Feb 16, 2026 Languages : ಕನ್ನಡ | English

ನತಾಶಾ ಜೊತೆ ವಿಚ್ಛೇದನದ ನಂತರ ಪಾಂಡ್ಯ ಜೀವನದಲ್ಲಿ ಹೊಸ ಪ್ರೀತಿ? ಮಹಿಕಾ ಶರ್ಮಾ ಪೋಸ್ಟ್ ವೈರಲ್.

ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಪ್ರೀತಿಯ ಸಂಭ್ರಮ ಮೂಡಿದೆ. ಸಾಮಾನ್ಯರು ಮಾತ್ರವಲ್ಲ, ಸೆಲೆಬ್ರಿಟಿಗಳೂ ತಮ್ಮ ಪ್ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಇನ್‌ಸ್ಟಾಗ್ರಾಂ ಸ್ಟೋರಿ ಇದೀಗ ಸಾಕಷ್ಟು ಗಮನ ಸೆಳೆಯುತ್ತಿದೆ.

"My Life's Man of the Match" - ಹಾರ್ದಿಕ್ ಪಾಂಡ್ಯಗಾಗಿ ನಟಿ ಮಹಿಕಾ ಶರ್ಮಾ ಹೃದಯಸ್ಪರ್ಶಿ ಕ್ಯಾಪ್ಷನ್.

ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳೆ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅವರನ್ನು ಹುರಿದುಂಬಿಸಲು ದೆಹಲಿಗೆ ಬಂದಿರುವ ನಟಿ ಮತ್ತು ಮಾಡೆಲ್ ಮಹಿಕಾ ಶರ್ಮಾ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಮಹಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪಾಂಡ್ಯ ಅವರ ಮುದ್ದಾದ ಫೋಟೋವನ್ನು ಅಪ್‌ಲೋಡ್ ಮಾಡಿದ್ದು, ಆ ಚಿತ್ರದಲ್ಲಿ ಪಾಂಡ್ಯ ಗುಲಾಬಿ ಹೂಗಳ ಗುಚ್ಛವನ್ನು ಹಿಡಿದಿರುವುದು ಕಾಣಿಸುತ್ತದೆ.

ಈ ಫೋಟೋಗೆ ಮಹಿಕಾ “My life’s Man of the Match” ಎಂದು ಕ್ಯಾಪ್ಷನ್ ನೀಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಪ್ರೇಮಿಗಳ ದಿನದ ಸಂಭ್ರಮದಲ್ಲಿ ಇದನ್ನು ಸ್ಪೆಷಲ್ ಗಿಫ್ಟ್ ಎಂದೇ ಅಭಿಮಾನಿಗಳು ಪರಿಗಣಿಸುತ್ತಿದ್ದಾರೆ. ಮಹಿಕಾ ಅವರ ಈ ಪೋಸ್ಟ್ ಅನ್ನು ಹಾರ್ದಿಕ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಿಶೇರ್ ಮಾಡಿದ್ದು, “Valentine ಮತ್ತು ನನ್ನ ಬೇಬಿ ಹುಟ್ಟುಹಬ್ಬದ ವಾರ ಆರಂಭವಾಗಿದೆ” ಎಂದು ಬರೆದುಕೊಂಡಿದ್ದಾರೆ. ಇದರಿಂದ ಇಬ್ಬರ ನಡುವಿನ ನಂಟಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.

ಪ್ರೇಮಿಗಳ ದಿನದ ಸಂದರ್ಭದಲ್ಲಿ ಗುಲಾಬಿ ಹೂಗಳ ಗುಚ್ಛ, ಪ್ರೀತಿಯ ಸಂದೇಶ ಮತ್ತು ವಿಶೇಷ ಕ್ಯಾಪ್ಷನ್ ಇದು ಪಾಂಡ್ಯಗೆ ಮಹಿಕಾ ನೀಡಿದ ಸಿಹಿ ಉಡುಗೊರೆಯಾಗಿ ಕಾಣುತ್ತಿದೆ. ಫ್ಯಾನ್ಸ್ ಕೂಡ ಈ ಪೋಸ್ಟ್‌ಗೆ ಲೈಕ್ ಮತ್ತು ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಎಲ್ಲ

ಇದಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಅವರು ಸರ್ಬಿಯನ್ ನಟಿ ನಟಾಸಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದರು. ಆದರೆ ಜುಲೈ 2024ರಲ್ಲಿ ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡಿ ವಿಚ್ಛೇದನ ಘೋಷಿಸಿದ್ದರು. ತಮ್ಮ ಮಗ ಅಗಸ್ತ್ಯನ ಸಹ-ಪೋಷಕರಾಗಿ ಮುಂದುವರಿಯುವುದಾಗಿ ತಿಳಿಸಿದ್ದರು.

ಈಗ ಮಹಿಕಾ ಶರ್ಮಾ ಜೊತೆಗಿನ ಇನ್‌ಸ್ಟಾಗ್ರಾಂ ಕ್ಷಣಗಳು ಹೊಸ ಕುತೂಹಲಕ್ಕೆ ಕಾರಣವಾಗಿವೆ. ಪ್ರೇಮಿಗಳ ದಿನದ ವಾರದಲ್ಲಿ ಹಂಚಿಕೊಂಡ ಈ ಫೋಟೋ ಮತ್ತು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಬದುಕಿನ ಬಗ್ಗೆ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ. ಪ್ರೇಮಿಗಳ ದಿನಾಚರಣೆಗೆ ಮುನ್ನವೇ ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಹಂಚಿಕೊಂಡ ಈ ಪ್ರೀತಿಯ ಕ್ಷಣಗಳು ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್ ಆಗಿವೆ.