May 4, 2026 Languages : ಕನ್ನಡ | English

ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ದಿನಕ್ಕೊಂದು ಆಕ್ಸಿಡೆಂಟ್ - ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸವಾರರು ಬಲಿ!!

ಬೆಂಗಳೂರು ಅಂದಮೇಲೆ ಟ್ರಾಫಿಕ್ ಕಾಮನ್. ಅದರಲ್ಲೂ ಸಿಲ್ಕ್ ಬೋರ್ಡ್ ಹೆಸರು ಕೇಳಿದ್ರೆ ಸಾಕು, ವಾಹನ ಸವಾರರ ಮೈ ಬೆವರುತ್ತೆ. ಇದೇ ಟ್ರಾಫಿಕ್ ಕಮ್ಮಿ ಮಾಡೋಕೆ ಅಂತ ಸರ್ಕಾರ ಮಸ್ತ್ ಪ್ಲಾನ್ ಮಾಡಿ, ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 449 ಕೋಟಿ ರೂಪಾಯಿ ಖರ್ಚು ಮಾಡಿ ಈ ‘ಡಬಲ್ ಡೆಕ್ಕರ್ ಫ್ಲೈಓವರ್’ ಕಟ್ಟಿತು. ಆದ್ರೆ ಏನೂ ಪ್ರಯೋಜನ? ಈಗ ಈ ಫ್ಲೈಓವರ್ ಸವಾರರಿಗೆ ಸಂಕಷ್ಟ ತಂದಿಟ್ಟಿದೆ.

450 ಕೋಟಿ ಖರ್ಚು ಮಾಡಿದ್ರೂ ತಪ್ಪಿಲ್ಲ ಟೆನ್ಷನ್
450 ಕೋಟಿ ಖರ್ಚು ಮಾಡಿದ್ರೂ ತಪ್ಪಿಲ್ಲ ಟೆನ್ಷನ್

ಫ್ಲೈಓವರ್ ಮೇಲೆ ಗಾಡಿ ಓಡಿಸೋದು ಅಂದ್ರೆ ಅದು ಸ್ಮೂತ್ ಆಗಿರಬೇಕು. ಆದ್ರೆ ಇಲ್ಲಿ ಸವಾರರಿಗೆ ದಿನಾ ಫ್ರೀಯಾಗಿ ಅಡ್ವೆಂಚರ್ ಸಿಗುತ್ತಿದೆ! ಕಾರಣ ಇಲ್ಲಿನ ಅವೈಜ್ಞಾನಿಕ ಕಾಮಗಾರಿ. ಫ್ಲೈಓವರ್ ಮೇಲೆ ಪಾದಚಾರಿಗಳಿಗಾಗಿ ಸಣ್ಣದೊಂದು ಕಟ್ಟೆ (ಫುಟ್ ಪಾತ್) ಕಟ್ಟಲಾಗಿದೆ. ಗಾಡಿ ಓಡಿಸುವಾಗ ಈ ಕಟ್ಟೆ ಸವಾರರ ಕಣ್ಣಿಗೆ ಸರಿಯಾಗಿ ಕಾಣಿಸೋದಿಲ್ಲ. ವೇಗವಾಗಿ ಬರುವ ವಾಹನಗಳು ಗೊತ್ತಿಲ್ಲದೆ ಆ ಕಟ್ಟೆ ಮೇಲೆ ಹತ್ತಿ ನಿಯಂತ್ರಣ ತಪ್ಪಿ ಸ್ಕಿಡ್ ಆಗುತ್ತಿವೆ.

ಸವಾರರ ಆಕ್ರೋಶಕ್ಕೆ ಮುಖ್ಯ ಕಾರಣಗಳೆಂದರೆ:

ಸೂಚನಾ ಫಲಕಗಳೇ ಇಲ್ಲ: "ಇಲ್ಲಿ ಫುಟ್ ಪಾತ್ ಇದೆ ನೋಡಿ" ಅಂತ ಹೇಳೋಕೆ ಒಂದು ಬೋರ್ಡ್ ಕೂಡ ಇಲ್ಲ.

ಕಾಣದ ಕಟ್ಟೆ: ಈ ಕಟ್ಟೆಗೆ ಅಟ್ಲೀಸ್ಟ್ ರೇಡಿಯಂ ಸ್ಟಿಕ್ಕರ್ ಹಾಕಿದ್ದರೂ ಅಥವಾ ವೈಟ್ ಪೈಂಟ್ ಬಳಿದಿದ್ದರೂ ರಾತ್ರಿ ವೇಳೆ ಕಾಣಿಸುತ್ತಿತ್ತು. ಅದನ್ನೂ ಮಾಡದ ಕಾರಣ ಪ್ರತಿದಿನ ಒಂದಲ್ಲ ಒಂದು ಆಕ್ಸಿಡೆಂಟ್ ಆಗುತ್ತಲೇ ಇದೆ.

ಟ್ರಾಫಿಕ್ ಕಮ್ಮಿ ಆಯ್ತಾ? ಛಾನ್ಸೇ ಇಲ್ಲ!

ಸಿಲ್ಕ್ ಬೋರ್ಡ್ ಟ್ರಾಫಿಕ್ ಕಮ್ಮಿ ಆಗುತ್ತೆ ಅಂತ ಫ್ಲೈಓವರ್ ಮೇಲೆ ಹತ್ತಿದ್ರೆ, ಅಲ್ಲೂ ಟ್ರಾಫಿಕ್ ಜಾಮ್! ರಾಗಿಗುಡ್ಡ ಹತ್ತಿರದ ಸರ್ಕಸ್ ನೋಡಿ ಸವಾರರು "ಇದಕ್ಕಿಂತ ಕೆಳಗಡೆ ರೋಡ್‌ನಲ್ಲೇ ಹೋಗಿದ್ರೆ ವಾಸಿ ಇತ್ತು" ಅಂತ ಅಲವತ್ತುಕೊಳ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಂತೂ ಈ ಫ್ಲೈಓವರ್ ಮೇಲಕ್ಕೆ ಬರಲೇಬೇಡಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಫ್ಲೈಓವರ್ ಡಿಟೇಲ್ಸ್:

ವೆಚ್ಚ: ₹449 ಕೋಟಿ

ಒಟ್ಟು ಉದ್ದ: 3.36 ಕಿಮೀ (ಲೂಪ್ ಮತ್ತು ಇಳಿಜಾರು ಸೇರಿ 5.12 ಕಿಮೀ)

ಪರಿಸ್ಥಿತಿ: ವಾರದ ಹಿಂದೆಯಷ್ಟೇ ಪೂರ್ಣ ಪ್ರಮಾಣದ ಸಂಚಾರಕ್ಕೆ ಮುಕ್ತವಾಗಿದ್ದರೂ, ಈಗ ದೂರುಗಳ ಸರಮಾಲೆ ಕೇಳಿಬರುತ್ತಿದೆ.

ಸವಾರರ ಬೇಡಿಕೆ

ದುಡ್ಡು ಕೊಟ್ಟು ರೋಡ್ ಟ್ಯಾಕ್ಸ್ ಕಟ್ಟೋ ನಮಗೆ ಸೇಫ್ಟಿ ಬೇಡವಾ? ಅನ್ನೋದು ಜನರ ಪ್ರಶ್ನೆ. ಕೂಡಲೇ ಬಿಬಿಎಂಪಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು:

  • ಆ ಅಪಾಯಕಾರಿ ಕಟ್ಟೆಗಳಿಗೆ ಬಣ್ಣ ಬಳಿಯಬೇಕು.
  • ಅಪಘಾತ ವಲಯಗಳಲ್ಲಿ ಸರಿಯಾದ ಸೂಚನಾ ಫಲಕಗಳನ್ನು ಹಾಕಬೇಕು.
  • ಅವೈಜ್ಞಾನಿಕವಾಗಿರುವ ತಿರುವು ಅಥವಾ ಕಟ್ಟೆಗಳನ್ನು ಸರಿಪಡಿಸಬೇಕು.

450 ಕೋಟಿ ಸುರಿದ ಮೇಲೂ ಸವಾರರು ನೆಮ್ಮದಿಯಾಗಿ ಗಾಡಿ ಓಡಿಸೋಕೆ ಆಗ್ತಿಲ್ಲ ಅಂದ್ರೆ ಇದು ಯಾರ ತಪ್ಪು? "ಡಬಲ್ ಡೆಕ್ಕರ್ ಫ್ಲೈಓವರ್ ಅಂದ್ರೆ ಡಬಲ್ ಖುಷಿ ಸಿಗುತ್ತೆ ಅನ್ಕೊಂಡಿದ್ವಿ, ಆದ್ರೆ ಇಲ್ಲಿರೋದು ಬರೀ ಡಬಲ್ ಟೆನ್ಷನ್" ಅಂತಿದ್ದಾರೆ ಬೆಂಗಳೂರು ಮಂದಿ!

Latest News