Mar 26, 2026 Languages : ಕನ್ನಡ | English

ಅದೆಂಥಾ ದೆವ್ವದ ಸಿನಿಮಾ ಇದ್ರೂ ನಾನು ನೋಡ್ತಿನಿ ಅನ್ನೋರು, ಇದನ್ನ ರಾತ್ರಿಯಲ್ಲ ಹಗಲು ನೋಡೋಕೆ ಡಬಲ್ ಮೀಟರ್ ಬೇಕು!!

ನಿಮ್ಮಲ್ಲಿ ಎಷ್ಟು ಜನಕ್ಕೆ ಹಾರರ್ ಅಂದ್ರೆ ಇಷ್ಟ? ಕೆಲವರಿಗೆ ದೆವ್ವದ ಸಿನಿಮಾ ಅಂದ್ರೆ ಪಂಚಪ್ರಾಣ, ಆದ್ರೆ ಒಂಟಿಯಾಗಿ ನೋಡೋಕೆ ಮಾತ್ರ ಎದೆ ನಡುಗುತ್ತೆ. ಸಿನಿಮಾ ಮುಗಿದ ಮೇಲೆ ಬಾತ್‌ರೂಮ್‌ಗೆ ಹೋಗೋಕೆ ಹಿಂದೂ ಮುಂದೂ ನೋಡ್ತಾರೆ, ಯಾರೋ ಹಿಂದೆ ನಿಂತಿದ್ದಾರೆ ಅನ್ನೋ ಫೀಲಿಂಗ್ ಗ್ಯಾರಂಟಿ. ಇವತ್ತು ನಾವು ಅಂತಹದ್ದೇ ಒಂದು ಸಖತ್ ಡೇಂಜರಸ್ ವೆಬ್ ಸೀರಿಸ್ ಬಗ್ಗೆ ಮಾತಾಡೋಣ. ಇದನ್ನ ನೋಡೋಕೆ ಒರಿಜಿನಲ್ ಆಗಿ 'ಮೀಟರ್' ಇರಬೇಕು ಗುರು. 

ರಾತ್ರಿಯಲ್ಲ, ಹಗಲೊತ್ತಲ್ಲೇ  ಈ ಸಿನಿಮಾ ನೋಡೋಕೆ ಗುಂಡಿಗೆ ಗಟ್ಟಿ ಇರ್ಬೇಕು;
ರಾತ್ರಿಯಲ್ಲ, ಹಗಲೊತ್ತಲ್ಲೇ ಈ ಸಿನಿಮಾ ನೋಡೋಕೆ ಗುಂಡಿಗೆ ಗಟ್ಟಿ ಇರ್ಬೇಕು;

ಸದ್ಯ ಒಟಿಟಿಯಲ್ಲಿ ಒಂದು ಹಾರರ್ ಸೀರಿಸ್ ಸಖತ್ ಸೌಂಡ್ ಮಾಡ್ತಿದೆ. ಇದನ್ನ ನೋಡ್ತಿರುವಾಗ ನಿಮಗೆ ಅಕ್ಕಪಕ್ಕ ಯಾರೋ ಓಡಾಡಿದ ಹಾಗೆ, ಬಾಗಿಲ ಸಂದಿಯಿಂದ ಯಾರೋ ನಿಮ್ಮನ್ನೇ ವಾಚ್ ಮಾಡ್ತಿರೋ ಹಾಗೆ ಭಾಸವಾಗುತ್ತೆ. ಹೌದು, ನಾವು ಹೇಳ್ತಿರೋದು ಹಾಲಿವುಡ್‌ನ ಎವರ್‌ಗ್ರೀನ್ ಪಾಪ್ಯುಲರ್ ಸರಣಿ 'ದಿ ವಾಕಿಂಗ್ ಡೆಡ್' (The Walking Dead) ಬಗ್ಗೆ. 2010ರಲ್ಲಿ ಶುರುವಾದ ಈ ಸರಣಿಯ ಕ್ರೇಜ್ ಇವತ್ತಿಗೂ ಕಿಂಚಿತ್ತೂ ಕಡಿಮೆ ಆಗಿಲ್ಲ.

ಇದು ರಾಬರ್ಟ್ ಕಿರ್ಕ್‌ಮನ್ ಅವರ ಫೇಮಸ್ ಕಾಮಿಕ್ ಪುಸ್ತಕವನ್ನು ಆಧರಿಸಿದ ಕಥೆ. ಕಥೆ ಶುರುವಾಗೋದೇ ಸಖತ್ ಇಂಟರೆಸ್ಟಿಂಗ್ ಆಗಿ. ಪೊಲೀಸ್ ಅಧಿಕಾರಿ ರಿಕ್ ಗ್ರಿಮ್ಸ್ ಕೋಮಾದಿಂದ ಎಚ್ಚರವಾದಾಗ ಇಡೀ ಜಗತ್ತೇ ಬದಲಾಗಿರುತ್ತೆ. ಒಂದು ಭಯಾನಕ ವೈರಸ್ ಇಡೀ ಪ್ರಪಂಚಕ್ಕೆ ಹರಡಿ, ಮನುಷ್ಯರೆಲ್ಲಾ ವಿಚಿತ್ರವಾದ ದೆವ್ವಗಳಾಗಿ (ಜಾಂಬಿಗಳು) ಮಾರ್ಪಟ್ಟಿರುತ್ತಾರೆ. ಅಂದ್ರೆ ಅವರು ಸತ್ತೂ ಬದುಕಿರುವ ಶವಗಳು. 

ನಗರಗಳೆಲ್ಲಾ ಸ್ಮಶಾನದಂತಾಗಿವೆ, ಎಲ್ಲೆಲ್ಲೂ ನರಭಕ್ಷಕ ಜಾಂಬಿಗಳದ್ದೇ ಹಾವಳಿ. ಈ ನರಕಸದೃಶ ಜಗತ್ತಿನಿಂದ ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ರಿಕ್ ಮತ್ತು ಅವನ ಟೀಮ್ ಮಾಡುವ ಆ ಭಯಾನಕ ಹೋರಾಟವೇ ಈ ಸರಣಿಯ ಜೀವಾಳ. ಪ್ರತಿ ಎಪಿಸೋಡ್‌ನಲ್ಲೂ ಮೈ ನಡುಗಿಸುವ ದೃಶ್ಯಗಳು ನಿಮ್ಮನ್ನ ಸೀಟಿನ ತುದಿಗೆ ತಂದು ನಿಲ್ಲಿಸುತ್ತವೆ.

ಈ ಸರಣಿಗೆ IMDb ನಲ್ಲಿ 8.1 ರಷ್ಟು ಭರ್ಜರಿ ರೇಟಿಂಗ್ ಇದೆ ಅಂದ್ರೆ ಇದು ಎಷ್ಟು ಕ್ವಾಲಿಟಿ ಆಗಿದೆ ಅಂತ ನೀವೇ ಯೋಚನೆ ಮಾಡಿ. ಇದರಲ್ಲಿ ನಾರ್ಮನ್ ರೀಡಸ್, ಮೆಲಿಸ್ಸಾ ಮೆಕ್‌ಬ್ರೈಡ್ ಅವರಂತಹ ಘಟಾನುಘಟಿ ನಟರು ಜೀವ ತುಂಬಿದ್ದಾರೆ. ಅಂದಹಾಗೆ, ಈ ಸರಣಿಯಲ್ಲಿ ಬರೋಬ್ಬರಿ 11 ಸೀಸನ್‌ಗಳು ಮತ್ತು 177 ಸಂಚಿಕೆಗಳಿವೆ. ಇವೆಲ್ಲವನ್ನೂ ನೋಡೋಕೆ ನಿಮಗೆ ಧೈರ್ಯವಿದ್ದರೆ ಇಂದೇ ನೆಟ್‌ಫ್ಲಿಕ್ಸ್ (Netflix) ನಲ್ಲಿ ಸ್ಟ್ರೀಮ್ ಮಾಡಬಹುದು.

ಈ ಸೀರಿಸ್‌ನಲ್ಲಿ ಬರೋ ಸೌಂಡ್ ಎಫೆಕ್ಟ್ ಮತ್ತು ಮೇಕಪ್ ಸಖತ್ ರಿಯಲಿಸ್ಟಿಕ್ ಆಗಿದೆ. ವೀಕ್ ಹಾರ್ಟ್ ಇರೋರು ದಯವಿಟ್ಟು ಒಬ್ಬರೇ ಕೂತು ನೋಡಬೇಡಿ. ಮನೇಲಿ ಯಾರಾದ್ರೂ ಇದ್ದಾಗಲೇ ನೋಡಿ, ಇಲ್ಲಾಂದ್ರೆ ರಾತ್ರಿ ಕನಸಲ್ಲಿ ಜಾಂಬಿಗಳು ಬರೋದು ಗ್ಯಾರಂಟಿ.  ಹಾರರ್ ಸಿನಿಮಾಗಳನ್ನ ಇಷ್ಟಪಡೋ ನಿಮ್ಮ ಫ್ರೆಂಡ್ಸ್‌ಗೆ ಈ ವಿಷಯ ತಿಳಿಸಿ. ನೋಡೋಣ ಅವರಿಗೆ ಎಷ್ಟು ಮೀಟರ್ ಇದೆ ಅಂತ. 

Latest News