Apr 21, 2026 Languages : ಕನ್ನಡ | English

ಸೊಳ್ಳೆಗಳ ಕಾಟಕ್ಕೆ ಸೆಕ್ಯೂರಿಟಿ ಗಾರ್ಡ್‌ಗಳ 'ನೆಟ್' ಐಡಿಯಾ - ಬಂದಿದೆ ಹೊಸ 'ಸೊಳ್ಳೆ ಪರದೆ ಡ್ರೆಸ್' - ವೈರಲ್ ಆದ ವಿಚಿತ್ರ ದೃಶ್ಯ!!

ರಾತ್ರಿ ಹೊತ್ತು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಬೇಕಾದ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಈಗ ದೊಡ್ಡ ವಿಲನ್ ಅಂದ್ರೆ ಅದು ಸೊಳ್ಳೆಗಳೇ. ಈ ಸೊಳ್ಳೆಗಳ ಕಾಟ ತಡೆಯೋಕೆ ಆಗದೇ ಪಾಪ ಅವರು ಒಂದು ವಿಚಿತ್ರ ಉಪಾಯ ಮಾಡಿಕೊಂಡಿದ್ದಾರೆ. ಅದೇನಪ್ಪಾ ಅಂದ್ರೆ, ನೈಟ್ ಡ್ಯೂಟಿ ಮಾಡುವಾಗ ಮೈಮೇಲೆ ಸೊಳ್ಳೆ ಪರದೆಯನ್ನೇ (Mosquito Nets) ಹೊದ್ದುಕೊಂಡು ಓಡಾಡುತ್ತಿದ್ದಾರೆ!

ಮೈಮೇಲೆ ಪರದೆ ಹೊದ್ದೇ ನೈಟ್ ಡ್ಯೂಟಿ
ಮೈಮೇಲೆ ಪರದೆ ಹೊದ್ದೇ ನೈಟ್ ಡ್ಯೂಟಿ

ನೋಡೋಕೆ ಇದು ಸ್ವಲ್ಪ ತಮಾಷೆಯಾಗಿ ಕಂಡ್ರೂ, ಅದರ ಹಿಂದಿರೋ ಕಷ್ಟ ಮಾತ್ರ ದೊಡ್ಡದು. ಸೊಳ್ಳೆ ಬತ್ತಿ ಹಚ್ಚಿದ್ರೂ ಕೆಲಸ ಆಗ್ತಿಲ್ಲ, ಕ್ರೀಮ್ ಹಚ್ಚಿಕೊಂಡ್ರೂ ಪ್ರಯೋಜನ ಇಲ್ಲ. ಹಾಗಾಗಿ ಬೇರೆ ದಾರಿ ಇಲ್ಲದೆ ಈ 'ನೆಟ್ ಡ್ರೆಸ್' ಮೊರೆ ಹೋಗಿದ್ದಾರೆ.

ಇದು ಕೇವಲ ಹೈದರಾಬಾದ್ ಕಥೆಯಲ್ಲ..

ಬರೀ ಹೈದರಾಬಾದ್ ಅಂತ ಯಾಕೆ, ನಮ್ಮ ಬೆಂಗಳೂರಿನಲ್ಲೂ ಪರಿಸ್ಥಿತಿ ಏನು ಭಿನ್ನವಾಗಿಲ್ಲ ಬಿಡಿ. ಸರಿಯಾಗಿ ಚರಂಡಿ ಕ್ಲೀನ್ ಇಲ್ಲದೆ, ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆಗಳ ಸಾಮ್ರಾಜ್ಯವೇ ಸೃಷ್ಟಿಯಾಗಿದೆ. ರಾತ್ರಿ ಹೊತ್ತು ಆಚೆ ಬಂದ್ರೆ ಸಾಕು, ಸೊಳ್ಳೆಗಳು ನಮ್ಮನ್ನ "ಪಾರ್ಟಿ" ಮಾಡೋಕೆ ಶುರು ಮಾಡ್ತಾವೆ.

ಸೊಳ್ಳೆಗಳಿಂದ ಬರೋ ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ

ಈ ಸೊಳ್ಳೆಗಳ ಕಾಟ ಬರೀ ತುರಿಕೆ ಅಥವಾ ನಿದ್ದೆ ಹಾಳು ಮಾಡೋದಕ್ಕೆ ಸೀಮಿತವಾಗಿಲ್ಲ. ಇವುಗಳಿಂದ ಬರೋ ಕಾಯಿಲೆಗಳ ಪಟ್ಟಿ ದೊಡ್ಡದಿದೆ:

ಡೆಂಗ್ಯೂ: ಇದು ಈಗ ಸಿಕ್ಕಾಪಟ್ಟೆ ಜಾಸ್ತಿಯಾಗ್ತಿದೆ. ಪ್ಲೇಟ್‌ಲೆಟ್ಸ್ ಕಮ್ಮಿ ಮಾಡಿ ಆಸ್ಪತ್ರೆಗೆ ಸೇರಿಸುತ್ತೆ.

ಮಲೇರಿಯಾ: ಮಳೆಗಾಲ ಬಂದ್ರೆ ಸಾಕು ಈ ಜ್ವರ ಕಾಟ ಶುರು.

ಚಿಕನ್ ಗುನ್ಯ: ಮೈ ಕೈ ನೋವು ತಡೆಯೋಕೆ ಆಗಲ್ಲಪ್ಪಾ ಇದು ಬಂದ್ರೆ.

ನಾವು ಏನು ಮಾಡಬಹುದು?

ಕೇವಲ ಸೆಕ್ಯೂರಿಟಿ ಗಾರ್ಡ್‌ಗಳನ್ನ ನೋಡಿ ನಗೋದಲ್ಲ, ನಮ್ಮ ಸುತ್ತಮುತ್ತಲಿನ ಪರಿಸರವನ್ನ ನಾವು ಹೇಗೆ ಇಟ್ಕೋಬೇಕು ಅನ್ನೋದು ಮುಖ್ಯ.

ಮನೆಯ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಿ.

ಹಳೆ ಟೈರ್, ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ರೆ ಕೂಡಲೇ ಚೆಲ್ಲಿ.

ಸಂಜೆ ಹೊತ್ತು ಕಿಟಕಿಗಳನ್ನ ಮುಚ್ಚಿಡಿ.

ನಾವು ಎಷ್ಟೇ ಐಟಿ-ಬಿಟಿ ಅಂತ ಮುಂದುವರೆದರೂ, ಒಂದು ಪುಟ್ಟ ಸೊಳ್ಳೆಯನ್ನ ನಿಯಂತ್ರಣ ಮಾಡೋಕೆ ನಮಗೆ ಇನ್ನು ಸಾಧ್ಯವಾಗ್ತಿಲ್ಲ ಅನ್ನೋದೇ ದೊಡ್ಡ ಬೇಸರದ ಸಂಗತಿ.