ಆರ್‌ಸಿಬಿ ಪ್ಲೇ-ಆಫ್‌ ಲೆಕ್ಕಾಚಾರದ ಬಿಗ್ ಅಪ್ಡೇಟ್‌ - ಬೆಂಗಳೂರಿಗೆ ಇನ್ನು ಎಷ್ಟು ಗೆಲುವು ಬೇಕು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!!

ಐಪಿಎಲ್‌ 2026ರ ಲೀಗ್ ಹಂತದ ಪಂದ್ಯಗಳು ಈಗ ಮುಗಿಯುವ ಹಂತಕ್ಕೆ ಬಂದು ನಿಂತಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಪ್ಲೇ-ಆಫ್ ರೇಸ್ ಸಖತ್ ರೋಚಕ ಹಂತ ತಲುಪಿದೆ. ಅದರಲ್ಲೂ ನಮ್ಮ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಈ ಬಾರಿ ದೊಡ್ಡ ಹಬ್ಬವೇ ಸಿಕ್ಕಿದೆ. ಯಾಕೆಂದರೆ, ಆರ್‌ಸಿಬಿ ತಂಡವು ಈ ಸೀಸನ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸದ್ಯ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಟಾಪ್‌ನಲ್ಲಿ ಮುನ್ನುಗ್ಗುತ್ತಿದೆ.

IPL 2026: ತಂಡಗಳ ಶೇಕಡಾವಾರು ಅವಕಾಶಗಳ ಲಿಸ್ಟ್; | Photo Credit: https://www.facebook.com
IPL 2026: ತಂಡಗಳ ಶೇಕಡಾವಾರು ಅವಕಾಶಗಳ ಲಿಸ್ಟ್; | Photo Credit: https://www.facebook.com

ಆದರೆ ಕೆಳಗಿರುವ ತಂಡಗಳಿಗೆ ಇನ್ನು ಎರಡು ಪಂದ್ಯಗಳು ಬಾಕಿ ಇರುವುದರಿಂದ ಲೆಕ್ಕಾಚಾರಗಳು ದಿನಕ್ಕೊಂದು ಕಡೆ ತಿರುಗುತ್ತಿವೆ. ಹಾಗಾದರೆ ಆರ್‌ಸಿಬಿ ಪ್ಲೇ-ಆಫ್ ಹಾದಿ ಅಧಿಕೃತವಾಗಿ ಸುಗಮವಾಗಲು ಇನ್ನು ಎಷ್ಟು ಪಂದ್ಯ ಗೆಲ್ಲಬೇಕು? ಬೇರೆ ತಂಡಗಳ ಪರಿಸ್ಥಿತಿ ಏನಾಗಿದೆ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

ಸಿಎಸ್‌ಕೆಗೆ ಬಿಗ್ ಶಾಕ್ ಕೊಟ್ಟ ಲಕ್ನೋ - ಆರ್‌ಸಿಬಿಗೆ ಹೆಲ್ಪ್!

ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 15) ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಭೀಕರ ಸೋಲನುಭವಿಸಿದೆ. ಇದರ ಬೆನ್ನಲ್ಲೇ ಐಪಿಎಲ್ 2026ರ ಪ್ಲೇ-ಆಫ್ ರೇಸ್ ಮತ್ತಷ್ಟು ಕಾಂಪ್ಲಿಕೇಟೆಡ್ ಆಗಿದೆ. 5 ಬಾರಿಯ ಚಾಂಪಿಯನ್ ಆಗಿರುವ ಸಿಎಸ್‌ಕೆಗೆ ಈ ಸೋಲಿನಿಂದ ಭಾರಿ ಹಿನ್ನಡೆಯಾಗಿದ್ದು, ಅಂಕಪಟ್ಟಿಯಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡು ಸದ್ಯ 6ನೇ ಸ್ಥಾನಕ್ಕೆ ಕುಸಿದಿದೆ. ರಾಜಸ್ಥಾನ್ ರಾಯಲ್ಸ್ ಕೂಡ ಅಷ್ಟೇ ಅಂಕಗಳನ್ನು ಹೊಂದಿದ್ದರೂ, ಅವರಿಗೆ ಇನ್ನು ಮೂರು ಪಂದ್ಯಗಳು ಬಾಕಿಯಿವೆ ಮತ್ತು ಅವರು ಉತ್ತಮ ನೆಟ್ ರನ್ ರೇಟ್ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿದೆ.

ಮೇ 15 ರಂದು ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಕಾರ್ತಿಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಲಕ್ನೋ ಪರ ವೇಗಿ ಆಕಾಶ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ಬಳಿಕ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಿಚೆಲ್ ಮಾರ್ಷ್ ಕೇವಲ 38 ಎಸೆತಗಳಲ್ಲಿ 90 ರನ್ ಚಚ್ಚುವ ಮೂಲಕ ತಂಡಕ್ಕೆ ಒನ್-ಸೈಡೆಡ್ ಗೆಲುವು ತಂದುಕೊಟ್ಟರು.

ಪ್ಲೇ-ಆಫ್‌ಗೆ ಯಾವ ತಂಡಕ್ಕೆ ಎಷ್ಟು ಪರ್ಸೆಂಟ್ ಚಾನ್ಸ್ ಇದೆ?

ಪ್ರಸ್ತುತ ರನ್ ರೇಟ್ ಹಾಗೂ ಪಾಯಿಂಟ್ಸ್ ಆಧಾರಿತ ವರದಿಗಳ ಪ್ರಕಾರ, ಪ್ಲೇ-ಆಫ್‌ಗೆ ಅರ್ಹತೆ ಪಡೆಯುವ ರೇಸ್‌ನಲ್ಲಿ ತಂಡಗಳ ಶೇಕಡಾವಾರು ಲಿಸ್ಟ್ ಹೀಗಿದೆ:

ಗುಜರಾತ್ ಟೈಟಾನ್ಸ್ (GT) - ಶೇಕಡಾ 98 ರಷ್ಟು ಅತಿ ಹೆಚ್ಚು ಅವಕಾಶದೊಂದಿಗೆ ಮೊದಲ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) - ಶೇಕಡಾ 96.1 ರಷ್ಟು ಭಾರಿ ಅವಕಾಶದೊಂದಿಗೆ ಎರಡನೇ ಸ್ಥಾನದಲ್ಲಿದೆ. ಗ್ರೂಪ್ ಹಂತದಲ್ಲಿ ಉಭಯ ತಂಡಗಳಿಗೂ ಇನ್ನು ಕೇವಲ 2 ಪಂದ್ಯಗಳು ಬಾಕಿ ಉಳಿದಿದ್ದು, ಸದ್ಯ ಎರಡೂ ತಂಡಗಳು ತಲಾ 16 ಅಂಕಗಳನ್ನು ಹೊಂದಿವೆ.

ಸನ್‌ರೈಸರ್ಸ್ ಹೈದರಾಬಾದ್ (SRH) - 12 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಅಂಕಗಳೊಂದಿಗೆ ಶೇಕಡಾ 70.3 ರಷ್ಟು ಅವಕಾಶ ಕಾಯ್ದುಕೊಂಡಿದೆ.

ರಾಜಸ್ಥಾನ್ ರಾಯಲ್ಸ್ (RR) - ಪಂಜಾಬ್‌ಗಿಂತ ಒಂದು ಅಂಕ ಕಡಿಮೆ ಇದ್ದರೂ ಶೇಕಡಾ 51.6 ರಷ್ಟು ಚಾನ್ಸ್ ಹೊಂದಿದೆ.

ಪಂಜಾಬ್ ಕಿಂಗ್ಸ್ (PBK) - 12 ಪಂದ್ಯಗಳಲ್ಲಿ 13 ಅಂಕ ಗಳಿಸಿದೆ. ಆದರೆ ಶ್ರೇಯಸ್ ಅಯ್ಯರ್ ನಾಯಕತ್ವದ ಈ ತಂಡವು ಸತತ ವೈಫಲ್ಯ ಅನುಭವಿಸುತ್ತಿರುವುದರಿಂದ ಇವರ ಅವಕಾಶ ಶೇಕಡಾ 48.8 ರಷ್ಟಿದೆ ಎಂದು ಅಂದಾಜಿಸಲಾಗಿದೆ.

ಕೊನೆಯಲ್ಲಿರೋ ತಂಡಗಳ ಕಥೆ?

ಲಕ್ನೋ ವಿರುದ್ಧದ ಸೋಲಿನಿಂದ ಸಿಎಸ್‌ಕೆ ತಂಡದ ಪ್ಲೇ-ಆಫ್‌ ಕನಸಿಗೆ ದೊಡ್ಡ ಹೊಡೆತ ಬಿದ್ದಿದ್ದು, ಅವರ ಅರ್ಹತೆಯ ಅವಕಾಶ ಶೇಕಡಾ 28.4 ಕ್ಕೆ ಇಳಿಕೆ ಆಗಿದೆ. ಇನ್ನು ಕೊಲ್ಕತ್ತಾ ನೈಟ್‌ ರೈಡರ್ಸ್‌ ಪ್ಲೇ-ಆಫ್ ತಲುಪುವ ಸಾಧ್ಯತೆ ಶೇಕಡಾ 3.6 ರಷ್ಟಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ ಶೇಕಡಾ 3.1 ರಷ್ಟು ಮಾತ್ರ ಆಶಾವಾದ ಹೊಂದಿದೆ.

ಆರ್‌ಸಿಬಿ ನೆಕ್ಸ್ಟ್ ಪ್ಲಾನ್ ಏನು?

ನಮ್ಮ ಬೆಂಗಳೂರು ತಂಡಕ್ಕೆ ಇನ್ನು ಕೇವಲ ಎರಡು ಪಂದ್ಯಗಳು ಬಾಕಿಯಿವೆ. ಈಗಾಗಲೇ ಆರ್‌ಸಿಬಿ ಅತ್ಯುತ್ತಮ ರನ್‌ರೇಟ್‌ ಕಾಯ್ದುಕೊಂಡಿರುವುದರಿಂದ ಸದ್ಯಕ್ಕೆ ಯಾವುದೇ ಭಯವಿಲ್ಲ. ಈ ಉಳಿದಿರುವ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಕೇವಲ ಒಂದು ಪಂದ್ಯ ಗೆದ್ದರೂ ನೇರವಾಗಿ ಪ್ಲೇ ಆಫ್ ಪ್ರವೇಶ ಪಡೆಯುವುದು ಫಿಕ್ಸ್. 

ಒಂದು ವೇಳೆ ಎರಡರಲ್ಲೂ ಗೆಲುವು ಸಾಧಿಸಿದರೆ ಬೆಂಗಳೂರು ತಂಡಕ್ಕೆ ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನ ಸಿಗಲಿದ್ದು, ಕ್ವಾಲಿಫೈಯರ್ ಆಡಲು ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ಹಂತಕ್ಕೆ ಹೋಗುವಾಗ ಯಾವುದೇ ಗೊಂದಲ ಇರಬಾರದು ಎಂದರೆ ಆರ್‌ಸಿಬಿ ಮುಂದಿನ ಪಂದ್ಯವನ್ನು ಗೆಲ್ಲುವುದು ಅತ್ಯಗತ್ಯವಾಗಿದೆ.  

Latest News