ಮದುವೆಯಾದ ಆರೇ ತಿಂಗಳಿಗೆ ನಟಿ ತ್ವಿಶಾ ಶರ್ಮಾ ಸಾವು - ತಾಯಿ ಜೊತೆ ಫೋನಲ್ಲಿ ಮಾತಾಡಿದ ಅರ್ಧ ಗಂಟೆಯಲ್ಲಿ ಆಗಿದ್ದೇನು?

ಸಿನಿಮಾ ಮತ್ತು ಗ್ಲಾಮರ್ ಲೋಕದ ಪ್ರಸಿದ್ಧ ನಟಿಯೊಬ್ಬರ ಮದುವೆ ಜೀವನ ಕೇವಲ ಆರೇ ತಿಂಗಳಲ್ಲಿ ಅತ್ಯಂತ ದುರಂತಮಯವಾಗಿ ಅಂತ್ಯಗೊಂಡಿದೆ. ಆನ್‌ಲೈನ್ ಮ್ಯಾಚ್‌ಮೇಕಿಂಗ್ (Online Matchmaking) ವೆಬ್‌ಸೈಟ್ ಮೂಲಕ ಮದುವೆಯಾಗಿದ್ದ ಖ್ಯಾತ ನಟಿ ತ್ವಿಶಾ ಶರ್ಮಾ (Twisha Sharma) ಇತ್ತೀಚೆಗೆ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.

ಆರೇ ತಿಂಗಳ ಮದುವೆ ಜೀವನದ ದುರಂತ ಅಂತ್ಯ – ನಟಿ ತ್ವಿಶಾ ಶರ್ಮಾ ಸಾವು; | Photo Credit: https://x.com/ranvijaylive
ಆರೇ ತಿಂಗಳ ಮದುವೆ ಜೀವನದ ದುರಂತ ಅಂತ್ಯ – ನಟಿ ತ್ವಿಶಾ ಶರ್ಮಾ ಸಾವು; | Photo Credit: https://x.com/ranvijaylive

ಅವರ ಸಾವು ಸದ್ಯ ಇಡೀ ಚಿತ್ರರಂಗ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಹ*ತ್ಯೆಯೋ ಅಥವಾ ಆತ್ಮಹ*ತ್ಯೆಯೋ ಎಂಬ ಅನುಮಾನಗಳು ದಟ್ಟವಾಗಿವೆ. ಈ ಹಠಾತ್ ಸಾವಿನ ಹಿಂದೆ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಭಾವಿ ಕಾನೂನು ಕುಟುಂಬದ ವಿರುದ್ಧವೇ ಈಗ ಎಫ್‌ಐಆರ್ ದಾಖಲಾಗಿದೆ!

ಪ್ರಕರಣದ ಪ್ರಮುಖ ಮುಖ್ಯಾಂಶಗಳು (Highlights):

ಆರೇ ತಿಂಗಳ ದಾಂಪತ್ಯ - ಆನ್‌ಲೈನ್‌ನಲ್ಲಿ ಪರಿಚಯವಾಗಿ ಕೇವಲ 6 ತಿಂಗಳ ಹಿಂದೆಯಷ್ಟೇ ತ್ವಿಶಾ ಮದುವೆಯಾಗಿದ್ದರು.

ಪ್ರಭಾವಿ ಕುಟುಂಬದ ವಿರುದ್ಧ ಕೇಸ್ - ಭೋಪಾಲ್‌ನ ನಿವೃತ್ತ ನ್ಯಾಯಾಧೀಶರಾದ (Retired Judge) ಗಿರಿಬಾಲಾ ಸಿಂಗ್ ಮತ್ತು ಅವರ ವಕೀಲ ಮಗ ಸಮರ್ಥ್ ವಿರುದ್ಧ ವರದಕ್ಷಿಣೆ ಸಾವಿನ (Dowry Death) ಪ್ರಕರಣ ದಾಖಲಾಗಿದೆ.

ನ್ಯಾಯ ಸಿಗಲ್ಲ ಅನ್ನೋ ಆತಂಕ - ತಮಗೆ ಅದೇ ರಾಜ್ಯದಲ್ಲಿ ನ್ಯಾಯ ಸಿಗುವುದಿಲ್ಲ ಎಂದು ನಟಿಯ ಪೋಷಕರು ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಮತ್ತು ಮರು-ಪೋಸ್ಟ್‌ಮಾರ್ಟಮ್ (Re-postmortem) ಮಾಡಲು ಒತ್ತಾಯಿಸುತ್ತಿದ್ದಾರೆ.

"ನನ್ನ ಜೀವನ ನರಕವಾಗಿದೆ, ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು ಅಮ್ಮಾ!"

ನಟಿ ತ್ವಿಶಾ ಶರ್ಮಾ ಅವರ ಪತಿ ಸಮರ್ಥ್ ವೃತ್ತಿಯಲ್ಲಿ ವಕೀಲನಾಗಿದ್ದು, ಆತನ ತಾಯಿ ಗಿರಿಬಾಲಾ ಸಿಂಗ್ ದೊಡ್ಡ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದಾರೆ. ತ್ವಿಶಾ ಪೋಷಕರ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ಅತ್ತೆ ಮತ್ತು ಪತಿಯ ಅಸಲಿ ಮುಖ ಬಯಲಾಗಿತ್ತು. "ಈ ಮದುವೆ ನಮ್ಮ ಸ್ಟೇಟಸ್‌ಗೆ ತಕ್ಕ ಹಾಗೆ ಇಲ್ಲ, ನೀನು ನಮ್ಮ ಸ್ಯಾಂಡರ್ಡ್‌ಗೆ ಮ್ಯಾಚ್ ಆಗಲ್ಲ" ಎಂದು ಪತಿ ಸಮರ್ಥ್ ನಿತ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಟಾರ್ಚರ್ ಕೊಡ್ತಾ ಇದ್ದನಂತೆ.

ತ್ವಿಶಾ ಸಾವಿಗೂ ಮುನ್ನ ತನ್ನ ಸ್ನೇಹಿತರ ಬಳಿ ತಾನು ದೊಡ್ಡ ಬಲೆಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಅತ್ತಿದ್ದಾಳೆ. ಅಷ್ಟೇ ಅಲ್ಲದೇ, ತನ್ನ ತಾಯಿಗೂ ಫೋನ್ ಮಾಡಿ, "ಅಮ್ಮಾ, ನನ್ನ ಲೈಫ್ ಇಲ್ಲಿ ನರಕವಾಗಿದೆ. ನನ್ನನ್ನು ಹೇಗಾದರೂ ಮಾಡಿ ಇಲ್ಲಿಂದ ತಕ್ಷಣ ಕರೆದುಕೊಂಡು ಹೋಗು, ನನಗಿಲ್ಲಿ ಇರಲು ಸಾಧ್ಯವಾಗುತ್ತಿಲ್ಲ" ಎಂದು ಕಣ್ಣೀರಿಟ್ಟಿದ್ದಾಳೆ.

ಫೋನ್ ಕಟ್ ಆದ 30 ನಿಮಿಷದಲ್ಲೇ ಸಾವು! ನಡೆದಿದ್ದೇನು?

ತ್ವಿಶಾ ಸಾವನ್ನಪ್ಪಿದ ದಿನವೂ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. "ಅಮ್ಮಾ, ಇವರೆಲ್ಲಾ ಕೊಡುವ ಕಿರುಕುಳವನ್ನು ನನಗೆ ಇನ್ಮುಂದೆ ತಡೆದುಕೊಳ್ಳಲು ಸಾಧ್ಯವೇ ಇಲ್ಲ" ಎಂದು ಅಳುತ್ತಿದ್ದಾಗ, ಯಾರೋ ಹಠಾತ್ ಆಗಿ ರೂಮ್ ಒಳಗಡೆ ಬಂದಿದ್ದಾರೆ. ತಕ್ಷಣವೇ ಫೋನ್ ಕಾಲ್ ಕಟ್ ಆಗಿದೆ.

ಇದಾಗಿ ಕೇವಲ 30 ನಿಮಿಷಗಳ ನಂತರ, ನಿವೃತ್ತ ಜಡ್ಜ್ ಗಿರಿಬಾಲಾ ಸಿಂಗ್ ಅವರು ತ್ವಿಶಾ ಪೋಷಕರಿಗೆ ನೇರವಾಗಿ ಫೋನ್ ಮಾಡಿ, "ನಿಮ್ಮ ಮಗಳು ಇನ್ನು ಬದುಕಿಲ್ಲ, ಅವಳು ಮುಗಿದು ಹೋದಳು" ಎಂದು ತಣ್ಣಗೆ ಹೇಳಿದ್ದಾರೆ. ಈ ಮಾತು ಕೇಳಿ ನಟಿಯ ಕುಟುಂಬಸ್ಥರು ಕಂಗಾಲಾಗಿದ್ದು, ಇದು ಪಕ್ಕಾ ಪ್ಲಾನ್ಡ್ ಮರ್ಡರ್ ಎಂದು ಆರೋಪಿಸುತ್ತಿದ್ದಾರೆ.

ತಾವು ತೀರ್ಪು ನೀಡುತ್ತಿದ್ದ ಕೋರ್ಟ್‌ನಲ್ಲೇ ನಿವೃತ್ತ ಜಡ್ಜ್‌ಗೆ ಬೇಲ್!

ಈ ಕೇಸ್‌ನಲ್ಲಿ ಅತ್ಯಂತ ಆಘಾತಕಾರಿ ಮತ್ತು ಚರ್ಚೆಯಾಗುತ್ತಿರುವ ವಿಷಯ ಅಂದ್ರೆ, ವರದಕ್ಷಿಣೆ ಕಿರುಕುಳ ಮತ್ತು ಕೊ*ಲೆಯ ಆರೋಪ ಹೊತ್ತಿರುವ ನಿವೃತ್ತ ಜಡ್ಜ್ ಗಿರಿಬಾಲಾ ಸಿಂಗ್, ತಾನು ಈ ಹಿಂದೆ ಯಾವ ನ್ಯಾಯಾಲಯದಲ್ಲಿ ಕುಳಿತು ತೀರ್ಪುಗಳನ್ನು ನೀಡುತ್ತಿದ್ದರೋ, ಅದೇ ಕೋರ್ಟ್‌ನಲ್ಲಿ ಜಾಮೀನು (Bail) ಅರ್ಜಿ ಸಲ್ಲಿಸಿದ್ದರು. ವಿಶೇಷ ಅಂದ್ರೆ ಅವರಿಗೆ ತಕ್ಷಣವೇ ಬೇಲ್ ಕೂಡ ಮಂಜೂರಾಗಿದೆ!

ಇದರಿಂದ ನಟಿಯ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಎದುರಾಳಿಗಳು ದೊಡ್ಡ ನ್ಯಾಯಾಧೀಶರು ಮತ್ತು ವಕೀಲರಾಗಿದ್ದಾರೆ. ಇಡೀ ಕಾನೂನು ವ್ಯವಸ್ಥೆ ಅವರ ಕೈಯಲ್ಲಿದೆ. ಹೀಗಿರುವಾಗ ನಮಗೆ ಈ ರಾಜ್ಯದಲ್ಲಿ ನ್ಯಾಯ ಸಿಗುವುದು ಅಸಾಧ್ಯ. ಆದ್ದರಿಂದ ಈ ಕೇಸ್ ಅನ್ನು ಬೇರೆ ರಾಜ್ಯಕ್ಕೆ ಶಿಫ್ಟ್ ಮಾಡಬೇಕು ಮತ್ತು ಮಗಳ ಶ*ವವನ್ನು ಮತ್ತೊಮ್ಮೆ ಮರು-ಪೋಸ್ಟ್‌ಮಾರ್ಟಮ್ ಮಾಡಿಸಬೇಕು" ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟಿ ತ್ವಿಶಾಗೆ ನ್ಯಾಯ ಸಿಗಬೇಕು ಎಂದು ದೊಡ್ಡ ಮಟ್ಟದ ಕ್ಯಾಂಪೇನ್ ಶುರುವಾಗಿದೆ.

Latest News