ಮದುವೆಯಾಗಿ ಕೇವಲ ಐದೇ ತಿಂಗಳು.. ಇನ್ನೂ ಕೈಯಲ್ಲಿದ್ದ ಮದುವೆ ಮೆಹಂದಿ ಬಣ್ಣ ಮಾಸುವ ಮುನ್ನವೇ ಖ್ಯಾತ ನಟಿ, ಮಾಡೆಲ್ ಹಾಗೂ ಮಾಜಿ ಮಿಸ್ ಪುಣೆ ಟ್ವಿಶಾ ಶರ್ಮಾ (33) ಭೋಪಾಲ್‌ನ ತಮ್ಮ ಮನೆಯಲ್ಲಿ ಹೆ*ಣವಾಗಿ ಪತ್ತೆಯಾಗಿದ್ದಾರೆ. ಮೇ 12 ರಂದು ನಡೆದ ಈ ಘಟನೆ ಈಗ ಇಡೀ ದೇಶದಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದೆ. ಗ್ಲಾಮರ್ ಲೋಕದಲ್ಲಿ ಮಿಂಚುತ್ತಿದ್ದ ಒಬ್ಬ ಪ್ರತಿಭಾವಂತ ನಟಿ ಮದುವೆಯಾದ ಕೆಲವೇ ತಿಂಗಳಲ್ಲಿ ಇಂತಹ ಕಠಿಣ ನಿರ್ಧಾರ ತಗೆದುಕೊಳ್ಳಲು ಅಸಲಿ ಕಾರಣವೇನು? ಇದರ ಹಿಂದೆ ಗಂಡನ ಮನೆಯವರ ಕೈವಾಡವಿದೆಯೇ? ಸದ್ಯ ಇಡೀ ಪ್ರಕರಣ ಒಂದು ದೊಡ್ಡ ರಹಸ್ಯವಾಗಿ ಬದಲಾಗಿದೆ.
ಟ್ವಿಶಾ ಅವರ ಪೋಷಕರು ತಮ್ಮ ಮಗಳದ್ದು ಆತ್ಮಹ*ತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊ*ಲೆ ಎಂದು ಆರೋಪಿಸಿದ್ದು, ಹಿರಿಯ ವಕೀಲನಾಗಿರೋ ಗಂಡ ಹಾಗೂ ನಿವೃತ್ತ ನ್ಯಾಯಾಧೀಶೆಯಾಗಿರೋ ಆತನ ತಾಯಿಯ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
ಕೇಸ್ ಡೈರಿ:ಪ್ರಮುಖ ಮುಖ್ಯಾಂಶಗಳು (Quick Insights):
ಕಾನೂನು ಕುಟುಂಬದ ಮೇಲೆಯೇ ಆರೋಪ - ಹಿರಿಯ ವಕೀಲ ಸಮರ್ಥ್ ಸಿಂಗ್ (ಗಂಡ) ಮತ್ತು ನಿವೃತ್ತ ಜಡ್ಜ್ ಗಿರಿಬಾಲಾ (ಅತ್ತೆ) ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊ*ಲೆಗೆ ಪ್ರಚೋದನೆ ನೀಡಿದ ಗಂಭೀರ ಕೇಸ್ ದಾಖಲಾಗಿದೆ.
ಮಗಳ ಶ*ವವಿಟ್ಟು ಪೋಷಕರ ಧರಣಿ - ಪೊಲೀಸರ ತನಿಖೆ ಮೇಲೆ ನಂಬಿಕೆಯಿಲ್ಲ ಎಂದು ಟ್ವಿಶಾ ಪೋಷಕರು ಸಿಬಿಐ (CBI) ತನಿಖೆಗೆ ಒತ್ತಾಯಿಸಿ ಶವಾಗಾರದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
SIT ಎಂಟ್ರಿ - ಆರೋಪಿಗಳು ಕಾನೂನು ಹಿನ್ನೆಲೆಯುಳ್ಳ ಪ್ರಭಾವಿಗಳಾಗಿರುವುದರಿಂದ ಪ್ರಕರಣದ ತನಿಖೆಗೆ ಭೋಪಾಲ್ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ಕಣಕ್ಕಿಳಿಸಿದ್ದಾರೆ.
ವಾಟ್ಸಾಪ್ ಚಾಟ್ಸ್ ಮತ್ತು ಬಲವಂತದ ಗರ್ಭಪಾತ - ಬಯಲಾಯ್ತು ನರಕಯಾತನೆ!
ಟ್ವಿಶಾ ಪೋಷಕರು ನೀಡಿರುವ ದೂರಿನ ಪ್ರಕಾರ, ಡಿಸೆಂಬರ್ 2025 ರಲ್ಲಿ ಮದುವೆಯಾದ ದಿನದಿಂದಲೇ ವರದಕ್ಷಿಣೆಗಾಗಿ ಆಕೆಗೆ ತೀವ್ರ ದೈಹಿಕ ಮತ್ತು ಮಾನಸಿಕ ಟಾರ್ಚರ್ ಕೊಡಲಾಗುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಆಕೆ ಸಾಯುವ ಮುನ್ನ ತನ್ನ ಪೋಷಕರಿಗೆ ಕಳುಹಿಸಿದ್ದ ಕೆಲವು ಕೊನೆಯ ವಾಟ್ಸಾಪ್ ಸಂದೇಶಗಳು (Screenshots) ಈಗ ಲಭ್ಯವಾಗಿವೆ. ಆ ಚಾಟಿಂಗ್‌ಗಳಲ್ಲಿ ತನಗೆ ಗಂಡನ ಮನೆಯಲ್ಲಿ ಆಗುತ್ತಿದ್ದ ನರಕಯಾತನೆ ಹಾಗೂ ಜೀವಭಯದ ಬಗ್ಗೆ ಟ್ವಿಶಾ ಬರೆದುಕೊಂಡಿದ್ದಾಳೆ.
ಅಷ್ಟೇ ಅಲ್ಲದೆ, ಆಕೆ ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಯ ಒಪ್ಪಿಗೆಯಿಲ್ಲದಿದ್ದರೂ ಬಲವಂತವಾಗಿ ಗರ್ಭಪಾತ (Abortion) ಮಾಡಿಸಿ ಕ್ರೌರ್ಯ ಮೆರೆದಿದ್ದಾರೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಮದುವೆಯಾಗುವಾಗ ಫುಲ್ ಫಿಟ್ ಆಗಿದ್ದ ನಟಿ, ಕೇವಲ ಐದು ತಿಂಗಳಲ್ಲಿ ಅತಿಯಾದ ತೂಕ ಇಳಿಸಿಕೊಂಡು ಮೂಳೆ ಚರ್ಮವಾಗಿದ್ದೇ ಆಕೆಗೆ ನೀಡಿದ ಕಿರುಕುಳಕ್ಕೆ ಸಾಕ್ಷಿ ಎನ್ನುತ್ತಿದ್ದಾರೆ ಹೆತ್ತವರು.
ಮಾನಸಿಕ ರೋಗದ ಕಥೆ ಕಟ್ಟಿದ ಅತ್ತೆ! ಪೋಸ್ಟ್‌ಮಾರ್ಟಂ ರಿಪೋರ್ಟ್ ಟ್ವಿಸ್ಟ್!
ಇತ್ತ ಪ್ರಕರಣದ ಎರಡನೇ ಆರೋಪಿಯಾಗಿರುವ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಟ್ವಿಶಾಗೆ ಮೊದಲಿನಿಂದಲೂ 'ಸ್ಕಿಜೋಫ್ರೇನಿಯಾ' (Schizophrenia) ಎಂಬ ತೀವ್ರತರವಾದ ಮಾನಸಿಕ ಕಾಯಿಲೆ ಇತ್ತು, ಆ ಮಾನಸಿಕ ಅಸ್ವಸ್ಥತೆಯಿಂದಲೇ ಆಕೆ ಸ್ವತಃ ಗರ್ಭಪಾತ ಮಾಡಿಕೊಂಡು, ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೊಸದೊಂದು ಕಥೆ ಬಿಚ್ಚಿಟ್ಟಿದ್ದಾರೆ.
ಆದರೆ ಟ್ವಿಶಾ ಅವರ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ (Post-mortem) ವರದಿಯಲ್ಲಿ ಆಕೆಯ ದೇಹದ ಮೇಲೆ ಕೆಲವು ಗಾಯದ ಗುರುತುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯಕ್ಕೆ ಮುಖ್ಯ ಆರೋಪಿ ಸಮರ್ಥ್ ಸಿಂಗ್ ತಲೆಮರೆಸಿಕೊಂಡಿದ್ದು, ಕೋರ್ಟ್ ಆತನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ!
Twisha Sharma wants to live but those greedy mongers didn't let her pic.twitter.com/EwE5ZFHc7f
— Voice of Hindus (@Voiceofhindus) May 18, 2026
ಸಿಬಿಐ ತನಿಖೆಗೆ ಬಿಗಿಪಟ್ಟು!
ಆರೋಪಿಗಳು ಕಾನೂನಿನ ತಜ್ಞರಾಗಿರುವುದರಿಂದ ಸ್ಥಳೀಯ ಪೊಲೀಸರು ಕೇಸ್ ಅನ್ನು ಹಳ್ಳ ಹಿಡಿಸಬಹುದು ಎಂಬ ಆತಂಕ ಟ್ವಿಶಾ ಪೋಷಕರಲ್ಲಿದೆ. ಹೀಗಾಗಿ ಅವರು ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಇಡೀ ಕೇಸ್ ಅನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ನ್ಯಾಯ ಸಿಗುವವರೆಗೂ ಮಗಳ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಶವವನ್ನು ಶ*ವಾಗಾರದಲ್ಲೇ (Morgue) ಇಟ್ಟು ಹೆತ್ತವರು ನಡೆಸುತ್ತಿರುವ ಹೋರಾಟ ಇಡೀ ದೇಶದ ಗಮನ ಸೆಳೆದಿದೆ.