ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ನೋಡಿ ಮನಸ್ಸಿಗೆ ಅತೀವ ನೋವು ಮತ್ತು ಸಿಟ್ಟು ಎರಡೂ ಒಟ್ಟಿಗೆ ತರುವಂತದ್ದು. ದೇಶ ಕಾಯುವ ಸೈನಿಕ ಅಂದ ತಕ್ಷಣ ನಮಗೆಲ್ಲಾ ಒಂದು ಗೌರವ ಇರುತ್ತೆ. ಆದರೆ ಈ ವಿಡಿಯೋದಲ್ಲಿರೋ ವ್ಯಕ್ತಿ ಮಾಡ್ತಿರೋ ಕೆಲಸ ನೋಡಿದ್ರೆ ಇವನು " ಮನುಷ್ಯ ಅಲ್ಲ, ಅಸಲಿ ರಾಕ್ಷಸ" ಅಂತ ಅನ್ನಿಸದೇ ಇರಲಾರದು.
ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಹೆತ್ತ ತಾಯಿ ಮತ್ತು ಹೆಂಡತಿಯನ್ನ ಮೃಗದಂತೆ ಥಳಿಸುತ್ತಿದ್ದಾನೆ. ಅಷ್ಟು ವಯಸ್ಸಾದ ತಾಯಿ ಅಳುತ್ತಾ ಬೇಡಿಕೊಂಡರೂ ಬಿಡದೆ ಹೊಡೆಯುತ್ತಿರೋದು ನೋಡಿದ್ರೆ ಎಂತಹ ಕಟುಕನಿಗೂ ಕಣ್ಣೀರು ಬರುತ್ತೆ. ಇವನ ಈ ಕೃತ್ಯದ ವಿಡಿಯೋ ಈಗ ವೈರಲ್ ಆಗಿದ್ದು, ಜನರೆಲ್ಲಾ ಇವನಿಗೆ ಕಠಿಣ ಶಿಕ್ಷೆ ಆಗಬೇಕು ಅಂತ ಆಗ್ರಹಿಸ್ತಿದ್ದಾರೆ.
ಇದು ಬರೀ ಒಂದು ವಿಡಿಯೋದ ಕಥೆಯಲ್ಲ. ನಮಗೆ ಕಾಣಿಸದ ಎಷ್ಟೋ ಮನೆಗಳಲ್ಲಿ ಇಂತಹ "ಘೋರ ದೌರ್ಜನ್ಯ"ಗಳು ಪ್ರತಿ ನಿತ್ಯ ನಡೀತಾ ಇವೆ. ಹೌದು, ಮನೆಯ ಹೊರಗೆ ಒಳ್ಳೆಯವರಂತೆ ನಟಿಸೋ ಎಷ್ಟೋ ಜನ, ಮನೆಯೊಳಗೆ ರಾಕ್ಷಸರಾಗಿ ಬದಲಾಗುತ್ತಾರೆ. ಅದರಲ್ಲೂ ಇಂತಹ ಘಟನೆಗಳು ಸಮಾಜದ ಬಗ್ಗೆ ನಮ್ಮಲ್ಲಿ ಪ್ರಶ್ನೆ ಹುಟ್ಟಿಸುತ್ತವೆ. ತಾಯಿ ಮತ್ತು ಹೆಂಡತಿ ಅನ್ನೋದು ಮನೆಯ ಎರಡು ಕಣ್ಣುಗಳಿದ್ದಂತೆ, ಅವರಿಗೇ ಇಂತಹ ಸ್ಥಿತಿ ಬಂದ್ರೆ ಹೇಗೆ?
ಕಠಿಣ ಕಾನೂನು ಯಾಕೆ ಬೇಕು?
ನಮ್ಮ ದೇಶದಲ್ಲಿ ಗೃಹ ಹಿಂಸೆ ತಡೆಯೋಕೆ ಕಾನೂನುಗಳೇನೋ ಇವೆ. ಆದರೆ ಇಂತಹ ಕ್ರೂರಿಗಳಿಗೆ ಸಮಾಜದಲ್ಲಿ ಮತ್ತು ಕಾನೂನಿನಲ್ಲಿ ಭಯನೇ ಇಲ್ಲದಂತಾಗಿದೆ.
- ಗೃಹ ಹಿಂಸೆಯಲ್ಲಿ ತೊಡಗುವವರಿಗೆ ತಕ್ಷಣವೇ ಕಠಿಣ ಶಿಕ್ಷೆಯಾಗಬೇಕು.
- ಯಾರು ಇಂತಹ ಹಿಂಸೆ ಅನುಭವಿಸ್ತಾರೋ ಅವರಿಗೆ ಭಯವಿಲ್ಲದೆ ದೂರು ನೀಡಲು ಒಂದು ಭದ್ರವಾದ ವೇದಿಕೆ ಬೇಕು.
- ಇಂತಹ ರಾಕ್ಷಸರಿಗೆ ಜೈಲು ಶಿಕ್ಷೆ ಜೊತೆಗೆ ಸಮಾಜದಲ್ಲೂ ಬಹಿಷ್ಕಾರ ಹಾಕುವಂತಾಗಬೇಕು.
ನಾವು ನಮ್ಮ ಸುತ್ತಮುತ್ತ ಇಂತಹ ಘಟನೆಗಳನ್ನ ನೋಡಿದಾಗ "ಇದು ಅವರ ಮನೆಯ ವಿಷಯ ನಮಗ್ಯಾಕೆ?" ಅಂತ ಸುಮ್ಮನೆ ಇರಬಾರದು. ನಾವು ನೀಡೋ ಒಂದು ಮಾಹಿತಿ ಒಬ್ಬ ಹೆಣ್ಣಿನ ಜೀವ ಉಳಿಸಬಹುದು. ಯಾವುದೇ ಮಹಿಳೆ ಇಂತಹ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೆ ಮೊದಲು 112 ಅಥವಾ ಮಹಿಳಾ ಸಹಾಯವಾಣಿಗೆ ಕರೆ ಮಾಡಿ. ನೆರೆಹೊರೆಯವರು ಇಂತಹ ವಿಷಯಗಳಲ್ಲಿ ಧ್ವನಿ ಎತ್ತಿದಾಗ ಮಾತ್ರ ಇಂತಹ ಕ್ರೂರಿಗಳಿಗೆ ಭಯ ಬರುತ್ತೆ ಎಂದು ನೆಟ್ಟಿಗರು ವಿಡಿಯೋ ನೋಡಿ ಹೇಳುತ್ತಿದ್ದಾರೆ.
ये फौजी नहीं राक्षस है... 🙏🙏
— Shiksha News Rajasthan (@ShikshaNewsRaj1) March 22, 2026
अपनी माँ और पत्नी के साथ ऐसी मारपीट देख कर रोंगटे खड़े हो जायेंगें... 😱
घेरेलू हिंसा पर कठोर कानून बनने चाहिए ना जाने कितनी महिलाएं ये रोज दंश झेल रही होगी..!! pic.twitter.com/WClzr8dMur
ಹೆಣ್ಣು ಮಕ್ಕಳ ಮೇಲೆ ಕೈ ಮಾಡುವವನು ಎಂದಿಗೂ ವೀರನಾಗಲು ಸಾಧ್ಯವಿಲ್ಲ. ಅವನು ಕೇವಲ ಒಬ್ಬ ಹೇಡಿ ಮಾತ್ರ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಯೋಗಿ ಸರ್ಕಾರವೋ ಅಥವಾ ಇನ್ಯಾವುದೇ ಸರ್ಕಾರವೋ ಇರಲಿ, ಇಂತಹ ಪ್ರಕರಣಗಳಲ್ಲಿ ತಡ ಮಾಡದೆ, ಬುಲ್ಡೋಜರ್ ರೀತಿಯ ಕಠಿಣ ಕ್ರಮಗಳನ್ನೇ ಕೈಗೊಳ್ಳಬೇಕು. ಆಗ ಮಾತ್ರ ನಾಳೆ ಇನ್ನೊಬ್ಬ ಕೈ ಎತ್ತಲು ಹೆದರುತ್ತಾನೆ ಎಂದು ಹೇಳಬಹುದು.ಈ ವಿಡಿಯೋ ಮತ್ತು ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು? ಇಂತಹವರಿಗೆ ಯಾವ ತರಹದ ಶಿಕ್ಷೆ ನೀಡಬೇಕು? ಕಮೆಂಟ್ ಮಾಡಿ ತಿಳಿಸಿ.