ್ಫಿಡೆನ್ಸ್ ಕಳೆದುಕೊಳ್ಳಬೇಡಿ. ನಿಮ್ಮ ಲೆಕ್ಕಾಚಾರಗಳು ಕೊಂಚ ತಲೆಕೆಳಗಾಗಬಹುದು. ಫ್ಯಾಮಿಲಿ ಜೊತೆ ಹ್ಯಾಪಿ ಮೂಮೆಂಟ್ಸ್ ಕಳೆಯುತ್ತೀರಿ. ಬಾಸ್ ಕೋಪಕ್ಕೆ ತುತ್ತಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಇವತ್ತು ಒಳ್ಳೆಯ ದಿನ. ಹಣಕಾಸಿನ ಪ್ಲಾನ್ ಹೊಸ ರೂಪ ಪಡೆಯಲಿದೆ. ಹೆಲ್ತ್ ಕಡೆ ಗಮನ ಇರಲಿ. ಇವತ್ತು ಪ್ರಯಾಣ ಮಾಡುವಾಗ ಸಣ್ಣಪುಟ್ಟ ಅಡೆತಡೆಗಳು ಬರಬಹುದು, ಜಾಗ್ರತೆ.
ಕುಂಭ ರಾಶಿ
ಇವತ್ತು ನಿಮ್ಮ ಅಸಲಿ ಕೆಪಾಸಿಟಿ ಏನು ಅಂತ ಎಲ್ಲರಿಗೂ ಗೊತ್ತಾಗಲಿದೆ. ಆದರೆ ಅಹಂಕಾರದಿಂದ ಬೀಗಬೇಡಿ. ಬೇರೆಯವರು ಅಚ್ಚರಿ ಪಡುವಂತಹ ಕೆಲಸವನ್ನು ಇವತ್ತು ನೀವು ಮಾಡಿ ತೋರಿಸುತ್ತೀರಿ. ನಿಮ್ಮ ಎನರ್ಜಿ ಹೀಗೆ ಇರಲಿ. ಕೈ ಹಾಕಿದ ಕೆಲಸಗಳಲ್ಲಿ ಇವತ್ತು ಭರ್ಜರಿ ಲಾಭ ಸಿಗಲಿದೆ. ಫ್ರೆಂಡ್ಸ್ ಕಡೆಯಿಂದ ಒಳ್ಳೆಯ ಸಪೋರ್ಟ್ ಸಿಗುತ್ತದೆ. ಜಾಬ್‌ನಲ್ಲಿ ಬಾಸ್ ಗಮನ ಸೆಳೆಯುತ್ತೀರಿ. ನಿಮ್ಮ ವೈಯಕ್ತಿಕ ವ್ಯವಹಾರಗಳ ವಿಷಯದಲ್ಲಿ ಕ್ಲಾರಿಟಿ ಇಟ್ಟುಕೊಳ್ಳಿ.
ಮೀನ ರಾಶಿ
ಇವತ್ತು ನಿಮ್ಮ ತಾಳ್ಮೆಯೇ ನಿಮಗೆ ದೊಡ್ಡ ಆಯುಧ. ಮನೆಯಲ್ಲಿ ಅಥವಾ ಹೊರಗೆ ಸಮಾರಂಭಗಳಿಗೆ ಹೋಗುವ ಪ್ಲಾನ್ ರೆಡಿಯಾಗಲಿದೆ. ಸಿಟ್ಟಿನ ಭರದಲ್ಲಿ ಮಾತನಾಡಿ ಬೇರೆಯವರಿಂದ ಕಾಲೆಳಸಿಕೊಳ್ಳಬೇಡಿ. ಎಲ್ಲದಕ್ಕೂ ನೀವೇ ಮುಂದೆ ನಿಂತರೆ, ಕೊನೆಯಲ್ಲಿ ನೀವೊಬ್ಬರೇ ಒಂಟಿಯಾಗಬೇಕಾದೀತು. ಇವತ್ತು ತಗೊಳ್ಳುವ ಸಣ್ಣ ತೀರ್ಮಾನಗಳು ಫ್ಯೂಚರ್‌ನಲ್ಲಿ ದೊಡ್ಡ ಲಾಭ ತರಲಿವೆ. ಹೊಸ ಅಪರ್ಚುನಿಟಿಗಳು ಸಿಗುವ ಸಾಧ್ಯತೆ ಇದೆ. ಬೇಸರ ಮಾಡಿಕೊಳ್ಳದೆ ಖುಷಿಯಿಂದ ಜವಾಬ್ದಾರಿ ನಿಭಾಯಿಸಿ.