Apr 20, 2026 Languages : ಕನ್ನಡ | English

ತಾಯಿಯಿಂದಲೇ ಕೆಲಸ ಹೊಯ್ತು ಎಂದು ಈ ಮಹಾಶಯ ತಾಯಿಗೆ ಏನು ಮಾಡಿದ್ದಾನೆ ನೋಡಿ - ಬೆಚ್ಚಿದ ಬೆಂಗಳೂರು ಜನತೆ!!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ಷರಶಃ ಎದೆ ನಡುಗುವಂತಹ ಘಟನೆಯೊಂದು ನಡೆದಿದೆ. ಜನ್ಮ ನೀಡಿದ ತಾಯಿಯನ್ನೇ ಮಗನೊಬ್ಬ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಎಸೆದು ಸಾಯಿಸಿರೋ ಘಟನೆ ರಾಜರಾಜೇಶ್ವರಿ ನಗರದ ಬಿ.ಇ.ಎಂ.ಎಲ್ ಲೇಔಟ್‌ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 75 ವರ್ಷದ ತಾಯಿಯನ್ನೇ ಮಗ ಕೊಂ*ದಿರೋದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.

ತಾಯಿಯನ್ನು ನಾಲ್ಕನೇ ಮಹಡಿಯಿಂದ ಎಸೆದ ಮಗ; | Photo Credit: https://x.com/HateDetectors
ತಾಯಿಯನ್ನು ನಾಲ್ಕನೇ ಮಹಡಿಯಿಂದ ಎಸೆದ ಮಗ; | Photo Credit: https://x.com/HateDetectors

ಮೃತ ದುರ್ದೈವಿಯನ್ನು ಸಾವಿತ್ರಮ್ಮ (75) ಎಂದು ಗುರುತಿಸಲಾಗಿದೆ. ಹ*ತ್ಯೆ ಮಾಡಿದ ಆರೋಪಿ ಮಗ ವೆಂಕಟೇಶ್ (ಅಲಿಯಾಸ್ ದಶರಥ್) ಎಂಬಾತನನ್ನು ಪೊಲೀಸರು ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ವೆಂಕಟೇಶ್ ತನ್ನ ಪತ್ನಿಯ ಜೊತೆ ಆರ್.ಆರ್ ನಗರದ ಮನೆಯೊಂದರ ಮೊದಲ ಮಹಡಿಯಲ್ಲಿ ವಾಸವಾಗಿದ್ದ. ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಹಾಸಿಗೆ ಹಿಡಿದಿದ್ದ ತಾಯಿಯನ್ನು ಎತ್ತಿಕೊಂಡು ನಾಲ್ಕನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಕ್ಕೆ ಎಸೆದಿದ್ದಾನೆ. ತೀವ್ರವಾಗಿ ಪೆಟ್ಟು ಬಿದ್ದ ಸಾವಿತ್ರಮ್ಮ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಆ ಮನೆಯ ಮಾಲೀಕ ವಿಕ್ರಮ್ ಅವರು ಗ್ರೌಂಡ್ ಫ್ಲೋರ್‌ನಲ್ಲಿ ವಾಸವಾಗಿದ್ದರು. ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಕಟ್ಟಡದ ಹಿಂಭಾಗದಲ್ಲಿ ಏನೋ ಜೋರಾಗಿ ಬಿದ್ದ ಸದ್ದು ಕೇಳಿಸಿದೆ. ಏನು ಅಂತ ಹೋಗಿ ನೋಡಿದಾಗ ಸಾವಿತ್ರಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ತಾಯಿಯನ್ನು ಕೆಳಕ್ಕೆ ಎಸೆದ ಮಗ ವೆಂಕಟೇಶ್, ಸುಮ್ಮನೆ ವಾಪಸ್ ತನ್ನ ಮನೆಗೆ ಬಂದು ಬಾಗಿಲು ಹಾಕಿಕೊಂಡು ಕುಳಿತಿದ್ದ ಎನ್ನಲಾಗಿದೆ.

ಪೊಲೀಸ್ ವಿಚಾರಣೆಯಲ್ಲಿ ವೆಂಕಟೇಶ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. "ಸುಮಾರು 10 ವರ್ಷಗಳ ಹಿಂದೆ ತಂದೆ ತೀರಿಹೋದರು, ಅಂದಿನಿಂದ ನಾನೇ ತಾಯಿಯನ್ನು ನೋಡಿಕೊಳ್ಳುತ್ತಿದ್ದೆ. 5 ವರ್ಷಗಳ ಹಿಂದೆ ಅವಳಿಗೆ ಸ್ಟ್ರೋಕ್ ಆಗಿ ಪಾರ್ಶ್ವವಾಯು ಬಂತು. ಅವಳು ಹಾಸಿಗೆ ಹಿಡಿದಿದ್ದರಿಂದ ಅವಳನ್ನು ನೋಡಿಕೊಳ್ಳಲೆಂದೇ ನಾನು ಕೆಲಸ ಬಿಡಬೇಕಾಗಿ ಬಂತು. ದಿನ ಕಳೆದಂತೆ ಆರ್ಥಿಕ ಸಮಸ್ಯೆ ಹೆಚ್ಚಾಯಿತು, ಅವಳು ಚೇತರಿಸಿಕೊಳ್ಳುವ ಲಕ್ಷಣಗಳೂ ಕಾಣಲಿಲ್ಲ. ಜೀವನ ಅಕ್ಷರಶಃ ನರಕವಾಗಿತ್ತು" ಎಂದು ವೆಂಕಟೇಶ್ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.

ವೆಂಕಟೇಶ್ ಶೋರೂಂ ಒಂದರಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ, ಆತನ ಪತ್ನಿ ಕ್ಲಿನಿಕ್ ಒಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದಾಗ ಪತ್ನಿ ಕೆಲಸಕ್ಕೆ ಹೋಗಿದ್ದರು. ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಮತ್ತು ಹಣಕಾಸಿನ ಮುಗ್ಗಟ್ಟು ವೆಂಕಟೇಶ್‌ನನ್ನು ಮಾನಸಿಕವಾಗಿ ಜರ್ಜರಿತಗೊಳಿಸಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಎಷ್ಟೇ ಕಷ್ಟವಿದ್ದರೂ ಹೆತ್ತ ತಾಯಿಯನ್ನು ಈ ರೀತಿ ಕೊ*ಲೆ ಮಾಡಿದ್ದು ನಿಜಕ್ಕೂ ಅಕ್ಷಮ್ಯ ಅಪರಾಧ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಆರ್.ಆರ್. ನಗರ ಪೊಲೀಸರು ವೆಂಕಟೇಶ್‌ನನ್ನು ಕಸ್ಟಡಿಗೆ ತಗೊಂಡಿದ್ದಾರೆ. ಕೊ*ಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೀತಿದೆ. ಈ ಘಟನೆ ಬೆಂಗಳೂರಿನಲ್ಲಿ ಪೋಷಕರ ಆರೈಕೆಯ ಬಗ್ಗೆ ಮತ್ತು ವಯಸ್ಸಾದವರ ಸುರಕ್ಷತೆಯ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಎಷ್ಟೇ ಆರ್ಥಿಕ ಸಮಸ್ಯೆ ಇರಲಿ ಅಥವಾ ಮಾನಸಿಕ ಒತ್ತಡ ಇರಲಿ, ಅದಕ್ಕೆ ಕೊ*ಲೆ ಎಂದಿಗೂ ಪರಿಹಾರವಲ್ಲ. ಹೆತ್ತವರನ್ನು ಈ ರೀತಿ ಭಾರವೆಂದು ಭಾವಿಸಿ ಪ್ರಾಣ ತೆಗೆಯೋದು ಮನುಷ್ಯತ್ವಕ್ಕೆ ಮಾಡಿದ ಅವಮಾನ. ಈ ಪ್ರಕರಣದಲ್ಲಿ ಆರೋಪಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಲಿ.

Latest News