Jan 25, 2026 Languages : ಕನ್ನಡ | English

ಜಿಪಿಎಸ್ ಟ್ರ್ಯಾಕರ್‌ ಹೊತ್ತ ರಣಹದ್ದು ಪತ್ತೆ - ತೋಟದಲ್ಲಿದ್ದ ಈ ರಣಹದ್ದಿಗೆ ಭಯಬಿದ್ದ ಊರಿನ ಜನತೆ!!

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಅಚ್ಚರಿಯ ಘಟನೆ ನಡೆದಿರುವುದಾಗಿ ಕಂಡು ಬಂದಿದೆ. ಹೌದು ನಮಗೆ ಒಂದು ವೇಳೆಗೆ ನಾರ್ಮಲ್ ಆಗಿ ರಣಹದ್ದನ್ನ ನೋಡಿದರೆ ಭಯವಾಗುತ್ತದೆ ಅಲ್ಲವೇ, ಇನ್ನೂ ಅದಕ್ಕೆ ಜಿಪಿಎಸ್ ಹಾಗೂ ಕ್ಯಾಮೆರಾ ಮಾದರಿಯ ಸಾಧನ ಇಟ್ಕೊಂಡು ಬಂದಿರುವ ರಣಹದ್ದನ್ನು ನೋಡಿದರೆ ಯಾರಿಗೆ ತಾನೆ ಭಯ ಆಗಲ್ಲ ಹೇಳಿ. ನಿಜವಾಗಲೂ ಭಯ ಆಗುತ್ತೆ. ಹೌದು ವಿಜಯಪುರ ಜಿಲ್ಲೆಯಲ್ಲಿ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮೆರಾ ಮಾದರಿಯ ಸಾಧನವನ್ನು ಹೊತ್ತಿದ್ದ ರಣಹದ್ದು ಪತ್ತೆಯಾಗಿದೆ. 

ಜಿಪಿಎಸ್ ಹಾಗೂ ಕ್ಯಾಮೆರಾ ಸಾಧನ ಹೊತ್ತ ರಣಹದ್ದು ಪತ್ತೆ
ಜಿಪಿಎಸ್ ಹಾಗೂ ಕ್ಯಾಮೆರಾ ಸಾಧನ ಹೊತ್ತ ರಣಹದ್ದು ಪತ್ತೆ

ಈ ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಿರುವುದು ಕಂಡುಬಂದಿದೆ. ಆತಂಕಗೊಂಡ ಸ್ಥಳೀಯರು ತಕ್ಷಣ 112ಗೆ ಕರೆ ಮಾಡಿ ಮಾಹಿತಿ ನೀಡಿದ್ರು. ಬಳಿಕ ಘಟನಾ ಸ್ಥಳಕ್ಕೆ ಬಂದಿದ್ದ 112 ಪೊಲೀಸರು, ರಣಹದ್ದನ್ನು ವಶಕ್ಕೆ ಪಡೆದು ಝಳಕಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.ಬಳಿಕ ಇದರ ಜೊತೆಗೆ ಅರಣ್ಯಾಧಿಕಾರಿಗಳು ಸಹ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ ನಾಗಪೂರ ಬಳಿಯ ಮೇಲಘಾಟ ಪ್ರದೇಶದಿಂದ ಬಂದಿರುವ ಈ ರಣಹದ್ದು, ಜಿಪಿಎಸ್ ಹಾಗೂ ಟ್ರ್ಯಾಕರ್‌ನ ಭಾರದಿಂದ  ಸುಸ್ತಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಹಾರಾಷ್ಟ್ರದ ಅರಣ್ಯ ಇಲಾಖೆಯೇ ಈ ರಣಹದ್ದಿಗೆ ಟ್ರ್ಯಾಕರ್ ಹಾಗೂ ಜಿಪಿಎಸ್ ಅಳವಡಿಸಿದ್ದು, ರಣಹದ್ದುಗಳ ಜೀವನ ಶೈಲಿ ಹಾಗೂ ಇತರೆ ಪಕ್ಷಿಗಳ ಮಾಹಿತಿ ಪಡೆಯುವ ಪ್ರಯತ್ನದ ಭಾಗವೆಂದು ತಿಳಿದುಬಂದಿದೆ. ಜೊತೆಗೆ ರಣಹದ್ದುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ, ಹೆಚ್ಚಿನ ಮಾಹಿತಿ ಸಂಗ್ರಹಿಸಲು ಈ ಯೋಜನೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ, ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ರಣಹದ್ದನ್ನು ತಮ್ಮ ಸುಪರ್ಧಿಗೆ ಪಡೆದು ಆರೈಕೆ ಮಾಡುತ್ತಿದ್ದಾರೆ. 

ಹೌದು ಮಹಾರಾಷ್ಟ್ರದ ಅರಣ್ಯಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ರಣಹದ್ದಿನ ಆರೋಗ್ಯ ಸ್ಥಿತಿಗತಿಯನ್ನು ಗಮನಿಸಿ, ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಹಾರಿ ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಈ ವಿಷಯದ ಕುರಿತು ಮುಂದಿನ ಹಂತದಲ್ಲಿ ಏನಾಗುತ್ತದೆಯೋ ಕಾದು ನೋಡಬೇಕು.   

Latest News