ಐಟಿ ಲೋಕದಲ್ಲಿ ಹಾಗೂ ಕಾರ್ಪೊರೇಟ್ ವಲಯದಲ್ಲಿ ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಅಬ್ಬರ ಎಷ್ಟಿದೆ ಅನ್ನೋದಕ್ಕೆ ಮತ್ತೊಂದು ಶಾಕಿಂಗ್ ಉದಾಹರಣೆ ಸಿಕ್ಕಿದೆ! ಹೌದು, ಅಮೆರಿಕ ಮೂಲದ ಪ್ರಸಿದ್ಧ ರಿಯಲ್ ಎಸ್ಟೇಟ್ ಟೆಕ್ ದೈತ್ಯ ಕಂಪನಿ ‘ಓಪನ್‌ಡೋರ್’ (Opendoor) ಭಾರತದಲ್ಲಿದ್ದ ತನ್ನ ಕಚೇರಿ ಹಾಗೂ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.
ಕಂಪನಿಯ ಈ ದಿಢೀರ್ ನಿರ್ಧಾರದಿಂದಾಗಿ ಭಾರತದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಬರೋಬ್ಬರಿ 250 ಉದ್ಯೋಗಿಗಳಿಗೆ ಗೇಟ್‌ಪಾಸ್ ಸಿಕ್ಕಂತಾಗಿದೆ. ಕಂಪನಿಯು ತನ್ನ ಸಂಪೂರ್ಣ ಬಿಸಿನೆಸ್ ಸ್ಟ್ರ್ಯಾಟಜಿಯನ್ನು ಬದಲಾಯಿಸಿಕೊಂಡಿದ್ದು, ಇನ್ಮುಂದೆ ‘ಎಐ-ನೇಟಿವ್’ (AI-native) ವ್ಯವಸ್ಥೆಯ ಕಡೆಗೆ ಮುಖ ಮಾಡಿರುವುದೇ ಈ ಲೇ-ಆಫ್‌ಗೆ ಅಸಲಿ ಕಾರಣ ಎನ್ನಲಾಗಿದೆ.
ಇಂಡಿಯಾ ಟೀಮ್ ಕ್ಲೋಸ್ ಮಾಡಿದ್ದಕ್ಕೆ ಸಿಇಒ ಕೊಟ್ಟ ಕಾರಣ ಏನು?
ಓಪನ್‌ಡೋರ್ ಕಂಪನಿಯ ಸಿಇಒ ಕಾಜ್ ನೆಜಾಟಿಯನ್ (Kaz Nejatian) ಅವರ ಪ್ರಕಾರ, ಈ ನಿರ್ಧಾರ ತಗೋಳೋದು ಅಷ್ಟು ಈಸಿ ಇರಲಿಲ್ಲ. ಕಂಪನಿಯು ತನ್ನ ಇಡೀ ಬಿಸಿನೆಸ್ ಪ್ರಕ್ರಿಯೆಯನ್ನು ಅಮೆರಿಕದಲ್ಲಿರೋ ತನ್ನ ಅಸಲಿ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿಸಲು ಈ ಪ್ಲಾನ್ ಮಾಡಿದೆ. ಯುಎಸ್ ಗ್ರಾಹಕರ ಜೊತೆ ನೇರ ಸಂಪರ್ಕದಲ್ಲಿ ಕೆಲಸ ಮಾಡುವುದು ಕಂಪನಿಯ ಬೆಳವಣಿಗೆಗೆ ಒಳ್ಳೆಯದು ಅಂತ ಮ್ಯಾನೇಜ್‌ಮೆಂಟ್ ಭಾವಿಸಿದೆ. ಹಾಗಾಗಿ ಭಾರತದಲ್ಲಿದ್ದ ಕೆಲವು ಪ್ರಮುಖ ಹುದ್ದೆಗಳನ್ನು ಈಗಾಗಲೇ ಅಮೆರಿಕಕ್ಕೆ ಶಿಫ್ಟ್ ಮಾಡುವ ಪ್ರಕ್ರಿಯೆ ಕೂಡ ಸ್ಟಾರ್ಟ್ ಆಗಿದೆ.
ಆದರೆ, ಇಲ್ಲೊಂದು ಮುಖ್ಯವಾದ ಮ್ಯಾಟರ್ ಇದೆ. ಭಾರತದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವುದು ಅವರ ಕೆಲಸದ ಗುಣಮಟ್ಟ (Performance) ಚೆನ್ನಾಗಿಲ್ಲ ಅಂತ ಖಂಡಿತ ಅಲ್ಲ ಎಂದು ಸಿಇಒ ಸ್ಪಷ್ಟಪಡಿಸಿದ್ದಾರೆ. "ಭಾರತೀಯ ಉದ್ಯೋಗಿಗಳು ನಮ್ಮ ಕಂಪನಿಯ ಇಷ್ಟು ದಿನದ ಸಕ್ಸಸ್‌ಗೆ ಭಾರಿ ದೊಡ್ಡ ಕೊಡುಗೆ ನೀಡಿದ್ದಾರೆ" ಅಂತ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಆದ್ರೆ ಬಿಸಿನೆಸ್ ಮಾಡೆಲ್ ಚೇಂಜ್ ಆಗಿರುವುದರಿಂದ ಅನಿವಾರ್ಯವಾಗಿ ಈ ಕಠಿಣ ನಿರ್ಧಾರ ತಗೋಬೇಕಾಗಿ ಬಂದಿದೆ ಅಂತ ಬೇಸರ ಹೊರಹಾಕಿದ್ದಾರೆ.
ಕೆಲಸ ಕಳೆದುಕೊಂಡವರಿಗೆ ಸಿಗಲಿದೆ 'ಟ್ರಾನ್ಸಿಷನ್ ಪ್ಯಾಕೇಜ್'
ದಿಢೀರ್ ಆಗಿ ಕೆಲಸ ಕಳೆದುಕೊಂಡು ಕಂಗಾಲಾಗಿರೋ ಈ 250 ಭಾರತೀಯ ಉದ್ಯೋಗಿಗಳಿಗೆ ನೆರವಾಗಲು ಕಂಪನಿಯು ಭರ್ಜರಿ ‘ಟ್ರಾನ್ಸಿಷನ್ ಪ್ಯಾಕೇಜ್’ (Transition Package) ಒಂದನ್ನು ಅನೌನ್ಸ್ ಮಾಡಿದೆ.
ಸೆವೆರೆನ್ಸ್ ಪೇ (Severance Pay): ಕೆಲಸದಿಂದ ಬಿಡುಗಡೆ ಹೊಂದಿದ ನಂತರವೂ ಉದ್ಯೋಗಿಗಳಿಗೆ ಕೆಲವು ತಿಂಗಳ ಅಡ್ವಾನ್ಸ್ ವೇತನವನ್ನು ಕಂಪನಿ ಕೊಡಲಿದೆ.
ಹೊಸ ಕೆಲಸಕ್ಕೆ ಸಪೋರ್ಟ್: ಲೇ-ಆಫ್ ಆದ ಉದ್ಯೋಗಿಗಳು ಬೇರೆ ಕಂಪನಿಗಳಲ್ಲಿ ಹೊಸ ಕೆಲಸ ಹುಡುಕಾಡಲು ನೆರವಾಗುವಂತೆ 'ಔಟ್‌ಪ್ಲೇಸ್‌ಮೆಂಟ್ ಸರ್ವಿಸಸ್' (Outplacement services) ಮತ್ತು ಅಗತ್ಯವಿರೋ ಬೇರೆ ಬೇರೆ ರಿಸೋರ್ಸ್‌ಗಳನ್ನು ಕಂಪನಿಯೇ ಒದಗಿಸಿಕೊಡುತ್ತಿದೆ. ಇದರಿಂದ ಟೆಕ್ಕಿಗಳಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
I shared this note earlier today with the entire team at Opendoor.
— Kaz Nejatian (@nejatian) June 10, 2026
Today we began to say goodbye to our colleagues in India as we wind down our India operations.
Our customers are in America, and that's where our operational work belongs. pic.twitter.com/Ak2jLxKiX5
ಮ್ಯಾನುಯಲ್ ವರ್ಕ್ ಔಟ್; ಎಐ-ನೇಟಿವ್ ಇನ್
ಇಷ್ಟಕ್ಕೂ ಓಪನ್‌ಡೋರ್ ಕಂಪನಿ ಭಾರತದ ಟೀಮ್ ಅನ್ನು ಯಾವುದಕ್ಕೆ ಬಳಸಿ ಕೊಳ್ತಿತ್ತು ಗೊತ್ತಾ? ಇಷ್ಟು ದಿನ ಕಂಪನಿಯಲ್ಲಿರೋ ಎಲ್ಲಾ ತರಹದ ಮ್ಯಾನುವಲ್ ಕೆಲಸಗಳನ್ನು (ಅಂದರೆ ಮನುಷ್ಯರೇ ಕುಳಿತು ಮಾಡಬೇಕಾದ ಡೇಟಾ ಎಂಟ್ರಿ, ವೆರಿಫಿಕೇಶನ್ ಪ್ರಕ್ರಿಯೆಗಳು) ಭಾರತದ ತಂಡವೇ ನಿಭಾಯಿಸುತ್ತಿತ್ತು. ಆದ್ರೆ ಈಗ ಇಡೀ ಸಿಸ್ಟಮ್ ಅಪ್‌ಗ್ರೇಡ್ ಆಗಿದೆ. ಕಂಪನಿಯು ತನ್ನ ಎಲ್ಲಾ ವ್ಯವಸ್ಥೆಗಳನ್ನು ಏಕೀಕೃತಗೊಳಿಸಿ (Unified Systems), ಅಮೆರಿಕದಲ್ಲೇ ಸಣ್ಣ ಸಣ್ಣ ‘ಎಐ-ನೇಟಿವ್’ (AI-native) ಟೀಮ್‌ಗಳನ್ನು ಬಿಲ್ಡ್ ಮಾಡ್ತಿದೆ.
ಈ ಎಐ-ನೇಟಿವ್ ಅಂದ್ರೆ ಏನಪ್ಪಾ ಅಂದ್ರೆ, ಕಂಪನಿಯ ಇಡೀ ಸಿಸ್ಟಮ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಮೇಲೆಯೇ ರನ್ ಆಗುತ್ತದೆ. ಅಲ್ಲಿ ಕೆಲಸ ಮಾಡೋ ಅಲ್ಪಸ್ವಲ್ಪ ಜನರಿಗೂ ಈ ಎಐ ಪರಿಕರಗಳ (AI Tools) ಸಪೋರ್ಟ್ ಇರುತ್ತದೆ. ಈ ಎಐ ಟೂಲ್ಸ್ ಬಂದ ಮೇಲೆ ನೂರಾರು ಜನ ಮಾಡ್ತಿದ್ದ ಮ್ಯಾನುವಲ್ ಕೆಲಸಗಳನ್ನು ಕಂಪ್ಯೂಟರ್‌ಗಳೇ ಜಸ್ಟ್ ಫ್ಯೂ ಸೆಕೆಂಡ್ಸ್‌ನಲ್ಲಿ ಮುಗಿಸಿಬಿಡುತ್ತಿವೆ. ಹಾಗಾಗಿ ಅಮೆರಿಕದ ಬೇರೆ ಬೇರೆ ಸಿಟಿಗಳಲ್ಲಿ ಸಣ್ಣ ಸಣ್ಣ ಎಐ ಟೀಮ್ ಇಟ್ಟುಕೊಂಡರೆ ಸಾಕು, ಭಾರತದಲ್ಲಿರೋ ದೊಡ್ಡ ಮ್ಯಾನುವಲ್ ಟೀಮ್‌ನ ಅಗತ್ಯವೇ ಇಲ್ಲ ಅಂತ ಕಂಪನಿ ಡಿಸೈಡ್ ಮಾಡಿದೆ.
ಜಾಗತಿಕ ಮಟ್ಟದ ಐಟಿ ಮತ್ತು ಟೆಕ್ ಕಂಪನಿಗಳಲ್ಲಿ ಈಗ ನಡೀತಿರೋ ದೊಡ್ಡ ಬದಲಾವಣೆಗೆ ಈ ಘಟನೆ ಮತ್ತೊಂದು ಸಾಕ್ಷಿ. ಜಗತ್ತಿನಾದ್ಯಂತ ಎಐ ಅಳವಡಿಕೆ ಹೆಚ್ಚಾಗುತ್ತಿದ್ದಂತೆ ಮ್ಯಾನುವಲ್ ಕೆಲಸ ಮಾಡೋ ಉದ್ಯೋಗಿಗಳಿಗೆ ಕಂಟಕ ಎದುರಾಗುತ್ತಲೇ ಇದೆ. ಓಪನ್‌ಡೋರ್‌ನ ಈ ಲೇ-ಆಫ್ ಸ್ಟೋರಿ ಕೂಡ ಅದೇ ಸಾಲಿಗೆ ಸೇರಿದ್ದಾಗಿದ್ದು, ಮುಂಬರುವ ದಿನಗಳಲ್ಲಿ ಟೆಕ್ಕಿಗಳು ತಮ್ಮ ಸ್ಕಿಲ್ಸ್ ಅನ್ನು ಎಐಗೆ ತಕ್ಕಂತೆ ಅಪ್‌ಗ್ರೇಡ್ ಮಾಡಿಕೊಳ್ಳದಿದ್ದರೆ ಇಂತಹ ಗೇಟ್‌ಪಾಸ್ ಭೀತಿ ತಪ್ಪಿದ್ದಲ್ಲ ಅನ್ನೋದು ಮಾತ್ರ ಕಹಿ ಸತ್ಯ.