Apr 8, 2026 Languages : ಕನ್ನಡ | English

ದಳಪತಿ ಎಂಟ್ರಿಗೆ ನಡುಗಿದ ತಮಿಳುನಾಡು - ವಿಜಯ್ ರೋಡ್‌ ಶೋಗೆ ಹರಿದು ಬಂದ ಜನಸಾಗರ!! ಏನಿದು ಹೊಸ ಅಲೆ?

ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 23ಕ್ಕೆ ನಿಗದಿಯಾಗಿದೆ. ಈ ಚುನಾವಣಾ ಕಣದಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧಿಪತಿ ವಿಜಯ್ ಅವರ ಅಬ್ಬರ ಹೇಗಿದೆ ಅಂದ್ರೆ, ವಿರೋಧ ಪಕ್ಷದವರು ಒಂದು ಕ್ಷಣ ದಂಗಾಗಿದ್ದಾರೆ. ಬುಧವಾರ ತಿರುನೆಲ್ವೇಲಿ ಮತ್ತು ತೂತುಕುಡಿಯಲ್ಲಿ ನಡೆದ ದಳಪತಿಯ ರೋಡ್‌ ಶೋ ಬರೀ ಪ್ರಚಾರದ ತರ ಇರಲಿಲ್ಲ, ಅದೊಂದು ದೊಡ್ಡ ಹಬ್ಬದ ತರ ಇತ್ತು. 

ತಮಿಳುನಾಡು ಚುನಾವಣಾ ಕಣ – ವಿಜಯ್ TVK ಅಬ್ಬರ!! | Photo Credit: https://x.com/ActorVijayTeam
ತಮಿಳುನಾಡು ಚುನಾವಣಾ ಕಣ – ವಿಜಯ್ TVK ಅಬ್ಬರ!! | Photo Credit: https://x.com/ActorVijayTeam

ವಿಜಯ್ ಅವರ ಪ್ರಚಾರ ಬುಧವಾರ ಮಧ್ಯಾಹ್ನ 1 ಗಂಟೆಗೆ ಪಾಳಯಂಕೊಟ್ಟೈನಲ್ಲಿ ಶುರುವಾಯ್ತು. ದಾರಿಯುದ್ದಕ್ಕೂ "ದಳಪತಿ.. ದಳಪತಿ.." ಅನ್ನೋ ಕೂಗು ಮುಗಿಲು ಮುಟ್ಟಿತ್ತು. ಜನಸಂದಣಿ ಎಷ್ಟಿತ್ತು ಅಂದ್ರೆ ಪೊಲೀಸರಿಗೆ ಪರಿಸ್ಥಿತಿ ನಿಭಾಯಿಸೋದೇ ಕಷ್ಟ ಆಗಿಬಿಟ್ಟಿತ್ತು. ಇನ್ನು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಜಯ್ ತೂತುಕುಡಿಗೆ ಶಿಫ್ಟ್ ಆದಾಗ ಅಲ್ಲೂ ಅಷ್ಟೇ ಕ್ರೇಜ್! ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ನೋಡೋಕೆ ಬೈಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಿಜಯ್ ಕಾರನ್ನು ಫಾಲೋ ಮಾಡಿದರು. ಈ ಆತುರದಲ್ಲಿ ಕೆಲವು ಬೈಕ್ ಸವಾರರು ಕೆಳಗೆ ಬಿದ್ದ ಘಟನೆಗಳು ನಡೆದವು, ಇನ್ನು ಕೆಲವರ ಬೈಕ್ ಪಂಕ್ಚರ್ ಆದವು. ಅದೃಷ್ಟವಶಾತ್ ಯಾರಿಗೂ ದೊಡ್ಡ ಗಾಯಗಳಾಗಿಲ್ಲ.

ತಮ್ಮ ಪ್ರಚಾರದ ಗಾಡಿಯ ಮೇಲೆ ನಿಂತು ಮಾತನಾಡಿದ ವಿಜಯ್, ಎಂದಿನಂತೆ ಸಖತ್ ಸ್ಟೈಲಿಶ್ ಆಗಿ ಮತ್ತು ಖಡಕ್ ಆಗಿ ಭಾಷಣ ಮಾಡಿದರು. ಈ ಬಾರಿ ಅವರ ಟಾರ್ಗೆಟ್ ಆಗಿದ್ದು ಆಡಳಿತಾರೂಢ ಡಿಎಂಕೆ (DMK) ಪಕ್ಷ. ಸರ್ಕಾರದಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ವಿಜಯ್ ನೇರವಾಗಿ ಕಿಡಿ ಕಾರಿದರು. ಜನರಿಗೆ ಈಗ ಬದಲಾವಣೆ ಬೇಕಿದೆ. ನಮ್ಮ ಪಕ್ಷ ಭ್ರಷ್ಟಾಚಾರ ರಹಿತ ಆಡಳಿತ, ತಮಿಳು ರಾಷ್ಟ್ರೀಯತೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಿದೆ ಅಂತ ವಿಜಯ್ ಭರವಸೆ ನೀಡಿದರು.

ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಹಗ್ಗಜಗ್ಗಾಟದಿಂದ ಬೇಸತ್ತಿರೋ ತಮಿಳು ಜನರಿಗೆ ತಮ್ಮ ಟಿವಿಕೆ (TVK) ಪಕ್ಷ ಒಂದು ಹೊಸ ಮತ್ತು ಕ್ಲೀನ್ ಆಯ್ಕೆ ಆಗಲಿದೆ ಅನ್ನೋದು ಅವರ ಮಾತಿನ ಅರ್ಥವಾಗಿತ್ತು. ವಿಜಯ್ ಅವರ ಈ ರೋಡ್‌ ಶೋಗಳಲ್ಲಿ ಕಂಡುಬಂದ ಯುವಕರ ಸಂಖ್ಯೆ ನೋಡಿದ್ರೆ, ಈ ಬಾರಿ ತಮಿಳುನಾಡು ಚುನಾವಣೆಯಲ್ಲಿ ಯುವ ಮತದಾರರು ದಳಪತಿಯ ಕೈ ಹಿಡಿಯೋ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಸಿನಿಮಾ ಡೈಲಾಗ್‌ಗಳಿಗಿಂತ ಹೆಚ್ಚಾಗಿ ಜನರ ಸಮಸ್ಯೆಗಳ ಬಗ್ಗೆ ವಿಜಯ್ ಮಾತಾಡ್ತಿರೋದು ಜನರಿಗೆ ಹತ್ತಿರವಾಗ್ತಿದೆ.

ಬರೀ ಫ್ಯಾನ್ಸ್ ಅಷ್ಟೇ ಅಲ್ಲ, ಸಾಮಾನ್ಯ ಜನರೂ ಕೂಡ ವಿಜಯ್ ಏನೋ ಹೊಸ ಬದಲಾವಣೆ ತರಬಹುದು ಅಂತ ಕಾಯ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಅವರ ಹೋರಾಟ ಎಷ್ಟು ಮಟ್ಟಿಗೆ ವರ್ಕ್ ಆಗುತ್ತೆ ಅನ್ನೋದು ಏಪ್ರಿಲ್ 23ರ ಫಲಿತಾಂಶದ ದಿನ ಗೊತ್ತಾಗಲಿದೆ. ವಿಜಯ್ ಅವರ ಈ ಅಬ್ಬರದ ಪ್ರಚಾರ ತಮಿಳುನಾಡು ರಾಜಕೀಯದ ಚಿತ್ರಣವನ್ನೇ ಬದಲಿಸಿದ್ರೂ ಆಶ್ಚರ್ಯವಿಲ್ಲ. ನಿಮ್ಮ ಪ್ರಕಾರ ವಿಜಯ್ ರಾಜಕೀಯದಲ್ಲಿ ಸಕ್ಸಸ್ ಆಗ್ತಾರಾ? ದಳಪತಿ ಸಿಎಂ ಆಗೋ ಕಾಲ ಹತ್ತಿರ ಬಂತಾ? ಕಾಮೆಂಟ್ ಮಾಡಿ ತಿಳಿಸಿ!


Latest News