Apr 7, 2026 Languages : ಕನ್ನಡ | English

ಚಿನ್ನದ ಅಂಗಡಿಗೆ ಬಂದ ಪಾರಿವಾಳ - ಮಾಲೀಕನ ಎದುರೇ ಒಂದು ಲಕ್ಷದ ಚಿನ್ನದ ಸರ ಏನ್ ಮಾಡಿದೆ ನೋಡಿ!!

ರಾಜಸ್ಥಾನದಲ್ಲಿ ನಡೆದ ಒಂದು ವಿಚಿತ್ರ ಘಟನೆ ಎಲ್ಲರ ಗಮನ ಸೆಳೆದಿದೆ. ಆಭರಣ ಅಂಗಡಿಯಿಂದ ಪಾರಿವಾಳವೊಂದು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕದ್ದಿದೆ. ಅಂಗಡಿಯಲ್ಲಿ ಸಿಬ್ಬಂದಿ ತಮ್ಮ ಕೆಲಸದಲ್ಲಿ ನಿರತರಾಗಿದ್ದಾಗ, ಇದ್ದಕ್ಕಿದ್ದಂತೆ ಪಾರಿವಾಳ ಹಾರಿ ಒಳಗೆ ಬಂದಿದೆ. ಕೆಲವೇ ಸೆಕೆಂಡುಗಳಲ್ಲಿ ಅದು ತನ್ನ ಕೊಕ್ಕಿನಲ್ಲಿ ಚಿನ್ನದ ಸರವನ್ನು ಎತ್ತಿಕೊಂಡಿದೆ. ಬಳಿಕ ಪಾರಿವಾಳ ಕುತ್ತಿಗೆ ಅಲ್ಲಾಡಿಸುತ್ತಿದ್ದಂತೆ ಚಿನ್ನದ ಸರ ಅದರ ಕುತ್ತಿಗೆಗೆ ಸುತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಅಲ್ಲಿಂದ ಅದು ಹಾರಿಹೋಗಿ ಬಿಲ್ಡಿಂಗ್ ಮೇಲಿನ ಛಾವಣಿಯಲ್ಲಿ ಕೂತಿದೆ ಎಂದು ತಿಳಿದುಬಂದಿದೆ. 

ಆಭರಣ ಅಂಗಡಿಯಿಂದ ಪಾರಿವಾಳದ ವಿಚಿತ್ರ ಕಳ್ಳತನ
ಆಭರಣ ಅಂಗಡಿಯಿಂದ ಪಾರಿವಾಳದ ವಿಚಿತ್ರ ಕಳ್ಳತನ

ಅಂಗಡಿಯವರು ಮತ್ತು ಸ್ಥಳೀಯರು ಪಾರಿವಾಳವನ್ನು ಹಿಡಿಯಲು ಛಾವಣಿಯ ಮೇಲೆ ಹೋದರು. ಆದರೆ ಪಾರಿವಾಳ ಅಲ್ಲಿಂದ ಮತ್ತೆ ಹಾರಿ ಹೋಗಿದೆಯಂತೆ. ಈ ಘಟನೆ ಜನರಲ್ಲಿ ಆಶ್ಚರ್ಯ ಮತ್ತು ಹೆಚ್ಚು ಕುತೂಹಲ ಮೂಡಿಸಿದೆ ಎನ್ನಬಹುದು. ಸಾಮಾನ್ಯವಾಗಿ ಪಾರಿವಾಳಗಳು ಧಾನ್ಯ ಅಥವಾ ಆಹಾರವನ್ನು ಕದಿಯುವುದನ್ನು ನೋಡಿದ್ದೇವೆ. ಆದರೆ ಚಿನ್ನದ ಸರವನ್ನು ಕದ್ದಿರುವುದು ಅಪರೂಪದ ಘಟನೆಯಾಗಿದೆ. ಅಂಗಡಿ ಮಾಲೀಕರು ಈ ಘಟನೆಗೆ ಬೆಚ್ಚಿಬಿದ್ದಿದ್ದಾರೆ. 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಹಾರಿಹೋದ ಕಾರಣ ಅವರು ಆತಂಕಗೊಂಡಿದ್ದಾರೆ.

ಸ್ಥಳೀಯರು ಈ ಘಟನೆ ಬಗ್ಗೆ ಚರ್ಚಿಸುತ್ತಿದ್ದು, ಪಾರಿವಾಳವನ್ನು ಹಿಡಿಯಲು ಪ್ರಯತ್ನಗಳು ನಡೆದರೂ ಅದು ಕೈ ತಪ್ಪಿದೆ. ಕೆಲವರು ಇದನ್ನು ಹಾಸ್ಯವಾಗಿ ನೋಡಿದರೆ, ಕೆಲವರು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜನರು ಪಾರಿವಾಳದ ಈ ವಿಚಿತ್ರ ವರ್ತನೆಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದನ್ನು “ಪಾರಿವಾಳದ ಕಳ್ಳತನ” ಎಂದು ಹಾಸ್ಯಾತ್ಮಕವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹೇಳಬೇಕು ಅಂದರೆ, ರಾಜಸ್ಥಾನದಲ್ಲಿ ನಡೆದ ಈ ಪಾರಿವಾಳದ ಕಳ್ಳತನ ಜನರಲ್ಲಿ ಕುತೂಹಲ ಮೂಡಿಸಿದ್ದು, ಅಪರೂಪದ ಘಟನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. 

ಚಿನ್ನದ ಸರವನ್ನು ಕದ್ದ ಪಾರಿವಾಳ ಇನ್ನೂ ಪತ್ತೆಯಾಗಿಲ್ಲ. ಈ ಘಟನೆ ಪಾರಿವಾಳದ ವಿಚಿತ್ರ ವರ್ತನೆಗೆ ಉದಾಹರಣೆಯಾಗಿ ಉಳಿಯಲಿದೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕಾಮೆಂಟ್ ಮಾಡಿ ತಿಳಿಸಿ.  

Latest News