ವೀಕೆಂಡ್ ಬಂತು ಅಂದ್ರೆ ಸಾಕು, ಮನೆಯಲ್ಲಿ ಆರಾಮಾಗಿ ಕುಳಿತು ಸ್ಮಾರ್ಟ್ ಟಿವಿಯಲ್ಲಿ ನೆಟ್‌ಫ್ಲಿಕ್ಸ್ ಹಚ್ಚಿ ಯಾವುದಾದರೂ ಸಿನಿಮಾ ಅಥವಾ ಸೀರೀಸ್ ನೋಡೋ ಪ್ಲಾನ್ ಮಾಡ್ತೀರಾ? ಹಾಗಿದ್ರೆ ನಿಮಗೊಂದು ಬ್ಯಾಡ್ ನ್ಯೂಸ್ ಇದೆ. ಇಷ್ಟು ದಿನ ನಿಮ್ಮ ಹಳೇ ಟಿವಿಯಲ್ಲಿ ರನ್ ಆಗ್ತಿದ್ದ ನೆಟ್‌ಫ್ಲಿಕ್ಸ್ ಇನ್ಮುಂದೆ ಕೈ ಕೊಡಬಹುದು! ಹೌದು, ಸ್ಟ್ರೀಮಿಂಗ್ ಲೋಕದ ದೈತ್ಯ ನೆಟ್‌ಫ್ಲಿಕ್ಸ್ ಯಾವುದೇ ಮುನ್ಸೂಚನೆ ನೀಡದೆ ಹಳೆಯ ಸ್ಮಾರ್ಟ್ ಟಿವಿಗಳಲ್ಲಿ ತನ್ನ ಸೇವೆಯನ್ನು ಬಂದ್ ಮಾಡಲು ನಿರ್ಧರಿಸಿದೆ.
ವಿಷಯ ಏನಪ್ಪಾ ಅಂದ್ರೆ, 2015ಕ್ಕಿಂತ ಮೊದಲು ತಯಾರಾದ ಸ್ಮಾರ್ಟ್ ಟಿವಿಗಳು ಮತ್ತು ಕೆಲವು ಹಳೆಯ ಸ್ಟ್ರೀಮಿಂಗ್ ಡಿವೈಸ್‌ಗಳಲ್ಲಿ ಮಾರ್ಚ್ 2, 2026ರ ನಂತರ ನೆಟ್‌ಫ್ಲಿಕ್ಸ್ ಕೆಲಸ ಮಾಡಲ್ಲ. ಈ ವಿಷಯ ಮೊದಲು ಗೊತ್ತಾಗಿದ್ದು ಪ್ಲೇಸ್ಟೇಷನ್ 3 (PS3) ಯೂಸರ್ಸ್‌ಗೆ.
ಅವರು ಆಪ್ ಓಪನ್ ಮಾಡಿದಾಗ "ಬಾಸ್, ಇನ್ಮುಂದೆ ಈ ಡಬ್ಬದಲ್ಲಿ ನಾನು ಬರಲ್ಲ" ಅನ್ನೋ ಅರ್ಥದ ಮೆಸೇಜ್ ಕಾಣಿಸಿಕೊಂಡಿದೆ! ಅಸಲಿಗೆ ನೆಟ್‌ಫ್ಲಿಕ್ಸ್ ಇತ್ತೀಚೆಗೆ ತನ್ನ ಸೆಕ್ಯೂರಿಟಿ ಮತ್ತು ವಿಡಿಯೋ ಕ್ವಾಲಿಟಿಯನ್ನು ಸಖತ್ ಅಪ್‌ಗ್ರೇಡ್ ಮಾಡ್ತಿದೆ. ಆದರೆ ಹಳೇ ಟಿವಿಗಳ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಈ ಹೊಸ ಬದಲಾವಣೆಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ. ನಮ್ಮ ಹಳೇ ಆಂಡ್ರಾಯ್ಡ್ ಫೋನ್‌ನಲ್ಲಿ ಹೊಸ ಆಪ್‌ಗಳು ಹೇಗೆ ಹ್ಯಾಂಗ್ ಆಗ್ತವೋ, ಟಿವಿಗಳಿಗೂ ಅದೇ ಕಾಯಿಲೆ ಬಂದಿದೆ.
ಅಷ್ಟೇ ಅಲ್ಲ, ನೆಟ್‌ಫ್ಲಿಕ್ಸ್ ಸದ್ದಿಲ್ಲದೆ ಇನ್ನೊಂದು ಶಾಕ್ ಕೊಟ್ಟಿದೆ. ಮೊದಲೆಲ್ಲಾ ಫೋನ್‌ನಲ್ಲಿ ವಿಡಿಯೋ ಪ್ಲೇ ಮಾಡಿ ಟಿವಿಗೆ 'ಕಾಸ್ಟ್' ಮಾಡ್ತಿದ್ವಲ್ಲ? ಆ ಫೀಚರ್ ಅನ್ನು ಕೂಡ ಹೆಚ್ಚಿನ ಟಿವಿಗಳಿಂದ ಕಿತ್ತುಹಾಕಲಾಗಿದೆ. ಈಗ ಕೇವಲ ಗೂಗಲ್ ನೆಸ್ಟ್ ಹಬ್‌ನಂತಹ ಕೆಲವು ಆಯ್ದ ಡಿವೈಸ್‌ಗಳಲ್ಲಿ ಮಾತ್ರ ಇದು ಕೆಲಸ ಮಾಡ್ತಿದೆ. ಅಂದ್ರೆ, ನೆಟ್‌ಫ್ಲಿಕ್ಸ್ ಪರೋಕ್ಷವಾಗಿ "ಹೊಸ ಟಿವಿ ಅಥವಾ ಹೊಸ ಗ್ಯಾಜೆಟ್ ತಗೊಳ್ಳಿ" ಅಂತ ಹೇಳ್ತಿದೆ ಅಷ್ಟೇ!
ನಿಮ್ಮ ಟಿವಿ ಹಳೆಯದಾದ ತಕ್ಷಣ ಅದನ್ನ ಗುಜರಿ ಹಾಕೋ ಅವಶ್ಯಕತೆ ಇಲ್ಲ. ಸ್ಮಾರ್ಟ್ ಆಗಿ ಯೋಚನೆ ಮಾಡಿದ್ರೆ ಹಳೇ ಟಿವಿಯಲ್ಲೇ ಸಿನಿಮಾ ನೋಡಬಹುದು. ನಿಮ್ಮ ಟಿವಿಯಲ್ಲಿ ಒಂದು HDMI ಪೋರ್ಟ್ ಇದ್ರೆ ಸಾಕು, ಈ ಕೆಳಗಿನ ಐಡಿಯಾಗಳನ್ನು ಟ್ರೈ ಮಾಡಿ:
ಫೈರ್ ಸ್ಟಿಕ್ ಅಥವಾ ರೋಕು: ಅಮೆಜಾನ್ ಫೈರ್ ಟಿವಿ ಸ್ಟಿಕ್ (Amazon Fire TV Stick) ತಂದು ಟಿವಿಗೆ ಸಿಕ್ಕಿಸಿಬಿಡಿ. ನಿಮ್ಮ ಹಳೇ ಟಿವಿ ಚಕಚಕ ಅಂತ ಕೆಲಸ ಮಾಡೋ ಹೊಸ ಟಿವಿಯಾಗಿ ಬದಲಾಗುತ್ತೆ!
ಗೇಮಿಂಗ್ ಕನ್ಸೋಲ್: ನಿಮ್ಮ ಹತ್ತಿರ PS5 ಅಥವಾ ಎಕ್ಸ್‌ಬಾಕ್ಸ್ ಇದ್ರೆ, ಅದರಲ್ಲೇ ಆಪ್ ಇನ್‌ಸ್ಟಾಲ್ ಮಾಡಿ ಆರಾಮಾಗಿ ನೋಡಬಹುದು.
ಲ್ಯಾಪ್ಟಾಪ್ ಕನೆಕ್ಟ್ ಮಾಡಿ: ಒಂದು HDMI ಕೇಬಲ್ ತಂದು ನಿಮ್ಮ ಲ್ಯಾಪ್ಟಾಪ್ ಅನ್ನು ಟಿವಿಗೆ ಕನೆಕ್ಟ್ ಮಾಡಿಬಿಡಿ. ದೊಡ್ಡ ಸ್ಕ್ರೀನ್ ಮೇಲೆ ಸಿನಿಮಾ ಎಂಜಾಯ್ ಮಾಡಿ.
ಆಪಲ್ ಟಿವಿ 4K: ಬಜೆಟ್ ಸ್ವಲ್ಪ ಜಾಸ್ತಿ ಇದ್ರೆ ಆಪಲ್ ಟಿವಿ ಬಾಕ್ಸ್ ತಗೊಳ್ಳಿ, ಪಿಕ್ಚರ್ ಕ್ವಾಲಿಟಿ ಬೆಂಕಿ ತರ ಇರುತ್ತೆ.
ತಂತ್ರಜ್ಞಾನ ಬೆಳೆದಂತೆ ಹಳೇ ಸಾಮಾನಿಗೆ ಬೆಲೆ ಇರಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ನೆಟ್‌ಫ್ಲಿಕ್ಸ್ ಈ ರೀತಿ ಸಡನ್ ಆಗಿ ಶಾಕ್ ಕೊಡುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ನಿಮ್ಮ ಟಿವಿ 2015ರ ಮಾಡೆಲ್ ಆಗಿದ್ರೆ ಇಂದೇ ಒಮ್ಮೆ ಚೆಕ್ ಮಾಡಿಕೊಳ್ಳಿ. ಇಲ್ಲದಿದ್ದರೆ ವೀಕೆಂಡ್‌ನಲ್ಲಿ ಸಿನಿಮಾ ನೋಡೋಕೆ ಕುಳಿತಾಗ "Error" ಮೆಸೇಜ್ ನೋಡಿ ಮೂಡ್ ಆಫ್ ಆಗೋದು ಗ್ಯಾರಂಟಿ!