2026 ರಲ್ಲಿ ಕರ್ಕ ರಾಶಿಗೆ ಆತ್ಮವಿಕಾಸ, ಭಾವನಾತ್ಮಕ ಬಲ, ಮತ್ತು ಹೊಸ ಗುರಿಗಳ ವರ್ಷ ಎಂದೇ ಕರೆಯಬಹುದು. ಈ ವರ್ಷ ನಿಮ್ಮ ಭಾವನೆಗಳು ಮತ್ತು ಒಳಗಿನ ಶಕ್ತಿ ಪ್ರಮುಖ ಪಾತ್ರವಹಿಸುತ್ತವೆ. ಗ್ರಹಗಳ ಚಲನೆ ನಿಮ್ಮ ಮನಸ್ಸಿನ ಮೇಲೆ , ಕುಟುಂಬ ಸಂಬಂಧಗಳ ಮೇಲೆ ಮತ್ತು ಆರ್ಥಿಕ ಸ್ಥಿತಿ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಅಸ್ಥಿರತೆಯ ಗೊಂದಲ ಉಂಟಾಗಬಹುದು, ಆದರೆ ತಾಳ್ಮೆ ಆತ್ಮವಿಶ್ವಾಸದಿಂದ ನೀವು ಯಶಸ್ಸು ಸಾಧಿಸಬಹುದಾಗಿದೆ. ಈ ವರ್ಷ ನಿಮ್ಮ ಒಳಗಿನ ಶಕ್ತಿಯನ್ನು ಗುರುತಿಸಿ, ಗುರಿಯತ್ತ ದೃಢವಾಗಿ ಹೆಜ್ಜೆ ಇಡಬಹುದು.
1. ಉದ್ಯೋಗ
ವೃತ್ತಿಜೀವನದಲ್ಲಿ ಇವರಿಗೆ ಈ ವರ್ಷ ಉತ್ತಮ ಬೆಳವಣಿಗೆ ಸಿಗಲಿದೆ. ಹೊಸ ಜವಾಬ್ದಾರಿಗಳು, ಬಡ್ತಿ ಅಥವಾ ಹೊಸ ಉದ್ಯೋಗದ ಅವಕಾಶಗಳು ಬರಬಹುದು. ನಿಮ್ಮ ಸತತ ಶ್ರಮ ಮತ್ತು ನಿಖರತೆಯಿಂದ ಮೇಲ್ದರ್ಜೆಗೆ ಏರಲು ಸಾಧ್ಯ. ತಂಡದೊಂದಿಗೆ ಉತ್ತಮ ಸಂವಹನ ಮತ್ತು ಸಹಕಾರ ಅಗತ್ಯ. ಮಧ್ಯಭಾಗದಲ್ಲಿ ಯೋಜನೆಗಳಲ್ಲಿ ವಿಳಂಬ ಅಥವಾ ಗೊಂದಲ ಉಂಟಾಗಬಹುದು. ತ್ವರಿತ ನಿರ್ಧಾರಗಳನ್ನು ತಪ್ಪಿಸಿ, ಯೋಜಿತವಾಗಿ ನಡೆದುಕೊಳ್ಳಿ. ಹೊಸ ಕೌಶಲ್ಯಗಳ ಅಭ್ಯಾಸ ಮತ್ತು ಆತ್ಮವಿಶ್ವಾಸದಿಂದ ಯಶಸ್ಸು ಸಾಧ್ಯ.
2. ವ್ಯಾಪಾರ
ವ್ಯಾಪಾರಿಗಳಿಗೆ 2026 ಹೊಸ ಯೋಜನೆಗಳನ್ನ ರೂಪಿಸುವ ಸಾಧ್ಯತೆ ಹೆಚ್ಚಿರುತ್ತದೆ. ವಿಸ್ತರಣೆ, ಮತ್ತು ಲಾಭದ ಅವಕಾಶಗಳನ್ನು ನೀಡುತ್ತದೆ. ಗ್ರಾಹಕರೊಂದಿಗೆ ನಂಬಿಕೆ ನಿರ್ಮಾಣ ಮಾಡಿಕೊಳ್ಳಿ. ಗುಣಮಟ್ಟದ ಸೇವೆ, ಮತ್ತು ಹೊಸ ತಂತ್ರಜ್ಞಾನಗಳ ಬಳಕೆ ಮಾಡುವುದರಿಂದ ಯಶಸ್ಸಿಗೆ ದಾರಿ ಮಾಡಿ ಕೊಡುತ್ತದೆ. ಮಧ್ಯಭಾಗದಲ್ಲಿ ಹಣಕಾಸು ಅಥವಾ ಕಾನೂನು ಸಂಬಂಧಿತ ವಿಳಂಬಗಳು ಸಂಭವಿಸಬಹುದು. ಹೂಡಿಕೆ ಮಾಡುವ ಮೊದಲು ಅದರ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಮಾಡುವುದು ಒಳಿತಾಗಿದೆ. ಧೈರ್ಯದಿಂದ ಮುಂದೆ ಹೆಜ್ಜೆಯನ್ನು ಇಡಿ, ಆದರೆ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗಿರುತ್ತದೆ. ಸಹಯೋಗದ ಮೂಲಕ ಬೆಳವಣಿಗೆ ಸಾಧ್ಯತೆ ಹೆಚ್ಚು.
3. ವಿವಾಹ
ಈ ವರ್ಷ ಇವರಿಗೆ ಕಂಕಣ ಕೂಡಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆ ಆ ಸಂಬಂಧವನ್ನು ಬಲಪಡಿಸುವ ಸಮಯ. ಭಾವನಾತ್ಮಕ ಸಮೀಪತೆ, ಪರಸ್ಪರ ಗೌರವ ಮತ್ತು ನಂಬಿಕೆ ಮುಖ್ಯ. ವಿವಾಹದ ಯೋಚನೆಯಲ್ಲಿರುವವರಿಗೆ ಮಧ್ಯ ಅಥವಾ ಅಂತ್ಯದ ಭಾಗದಲ್ಲಿ ಉತ್ತಮ ಸಮಯ ಎಂದು ಹೇಳಬಹುದು. ಕುಟುಂಬದ ಒಪ್ಪಿಗೆ, ಜಾತಕ ಹೊಂದಾಣಿಕೆ ಆಗಲಿದ್ದು ಮತ್ತು ಭಾವನಾತ್ಮಕ ಸಿದ್ಧತೆ ಅಗತ್ಯವಿರಬೇಕು.
4. ಪ್ರೇಮ ಜೀವನ
2026 ರಲ್ಲಿ ಈ ರಾಶಿಯವರಿಗೆ ಪ್ರೇಮ ಜೀವನದಲ್ಲಿ ಭಾವನಾತ್ಮಕ ಆಳತೆ ಹೆಚ್ಚಾಗುತ್ತದೆ. ಒಂಟಿತನದಿಂದ ಜಂಟಿ ಅವಕಾಶಕ್ಕೆ ಹೊಸ ಸಂಬಂಧಗಳ ಅವಕಾಶಗಳು ಹತ್ತಿರ ಬರುವ ಸಾಧ್ಯತೆ ಹೆಚ್ಚು. ಆದರೆ ನಂಬಿಕೆ ಮತ್ತು ಭಾವನೆಗಳ ಸ್ಪಷ್ಟತೆ ಈ ಹಂತದಲ್ಲಿ ಇವರಿಗೆ ಅತಿ ಮುಖ್ಯ. ಹಳೆಯ ಸಂಬಂಧಗಳು ಪುನಃ ಪ್ರಾರಂಭವಾಗುವ ಸಾಧ್ಯತೆ ಇದೆ. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮೀಪತೆ ಅನುಭವಿಸಬಹುದು. ಮಧ್ಯಭಾಗದಲ್ಲಿ ಗ್ರಹಚಲನೆಗಳಿಂದಾಗಿ ಗೊಂದಲ ಅಥವಾ ಅಸಮಜಸ ಉಂಟಾಗಬಹುದು. ಸಂವಹನದ ಸ್ಪಷ್ಟತೆ, ಸಹಾನುಭೂತಿ, ಮತ್ತು ನಿಷ್ಠೆ ಸಂಬಂಧಗಳನ್ನು ಬಲಪಡಿಸುತ್ತವೆ.
5. ಆರೋಗ್ಯ
ಆರೋಗ್ಯ ಒಟ್ಟಾರೆ ಹೇಳಬೇಕು ಅಂದರೆ ಇವರಿಗೆ ಈ ಸಮಯದಲ್ಲಿ ಉತ್ತಮವಾಗಿದೆ. ಆದರೆ ಕಡಿಮೆ ಪ್ರಮಾಣದ ಒತ್ತಡ, ನಿದ್ರೆ ಕೊರತೆ ಇರಲಿದ್ದು, ಆಹಾರ ನಿಯಮಿತವಾಗಿರಬೇಕು. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಧ್ಯಾನ ಅಥವಾ ಯೋಗದಿಂದ ಸಮತೋಲನ ಸಾಧಿಸಬಹುದು. ನಿಮ್ಮ ಶಕ್ತಿಯನ್ನು ಸಮರ್ಪಕವಾಗಿ ಬಳಸುವುದು ಈ ಹಂತದಲ್ಲಿ ಮುಖ್ಯ. ವಿಶ್ರಾಂತಿ ಮತ್ತು ಆತ್ಮಚಿಂತನೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಜೂನ್ ನಂತರ ಗುರುವಿನ ಚಲನೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ತೀವ್ರ ಕೆಲಸದ ನಡುವೆ ವಿಶ್ರಾಂತಿ ಅಗತ್ಯವಾಗಿದೆ. ಸಂವಹನದ ಸ್ಪಷ್ಟತೆ ಮತ್ತು ನಿಷ್ಠೆ ಸಂಬಂಧವನ್ನು ಬಲಪಡಿಸುತ್ತದೆ. ಗ್ರಹಚಲನೆಗಳ ಪ್ರಭಾವದಿಂದ ಕೆಲವೊಮ್ಮೆ ತಡವಾಗಬಹುದು ಆದರೆ ತಾಳ್ಮೆಯಿಂದ ನಿರೀಕ್ಷಿಸಿ.
6. ಶಿಕ್ಷಣ
ವಿದ್ಯಾರ್ಥಿಗಳಿಗೆ 2026 ವರ್ಷ ಉತ್ತಮ ವರ್ಷ ಆಗಿರಲಿದೆ. ಹೊಸ ವಿಷಯಗಳ ಅಧ್ಯಯನ ಈ ರಾಶಿಯವರು ಹೆಚ್ಚು ಮಾಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವ ಹಂಬಲ ಹಾಗೂ ಪ್ರಯತ್ನ ಇದ್ದೆ ಇರುತ್ತದೆ. ಮೊದಲ ಆರು ತಿಂಗಳು ಸಾಕಷ್ಟು ಏರುಪೇರು ಕಾಣುತ್ತಾರೆ. ಆದರೆ ಮುಂದಿನ ಭಾಗದಲ್ಲಿ ಉತ್ತಮ ಪ್ರಗತಿ. ಆತ್ಮವಿಶ್ವಾಸ, ಶ್ರಮ, ಮತ್ತು ಸಮಯದ ನಿರ್ವಹಣೆಯಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ವೃತ್ತಿಪರರು ಹೊಸ ತರಬೇತಿ ಅಥವಾ ಜ್ಞಾನವರ್ಧನೆಗೆ ತೊಡಗಿಸಿಕೊಳ್ಳಬಹುದು. “ಅಭ್ಯಾಸ ಮತ್ತು ಆತ್ಮವಿಕಾಸ” ಈ ವರ್ಷದ ಕರ್ಕ ರಾಶಿಯವರ ಮಂತ್ರ ಆಗಿದೆ.
7. ಹಣಕಾಸು
ಆರ್ಥಿಕವಾಗಿ ಈ ವರ್ಷ ಸ್ಥಿರತೆ ಮತ್ತು ಬೆಳವಣಿಗೆ ಸಾಧ್ಯವಿದೆ. ಹಳೆಯ ಹೂಡಿಕೆಗಳಿಂದ ಅಧಿಕ ಲಾಭಂಶ, ಹೊಸ ಆದಾಯದ ಮಾರ್ಗಗಳು ಸಿಗುತ್ತವೆ. ಆದರೆ ವೆಚ್ಚದ ವಿಚಾರದಲ್ಲಿ ನಿಯಂತ್ರಣ ಇರಬೇಕು. ಪ್ರಯಾಣ, ಮನೆ ದುರಸ್ತಿ ಮುಂತಾದ ಅನಿರೀಕ್ಷಿತ ವೆಚ್ಚಗಳು ಎದುರಾಗಬಹುದು. ಮಧ್ಯಭಾಗದಲ್ಲಿ ಗ್ರಹಗಳ ಚಲನೆ ಹೂಡಿಕೆಯಲ್ಲಿ ಜಾಗರೂಕತೆ ಇರಲಿ. ಉತ್ಸಾಹದ ಜೊತೆಗೆ ಬಜೆಟ್ ಯೋಜನೆ ನೋಡಿಕೊಳ್ಳುವುದು ಉತ್ತಮ. “ನಿಧಾನವಾದ ಬೆಳವಣಿಗೆ” ಎಂಬ ತತ್ವವನ್ನು ಅನುಸರಿಸಬೇಕಾಗುತ್ತದೆ.
ಈ ರಾಶಿಯವರಿಗೆ ಸಿಗುವ ಪರಿಹಾರಗಳು:
- ಚಂದ್ರ ಗ್ರಹ ಶಾಂತಿ: ಸೋಮವಾರದ ಪೂಜೆ, ಜಪ, ಹಾಲು, ಅಕ್ಕಿ ದಾನ.
- ಗುರು ಮತ್ತು ಶನಿ ಶಾಂತಿ: ಜಪ, ದಾನ, ಹೋಮ.
- ಯೋಗ ಮತ್ತು ಧ್ಯಾನ: ಭಾವನಾತ್ಮಕ ಸಮತೋಲನಕ್ಕಾಗಿ.
- ಪವಿತ್ರ ನದಿಯಲ್ಲಿ ಸ್ನಾನ: ಶುದ್ಧೀಕರಣ ಮತ್ತು ಶಕ್ತಿ ಪುನರುತ್ಪಾದನೆ.
- ಅನ್ನದಾನ ಮತ್ತು ಸೇವೆ: ಪುಣ್ಯ ಲಾಭ ಮತ್ತು ಶಾಂತಿ.