Apr 18, 2026 Languages : ಕನ್ನಡ | English

TCS ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಇದರ ಹಿಂದೆ ಇರೋದು ಲವ್ ಜಿಹಾದೋ ಅಥವಾ ದೊಡ್ಡವರ ಕಾಮಕಾಂಡವೋ?

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 'ಟಿಸಿಎಸ್ ಲವ್ ಜಿಹಾದ್' ಅನ್ನೋ ವಿಷಯ ಎಷ್ಟು ಗಲಾಟೆ ಮಾಡ್ತಿದೆ ಅಂತ ನಿಮಗೆ ಗೊತ್ತೇ ಇದೆ. ನಾಸಿಕ್ ಟಿಸಿಎಸ್ ಆಫೀಸ್‌ನಲ್ಲಿ ಮತಾಂತರ ಮತ್ತು ಕಿರುಕುಳ ನಡೀತಿದೆ ಅಂತ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಈಗ ಈ ಕೇಸ್‌ಗೆ ಸಖತ್ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ! "ಇದೆಲ್ಲಾ ಸುಳ್ಳು, ಇದೊಂದು ದೊಡ್ಡ ಪ್ಲಾನ್" ಅಂತ ಪ್ರಮುಖ ಆರೋಪಿ ನಿದಾ ಖಾನ್ ಮನೆಯವರು ಬಾಂಬ್ ಸಿಡಿಸಿದ್ದಾರೆ.

ದೇವಮಾನವನ ಸೆಕ್ಸ್ ಸ್ಕ್ಯಾಂಡಲ್ ಮುಚ್ಚಿಹಾಕಲು ಟಿಸಿಎಸ್
ದೇವಮಾನವನ ಸೆಕ್ಸ್ ಸ್ಕ್ಯಾಂಡಲ್ ಮುಚ್ಚಿಹಾಕಲು ಟಿಸಿಎಸ್

ಅಸಲಿ ಮ್ಯಾಟರ್ ಏನು?

ಆರೋಪಿ ನಿದಾ ಖಾನ್ ಕುಟುಂಬದವರು ಹೇಳ್ತಿರೋದು ಕೇಳಿದ್ರೆ ದಂಗಾಗ್ತೀರಾ. ಅವರ ಪ್ರಕಾರ, ನಾಸಿಕ್‌ನಲ್ಲಿ ಅಶೋಕ್ ಖರತ್ ಅನ್ನೋ ಸೆಲ್ಫ್ ಡಿಕ್ಲೇರ್ಡ್ ದೇವಮಾನವನ ಸೆಕ್ಸ್ ವಿಡಿಯೋ ಹಗರಣ ಇಡೀ ಮಹಾರಾಷ್ಟ್ರವನ್ನೇ ನಡುಗಿಸಿತ್ತು. ಅದರಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಶ್ರೀಮಂತರ ಹೆಸರು ಕೇಳಿಬಂದಿತ್ತು. ಈ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಟಿಸಿಎಸ್ ಕೇಸನ್ನ ಕ್ರಿಯೇಟ್ ಮಾಡಿದ್ದಾರೆ ಅನ್ನೋದು ಇವರ ವಾದ.

"ದೊಡ್ಡವರನ್ನು ಉಳಿಸಲು ನಮ್ಮವರನ್ನ ಬಲಿ ಕೊಡ್ತಿದ್ದಾರೆ"
ನಿದಾ ಖಾನ್ ತಂದೆ ಮತ್ತು ಮನೆಯವರು ತುಂಬಾನೇ ಆಕ್ರೋಶ ಹೊರಹಾಕಿದ್ದಾರೆ. "ಆ ದೇವಮಾನವನ ಗಲೀಜು ಕೆಲಸದಲ್ಲಿ ಪ್ರಭಾವಿ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ. ಅವರನ್ನ ಕಾಪಾಡೋಕೆ ನಮ್ಮ ಮಕ್ಕಳನ್ನ ಸುಳ್ಳು ಕೇಸ್‌ನಲ್ಲಿ ಸಿಕ್ಕಿಸಿ ರಾಜಕೀಯ ಮಾಡ್ತಿದ್ದಾರೆ. ಒಂದು ಸಮುದಾಯವನ್ನ ಗುರಿ ಮಾಡಿಕೊಂಡು ಯುವಕರ ಕೆರಿಯರ್ ಹಾಳು ಮಾಡೋಕೆ ಈ ರೀತಿ ಪ್ಲಾನ್ ಮಾಡಿದ್ದಾರೆ," ಅಂತ ಅಳಲು ತೋಡಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳೇ ಜಾಸ್ತಿ?

ಮೊದಲು ಬಂದ ರಿಪೋರ್ಟ್ಸ್‌ನಲ್ಲಿ ನಿದಾ ಖಾನ್ ಟಿಸಿಎಸ್‌ನ ದೊಡ್ಡ ಹೆಚ್‌ಆರ್ (HR) ಹೆಡ್ ಅಂತ ಹೇಳಲಾಗಿತ್ತು. ಆದ್ರೆ ಟಿಸಿಎಸ್ ಕಂಪನಿಯೇ ಕ್ಲಾರಿಟಿ ಕೊಟ್ಟಿದ್ದು, "ಆಕೆ ಅಂತಹ ಯಾವುದೇ ದೊಡ್ಡ ಹುದ್ದೆಯಲ್ಲೂ ಇರಲಿಲ್ಲ, ಅಷ್ಟು ಪವರ್ ಕೂಡ ಅವಳಿಗೆ ಇರಲಿಲ್ಲ" ಅಂತ ಹೇಳಿದೆ. ಇದನ್ನೇ ಇಟ್ಟುಕೊಂಡು ನಿದಾ ತಂದೆ, "ನನ್ನ ಮಗಳ ಬಗ್ಗೆ ಸುಳ್ಳು ಪ್ರಚಾರ ಮಾಡಿ ಸರ್ಕಾರಕ್ಕೆ ಬಂದಿರೋ ಕೆಟ್ಟ ಹೆಸರನ್ನ ಮುಚ್ಚಿ ಹಾಕೋಕೆ ಈ ನಾಟಕ ಮಾಡ್ತಿದ್ದಾರೆ" ಅಂತ ಕಿಡಿಕಾರಿದ್ದಾರೆ.

ಸದ್ಯಕ್ಕಂತೂ ಈ ಕೇಸ್ ಫುಲ್ ಕನ್‌ಫ್ಯೂಸ್ ಆಗಿದೆ. ಒಂದು ಕಡೆ ಮತಾಂತರದ ಆರೋಪ ಇದ್ರೆ, ಇನ್ನೊಂದು ಕಡೆ ಸೆಕ್ಸ್ ಸ್ಕ್ಯಾಂಡಲ್ ಮುಚ್ಚಿಹಾಕುವ ಸಂಚು ಅನ್ನೋ ಮಾತು ಕೇಳಿಬರ್ತಿದೆ. ಅಷ್ಟಕ್ಕೂ ನಡೀತಿರೋದು ಏನು? ನಿಜವಾಗಿಯೂ ಅಲ್ಲಿ ಅನ್ಯಾಯ ಆಗಿದ್ಯಾ ಅಥವಾ ಅಮಾಯಕರನ್ನ ಸಿಕ್ಕಿಸಲಾಗ್ತಿದ್ಯಾ? ಅನ್ನೋದು ಪೊಲೀಸ್ ತನಿಖೆಯಲ್ಲೇ ಬಯಲಾಗಬೇಕಿದೆ.