Apr 24, 2026 Languages : ಕನ್ನಡ | English

"ಹುಡುಗರಿಗೆ ಪೀರಿಯ*ಡ್ಸ್ ಯಾಕಾಗುತ್ತೆ?" - ವಿದ್ಯಾರ್ಥಿಯ ಪ್ರಶ್ನೆಗೆ ಟೀಚರ್ ಕೊಟ್ಟ ಉತ್ತರ ಬಾರಿ ವೈರಲ್!! ವಿಡಿಯೋ;

ಸದ್ಯದ ದಿನಗಳಲ್ಲಿ ಆನ್‌ಲೈನ್ ಕ್ಲಾಸ್‌ಗಳು ಅಂದ್ರೆ ಬರೀ ಪಾಠ ಮಾತ್ರವಲ್ಲ, ಅಲ್ಲಿ ನಡೆಯೋ ಕಾಮಿಡಿ ಕಿರಿಕಿರಿಗಳು ಕೂಡ ಫೇಮಸ್ ಆಗುತ್ತಿವೆ. ಅದರಲ್ಲೂ 'ಫಿಸಿಕ್ಸ್ ವಾಲಾ' (PW) ದಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಟೀಚರ್‌ಗಳ ಜೊತೆ ಸ್ಟೂಡೆಂಟ್ಸ್ ಮಾಡೋ ತುಂಟಾಟಗಳು ಸಖತ್ ವೈರಲ್ ಆಗ್ತಿರುತ್ತವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರೋದು ಬಯಾಲಜಿ ಟೀಚರ್ ನಿಧಿ ಪಾಂಡೆ ಮತ್ತು ಒಬ್ಬ 'ಅತಿ ಬುದ್ಧಿವಂತ' ವಿದ್ಯಾರ್ಥಿಯ ನಡುವೆ ನಡೆದ ವಿಚಿತ್ರ ಪ್ರಸಂಗ!

ನಿಧಿ ಪಾಂಡೆ vs ವಿದ್ಯಾರ್ಥಿ – ಬಯಾಲಜಿ ಪಾಠದಲ್ಲಿ ಫನ್ನಿ ಟ್ವಿಸ್ಟ್!! | Photo Credit: https://x.com/Rajendra221996
ನಿಧಿ ಪಾಂಡೆ vs ವಿದ್ಯಾರ್ಥಿ – ಬಯಾಲಜಿ ಪಾಠದಲ್ಲಿ ಫನ್ನಿ ಟ್ವಿಸ್ಟ್!! | Photo Credit: https://x.com/Rajendra221996

ನಿಧಿ ಮ್ಯಾಮ್ ಅವರು ತುಂಬಾನೇ ಸೀರಿಯಸ್ ಆಗಿ ಬಯಾಲಜಿ ಪಾಠ ಮಾಡುತ್ತಿದ್ದರು. ಅವರ ಗಮನವೆಲ್ಲಾ ವಿಷಯವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದರ ಮೇಲಿತ್ತು. ಆದರೆ ಅಲ್ಲಿ ಒಬ್ಬ ಮಹಾನುಭಾವ ವಿದ್ಯಾರ್ಥಿ ಇದ್ದ ಅಲ್ವಾ? ಅವನು ಪಾಠದ ಮಧ್ಯೆ ಒಂದು ಕಾಮೆಂಟ್ ಹಾಕಿದ್ದಾನೆ. ಆ ಪ್ರಶ್ನೆ ಏನಿತ್ತು ಅಂದ್ರೆ— "ಮ್ಯಾಮ್, ಹುಡುಗರಿಗೆ ಪೀ*ರಿಯಡ್ಸ್ ಯಾಕಾಗುತ್ತೆ?"

ಈ ಪ್ರಶ್ನೆಯನ್ನು ನೋಡಿದ್ದೇ ತಡ, ಮ್ಯಾಮ್‌ಗೆ ಎಲ್ಲಿಲ್ಲದ ಕೋಪ ಬಂದಿದೆ. "ಯಾವ ವಿಜ್ಞಾನದಲ್ಲಪ್ಪಾ ಹುಡುಗರಿಗೆ ಪೀ*ರಿಯಡ್ಸ್ ಆಗುತ್ತೆ?" ಅನ್ನೋದು ಮ್ಯಾಮ್ ತರ್ಕ ಇರಬಹುದು. ಮ್ಯಾಮ್‌ಗೆ ಎಷ್ಟು ಕೋಪ ಬಂತು ಅಂದ್ರೆ, ಆಕೆಯ ತಾಪಮಾನ 100 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ!

ತಕ್ಷಣವೇ ಆ ವಿದ್ಯಾರ್ಥಿಗೆ ಮ್ಯಾಮ್ ಟಾಂಗ್ ಕೊಟ್ಟಿದ್ದು ಹೀಗೆ: "ನೋಡು ಮಗನೇ, ಪ್ರಪಂಚದಲ್ಲೇ ಹುಡುಗರಿಗೆ ಪೀ*ರಿಯಡ್ಸ್ ಆಗೋ ಮೊದಲನೇ ಕೇಸ್ ನಿಂದೇ ಇರಬೇಕು ಅನಿಸುತ್ತೆ. ನಿನಗೆ ಮಾತ್ರ ಇದು ಆಗ್ತಿದೆ ಅಂದ್ರೆ ಅದು ದೊಡ್ಡ ಅಚ್ಚರಿ!" ಅಷ್ಟಕ್ಕೇ ಸುಮ್ಮನಾಗದ ಮ್ಯಾಮ್, ಆತನಿಗೆ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ.

ಇಂದಿನ ಕಾಲದ ವಿದ್ಯಾರ್ಥಿಗಳು ಎಷ್ಟು ಕ್ಯೂರಿಯಸ್ ಅಂದ್ರೆ, ಅವರಿಗೆ ಗೊತ್ತಿರೋ ವಿಷಯಗಳನ್ನೇ ಮ್ಯಾಮ್ ಹತ್ತಿರ ಕೇಳಿ ಮಜಾ ತಗೋತಾರೆ. ಇನ್ನು ರೀಲ್ಸ್ ಮತ್ತು ಸೋಶಿಯಲ್ ಮೀಡಿಯಾ ಯುಗದಲ್ಲಿ ಇಂತಹ ಟೀಚರ್-ಸ್ಟೂಡೆಂಟ್ ಫನ್ನಿ ವಿಡಿಯೋಗಳು ರಾತ್ರೋರಾತ್ರಿ ವೈರಲ್ ಆಗ್ತಿವೆ. ಆನ್‌ಲೈನ್ ಟೀಚರ್‌ಗಳಿಗೂ ಇಂತಹ ವಿದ್ಯಾರ್ಥಿಗಳನ್ನು ಹ್ಯಾಂಡಲ್ ಮಾಡೋದು ಒಂದು ದೊಡ್ಡ ಟಾಸ್ಕ್ ಆಗಿಬಿಟ್ಟಿದೆ.

ಇಂತಹ ಪ್ರಶ್ನೆಗಳನ್ನು ಕೇಳೋ ವಿದ್ಯಾರ್ಥಿಗಳ ಐಕ್ಯೂ (IQ) ಬಗ್ಗೆ ಏನಂತ ಹೇಳೋಣ? ಇದು ಹುಡುಗಾಟವೋ ಅಥವಾ ನಿಜವಾಗಿಯೂ ಬಯಾಲಜಿ ಗೊತ್ತಿಲ್ಲದ ಮುಗ್ಧತೆಯೋ ಗೊತ್ತಿಲ್ಲ. ಆದರೆ ನಿಧಿ ಮ್ಯಾಮ್ ಕೊಟ್ಟ ಉತ್ತರ ಮಾತ್ರ ಈಗ ಇಂಟರ್ನೆಟ್‌ನಲ್ಲಿ ಮೀಮ್ ಮೆಟೀರಿಯಲ್ ಆಗಿಬಿಟ್ಟಿದೆ.

ಆನ್‌ಲೈನ್ ಕ್ಲಾಸ್ ಅಂದ್ರೆ ಬರೀ ಲಾಗಿನ್ ಆಗೋದಲ್ಲ, ಪಾಠದ ಕಡೆಗೆ ಸ್ವಲ್ಪ ಗಮನ ಕೊಡಬೇಕು ಅಲ್ವಾ? ಇಲ್ಲದಿದ್ದರೆ ಇಂತಹ 'ಪೀರಿಯಡ್ಸ್' ಪ್ರಶ್ನೆಗಳು ಬಂದು ಮ್ಯಾಮ್ ಕೈಯಲ್ಲಿ ಗದರಿಸಿಸಿಕೊಳ್ಳಬೇಕಾಗುತ್ತದೆ!