Feb 16, 2026 Languages : ಕನ್ನಡ | English

ಅನುಕಂಪದ ನೌಕರಿ ಪಡೆಯೊದಕ್ಕೆ ಗಂಡನಿಗೆ ಖೆಡ್ಡಾ ತೋಡಲು ಮುಂದಾದ್ರ ಈ ಯುವತಿ? ಬೆಚ್ಚಿ ಬೀಳಿಸುತ್ತೆ ಈ ಸ್ಟೋರಿ!!

ಬೀದರ್ ಜಿಲ್ಲೆಯ ಚಿಟಗುಪ್ಪ ಮೂಲದ ಪೊಲೀಸ್ ಕಾನ್ಸ್‌ಟೇಬಲ್ ಮಚೇಂದ್ರ ಹಾಗೂ ಪತ್ನಿ ಸೀನಾ ನಡುವಿನ ಕಲಹ ಇದೀಗ ಹೊಸ ತಿರುವು ಪಡೆದಿದೆ. ವರದಕ್ಷಿಣೆ ಕಿರುಕುಳದ ಆರೋಪದಿಂದ ಆರಂಭವಾದ ಪ್ರಕರಣದಲ್ಲಿ, ಈಗ ಪತಿ ಮಚೇಂದ್ರ ಪತ್ನಿ ಸೀನಾಳ ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿದ್ದಾರೆ ಎಂದು ಕೇಳಿ ಬಂದಿದೆ. 

ಪೊಲೀಸ್ ಕಾನ್ಸ್‌ಟೇಬಲ್-ಪತ್ನಿ ಕಲಹ
ಪೊಲೀಸ್ ಕಾನ್ಸ್‌ಟೇಬಲ್-ಪತ್ನಿ ಕಲಹ

ಪತಿಯ ಆರೋಪಗಳ ಬಗ್ಗೆ ಹೇಳುವುದಾದರೆ, ಮಚೇಂದ್ರ ಹೇಳುವಂತೆ, ಪತ್ನಿ ಸೀನಾ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಬೇಕೆಂಬ ದುರುದ್ದೇಶದಿಂದ, ಊಟಕ್ಕೆ ಮರಣಾಮೃತ ಬೆರಸಿ ಜೀವಹಾನಿ ಮಾಡಲು ಯತ್ನಿಸಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಪತ್ನಿ ಕೇರ್ ಮಾಡಲಿಲ್ಲ, ಆರೋಗ್ಯ ವಿಚಾರಿಸಲಿಲ್ಲ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಜೊತೆಗೆ, ಸೆಟಲ್‌ಮೆಂಟ್ ಹೆಸರಿನಲ್ಲಿ ಒಂದು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದು, ಒಪ್ಪದಿದ್ದಾಗ ಜೀವಹಾನಿ ನಡೆಸಿದ್ದಾರೆಂದು ಮಚೇಂದ್ರ ಆರೋಪಿಸಿದ್ದಾರೆ.

2025ರ ಸೆಪ್ಟೆಂಬರ್ ತಿಂಗಳಲ್ಲಿ ಹುಮನಾಬಾದ್ ತಾಲೂಕಾ ಪಂಚಾಯತ್ ಕಚೇರಿ ಹತ್ತಿರ ಪತ್ನಿ ಹಾಗೂ ಕುಟುಂಬಸ್ಥರು ತಮ್ಮ ಮೇಲೆ ದಾಳಿ ನಡೆಸಿದ್ದಾರೆಂದು ಮಚೇಂದ್ರ ಹೇಳಿಕೆ ನೀಡಿದ್ದಾರೆ. ವರದಕ್ಷಿಣೆ ಡಿಮ್ಯಾಂಡ್, ಮಕ್ಕಳಾಗಿಲ್ಲ ಎಂಬ ಕಾರಣಗಳಿಂದ ಕಿರುಕುಳ ನೀಡಲಾಗಿದೆ ಎಂಬುದು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

ಇನ್ನೊಂದು ಕಡೆ ಪತ್ನಿಯ ಆರೋಪಗಳ ಬಗ್ಗೆ ಈ ರೀತಿ ಕೇಳಿ ಬಂದಿವೆ ನೋಡಿ. ಇದಕ್ಕೂ ಮುನ್ನ ಪತ್ನಿ ಸೀನಾ, ಪತಿ ಮಚೇಂದ್ರ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದರು. ಮದುವೆಯ ನಂತರ ಸುಮಾರು 19 ತಿಂಗಳು ಬೆಂಗಳೂರಿನಲ್ಲಿ ಸುಖ ಸಂಸಾರ ನಡೆಸಿದ ಬಳಿಕ, ಕಲಹ ಆರಂಭವಾಗಿತ್ತು. ಪತ್ನಿ ಸೀನಾಳನ್ನು ತವರು ಮನೆಗೆ ಬಿಟ್ಟು, ವಾಪಸ್ ಕರೆದುಕೊಂಡು ಹೋಗಲು ವರದಕ್ಷಿಣೆ ನೀಡಬೇಕು ಎಂದು ಶರತ್ತು ಹಾಕಿದ್ದಾನೆಂದು ಸೀನಾ ಆರೋಪಿಸಿದ್ದರು. 

ಹಾಗೇನೇ, ಅಶ್ಲೀಲ ಸಂದೇಶಗಳ ಮೂಲಕ ಮಾನಸಿಕ ಹಿಂಸೆ, ಜೀವ ಬೆದರಿಕೆ ನೀಡಿದ್ದಾನೆಂದು ದೂರಿದ್ದರು. ಹೌದು ಸೀನಾ ಹೇಳುವಂತೆ, ವರದಕ್ಷಿಣೆ ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ, ಪ್ರಕರಣ ದಾಖಲಿಸಿಲ್ಲ. ಮದುವೆಗೆ ಈಗಾಗಲೇ 26 ಲಕ್ಷ ರೂಪಾಯಿ ಖರ್ಚು ಮಾಡಿದ್ದು, 30 ಲಕ್ಷ ರೂಪಾಯಿ ಸಾಲ ಬಾಕಿಯಿದೆ. ಇಂತಹ ಸಂದರ್ಭದಲ್ಲಿ ಮತ್ತೆ ವರದಕ್ಷಿಣೆ ಕೇಳುವುದು ಅನ್ಯಾಯ ಎಂದು ಅವರು ಅಳಲು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ, ಮಚೇಂದ್ರ ಹಾಗೂ ಸೀನಾ ನಡುವಿನ ಕಲಹವು ವರದಕ್ಷಿಣೆ ಕಿರುಕುಳದಿಂದ ಆರಂಭವಾಗಿ, ಈಗ ಪತಿ-ಪತ್ನಿ ಪರಸ್ಪರ ಗಂಭೀರ ಆರೋಪಗಳನ್ನು ಹೊರ ಹಾಕುವ ಮಟ್ಟಕ್ಕೆ ತಲುಪಿದೆ. ಪತಿ ಮಚೇಂದ್ರ ಪತ್ನಿ ಜೀವಹಾನಿ ಮಾಡಲು ಯತ್ನ ಮಾಡಿದ್ದಾರೆಂದು ಹೇಳಿದರೆ, ಪತ್ನಿ ಸೀನಾ ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ, ಜೀವ ಬೆದರಿಕೆ ಆರೋಪ ಮಾಡಿದ್ದಾರೆ. ಈ ಪ್ರಕರಣವು ಸ್ಥಳೀಯ ರಾಜಕೀಯ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಮೇಲೂ ಪ್ರಶ್ನೆ ಎಬ್ಬಿಸಿದೆ. ನ್ಯಾಯಾಲಯದಲ್ಲಿ ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.  

Latest News