ಇಂದಿನ ಪಂಚಾಂಗದ ಪ್ರಕಾರ ಶಾಲಿವಾಹನ ಶಕವರ್ಷ 1949ರ ವೈಶಾಖ ಮಾಸದ ಶುಕ್ಲ ಪಕ್ಷದ ಈ ಗುರುವಾರ ಬಹಳ ವಿಶೇಷವಾಗಿದೆ. ಕೆಲವರಿಗೆ ಹಿರಿಯರಿಂದ ಬೈಗುಳ ಸಿಕ್ಕರೆ, ಇನ್ನು ಕೆಲವರಿಗೆ ಅನಿರೀಕ್ಷಿತ ಉಡುಗೊರೆಗಳು ಕಾದಿವೆ. ನಿಮ್ಮ ರಾಶಿ ಏನು ಹೇಳುತ್ತದೆ? ಇಲ್ಲಿ ನೋಡಿ...
ಮೇಷ: ಹಣದ ವಿಷಯದಲ್ಲಿ ಹುಷಾರು!
ಇಂದು ನೀವು ಮಾಡುವ ಆಯ್ಕೆಗಳೇ ನಿಮ್ಮ ಮುಂದಿನ ದಾರಿಯನ್ನು ನಿರ್ಧರಿಸಲಿವೆ. ಅಜಾಗರೂಕತೆಯಿಂದ ಕೈಯಲ್ಲಿರುವ ಕಾಸು ಕಳೆದುಕೊಳ್ಳಬೇಡಿ. ಅಂದಹಾಗೆ, ಸಂಗಾತಿ ಜೊತೆ ಸಮಯ ಕಳೆದರೂ ಏನೋ ಒಂದು ಅತೃಪ್ತಿ ಕಾಡಬಹುದು. ತಂದೆಯ ಕಡೆಯಿಂದ ಸಹಾಯದ ನಿರೀಕ್ಷೆ ಬೇಡ, ಬದಲಿಗೆ ಸಹೋದರರ ಜೊತೆ ಹಣಕ್ಕಾಗಿ ಕಿತ್ತಾಟವಾಗುವ ಸಂಭವವಿದೆ. ಮನಸ್ತಾಪ ಬೆಳೆಸಿಕೊಳ್ಳಬೇಡಿ.
ವೃಷಭ: ಸುಳ್ಳು ಹೇಳಿ ಸಿಕ್ಕಿಬೀಳಬೇಡಿ
ಇದುವರೆಗೆ ನೀವು 'ಸತ್ಯವಂತರು' ಎಂಬ ಇಮೇಜ್ ಹೊಂದಿದ್ದರೆ, ಇಂದು ಅದಕ್ಕೆ ಸಣ್ಣ ಪೆಟ್ಟು ಬೀಳಬಹುದು. ನಿಮ್ಮ ಮಾತಿಗೆ ಬೆಲೆ ಕಡಿಮೆ ಆದಂತೆ ಅನ್ನಿಸಬಹುದು. ಯಾರೋ ನಿಮಗೆ ಸಣ್ಣ ಜವಾಬ್ದಾರಿ ನೀಡಿ ಕೈ ತೊಳೆದುಕೊಳ್ಳಬಹುದು. ತಾಯಿಯ ಇಷ್ಟದ ಕೆಲಸ ಮಾಡಿ ಅವರಿಂದ ಆಶೀರ್ವಾದ ಪಡೆಯಿರಿ. ಆಪ್ತ ಗೆಳೆಯರ ಜೊತೆ ಮುನಿಸು ಬೇಡ.
ಮಿಥುನ: ವಿಐಪಿಗಳ ಸಹವಾಸ!
ಇಂದು ನಿಮಗೆ ದೊಡ್ಡ ವ್ಯಕ್ತಿಗಳ ಪರಿಚಯವಾಗಲಿದೆ. ಮನೆಯ ಕೆಲಸಗಳಿಂದ ಸ್ವಲ್ಪ ಸುಸ್ತಾಗಬಹುದು, ಆದರೆ ಒತ್ತಡ ನಿಭಾಯಿಸುವುದರಲ್ಲಿ ನೀವು ನಿಸ್ಸೀಮರು. ಹಳೆಯ ಪುಣ್ಯವೋ ಅಥವಾ ಒಳ್ಳೆಯ ಕೆಲಸವೋ ಇಂದು ನಿಮ್ಮನ್ನು ದೊಡ್ಡ ಸಂಕಷ್ಟದಿಂದ ಪಾರು ಮಾಡಲಿದೆ. ವ್ಯಾಪಾರದಲ್ಲಿ ಜಾಣ್ಮೆ ಇರಲಿ, ಆದರೆ ಮಾತು ಅಹಂಕಾರದಿಂದ ಕೂಡಿರದಿರಲಿ.
ಕರ್ಕಾಟಕ: ಪ್ರೀತಿಯ ಸುರಿಮಳೆ
ಇಂದು ನಿಮ್ಮ ಮನಸ್ಸಿಗೆ ಹತ್ತಿರವಾದವರ ಮೇಲೆ ಪ್ರೀತಿ ಉಕ್ಕಿ ಬರಲಿದೆ. ಆದರೆ ನೆನಪಿರಲಿ, ಅವಸರದಲ್ಲಿ ಯಾವುದೇ ನಿರ್ಧಾರ ಬೇಡ. ಮನೆಯಲ್ಲಿ ಸಮಾರಂಭ ಇರಲಿದ್ದು, ದೂರದ ಸಂಬಂಧಿಗಳ ಭೇಟಿಯಾಗಲಿದೆ. ನೀವು ಹಿಂದೆ ಯಾರಿಗೋ ಮಾಡಿದ ಸಹಾಯ ಇಂದು ನಿಮಗೆ ಪ್ರತ್ಯುಪಕಾರವಾಗಿ ವಾಪಸ್ ಬರಲಿದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮ ಇರಲಿದೆ.
ಸಿಂಹ: ಮಾತು ಮುತ್ತಿನಂತಿರಲಿ!
ನಿಮ್ಮ ಕಟು ಮಾತುಗಳಿಂದ ಮನೆಯಲ್ಲಿ ಅಶಾಂತಿ ಉಂಟಾಗಬಹುದು, ಸ್ವಲ್ಪ ನಾಲಿಗೆ ಮೇಲೆ ಹಿಡಿತವಿರಲಿ. ಧಾರ್ಮಿಕ ವಿಚಾರಗಳಲ್ಲಿ ವಾದ ಮಾಡಬೇಡಿ. ಭೂಮಿ ವ್ಯವಹಾರದಲ್ಲಿ ಸಣ್ಣ ಲಾಭ ಕಾಣಬಹುದು. ಇಂದು ಮನೆ ಬದಲಿಸುವ ಪ್ಲ್ಯಾನ್ ಇದ್ದರೆ ಯಶಸ್ವಿಯಾಗಲಿದೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸ್ವಲ್ಪ ಅಲೆದಾಟ ತಪ್ಪಿದ್ದಲ್ಲ.
ಕನ್ಯಾ: ಗುಟ್ಟು ರಟ್ಟಾದೀತು!
ಪಾರ್ಟ್‌ನರ್‌ಶಿಪ್ ವ್ಯವಹಾರದಲ್ಲಿ ಏನನ್ನಾದರೂ ಮುಚ್ಚಿಡುತ್ತಿದ್ದರೆ ಇಂದು ಅದು ಹೊರಬರುವ ಸಾಧ್ಯತೆ ಇದೆ. ಸಂಗಾತಿಯ ನಡವಳಿಕೆಯಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು. ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ಯಾರನ್ನೋ ನಂಬಿ ಕೈಯಲ್ಲಿದ್ದ ಕೆಲಸ ಬಿಡಬೇಡಿ. ಬೇರೆಯವರನ್ನು ಜಡ್ಜ್ ಮಾಡುವ ಮುನ್ನ ಹತ್ತಿರದಿಂದ ಗಮನಿಸಿ.
ತುಲಾ: ಗೊಂದಲದ ಗೂಡು
ಭವಿಷ್ಯದ ಬಗ್ಗೆ ನೂರು ಯೋಚನೆಗಳು ನಿಮ್ಮನ್ನು ಕಾಡಲಿವೆ. ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಗೊಂದಲ ಇರಲಿದೆ. ಯಾರಿಗಾದರೂ ಸಾಲ ಕೊಡುವಾಗ ಜಾಗರೂಕರಾಗಿರಿ. ಹಿರಿಯರ ಸಲಹೆ ಇಂದು ನಿಮಗೆ ದಾರಿದೀಪ. ದ್ವಿಚಕ್ರ ವಾಹನ ಚಲಾಯಿಸುವಾಗ ತುಂಬಾನೇ ಎಚ್ಚರಿಕೆ ಇರಲಿ, ಸ್ವಲ್ಪ ಮೈಮರೆತರೂ ಅಪಾಯ ತಪ್ಪಿದ್ದಲ್ಲ.
ವೃಶ್ಚಿಕ: ಕಿರಿಕಿರಿ ಜಾಸ್ತಿ, ಸಮಾಧಾನ ಕಡಿಮೆ
ಕೋರ್ಟ್ ಕಚೇರಿ ಕೆಲಸಗಳಲ್ಲಿ ಅಸಮಾಧಾನ ಮೂಡಬಹುದು. ಮನಸ್ಸಿನಲ್ಲಿ ಯಾವುದೋ ಒಂದು ಭಯ ಕಾಡುತ್ತಿರುತ್ತದೆ. ಸ್ನೇಹಿತರಿಗಾಗಿ ನೀವು ಮಾಡುವ ಸಾಲ ಮುಂದೆ ನಿಮ್ಮ ಕುತ್ತಿಗೆಗೆ ಬರಬಹುದು, ಎಚ್ಚರ! ಕೆಲಸದ ವಿಷಯದಲ್ಲಿ ಸಹೋದ್ಯೋಗಿಗಳ ಸಹಾಯ ಪಡೆಯುವುದು ಉತ್ತಮ. ಸಮಾಧಾನದಿಂದ ಯೋಚಿಸಿ ನಿರ್ಧಾರ ತಗೊಳ್ಳಿ.
ಧನು: ಶ್ರಮಕ್ಕೆ ತಕ್ಕ ಫಲ
ಇಂದು ನಿಮಗೆ ಸಖತ್ ಪ್ರಶಂಸೆ ಸಿಗಲಿದೆ. ಜನರ ಜೊತೆ ಕೆಲಸ ಮಾಡುವ ನಿಮ್ಮ ರೀತಿ ಎಲ್ಲರಿಗೂ ಇಷ್ಟವಾಗಲಿದೆ. ಆಸ್ತಿ ಖರೀದಿ ಮಾಡುವ ಮುನ್ನ ಡಾಕ್ಯುಮೆಂಟ್ ಚೆಕ್ ಮಾಡಿಕೊಳ್ಳಿ. ಸತತ ಪರಿಶ್ರಮದಿಂದ ಇಂದೊಂದು ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಆದರೆ ಸಿಟ್ಟಿನಿಂದ ಮನೆಯವರ ಮನಸ್ಸು ನೋಯಿಸಬೇಡಿ. ಪ್ರವಾಸದ ಪ್ಲ್ಯಾನ್ ಮಾಡುವ ಸಾಧ್ಯತೆ ಇದೆ.
ಮಕರ: ಸರ್ಕಾರಿ ಕೆಲಸದಲ್ಲಿ ಶುಭ
ಸರ್ಕಾರಿ ಕೆಲಸದಲ್ಲಿರುವವರಿಗೆ ಇಂದು ಸ್ಯಾಲರಿ ಹೆಚ್ಚಳ ಅಥವಾ ಬೋನಸ್ ಸಿಗುವ ಸಾಧ್ಯತೆ ಇದೆ. ಆದರೆ ಭೂಮಿ ಮಾರಾಟದಲ್ಲಿ ನಷ್ಟವಾಗಬಹುದು. ಯಾರಾದರೂ ನಿಮ್ಮನ್ನು ಚುಚ್ಚಿ ಮಾತನಾಡಿದರೂ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ. ಮನೆಯವರ ಜೊತೆ ಸಂಜೆ ಮಜವಾಗಿ ಕಳೆಯುವಿರಿ.
ಕುಂಭ: ಕಲೆಗೆ ಗೌರವ
ಕಲಾವಿದರಿಗೆ ಇಂದು ಅದ್ಭುತ ಅವಕಾಶಗಳು ಸಿಗಲಿವೆ. ನಿಮ್ಮದೇ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಕಾಲ. ಆದರೆ ವಾಹನ ಚಾಲನೆಯಲ್ಲಿ ಅವಸರ ಬೇಡ. ಮಾತಿನಿಂದ ವಿವಾದ ಸೃಷ್ಟಿಯಾಗಬಹುದು, ಅಹಂಕಾರವನ್ನು ಬದಿಗಿಡಿ. ಹೊಸ ಕೆಲಸಗಳತ್ತ ಗಮನವಿರಲಿ, ಹಳೆಯ ಸ್ನೇಹ ದೂರವಾಗದಂತೆ ನೋಡಿಕೊಳ್ಳಿ.
ಮೀನ: ಸೋತರೂ ನಿಮ್ಮದೇ ಹವಾ!
ನೀವು ತಪ್ಪು ಮಾಡಿಲ್ಲ ಅಂದಮೇಲೆ ಯಾರಿಗೂ ಹೆದರಬೇಡಿ. ನಿಮ್ಮ ಕೆಲಸಗಳು ಸ್ಮೂತ್ ಆಗಿ ಸಾಗಲಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದೆ. ಬಹಳ ದಿನಗಳಿಂದ ಹೇಳಲಾಗದ ವಿಚಾರಗಳನ್ನು ಇಂದು ಆಪ್ತರ ಮುಂದೆ ಹಂಚಿಕೊಳ್ಳುವಿರಿ. ನಿಮ್ಮ ಆತ್ಮವಿಶ್ವಾಸ ಎಷ್ಟಿರುತ್ತೆ ಎಂದರೆ, ಸೋತರೂ ಗೆದ್ದವರಂತೆ ಬೀಗುವಿರಿ!