ಟ್ರಾಫಿಕ್ ರೂಲ್ಸ್ ವಿಚಾರಕ್ಕೆ ಪೋಲೀಸರು ಮತ್ತು ಸಾರ್ವಜನಿಕರ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತೆ. ಆದ್ರೆ ಇಲ್ಲೊಂದು ಕಡೆ ನಡೆದ ಘಟನೆ ನೋಡಿದ್ರೆ ಎಂತವರಿಗಾದ್ರೂ ರಕ್ತ ಕುದಿಯುತ್ತೆ. ಹೆಲ್ಮೆಟ್ ಹಾಕಿಲ್ಲ ಅನ್ನೋ ಕಾರಣಕ್ಕೆ ಶುರುವಾದ ಈ ಕಿರಿಕಿರಿ, ಕೊನೆಗೆ ತಾಯಿಯ ಮೇಲಿನ ಹ*ಲ್ಲೆ ಮತ್ತು ಪೋಲೀಸ್ ಇನ್ಸ್‌ಪೆಕ್ಟರ್ ಕಾಲರ್ ಹಿಡಿಯುವ ಹಂತಕ್ಕೆ ಹೋಗಿದೆ. ಈ ಭೀಕರ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಪ್ರಕಾಶ್ ಎನ್ನುವ ಯುವಕ ತನ್ನ ತಾಯಿ ಮತ್ತು ತಂಗಿಯ ಜೊತೆಗೂಡಿ 'ಚೆನ್ನೈ ಬ್ಯುಟೀಸ್' ಬಟ್ಟೆ ಅಂಗಡಿಯಲ್ಲಿ ಶಾಪಿಂಗ್ ಮುಗಿಸಿ ತನ್ನ ಆಕ್ಟಿವಾ ಡಿಯೋ ಗಾಡಿಯಲ್ಲಿ ಮನೆಗೆ ಹೊರಟಿದ್ದ. ಗಾಡಿಯಲ್ಲಿ ಮೂರು ಜನ ಕೂತಿದ್ದರು ಮತ್ತು ಪ್ರಕಾಶ್ ಹೆಲ್ಮೆಟ್ ಹಾಕಿರಲಿಲ್ಲ ಅನ್ನೋದು ಇಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಆದ ಪಾಯಿಂಟ್. ಇದನ್ನ ಗಮನಿಸಿದ ಅಲ್ಲಿನ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಗಾಡಿಯನ್ನ ತಡೆದಿದ್ದಾರೆ.
ಗಾಡಿ ನಿಲ್ಲಿಸುತ್ತಿದ್ದಂತೆಯೇ ಆ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಪ್ರಕಾಶ್‌ನ ಕಾಲರ್ ಹಿಡಿದು ಎಳೆದಾಡಲು ಶುರು ಮಾಡಿದ್ದಾರೆ. ಇದನ್ನ ನೋಡಿ ಗಾಬರಿಯಾದ ಆತನ ತಾಯಿ, "ಸಾರ್, ದಯವಿಟ್ಟು ನನ್ನ ಮಗನನ್ನ ಬಿಟ್ಟುಬಿಡಿ" ಅಂತ ಕೇಳಿಕೊಳ್ಳುತ್ತಾ ಪೋಲೀಸ್ ಅಧಿಕಾರಿಯನ್ನ ತಡೆಯಲು ಹೋಗಿದ್ದಾರೆ. ಆದ್ರೆ ಆ ಅಧಿಕಾರಿ ಮಾತ್ರ ಆ ತಾಯಿಯ ಮಾತಿಗೆ ಬೆಲೆ ಕೊಡದೆ, ಅವರ ಮೇಲೆ ಕೈಮಾಡಿ ಜೋರಾಗಿ ಹೊಡೆದಿದ್ದಾರೆ ಎನ್ನಲಾಗಿ ಕೇಳಿಬಂದಿದೆ.
ಕಣ್ಣೆದುರೇ ಹೆತ್ತ ತಾಯಿಯ ಮೇಲೆ ಪೋಲೀಸ್ ಅಧಿಕಾರಿ ಕೈಮಾಡಿದ್ದನ್ನ ನೋಡಿ ಪ್ರಕಾಶ್‌ಗೆ ಕೋಪ ನೆತ್ತಿಗೇರಿದೆ. "ನನ್ನ ತಾಯಿಯ ಮೇಲೆಯೇ ಕೈ ಮಾಡ್ತೀಯಾ?" ಅಂತ ಆಕ್ರೋಶಗೊಂಡ ಪ್ರಕಾಶ್, ತಕ್ಷಣವೇ ಆ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಕಾಲರ್ ಹಿಡಿದು ಜಗ್ಗಾಡಿದ್ದಾನೆ. ಈ ನೂಕಾಟದಲ್ಲಿ ಆ ಅಧಿಕಾರಿಯ ಹೆಗಲ ಮೇಲಿದ್ದ 'ಸ್ಟಾರ್' ಕೂಡ ಕಿತ್ತು ಕೆಳಗೆ ಬಿದ್ದಿದೆ. ಅಲ್ಲಿಗೆ ಪರಿಸ್ಥಿತಿ ಕೈಮೀರಿ ಹೋಗಿ ದೊಡ್ಡ ರಾದ್ಧಾಂತವೇ ನಡೆದಿದೆ.
ಈ ಇಡೀ ಘಟನೆಯ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಹರಿದಾಡ್ತಿದ್ದು, ಜನರ ಅಭಿಪ್ರಾಯ ಎರಡು ಭಾಗವಾಗಿದೆ. "ಹೆಲ್ಮೆಟ್ ಹಾಕದಿದ್ದಕ್ಕೆ ಫೈನ್ ಹಾಕಲಿ, ಅದನ್ನ ಬಿಟ್ಟು ಕಾಲರ್ ಹಿಡಿಯೋದು ಮತ್ತು ಮಹಿಳೆಯ ಮೇಲೆ ಕೈಮಾಡೋದು ಎಷ್ಟು ಸರಿ?" ಅಂತ ಜನ ಪೋಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಮ್ಮನನ್ನ ಹೊಡೆದಾಗ ಮಗ ಸುಮ್ಮನಿರಲು ಹೇಗೆ ಸಾಧ್ಯ? ಪ್ರಕಾಶ್ ಮಾಡಿದ್ದು ಸರಿ ಅಂತ ಕೆಲವರು ಹೇಳ್ತಿದ್ದಾರೆ.
ಕಾನೂನು ಪಾಲಿಸೋದು ನಮ್ಮ ಜವಾಬ್ದಾರಿ, ಹೆಲ್ಮೆಟ್ ಹಾಕೋದು ನಮ್ಮ ಜೀವದ ರಕ್ಷಣೆಗಾಗಿ ಅನ್ನೋದನ್ನ ಮರೆಯಬಾರದು. ಆದ್ರೆ ಕಾನೂನು ಕಾಪಾಡಬೇಕಾದ ಪೋಲೀಸರೇ ಈ ರೀತಿ ಸಾರ್ವಜನಿಕರ ಮೇಲೆ ಅಸಭ್ಯವಾಗಿ ವರ್ತಿಸಿದ್ರೆ ಜನರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಎಲ್ಲಿರುತ್ತೆ? ತಪ್ಪು ಮಾಡಿದವರಿಗೆ ದಂಡ ಹಾಕಿ ಅಥವಾ ಕೇಸ್ ದಾಖಲಿಸಿ, ಆದ್ರೆ ಸಾರ್ವಜನಿಕವಾಗಿ ಮಹಿಳೆಯರ ಮೇಲೆ ಹ*ಲ್ಲೆ ಮಾಡೋದು ಖಂಡಿತಾ ಒಪ್ಪುವಂತದ್ದಲ್ಲ.