Mar 11, 2026 Languages : ಕನ್ನಡ | English

ಪಂಚಾಂಗ ಪ್ರಕಾರ ಇಂದು ಏನು ಮಾಡಬೇಕು, ಏನು ತಪ್ಪಿಸಬೇಕು? - ಇಂದಿನ ದಿನ ಭವಿಷ್ಯ ಹೀಗಿದೆ!!

ಇಂದು ಮಂಗಳವಾರ. ತಿಥಿ ಅಮಾವಾಸ್ಯೆ. ನಕ್ಷತ್ರ ಧನಿಷ್ಠ. ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಕೃಷ್ಣ ಪಕ್ಷದ ದಿನವಾಗಿದೆ. ಪಂಚಾಂಗದ ಪ್ರಕಾರ ರಾಹುಕಾಲ ಮಧ್ಯಾಹ್ನ 3:33 ರಿಂದ 5:01 ರವರೆಗೆ ಇರುತ್ತದೆ. ಗುಳಿಕಕಾಲ 12:37 ರಿಂದ 2:05 ರವರೆಗೆ ಮತ್ತು ಯಮಗಂಡಕಾಲ ಬೆಳಿಗ್ಗೆ 9:41 ರಿಂದ 11:09 ರವರೆಗೆ ಇರುತ್ತದೆ. ಈ ಸಮಯಗಳಲ್ಲಿ ಪ್ರಮುಖ ಕಾರ್ಯಗಳನ್ನು ತಪ್ಪಿಸುವುದು ಉತ್ತಮ ಎಂದು ಜ್ಯೋತಿಷ್ಯರು ಸೂಚಿಸುತ್ತಾರೆ. ಅಮಾವಾಸ್ಯೆಯ ದಿನವಾದ ಕಾರಣ ಮನಸ್ಸಿನಲ್ಲಿ ಶಾಂತಿ, ದೇವರ ಭಕ್ತಿ ಮತ್ತು ನಿಯಮ ಪಾಲನೆ ಅಗತ್ಯವಾಗಿದೆ. ಧನಿಷ್ಠ ನಕ್ಷತ್ರವು ಧೈರ್ಯ ಹಾಗೂ ಕಾರ್ಯನಿಷ್ಠೆಗೆ ಸಂಕೇತವಾದರೂ ತಾಳ್ಮೆ ಮುಖ್ಯವಾಗುತ್ತದೆ.

ಮೇಷದಿಂದ ಮೀನವರೆಗೆ ರಾಶಿ ಫಲ – ಅಮಾವಾಸ್ಯೆಯ ದಿನದ ಸೂಚನೆಗಳು
ಮೇಷದಿಂದ ಮೀನವರೆಗೆ ರಾಶಿ ಫಲ – ಅಮಾವಾಸ್ಯೆಯ ದಿನದ ಸೂಚನೆಗಳು

ಮೇಷ ರಾಶಿಯವರಿಗೆ ಇಂದು ಅಧಿಕ ಖರ್ಚು ಸಂಭವಿಸಬಹುದು. ಪರರಿಂದ ಮೋಸವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ. ಕೆಲಸಗಳಲ್ಲಿ ಅಲ್ಪ ಮಟ್ಟಿನ ಯಶಸ್ಸು ಸಿಗಬಹುದು. ಶತ್ರುಗಳ ಮೇಲೆ ಜಯ ಸಾಧಿಸುವ ಸಾಧ್ಯತೆ ಇದ್ದರೂ ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಎದುರಾಗಬಹುದು. ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಕಡಿಮೆ ಲಾಭ ದೊರಕಬಹುದು. ಕುಟುಂಬದಲ್ಲಿ ಸೌಖ್ಯ ಇರುತ್ತದೆ ಮತ್ತು ಸುಖ ಭೋಜನ ಲಭಿಸುತ್ತದೆ. ಆದರೆ ಬಂಧುಗಳಿಂದ ನಿಂದನೆ ಅಥವಾ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಮಿಥುನ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ಕಲಹ ಉಂಟಾಗಬಹುದು. ಸ್ವಯಂಕೃತ ತಪ್ಪಿನಿಂದ ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಇದೆ. ವಾದ ವಿವಾದಗಳನ್ನು ತಪ್ಪಿಸುವುದು ಒಳಿತು.

ಕಟಕ ರಾಶಿಯವರಿಗೆ ಮನೆಯಲ್ಲಿ ಸಂತಸ ಕಂಡರೂ ಋಣಭಾದೆ ಕಾಡಬಹುದು. ಕೃಷಿಕರಿಗೆ ಲಾಭ ದೊರೆಯಬಹುದು. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಹಾಗೂ ನಾನಾ ಚಿಂತೆಗಳ ನಡುವೆ ದ್ರವ್ಯ ನಷ್ಟವೂ ಸಂಭವಿಸಬಹುದು. ಸಿಂಹ ರಾಶಿಯವರಿಗೆ ಮಕ್ಕಳಿಂದ ಸ್ವಲ್ಪ ನೋವು ಅಥವಾ ದುಃಖ ಉಂಟಾಗಬಹುದು. ಸಾಲದ ಭಾರ ಹೆಚ್ಚಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಕಂಡುಬರುವ ಸಾಧ್ಯತೆ ಇದ್ದರೂ ಕುಟುಂಬದಲ್ಲಿ ಪ್ರೀತಿ ವಾತಾವರಣ ಇರುತ್ತದೆ. ಆಕಸ್ಮಿಕವಾಗಿ ಹಣ ವ್ಯಯವಾಗಬಹುದು. ಕನ್ಯಾ ರಾಶಿಯವರು ಆರೋಗ್ಯದ ಕಡೆ ವಿಶೇಷ ಗಮನ ಕೊಡಬೇಕು. ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರಲಿದ್ದೀರಿ. ಹಿರಿಯರ ಮೇಲೆ ಭಕ್ತಿ ಮತ್ತು ಗೌರವ ಹೆಚ್ಚಾಗುತ್ತದೆ.

ತುಲಾ ರಾಶಿಯವರಿಗೆ ಮಿತ್ರರ ಸಲಹೆ ಉಪಯೋಗವಾಗಬಹುದು. ವಾಸ ಗೃಹದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ತಾಳ್ಮೆಯಿಂದ ವರ್ತಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ. ಸಣ್ಣ ವಿಚಾರಗಳಿಂದ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಯವರು ಯಾರನ್ನೂ ಅಂಧವಾಗಿ ನಂಬಬಾರದು. ಶೀತಸಂಬಂಧಿ ರೋಗ ಕಾಡಬಹುದು. ಕೆಲಸಗಳಲ್ಲಿ ಹಿನ್ನಡೆ, ಧನ ನಷ್ಟ ಮತ್ತು ಮನಸ್ಸಿಗೆ ಬೇಸರ ಉಂಟಾಗಬಹುದು. ಅಕಾಲ ಭೋಜನ ಆರೋಗ್ಯಕ್ಕೆ ಹಾನಿ ಮಾಡಬಹುದು. ಧನಸ್ಸು ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸ್ವಲ್ಪ ಬಿಕ್ಕಟ್ಟಾಗಬಹುದು. ಅನೇಕ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತವೆ. ಗೊಂದಲಮಯ ವಾತಾವರಣದಲ್ಲಿ ಶಾಂತವಾಗಿ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ.

ಮಕರ ರಾಶಿಯವರು ದುಡುಕು ಸ್ವಭಾವವನ್ನು ನಿಯಂತ್ರಿಸಬೇಕು. ದುರಾಲೋಚನೆಗಳಿಂದ ದೂರವಿದ್ದು ಮನಸ್ಸಿನ ಮೇಲೆ ನಿಗಾ ಇರಲಿ. ಅಧಿಕ ಖರ್ಚು ಸಂಭವಿಸಬಹುದು. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಕುಂಭ ರಾಶಿಯವರಿಗೆ ಅನ್ಯಜನರಲ್ಲಿ ವೈಮನಸ್ಸು ಕಾಣಬಹುದು. ಕೈ ಹಾಕಿದ ಕೆಲಸಗಳಲ್ಲಿ ವಿಳಂಬ ಉಂಟಾಗಬಹುದು. ಆದರೆ ಉತ್ತಮ ಬುದ್ಧಿಶಕ್ತಿ ನಿಮಗೆ ಸಹಾಯವಾಗುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆ ಎದುರಾಗಬಹುದು. ಮೀನ ರಾಶಿಯವರು ಅನ್ಯರಿಗೆ ಉಪಕಾರ ಮಾಡುವಿರಿ. ಶತ್ರು ಭಾದೆ ಕಂಡರೂ ವ್ಯಾಪಾರದಲ್ಲಿ ಲಾಭ ಸಾಧ್ಯ. ದಾಂಪತ್ಯದಲ್ಲಿ ವಿರಸ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಅಸ್ವಸ್ಥತೆ ಹೆಚ್ಚಾಗುವ ಲಕ್ಷಣಗಳಿವೆ.

ಒಟ್ಟಾರೆ ಇಂದು ಅಮಾವಾಸ್ಯೆಯ ದಿನವಾಗಿರುವುದರಿಂದ ಎಲ್ಲರೂ ಶಾಂತ ಮನಸ್ಸಿನಿಂದ ನಡೆದುಕೊಳ್ಳುವುದು ಒಳಿತು. ತುರ್ತು ನಿರ್ಧಾರಗಳನ್ನು ತಪ್ಪಿಸಿ ದೇವರ ಪ್ರಾರ್ಥನೆಗೆ ಸಮಯ ಕೊಟ್ಟರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆರೋಗ್ಯದ ಕಡೆ ಗಮನ ನೀಡಿ, ಅನಗತ್ಯ ಖರ್ಚು ಕಡಿಮೆ ಮಾಡಿ, ಮಾತಿನಲ್ಲಿ ತಾಳ್ಮೆ ಇಟ್ಟುಕೊಳ್ಳುವುದು ದಿನವನ್ನು ಸುಗಮವಾಗಿಸುತ್ತದೆ. ಪಂಚಾಂಗದ ಸಮಯಗಳನ್ನು ಗಮನದಲ್ಲಿಟ್ಟು ಕಾರ್ಯಗಳನ್ನು ಯೋಜಿಸಿದರೆ ಉತ್ತಮ ಫಲ ದೊರೆಯಬಹುದು.

Latest News