ನಿಮ್ಮಲ್ಲಿ ಎಷ್ಟು ಜನಕ್ಕೆ ಆರ್ಮಿ ಯೂನಿಫಾರ್ಮ್ ಹಾಕೊಂಡು ದೇಶ ಸೇವೆ ಮಾಡಬೇಕು ಅನ್ನೋ ಕನಸಿದೆ? ಟಿವಿಯಲ್ಲಿ ಸೈನಿಕರನ್ನ ನೋಡಿದಾಗ ನಮಗೂ ಒಂದು ಅವಕಾಶ ಸಿಗಬಾರದೇ ಅಂತ ಅನ್ಸೋದು ಸಹಜ. ಆದರೆ ಹೈಟ್ ಕಡಿಮೆ ಇದೆ ಅಂದೋ ಅಥವಾ ವಯಸ್ಸು ಮೀರಿ ಹೋಗಿದೆ ಅಂತನೋ ಎಷ್ಟೋ ಜನ ಸುಮ್ಮನಾಗಿರ್ತೀರಾ. ಅಂತಹವರಿಗಾಗಿಯೇ ಈಗ ಇಂಡಿಯನ್ ಆರ್ಮಿಯಿಂದ ಒಂದು ಸೂಪರ್ ಗುಡ್ ನ್ಯೂಸ್ ಬಂದಿದೆ.
ಭಾರತೀಯ ಟೆರಿಟೋರಿಯಲ್ ಆರ್ಮಿ (Territorial Army - TA) ಬರೋಬ್ಬರಿ 3,806 ಹುದ್ದೆಗಳಿಗೆ ನೇಮಕಾತಿ ಶುರು ಮಾಡಿದೆ. ಇದರ ಸ್ಪೆಷಾಲಿಟಿ ಅಂದ್ರೆ, ನೀವು ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೂತು ಆನ್‌ಲೈನ್ ಅಪ್ಲಿಕೇಶನ್ ಹಾಕೋ ಅವಶ್ಯಕತೆ ಇಲ್ಲ. ಡೈರೆಕ್ಟ್ ಆಗಿ ನಿಮ್ಮ ದಾಖಲೆಗಳನ್ನ ತಗೊಂಡು ರ್ಯಾಲಿಗೆ ಹೋದ್ರೆ ಸಾಕು. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ಏನಿದು ‘ಟೆರಿಟೋರಿಯಲ್ ಆರ್ಮಿ’?
ತುಂಬಾ ಜನಕ್ಕೆ ಇದರ ಬಗ್ಗೆ ಗೊತ್ತಿರಲ್ಲ. ಇದನ್ನ ಒಂದು ರೀತಿ 'ಪೌರಸೇನೆ' ಅಂತ ಕರಿಬಹುದು. ಅಂದ್ರೆ ನೀವು ನಿಮ್ಮ ರೆಗ್ಯುಲರ್ ಕೆಲಸ ಅಥವಾ ಬಿಸಿನೆಸ್ ಮಾಡಿಕೊಂಡೇ, ವರ್ಷದಲ್ಲಿ ಕೆಲವು ತಿಂಗಳುಗಳ ಕಾಲ ಸೇನೆಯಲ್ಲಿ ಕೆಲಸ ಮಾಡೋಕೆ ಅವಕಾಶ ಇರುತ್ತೆ. ಇದು ಪಾರ್ಟ್-ಟೈಮ್ ಸೈನ್ಯದ ತರಹ ಇದ್ದರೂ, ಸೌಲಭ್ಯಗಳು ಮಾತ್ರ ಸೇನೆಯಂತೆಯೇ ಇರುತ್ತವೆ.
ನೇರ ರ್ಯಾಲಿ: ಎಲ್ಲಿ ಮತ್ತು ಯಾವಾಗ?
ಈ ನೇಮಕಾತಿಯಲ್ಲಿ ಆನ್‌ಲೈನ್ ಅರ್ಜಿ ಅನ್ನೋ ಕಿರಿಕಿರಿ ಇಲ್ಲ. ಅಮೃತಸರ, ಜೈಪುರ, ದೆಹಲಿ ಹೀಗೆ ದೇಶದ ಬೇರೆ ಬೇರೆ ಕಡೆ ರ್ಯಾಲಿಗಳು ನಡೆಯುತ್ತವೆ. ಇವು ಈಗಾಗಲೇ ಮಾರ್ಚ್ 2026 ರಿಂದಲೇ ಶುರುವಾಗಿದ್ದು, ಆಗಸ್ಟ್ 2026 ರವರೆಗೆ ಬೇರೆ ಬೇರೆ ದಿನಾಂಕಗಳಲ್ಲಿ ನಡೆಯಲಿವೆ. ಹಾಗಾಗಿ ನೀವು ರೆಡಿಯಾಗಿ ಇರೋದು ಮುಖ್ಯ.
ಯಾರೆಲ್ಲಾ ಭಾಗವಹಿಸಬಹುದು? (ಅರ್ಹತೆಗಳು)
ಸಾಮಾನ್ಯವಾಗಿ ಆರ್ಮಿಗೆ ಹೋಗೋಕೆ ವಯಸ್ಸು ಅಡ್ಡಿ ಆಗುತ್ತೆ. ಆದ್ರೆ ಇಲ್ಲಿ 18 ರಿಂದ 42 ವರ್ಷದವರೆಗಿನ ಯುವಕರು ಭಾಗವಹಿಸಬಹುದು! ಇದಕ್ಕಿಂತ ದೊಡ್ಡ ಚಾನ್ಸ್ ಮತ್ಯಾವುದಿದೆ ಹೇಳಿ?
- ಸೋಲ್ಜರ್ ಜಿಡಿ (GD): 10ನೇ ತರಗತಿಯಲ್ಲಿ ಕನಿಷ್ಠ 45% ಮಾರ್ಕ್ಸ್ ಬಂದಿರಬೇಕು.
- ಸೋಲ್ಜರ್ ಕ್ಲರ್ಕ್: 12ನೇ ತರಗತಿಯಲ್ಲಿ 60% ಮಾರ್ಕ್ಸ್ ಇರಬೇಕು (ಮ್ಯಾಥ್ಸ್ ಮತ್ತು ಇಂಗ್ಲಿಷ್ ಕಡ್ಡಾಯ).
- ಟ್ರೇಡ್ಸ್‌ಮನ್: ನೀವು 8ನೇ ಅಥವಾ 10ನೇ ತರಗತಿ ಪಾಸ್ ಆಗಿದ್ರೂ ಈ ಹುದ್ದೆಗೆ ಟ್ರೈ ಮಾಡಬಹುದು.