ಇವತ್ತಿನ ಕಾಲದಲ್ಲಿ ಕೆಲಸ ಇರಲಿ ಅಥವಾ ಓದು ಇರಲಿ, ಹೆಣ್ಣುಮಕ್ಕಳು ಮನೆಯಿಂದ ಹೊರಬಂದು ಸಾಧನೆ ಮಾಡ್ತಿರೋದು ನಮಗೆಲ್ಲಾ ಹೆಮ್ಮೆಯ ವಿಷಯ. ಆದ್ರೆ ಒಂದು ಸಿಟಿಯಲ್ಲಿ ನೆಮ್ಮದಿಯಾಗಿ ಇರಬೇಕು ಅಂದ್ರೆ ಅಲ್ಲಿ ಬರಿ ಕೆಲಸ ಇದ್ರೆ ಸಾಲದು, ಮುಖ್ಯವಾಗಿ ಸುರಕ್ಷತೆ ಇರಬೇಕು ಅಲ್ವಾ? ಇತ್ತೀಚೆಗೆ ಬಿಡುಗಡೆಯಾದ 'ಅವತಾರ್ ಟಾಪ್ ಸಿಟೀಸ್ ಫಾರ್ ವುಮೆನ್' (TCWI) 2026ರ ವರದಿ ಪ್ರಕಾರ, ಭಾರತದ ಯಾವ ನಗರಗಳು ಮಹಿಳೆಯರಿಗೆ ಬೆಸ್ಟ್ ಅನ್ನೋದು ರಿವೀಲ್ ಆಗಿದೆ. ನಮ್ಮ ಹೆಮ್ಮೆಯ ಬೆಂಗಳೂರು ಈ ವರ್ಷವೂ ನಂಬರ್ ಒನ್ ಸ್ಥಾನ ಉಳಿಸಿಕೊಂಡಿರೋದು ವಿಶೇಷ.
ನಮ್ಮ ಬೆಂಗಳೂರು ಯಾಕೆ ಫಸ್ಟ್?
ಬೆಂಗಳೂರು 53.2 ಸ್ಕೋರ್ ತಗೊಂಡು ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣಗಳು ಸಾಕಷ್ಟಿವೆ:
- ಕೆಲಸದ ಅವಕಾಶ: ಇಲ್ಲಿ ಐಟಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಾಕಷ್ಟು ಜಾಬ್ ಆಫರ್ಸ್ ಇವೆ.
- ಸೇಫ್ಟಿ ಫೀಲಿಂಗ್: ಇತರ ಮೆಟ್ರೋ ಸಿಟಿಗಳಿಗೆ ಹೋಲಿಸಿದರೆ ಇಲ್ಲಿ ಓಡಾಡೋದು ಸ್ವಲ್ಪ ಹೆಚ್ಚು ಸೇಫ್ ಅನ್ನೋದು ವರದಿಯ ಅಭಿಪ್ರಾಯ.
- ಸೌಲಭ್ಯಗಳು: ಉತ್ತಮ ಸಾರಿಗೆ ಮತ್ತು ಪೊಲೀಸ್ ವ್ಯವಸ್ಥೆ ಇಲ್ಲಿನ ಮಹಿಳೆಯರಿಗೆ ಜೀವನವನ್ನ ಸುಲಭ ಮಾಡಿದೆ.
ಬೆಂಗಳೂರಿನ ನಂತರ ಚೆನ್ನೈ ಎರಡನೇ ಸ್ಥಾನದಲ್ಲಿದೆ. ಶಿಕ್ಷಣ ಮತ್ತು ಹೆಲ್ತ್‌ಕೇರ್ ವಿಷಯದಲ್ಲಿ ಚೆನ್ನೈ ತುಂಬಾ ಮುಂದುವರಿದಿದ್ದು, ಮಹಿಳೆಯರು ನೆಮ್ಮದಿಯಾಗಿ ಬದುಕಲು ಪೂರಕವಾಗಿದೆ. ಇನ್ನು ಪುಣೆ, ಹೈದರಾಬಾದ್ ಮತ್ತು ಮುಂಬೈ ಟಾಪ್ 5 ರಲ್ಲಿದೆ.
ಗುರ್ಗಾಂವ್ ದೊಡ್ಡ ಜಂಪ್: ಆದ್ರೆ ದೆಹಲಿಗೆ ಯಾಕೆ ಹಿನ್ನಡೆ?
ಈ ವರ್ಷದ ಲಿಸ್ಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಹರಿಯಾಣದ ಗುರ್ಗಾಂವ್. ಹೋದ ಸಲ 9ನೇ ಸ್ಥಾನದಲ್ಲಿದ್ದ ಈ ನಗರ ಈ ಬಾರಿ 6ನೇ ಸ್ಥಾನಕ್ಕೆ ಜಿಗಿದಿದೆ. ಇಲ್ಲಿನ ಕಂಪನಿಗಳು ಮಹಿಳೆಯರಿಗೆ ಹೆಚ್ಚಿನ ಬೆಂಬಲ ಕೊಡ್ತಿರೋದು ಇದಕ್ಕೆ ಮೇನ್ ರೀಸನ್. ಆದ್ರೆ ಒಂದು ಕಹಿ ಸತ್ಯ ಏನಂದ್ರೆ, ದೆಹಲಿ, ಗುರ್ಗಾಂವ್ ಮತ್ತು ನೋಯ್ಡಾದಂತಹ ನಗರಗಳಲ್ಲಿ ಕೆಲಸಗಳು ಸಿಕ್ಕಾಪಟ್ಟೆ ಇವೆ, ಸಂಬಳವೂ ಚೆನ್ನಾಗಿದೆ. ಆದ್ರೆ ಸುರಕ್ಷತೆ, ಟ್ರಾವೆಲಿಂಗ್ ಮತ್ತು ಜೀವನದ ಖರ್ಚು ವಿಷಯಕ್ಕೆ ಬಂದ್ರೆ ಇವು ಇನ್ನು ಹಿಂದೆ ಇವೆ. ಕೆಲಸ ಸಿಕ್ಕಿದ್ರೂ ನೆಮ್ಮದಿಯಾಗಿ ಓಡಾಡೋಕೆ ಭಯ ಆದ್ರೆ ಅದು ಒಳ್ಳೆ ಸಿಟಿ ಅನಿಸಿಕೊಳ್ಳಲ್ಲ ಅಲ್ವಾ?
ದಕ್ಷಿಣ ಭಾರತವೇ ಬೆಸ್ಟ್!
ಈ ವರದಿಯಲ್ಲಿ ಒಂದು ಇಂಟರೆಸ್ಟಿಂಗ್ ವಿಷಯ ಏನಂದ್ರೆ, ಮಹಿಳೆಯರ ವಿಷಯದಲ್ಲಿ ದಕ್ಷಿಣ ಭಾರತದ ನಗರಗಳೇ ಹೆಚ್ಚು ಸ್ಕೋರ್ ಮಾಡಿವೆ. ಸುರಕ್ಷತೆ, ಆರೋಗ್ಯ, ಶಿಕ್ಷಣ ಮತ್ತು ಕೆಲಸ—ಈ ನಾಲ್ಕು ವಿಷಯಗಳನ್ನ ಬ್ಯಾಲೆನ್ಸ್ ಮಾಡೋದ್ರಲ್ಲಿ ಸೌತ್ ಇಂಡಿಯಾ ಮುಂದಿದೆ. ಮಹಿಳೆಯರಿಗೆ ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ, ಸಾಮಾಜಿಕವಾಗಿಯೂ ಗೌರವ ಮತ್ತು ಸೌಲಭ್ಯ ಸಿಗಬೇಕು ಅನ್ನೋದು ಇಲ್ಲಿನ ನಗರಗಳ ಪ್ಲಸ್ ಪಾಯಿಂಟ್.
ಇನ್ನೊಂದು ಖುಷಿಯ ವಿಷಯ ಅಂದ್ರೆ, ಬರಿ ಮೆಟ್ರೋ ನಗರಗಳಷ್ಟೇ ಅಲ್ಲದೆ ಟೈರ್-2 ಅಂದ್ರೆ ಚಿಕ್ಕ ನಗರಗಳೂ ಕೂಡ ಇತ್ತೀಚೆಗೆ ಮಹಿಳಾ ಸ್ನೇಹಿಯಾಗ್ತಿವೆ. ಅಂದ್ರೆ ಬದಲಾವಣೆ ಬರಿ ದೊಡ್ಡ ಸಿಟಿಗಳಿಗೆ ಸೀಮಿತವಾಗಿಲ್ಲ.
ಈ ರ್‍ಯಾಂಕಿಂಗ್ ನೋಡಿದ್ರೆ ಒಂದು ವಿಷಯ ಕ್ಲಿಯರ್ ಆಗುತ್ತೆ—ಯಾವ ಸಿಟಿಯಲ್ಲಿ ಮಹಿಳೆಯರಿಗೆ ಗೌರವ ಮತ್ತು ರಕ್ಷಣೆ ಸಿಗುತ್ತೋ ಆ ಸಿಟಿ ಮಾತ್ರ ನಿಜವಾದ ಪ್ರಗತಿ ಸಾಧಿಸುತ್ತೆ. ಮುಂಬೈನಂತಹ ನಗರದಲ್ಲಿ ಕೆಲಸಗಳು ಬೇಕಾದಷ್ಟಿವೆ, ಆದ್ರೆ ಇರೋಕೆ ಹೌಸಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಸಮಸ್ಯೆ ಇದೆ. ಹೈದರಾಬಾದ್ ಮತ್ತು ಪುಣೆಯಲ್ಲಿ ಎರಡೂ ಬ್ಯಾಲೆನ್ಸ್ ಆಗಿದೆ.