ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ODI ಸರಣಿ ನವೆಂಬರ್ 30ರ ಭಾನುವಾರದಿಂದ ಆರಂಭವಾಗುತ್ತಿದೆ. ಟೆಸ್ಟ್ ಸರಣಿಯಲ್ಲಿ 0-2 ಸೋಲಿನ ಬಳಿಕ, ಭಾರತ ತಂಡವು ಪ್ರವಾಸಿಗರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಗಾಯದಿಂದ ಹೊರಬಿದ್ದ ಶುಭ್‌ಮನ್ ಗಿಲ್ ಬದಲಿಗೆ, ಕೆಎಲ್ ರಾಹುಲ್ ನಾಯಕತ್ವ ಈ ಬಾರಿ ವಹಿಸಿಕೊಂಡಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯನ್ನು ಮತ್ತೆ ಮೈದಾನದಲ್ಲಿ ನೋಡಲು ಅಭಿಮಾನಿಗಳು ಹೆಚ್ಚು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ರಾಂಚಿಯ JCSA ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮೊದಲ ಪಂದ್ಯವು ಅಭಿಮಾನಿಗಳಿಗೆ ರೋಮಾಂಚನ ತುಂಬುವ ನಿರೀಕ್ಷೆಯಿದೆ.
ನಾಯಕತ್ವ ಮತ್ತು ಪ್ರಮುಖ ಆಟಗಾರರು
ಗಾಯದ ಕಾರಣದಿಂದ ಖಾಯಂ ನಾಯಕ ಶುಭ್‌ಮನ್ ಗಿಲ್ ಅವರು ಈ ಸರಣಿಯಿಂದ ಹೊರಬಿದ್ದಿದ್ದು, ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯನ್ನು ಮತ್ತೆ ಮೈದಾನದಲ್ಲಿ ನೋಡಲು ಅಭಿಮಾನಿಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ ಎನ್ನಬಹದು.
ಪಂದ್ಯ ಸಮಯ ಮತ್ತು ಟಾಸ್
IND vs SA ODI ಸರಣಿಯ ಮೊದಲ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಟಾಸ್ ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು, ಇಬ್ಬರೂ ನಾಯಕರು ಅರ್ಧ ಗಂಟೆ ಮುಂಚಿತವಾಗಿ ಮೈದಾನಕ್ಕಿಳಿಯಲಿದ್ದಾರೆ.
ಲೈವ್ ಪ್ರಸಾರ ಮತ್ತು ಸ್ಟ್ರೀಮಿಂಗ್
ಭಾರತ vs ದಕ್ಷಿಣ ಆಫ್ರಿಕಾ ODI ಸರಣಿಯ ಮೊದಲ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ನೇರಪ್ರಸಾರವಾಗಿ ವೀಕ್ಷಿಸಬಹುದು. ಮೊಬೈಲ್‌ನಲ್ಲಿ ವೀಕ್ಷಿಸಲು JioHotstar ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ. ನೀವು ಉಚಿತ ವೀಕ್ಷಣೆಗಾಗಿ DD Sports ಚಾನೆಲ್ ನೋಡಬೇಕಾಗುತ್ತದೆ ಅಲ್ಲಿ ಪಂದ್ಯ ಫ್ರೀ ಆಗಿಯೇ ಪ್ರಸಾರವಾಗಲಿದೆ.
ಎರಡು ತಂಡಗಳ ಪಟ್ಟಿ ಹೀಗಿದೆ ನೋಡಿ
ಭಾರತ ತಂಡದಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ, ವಿಕೀ), ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್‌ವಾಡ್, ಪ್ರಸಿಧ್ ಕೃಷ್ಣ, ಅರ್ಶದೀಪ್ ಸಿಂಗ್ ಮತ್ತು ಧ್ರುವ್ ಜುರೆಲ್ ಸೇರಿದ್ದಾರೆ. ದಕ್ಷಿಣ ಆಫ್ರಿಕಾ ತಂಡವನ್ನು ಟೆಂಬಾ ಬವುಮಾ ಮುನ್ನಡೆಸುತ್ತಿದ್ದು, ಕ್ವಿಂಟನ್ ಡಿ ಕಾಕ್, ಮಾರ್ಕೊ ಜೆನ್ಸನ್, ಐಡೆನ್ ಮಾರ್ಕ್‌ರಮ್, ಲುಂಗಿ ಎನ್‌ಗಿಡಿ, ಕೇಶವ್ ಮಹಾರಾಜ್ ಸೇರಿದಂತೆ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.