ಆರ್‌ಸಿಬಿ ಅಂದ್ರೆನೇ ಹಾಗೆ, ಅಭಿಮಾನಿಗಳಿಗೆ ಕೊನೆ ರನ್ ಹಾಗೂ ಕೊನೆ ವಿಕೆಟ್ ವರೆಗೂ ರೋಮಾಂಚನ ಕೊಡುತ್ತೆ. ಸದ್ಯ ನಡೆದ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಹೈ-ವೋಲ್ಟೇಜ್ ಪ್ಲೇಆಫ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ. ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಮೈದಾನದಲ್ಲಿ ಅವರ ಸೂಪರ್ ಫಾಸ್ಟ್ ಡೈವಿಂಗ್ ಸೇವ್ ನೆರವಿನಿಂದ ಆರ್‌ಸಿಬಿ ತಂಡ ಪ್ಲೇಆಫ್ಸ್ ನಲ್ಲಿ ಭರ್ಜರಿ ಗೆಲುವು ದಾಖಲಿಸಿ ಮುನ್ನುಗ್ಗಿದೆ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು! ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ 8 ವಿಕೆಟ್ ಕಳೆದುಕೊಂಡು 199 ರನ್ ಗಳಿಸಲಷ್ಟೇ ಶಕ್ತವಾಗಿ, 23 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಪಂದ್ಯದ ಪ್ರಮುಖ ಹೈಲೈಟ್ಸ್ (Highlights);
ಕಿಂಗ್ ಕೊಹ್ಲಿ ಅಬ್ಬರ - ವಿರಾಟ್ ಕೊಹ್ಲಿ ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 58 ರನ್ ಚಚ್ಚಿ ತಂಡಕ್ಕೆ ಬಲ ತುಂಬಿದರು.
ಸಾಥ್ ಕೊಟ್ಟ ಪಡಿಕ್ಕಲ್ & ಅಯ್ಯರ್ - ದೇವದತ್ ಪಡಿಕ್ಕಲ್ 45 ರನ್ ಗಳಿಸಿದರೆ, ಕೊನೆಯಲ್ಲಿ ವೆಂಕಟೇಶ್ ಅಯ್ಯರ್ ಅಬ್ಬರದ ಬ್ಯಾಟಿಂಗ್ ನಡೆಸಿ 73 ರನ್ ಗಳಿಸಿ ಅಜೇಯರಾಗಿ ಉಳಿದರು.
ರಸಿಕ್ ಸಲಾಂ ಮಾರಕ ಬೌಲಿಂಗ್ - ಬೌಲಿಂಗ್‌ನಲ್ಲಿ ಕಮಾಲ್ ಮಾಡಿದ ರಸಿಕ್ ಸಲಾಂ 36 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಪಂಜಾಬ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಮೈದಾನದಲ್ಲಿ ಕೊಹ್ಲಿ ಮ್ಯಾಜಿಕ್ - ಬ್ಯಾಟಿಂಗ್ ಅಷ್ಟೇ ಅಲ್ಲ, ಫೀಲ್ಡಿಂಗ್‌ನಲ್ಲೂ ಅಬ್ಬರ!
ಆರ್‌ಸಿಬಿ ಕೊಟ್ಟ 222 ರನ್‌ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಲು ಬಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲೇ ಆರ್‌ಸಿಬಿ ಬೌಲರ್‌ಗಳು ಶಾಕ್ ನೀಡಿದರು. ಪಂದ್ಯದ ಮಧ್ಯದಲ್ಲಿ ಪಂಜಾಬ್ ಗೆಲುವಿಗಾಗಿ ಹೋರಾಡುತ್ತಿತ್ತಾದರೂ, ವಿರಾಟ್ ಕೊಹ್ಲಿ ಮೈದಾನದಲ್ಲಿ ತೋರಿಸಿದ ಚುರುಕುತನ ಪಂದ್ಯದ ಚಿತ್ರಣವನ್ನೇ ಬದಲಿಸಿತು.
ಕೊಹ್ಲಿ ಕೇವಲ ಬ್ಯಾಟಿಂಗ್‌ನಲ್ಲಿ ಅಷ್ಟೇ ಅಲ್ಲದೆ ಫೀಲ್ಡಿಂಗ್‌ನಲ್ಲೂ ಮ್ಯಾಜಿಕ್ ಮಾಡಿದರು. ಬೌಂಡರಿ ಲೈನ್ ಹತ್ತಿರ ಅದ್ಭುತವಾಗಿ ಡೈವ್ ಮಾಡುವ ಮೂಲಕ ರನ್ ಸೇವ್ ಮಾಡಿದ್ದಲ್ಲದೆ, ಒಂದು ಶಾರ್ಪ್ ಹಾಗೂ ಅದ್ಭುತವಾದ ಕ್ಯಾಚ್ ಹಿಡಿದು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಕೊನೆಗೆ ರಸಿಕ್ ಸಲಾಂ ಅವರ ಟೈಟ್ ಬೌಲಿಂಗ್‌ನಿಂದಾಗಿ ಪಂಜಾಬ್ ತಂಡ 199 ರನ್‌ಗಳಿಗೆ ಲಾಕ್ ಆಯಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್ಸ್‌ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.
ಆಟದ ಮೈದಾನದಲ್ಲಿ ವೈರತ್ವ, ಹೊರಗೆ ಆತ್ಮೀಯತೆ:
ಪಂದ್ಯ ಮುಗಿದ ನಂತರ ಮೈದಾನದಲ್ಲಿ ಒಂದು ಸಖತ್ ಕ್ಯೂಟ್ ಆದ ದೃಶ್ಯ ಕಂಡುಬಂತು. ಪಂದ್ಯದ ಸಮಯದಲ್ಲಿ ಎಷ್ಟೇ ಪೈಪೋಟಿ ಇದ್ದರೂ, ಮ್ಯಾಚ್ ಮುಗಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಅವರು ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಮತ್ತು ಅವರ ಫ್ಯಾಮಿಲಿ ಜೊತೆ ಆತ್ಮೀಯವಾಗಿ ಮಾತನಾಡುತ್ತಾ ನಿಂತಿದ್ದರು.
ಕೊಹ್ಲಿ ಅವರು ಹರ್‌ಪ್ರೀತ್ ಬ್ರಾರ್ ಕುಟುಂಬದವರ ಜೊತೆ ನಗುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡು, ಹರಟು ಹೊಡೆದ ಫೋಟೋಗಳು ಹಾಗೂ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಾ ಇವೆ. ಕ್ರಿಕೆಟ್ ಮೈದಾನದಲ್ಲಿ ಎಷ್ಟೇ ಜಿದ್ದಾಜಿದ್ದಿ ಇದ್ದರೂ ಆಟಗಾರರ ನಡುವಿನ ಈ ಪರಸ್ಪರ ಗೌರವ ಹಾಗೂ ಸ್ನೇಹವನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ನೆಟ್ಟಿಗರ ಕಮೆಂಟ್ಸ್ ಹಾವಳಿ - "ಈ ಸಲ ಕಪ್ ನಮ್ದೇ!"
ಆರ್‌ಸಿಬಿ ಪ್ಲೇಆಫ್ಸ್‌ನಲ್ಲಿ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆ ಎಕ್ಸ್ (ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿ ಫ್ಯಾನ್ಸ್ ಹಬ್ಬ ಆಚರಿಸುತ್ತಿದ್ದಾರೆ. "ಕೊಹ್ಲಿ ಫಾರ್ಮ್‌ಗೆ ಬಂದರೆ ಎದುರಾಳಿ ಯಾರಿದ್ದರೂ ನಡುಗಲೇಬೇಕು" ಎಂದು ಕೆಲವರು ಕಮೆಂಟ್ ಮಾಡಿದ್ರೆ, ಇನ್ನು ಕೆಲವು ಅಭಿಮಾನಿಗಳು ಎಂದಿನಂತೆ ತಮ್ಮ ಫೇವರೆಟ್ ಡೈಲಾಗ್ ಆದ "ಈ ಸಲ ಕಪ್ ನಮ್ದೇ" ಅಂತ ಟ್ರೆಂಡ್ ಕ್ರಿಯೇಟ್ ಮಾಡ್ತಾ ಇದ್ದಾರೆ. ಒಟ್ಟಿನಲ್ಲಿ ಆರ್‌ಸಿಬಿಯ ಈ ಆಲ್‌ರೌಂಡ್ ಪರ್ಫಾಮೆನ್ಸ್ ನೋಡುಗರಿಗೆ ಫುಲ್ ಪೈಸಾ ವಸೂಲ್ ಎಂಟರ್‌ಟೈನ್‌ಮೆಂಟ್ ಕೊಟ್ಟಿದ್ದಂತೂ ಸುಳ್ಳಲ್ಲ!
The kind of clip you never get tired of watchingpic.twitter.com/yGEJi9rszD
— Chaitanya (@chaitu_20) May 18, 2026
ಪಂಜಾಬ್ ತಂಡಕ್ಕೆ ನಿನ್ನೆಯ ಸೋಲು ನಿಜಕ್ಕೂ ದೊಡ್ಡ ಆಘಾತಕಾರಿ ಎನ್ನಬಹುದು. ಅವರ ಪ್ಲೇಆಫ್ ದಾರಿ ಇನ್ನಷ್ಟು ಕಠಿಣ ಆಗಿದೆ. ಬೆಂಗಳೂರು ಎದುರು ಸೋಲುತ್ತಿದ್ದಂತೆಯೇ ಪ್ಲೇಆಫ್ ಕನಸು ಬಹುತೇಕ ಕಠಿಣದ ಹಾದಿ ಹಿಡಿದಿದೆ. ಮುಂದಿನ ಪಂದ್ಯದಲ್ಲಿ ಹೆಚ್ಚು ರನ್ ರೆಟ್ ಮೂಲಕ ಗೆದ್ದು ಪಂಜಾಬ್ ಬೀಗಬೇಕು, ಜೊತೆಗೆ ಬೇರೆ ತಂಡಗಳ ಫಲಿತಾಂಶದ ಮೇಲೆ ಪ್ಲೇಆಫ್ ಎದುರು ನೋಡಬೇಕಾಗಿದೆ.