ಇಂದಿನ ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಶಾಕ್ - ಸಾಲ್ಟ್ ಸೇರಿ ಈ ಇಬ್ಬರೂ ಆಟಗಾರರು ಡೌಟ್?

ಐಪಿಎಲ್ ಲೀಗ್ ಹಂತದಲ್ಲಿ ಭರ್ಜರಿಯಾಗಿ ಹೋರಾಡಿ, ರಣರೋಚಕವಾಗಿ ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿರುವ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಮೊದಲ ಕ್ವಾಲಿಫೈಯರ್ (Qualifier-1) ಪಂದ್ಯ ಆಡಲು ಕೌಂಟ್‌ಡೌನ್ ಶುರು ಮಾಡಿದೆ. ಧರ್ಮಶಾಲಾದ ಸುಂದರ ಕ್ರೀಡಾಂಗಣದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದಾರೆ. ಆದರೆ, ಈ ಮಹತ್ವದ ಪಂದ್ಯಕ್ಕೂ ಮುನ್ನವೇ ಆರ್‌ಸಿಬಿ ಕ್ಯಾಂಪ್‌ನಲ್ಲಿ ಒಂದು ದೊಡ್ಡ ಕನ್‌ಫ್ಯೂಷನ್ ಶುರುವಾಗಿದೆ;

ಧರ್ಮಶಾಲಾದ ಹೈವೋಲ್ಟೇಜ್ ಪಂದ್ಯಕ್ಕೆ RCB ಸಜ್ಜು; | Photo Credit: https://x.com/ImTanujSingh
ಧರ್ಮಶಾಲಾದ ಹೈವೋಲ್ಟೇಜ್ ಪಂದ್ಯಕ್ಕೆ RCB ಸಜ್ಜು; | Photo Credit: https://x.com/ImTanujSingh

ಹೌದು, ಇಂದಿನ ಪಂದ್ಯದ ಪ್ಲೇಯಿಂಗ್-11 ನಲ್ಲಿ ಯಾರಿಗೆ ಚಾನ್ಸ್ ಕೊಡಬೇಕು ಅನ್ನೋದು ಮ್ಯಾನೇಜ್‌ಮೆಂಟ್‌ಗೆ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸ್ಟಾರ್ ಆಟಗಾರ ಫಿಲ್ ಸಾಲ್ಟ್ ಮತ್ತು ಭರ್ಜರಿ ಫಾರ್ಮ್‌ನಲ್ಲಿರುವ ವೆಂಕಟೇಶ್ ಅಯ್ಯರ್ ಇಬ್ಬರಲ್ಲಿ ಯಾರನ್ನು ಆಡಿಸಬೇಕು ಅನ್ನೋದು ಇನ್ನು ಕನ್‌ಫರ್ಮ್ ಆಗಿಲ್ಲ.

ಏನಿದು ಸಾಲ್ಟ್ ವರ್ಸಸ್ ಅಯ್ಯರ್ ಕಥೆ?

ಕಳೆದ ಕೆಲವು ಪಂದ್ಯಗಳಿಂದ ಬೆರಳಿನ ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಓಪನರ್ ಫಿಲ್ ಸಾಲ್ಟ್ ತಂಡದಿಂದ ಹೊರಗುಳಿದಿದ್ದರು. ಬರೋಬ್ಬರಿ ಏಳು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ಸಾಲ್ಟ್, ಕಳೆದ ವಾರವಷ್ಟೇ ಆರ್‌ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಸದ್ಯ ಅವರು ಫಿಟ್ ಆಗಿದ್ದರೂ, ಇಂದಿನ ಮ್ಯಾಚ್‌ನಲ್ಲಿ ಆಡುತ್ತಾರಾ ಇಲ್ವಾ ಅನ್ನೋದು ಇನ್ನು ಸಸ್ಪೆನ್ಸ್ ಆಗಿದೆ!

ಇನ್ನೊಂದೆಡೆ, ಸಾಲ್ಟ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಬಂದ ವೆಂಕಟೇಶ್ ಅಯ್ಯರ್ ಸದ್ಯ ಬೆಂಕಿ ಫಾರ್ಮ್‌ನಲ್ಲಿದ್ದಾರೆ! ಹೌದು, ಕಳೆದ ಎರಡು ಪಂದ್ಯಗಳಲ್ಲಿ ಅಯ್ಯರ್ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಜೇಯ 73 ರನ್ ಚಚ್ಚಿದ್ದ ಅಯ್ಯರ್, ಆ ಬಳಿಕ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಕೇವಲ 19 ಬಾಲ್‌ಗಳಲ್ಲಿ 44 ರನ್ ಸಿಡಿಸಿ ಅಬ್ಬರಿಸಿದ್ದರು. ಇಂತಹ ಸೂಪರ್ ಫಾರ್ಮ್‌ನಲ್ಲಿರುವ ಆಟಗಾರನನ್ನು ಡ್ರಾಪ್ ಮಾಡುವುದು ಅಷ್ಟು ಸುಲಭವಲ್ಲ.

ಕ್ಯಾಪ್ಟನ್ ರಜತ್ ಪಾಟಿದಾರ್ ಹೇಳಿದ್ದೇನು?

ಈ ಗೊಂದಲದ ಬಗ್ಗೆ ಟಾಸ್ಸ್‌ಗೂ ಮುನ್ನ ಮಾತನಾಡಿರುವ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರು ಫಿಲ್ ಸಾಲ್ಟ್ ಅಪ್‌ಡೇಟ್ ನೀಡಿದ್ದಾರೆ. "ಫಿಲ್ ಸಾಲ್ಟ್ ಗಾಯದಿಂದ ಚೇತರಿಸಿಕೊಂಡು ಈಗ ಫಿಟ್ ಆಗಿದ್ದಾರೆ ನಿಜ, ಆದರೆ ಸದ್ಯ ಅವರನ್ನು ಇನ್ನು ಅಬ್ಸರ್ವೇಷನ್‌ನಲ್ಲಿ (ಪರಿಶೀಲನೆ) ಇಡಲಾಗಿದೆ. ಒಮ್ಮೆ ಪ್ಲೇಯಿಂಗ್-11 ಫೈನಲ್ ಮಾಡಿದರೆ ಮತ್ತೆ ಬದಲಾಯಿಸಲು ಆಗಲ್ಲ. ಹಾಗಾಗಿ ಕೊನೆ ಕ್ಷಣದವರೆಗೂ ಕಾದು ನೋಡುತ್ತೇವೆ" ಎಂದು ಹೇಳಿದ್ದಾರೆ. ಸಾಲ್ಟ್ ಆಡುತ್ತಾರೋ ಇಲ್ಲವೋ ಎಂಬುದನ್ನು ಕ್ಯಾಪ್ಟನ್ ಇನ್ನು ಅಧಿಕೃತವಾಗಿ ದೃಢಪಡಿಸಿಲ್ಲ.

ಆರ್‌ಸಿಬಿ ಮುಂದಿರುವ ಆ ಎರಡು ಆಪ್ಷನ್‌ಗಳು;

ಮ್ಯಾನೇಜ್‌ಮೆಂಟ್ ಸದ್ಯ ಎರಡು ಯೋಚನೆಯಲ್ಲಿದೆ, ಆದರೆ ಎರಡರಲ್ಲೂ ರಿಸ್ಕ್ ಇದೆ:

ಆಪ್ಷನ್ 1 (ವೆಂಕಟೇಶ್ ಅಯ್ಯರ್‌ಗೆ ಚಾನ್ಸ್) - ಸದ್ಯ ಸಖತ್ ಫಾರ್ಮ್‌ನಲ್ಲಿರುವ ವೆಂಕಟೇಶ್ ಅಯ್ಯರ್ ಅವರನ್ನೇ ಪ್ಲೇಯಿಂಗ್-11 ನಲ್ಲಿ ಮುಂದುವರಿಸುವುದು. ಇದರಿಂದ ತಂಡದ ವಿನ್ನಿಂಗ್ ಕಾಂಬಿನೇಷನ್ ಬದಲಾಗಲ್ಲ.

ಆಪ್ಷನ್ 2 (ಫಿಲ್ ಸಾಲ್ಟ್ ಎಂಟ್ರಿ) - ಫಿಲ್ ಸಾಲ್ಟ್ ಅವರ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ. ಅವರು ಕ್ರೀಸ್‌ನಲ್ಲಿದ್ದರೆ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಬಲ್ಲರು. ಆದರೆ ಗಾಯದಿಂದ ಚೇತರಿಸಿಕೊಂಡು ದೀರ್ಘ ಗ್ಯಾಪ್ ನಂತರ ಬರುತ್ತಿರುವುದರಿಂದ ಅವರು ಮೊದಲಿನಂತೆಯೇ ಆಡುತ್ತಾರಾ ಅನ್ನೋ ಸಣ್ಣ ಆತಂಕವೂ ಇದೆ.

ಟ್ವಿಸ್ಟ್ ಏನು ಗೊತ್ತಾ? ಒಂದು ವೇಳೆ ಫಿಲ್ ಸಾಲ್ಟ್ ಅವರನ್ನು ತಂಡಕ್ಕೆ ಕರೆತರಬೇಕು ಎಂದರೆ, ಸದ್ಯ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿರುವ ವೆಂಕಟೇಶ್ ಅಯ್ಯರ್ ಅವರನ್ನು ಹೊರಗಿಡಬೇಕಾಗುತ್ತದೆ. ಅಥವಾ ಇವರಿಬ್ಬರನ್ನೂ ಆಡಿಸಬೇಕೆಂದರೆ ತಂಡದ ಮತ್ತೊಬ್ಬ ಪ್ರಮುಖ ಆಟಗಾರನನ್ನು ಕೈ ಬಿಡಬೇಕಾಗುತ್ತದೆ. ಇದು ಆರ್‌ಸಿಬಿಗೆ ಬಿಗ್ ಶಾಕ್ ಮತ್ತು ಕಠಿಣ ಸವಾಲಾಗಿದೆ.

ಧರ್ಮಶಾಲಾದ ಪಿಚ್ ಯಾರಿಗೆ ಸಾಥ್ ಕೊಡುತ್ತೆ ಮತ್ತು ಕೊನೆ ಕ್ಷಣದಲ್ಲಿ ಆರ್‌ಸಿಬಿ ಯಾರಿಗೆ ಮಣೆ ಹಾಕುತ್ತೆ ಅನ್ನೋದು ಟಾಸ್ ವೇಳೆ ಗೊತ್ತಾಗಲಿದೆ. ಏನೇ ಆಗಲಿ, ಫೈನಲ್ ಟಿಕೆಟ್ ಸಿಗಬೇಕಾದರೆ ಇಂದಿನ ಮ್ಯಾಚ್ ಗೆಲ್ಲಲೇಬೇಕು. ಆರ್‌ಸಿಬಿ ಈ ಗೊಂದಲವನ್ನೆಲ್ಲಾ ಮೀರಿ ಗುಜರಾತ್ ವಿರುದ್ಧ ಭರ್ಜರಿ ಜಯ ಸಾಧಿಸಲಿ ಅನ್ನೋದೇ ನಮ್ಮೆಲ್ಲರ ಆಶಯ. ಈ ಸಲ ಕಪ್ ನಮ್ದೇ! 

Latest News

Related News