Mar 3, 2026 Languages : ಕನ್ನಡ | English

ರಾತ್ರಿಯೇ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆ - ಅದನ್ನು ತಂದ ಡೆಲಿವರಿ ಹುಡುಗ ಮಾಡಿದ ಕೆಲಸ ನೋಡಿ!!

ನಿಜ ಜೀವನದ ಹೀರೋಗಳು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ತಮಿಳುನಾಡಿನ ಒಬ್ಬ ಮಹಿಳೆಯ ಪಾಲಿಗೆ, ಒಬ್ಬ ಬ್ಲಿಂಕಿಟ್ ಡೆಲಿವರಿ ಬಾಯ್ ಅವಳ ಪ್ರಾಣ ಕಾಪಾಡಿದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಸಿನಿಮಾ ಡೈಲಾಗ್ ಅಥವಾ ಸೂಪರ್ ಪವರ್ ಇಲ್ಲದೆ, ಕೇವಲ ಮಾನವೀಯತೆಯಿಂದ ತುಂಬಿದ ಅವರ ಒಂದೇ ಒಂದು ನಿರ್ಧಾರ ಒಂದು ದುರಂತವನ್ನು ತಡೆಗಟ್ಟಿತು. ಘಟನೆ ಎಂದರೆ, ಒಬ್ಬ ಮಹಿಳೆ ತಡರಾತ್ರಿ 3 ಪ್ಯಾಕೆಟ್ ಇಲಿ ಪಾಷಾಣವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಇಷ್ಟು ರಾತ್ರಿ ವೇಳೆ ಇಲಿ ಪಾಷಾಣದ ಆರ್ಡರ್ ಬರುತ್ತದೇನು ಎಂಬ ಅನುಮಾನಕ್ಕೆ ಒಳಗಾದ ಡೆಲಿವರಿ ಬಾಯ್, ಆ ಆರ್ಡರ್ ಅನ್ನು ಡೆಲಿವರಿ ಮಾಡಲು ನಿರಾಕರಿಸಿದರು. ಈ ಸೂಕ್ಷ್ಮಪರಿಗಣನೆಯೇ ಆ ಮಹಿಳೆಯ ಜೀವ ಉಳಿಯಲಿನ ಕಾರಣವಾಯಿತು.

ಮಹಿಳೆಯ ಜೀವ ಉಳಿಸಿದ ಮಾನವೀಯತೆ – ತಮಿಳುನಾಡಿನ ಘಟನೆ
ಮಹಿಳೆಯ ಜೀವ ಉಳಿಸಿದ ಮಾನವೀಯತೆ – ತಮಿಳುನಾಡಿನ ಘಟನೆ

ಡೆಲಿವರಿ ಬಾಯ್ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. "ಒಟ್ಟು 3 ಇಲಿ ಪಾಯ್ಸನ್ ಪ್ಯಾಕೆಟ್ ಆರ್ಡರ್ ಮಾಡಿದ್ದರು. ಅವರು ಅದನ್ನು ಆರ್ಡರ್ ಮಾಡಿದಾಗ ಅವರು ಏನು ಯೋಚಿಸುತ್ತಿದ್ದರು ಎಂದು ನನಗೆ ತಿಳಿದಿರಲಿಲ್ಲ. ಆದರೆ ಡೆಲಿವರಿ ನೀಡಲು ಹೋದಾಗ ಅವರು ತುಂಬಾ ಅಳುತ್ತಿರುವುದನ್ನು ನೋಡಿ, ಏನೋ ಸಮಸ್ಯೆ ಇದೆ ಎಂದು ಅನಿಸಿತು," ಎಂದು ಅವರು ವಿವರಿಸಿದ್ದಾರೆ.

ಆ ಸಮಯದಲ್ಲಿ ಅವರು ಆ ಮಹಿಳೆಯನ್ನು ನೇರವಾಗಿ ಕೇಳಿದ ಪ್ರಶ್ನೆಗಳು ಮುಖ್ಯವಾದವು. "ನೀವು ಆತ್ಮಹತ್ಯೆ ಮಾಡಿಕೊಳ್ಳಲು ಇದನ್ನು ಆರ್ಡರ್ ಮಾಡಿದ್ದೀರಾ? ನಿಮಗೆ ನಿಜಕ್ಕೂ ಮನೆಯಲ್ಲಿ ಇಲಿಯ ಸಮಸ್ಯೆ ಇದ್ದರೆ, ಸಂಜೆಯೇ ಅಥವಾ ನಾಳೆ ಬೆಳಗ್ಗೆ ಆರ್ಡರ್ ಮಾಡಬಹುದಿತ್ತು. ಇಷ್ಟು ರಾತ್ರಿ ವೇಳೆ ಯಾಕೆ?" ಇಂತಹ ವಿಚಾರಣೆ ಮತ್ತು ಮನವೊಲಿಸುವ ಪ್ರಯತ್ನದ ನಂತರ, ಅಂತಿಮವಾಗಿ ಆರ್ಡರ್ ರದ್ದಾಯಿತು. "ಆಕೆಯ ಜೀವ ಉಳಿಸಿದ ತೃಪ್ತಿ ನನಗಿದೆ," ಎಂದು ಡೆಲಿವರಿ ಬಾಯ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಈ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ಮತ್ತು ಪ್ರಶಂಸೆ ಸಿಕ್ಕಿದೆ.

ಒಟ್ಟಾರೆ, ಸಾಮಾನ್ಯ ವ್ಯಕ್ತಿಯ ಜಾಗೃತಿ ಮತ್ತು ಮನುಷ್ಯತ್ವದಿಂದ ತುಂಬಿದ ಒಂದು ನಿರ್ಧಾರ, ಒಬ್ಬರ ಬದುಕನ್ನು ಮಾರ್ಗದರ್ಶನ ಮಾಡಬಹುದು ಎಂಬುದು ಈ ಘಟನೆಯ ಸಾರಾಂಶ. ಕೆಲವೊಮ್ಮೆ ನಮ್ಮ ಬದುಕಿನ ಹೀರೋಗಳು ಯಾವುದೇ ಅದ್ಭುತ ರೂಪದಲ್ಲಿ ಬರದೆ, ಒಬ್ಬ ಡೆಲಿವರಿ ಸಹಾಯಕರ ರೂಪದಲ್ಲಿ ಬಂದು, ಒಂದು ಜೀವವನ್ನು ರಕ್ಷಿಸಿ ಹೋಗಬಹುದು.

Latest News