ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಹಾರಿಬಿಟ್ಟಿದ್ದ ಪಾರಿವಾಳವು ತನ್ನ ಮಾಲೀಕರ ಮನೆಗೆ ವಾಪಸ್ಸಾದ ಘಟನೆ ಮೊಳಕಾಲ್ಮೂರು ತಾಲೂಕಿನ ತಳವಾರಹಳ್ಳಿಯಲ್ಲಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹೌದು 22 ದಿನಗಳ ಕಾಲ, ಸುಮಾರು 900 ಕಿಲೋಮೀಟರ್ ದೂರ ಹಾರಿಕೊಂಡು ಬಂದ ಈ ಪಾರಿವಾಳದ ಕಥೆ ಗ್ರಾಮಸ್ಥರ ಹೃದಯದಲ್ಲಿ ಭಾವನಾತ್ಮಕ ಸಂದೇಶ ಮೂಡಿಸಿತು. ತಳವಾರಹಳ್ಳಿಯ ರಾಜು ಮತ್ತು ಓಬಣ್ಣ ಎಂಬವರು ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ದರ್ಶನಕ್ಕೆ ತೆರಳಿದ್ದರು. ತಮ್ಮೊಡನೆ ಅವರು ಪ್ರೀತಿಯಿಂದ ಸಾಕಿದ್ದ ಪಾರಿವಾಳಗಳನ್ನು ಕೂಡಾ ಕರೆದುಕೊಂಡು ಹೋಗಿದ್ದರು.
ಅಯ್ಯಪ್ಪನ ದರ್ಶನ ಪಡೆದ ಬಳಿಕ, ಡಿಸೆಂಬರ್ 31ರಂದು ಶಬರಿಮಲೆಯಲ್ಲಿ ಪಾರಿವಾಳಗಳನ್ನು ಹಾರಿಬಿಟ್ಟರು. ಈ ವೇಳೆ ರಾಜು ಬಿಟ್ಟಿದ್ದ “ಮದಕರಿ” ಎಂಬ ಗಂಡು ಪಾರಿವಾಳವು ಎಲ್ಲರಿಗೂ ನೆನಪಾಗುವಂತಹ ಪ್ರಯಾಣವನ್ನು ಆರಂಭಿಸಿತು ಎನ್ನಬಹುದು. ಹೌದು ಜನವರಿ 21ರಂದು, ಅಂದರೆ 22 ದಿನಗಳ ನಂತರ, ಮದಕರಿ ತನ್ನ ಸ್ವಗ್ರಾಮ ತಳವಾರಹಳ್ಳಿಗೆ ತಲುಪಿತು. ದೂರದ ಪ್ರಯಾಣ, ಅನೇಕ ಸವಾಲುಗಳನ್ನು ಎದುರಿಸಿ, ತನ್ನ ಮಾಲೀಕರ ಮನೆಗೆ ವಾಪಸ್ಸಾದ ಈ ಪಾರಿವಾಳವನ್ನು ಕಂಡು ಗ್ರಾಮಸ್ಥರು ಮೂಕಸ್ಮಿತರಾದರು. “ಪ್ರೀತಿಯಿಂದ ಸಾಕಿದ ಪ್ರಾಣಿಗಳು ತಮ್ಮ ಮಾಲೀಕರನ್ನು ಮರೆಯುವುದಿಲ್ಲ” ಎಂಬ ನಂಬಿಕೆಗೆ ಈ ಘಟನೆ ಮತ್ತೊಂದು ದೃಢವಾದ ಸಾಕ್ಷಿಯಾಯಿತು.
ಗ್ರಾಮಸ್ಥರು ಪಾರಿವಾಳವನ್ನು ನೋಡಲು ಗುಂಪು ಗುಂಪಾಗಿ ಬರುತ್ತಿದ್ದಾರೆ. ಮಕ್ಕಳು, ಹಿರಿಯರು, ಮಹಿಳೆಯರು ಎಲ್ಲರೂ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪಾರಿವಾಳದ ನಿಷ್ಠೆ, ಅದರ ಹೃದಯಸ್ಪರ್ಶಿ ಪ್ರಯಾಣ, ಜನರಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದೆ. “ಇದು ಕೇವಲ ಒಂದು ಪಕ್ಷಿ ಅಲ್ಲ, ಇದು ಪ್ರೀತಿಯ ಪ್ರತೀಕ” ಎಂದು ಗ್ರಾಮಸ್ಥರು ಪ್ರಶಂಸಿಸುತ್ತಿದ್ದಾರೆ. ಮದಕರಿಯ ಈ ಪ್ರಯಾಣವು ಕೇವಲ ಒಂದು ಪ್ರಾಣಿಯ ಸಾಮರ್ಥ್ಯವಲ್ಲ, ಅದು ಮಾನವ-ಪ್ರಾಣಿ ಬಾಂಧವ್ಯದ ಆಳವನ್ನು ತೋರಿಸುತ್ತದೆ. ಪ್ರೀತಿಯಿಂದ ಸಾಕಿದ ಪ್ರಾಣಿಗಳು ತಮ್ಮ ಮಾಲೀಕರನ್ನು ಗುರುತಿಸಿ, ದೂರದ ಪ್ರಯಾಣವನ್ನೂ ಸಹ ತಾಳ್ಮೆಯಿಂದ ಮುಗಿಸುತ್ತವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿತು.
ತಳವಾರಹಳ್ಳಿಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. “900 ಕಿಮಿ ಹಾರಿದ ಪಾರಿವಾಳ ಅದ್ಭುತ ನಿಷ್ಠೆ” ಎಂಬ ಶೀರ್ಷಿಕೆಗಳೊಂದಿಗೆ ಈ ಕಥೆ ಎಲ್ಲೆಡೆ ಹರಡುತ್ತಿದೆ. ಹೌದು ಮದಕರಿಯ ವಾಪಸ್ಸು ಗ್ರಾಮಸ್ಥರಿಗೆ ಸಂತೋಷ ತಂದಿದ್ದರೂ, ಅದು ಎಲ್ಲರಿಗೂ ಒಂದು ಪಾಠವಾಗಿದೆ. ಪ್ರೀತಿ, ನಿಷ್ಠೆ, ಹಾಗೂ ಬಾಂಧವ್ಯವು ಕೇವಲ ಮಾನವರಲ್ಲ, ಪ್ರಾಣಿಗಳಲ್ಲಿಯೂ ಅಸ್ತಿತ್ವದಲ್ಲಿದೆ. ಈ ಪಾರಿವಾಳದ ಕಥೆ ತಳವಾರಹಳ್ಳಿಯ ಜನರಿಗೆ ನೆನಪಿನಲ್ಲೇ ಉಳಿಯುವಂತಹ ಮಾನವೀಯ ಕ್ಷಣವಾಗಿದೆ ಎನ್ನಬಹದು.