ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಅಂದ್ರೆ ಅದು ಎಲ್ಲರಿಗೂ ಗೊತ್ತಿರೋ ತಲೆನೋವು. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ತರುತ್ತಿರೋ 'ಸುರಂಗ ರಸ್ತೆ' (Tunnel Road) ಯೋಜನೆ ಈಗ ಚರ್ಚೆಯಲ್ಲಿದೆ. ಅದರಲ್ಲೂ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಆರು ಲೇನ್‌ಗಳ ಅಂಡರ್‌ಗ್ರೌಂಡ್ ರಸ್ತೆ ಮಾಡೋ ಪ್ಲಾನ್ ರೆಡಿಯಾಗಿದೆ. ಆದರೆ ಈ ರಸ್ತೆ ನಮ್ಮ ಹೆಮ್ಮೆಯ ಲಾಲ್‌ಬಾಗ್ ಕೆಳಗಡೆಯೇ ಹಾದು ಹೋಗಬೇಕಿದೆ.
ಇದರಿಂದ ಲಾಲ್‌ಬಾಗ್‌ನ ಪರಿಸರಕ್ಕೆ ಅಥವಾ ಅಲ್ಲಿನ ಐತಿಹಾಸಿಕ ಬೆಟ್ಟಕ್ಕೆ ಏನಾದರೂ ತೊಂದರೆ ಆಗುತ್ತಾ? ಈ ಬಗ್ಗೆ ಚೆಕ್ ಮಾಡಲು ಈಗ ದೊಡ್ಡ ಮಟ್ಟದ ತಜ್ಞರ ತಂಡವೊಂದು ಫೀಲ್ಡ್‌ಗೆ ಇಳಿದಿದೆ.
ಲಾಲ್‌ಬಾಗ್‌ನಲ್ಲಿ ತಜ್ಞರ ಟೀಮ್ ಏನ್ ಮಾಡ್ತಿದೆ?
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI) ವತಿಯಿಂದ ಐವರು ಸದಸ್ಯರಿರುವ ಒಂದು ಸ್ಪೆಷಲ್ ಕಮಿಟಿ ಇತ್ತೀಚೆಗೆ ಲಾಲ್‌ಬಾಗ್‌ಗೆ ವಿಸಿಟ್ ಕೊಟ್ಟಿದೆ. ಈ ತಂಡದಲ್ಲಿ ಜಿಎಸ್‌ಐನ ಹಿರಿಯ ಅಧಿಕಾರಿ ಕೆ.ವಿ. ಮಾರುತಿ ಅವರ ನೇತೃತ್ವದಲ್ಲಿ ಭೌಗೋಳಿಕ ಮತ್ತು ಇಂಜಿನಿಯರಿಂಗ್ ತಜ್ಞರಿದ್ದಾರೆ.
ಇವರು ಲಾಲ್‌ಬಾಗ್‌ನ ಭೂಮಿಯ ಒಳಗಡೆ ಮಣ್ಣು ಮತ್ತು ಕಲ್ಲು ಹೇಗಿದೆ? ಸುರಂಗ ಕೊರೆದರೆ ಅಲ್ಲಿನ ಪ್ರಸಿದ್ಧ 'ಲಾಲ್‌ಬಾಗ್ ಬೆಟ್ಟ'ಕ್ಕೆ ಏನಾದರೂ ಎಫೆಕ್ಟ್ ಆಗುತ್ತಾ? ಅನ್ನೋದನ್ನ ಸೀರಿಯಸ್ ಆಗಿ ಸ್ಟಡಿ ಮಾಡ್ತಿದ್ದಾರೆ. ಪ್ರೈವೇಟ್ ಕನ್ಸಲ್ಟೆಂಟ್‌ಗಳು ಈಗಾಗಲೇ ಅಲ್ಲಿ ಸಣ್ಣ ಮಟ್ಟದಲ್ಲಿ ಗುಂಡಿ ತೋಡಿ ಮಣ್ಣಿನ ಪರೀಕ್ಷೆ ಮಾಡಿದ್ದರು, ಆ ಜಾಗಗಳನ್ನೂ ತಜ್ಞರು ಪರಿಶೀಲಿಸಿದ್ದಾರೆ.
ಯೋಜನೆಯ ವರದಿ (DPR) ಪ್ರಕಾರ, ಈ ಸುರಂಗ ರಸ್ತೆಗಾಗಿ ಲಾಲ್‌ಬಾಗ್‌ನ ಒಳಗಡೆ ಶಾಶ್ವತವಾಗಿ 1 ಎಕರೆ ಜಾಗ ಬೇಕಾಗುತ್ತೆ. ಇನ್ನು ಕೆಲಸ ನಡೆಯುವ ಸಮಯದಲ್ಲಿ ಸಾಮಗ್ರಿಗಳನ್ನು ಇಡಲು ಮತ್ತು ಗಾಡಿಗಳ ಓಡಾಟಕ್ಕೆ ತಾತ್ಕಾಲಿಕವಾಗಿ ಸುಮಾರು 6 ಎಕರೆ ಜಾಗ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಲಾಲ್‌ಬಾಗ್ ಕೇವಲ ಪಾರ್ಕ್ ಅಲ್ಲ, ಅದೊಂದು ಐತಿಹಾಸಿಕ ತಾಣ. ಅಲ್ಲಿನ ಪೆನಿನ್ಸುಲರ್ ಗ್ನೈಸ್ (Peninsular Gneiss) ಶಿಲೆಗಳು ಕೋಟ್ಯಂತರ ವರ್ಷ ಹಳೆಯವು. ಈ ಸುರಂಗ ಮಾರ್ಗದಿಂದ ಲಾಲ್‌ಬಾಗ್‌ನ ಸೌಂದರ್ಯಕ್ಕೆ ಅಥವಾ ಅಲ್ಲಿನ ಗಿಡಮರಗಳಿಗೆ ಹಾನಿಯಾಗಬಹುದು ಅನ್ನೋ ಆತಂಕ ಪರಿಸರ ಪ್ರೇಮಿಗಳಲ್ಲಿದೆ. ಈ ಕಾರಣಕ್ಕಾಗಿಯೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಜಿಎಸ್‌ಐಗೆ ಪತ್ರ ಬರೆದು, ವೈಜ್ಞಾನಿಕವಾಗಿ ಒಂದು ಸ್ಟಡಿ ಮಾಡಿಸಿ ಅಂತ ಕೇಳಿಕೊಂಡಿದ್ದರು.
ಮುಂದಿನ ಪ್ಲಾನ್ ಏನು?
ಈಗ ಸ್ಥಳ ಪರಿಶೀಲನೆ ಮಾಡಿರೋ ತಜ್ಞರ ತಂಡ ಒಂದು ಕಂಪ್ಲೀಟ್ ರಿಪೋರ್ಟ್ ಸಿದ್ಧಪಡಿಸಲಿದೆ.
ಸುರಂಗ ಕೊರೆಯುವಾಗ ಆಗುವ ಕಂಪನ (Vibration) ಲಾಲ್‌ಬಾಗ್ ಬೆಟ್ಟಕ್ಕೆ ಅಪಾಯ ತರುತ್ತಾ?
ಅಲ್ಲಿನ ಅಂತರ್ಜಲ ಮಟ್ಟಕ್ಕೆ ಏನಾಧರೂ ತೊಂದರೆ ಆಗುತ್ತಾ?
ಮರಗಿಡಗಳ ಮೇಲೆ ಇದರ ಪರಿಣಾಮ ಎಷ್ಟಿರುತ್ತೆ?
ಈ ಎಲ್ಲ ಪ್ರಶ್ನೆಗಳಿಗೆ ಈ ವರದಿಯಲ್ಲಿ ಉತ್ತರ ಇರಲಿದೆ. ಈ ವರದಿಯನ್ನು ಜಿಎಸ್‌ಐ ದಕ್ಷಿಣ ವಲಯದ ದೊಡ್ಡ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಆ ರಿಪೋರ್ಟ್ ಬಂದ ಮೇಲೆಯೇ ಸರ್ಕಾರ ಈ ಸುರಂಗ ರಸ್ತೆ ಯೋಜನೆಯಲ್ಲಿ ಮುಂದೆ ಹೋಗಬೇಕಾ ಅಥವಾ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕಾ ಅಂತ ಡಿಸೈಡ್ ಮಾಡುತ್ತೆ.
ನಗರದ ಅಭಿವೃದ್ಧಿಯೂ ಬೇಕು, ಲಾಲ್‌ಬಾಗ್‌ನಂತಹ ಹಸಿರು ತಾಣಗಳ ರಕ್ಷಣೆಯೂ ಬೇಕು. ಇವೆರಡರ ನಡುವೆ ಬ್ಯಾಲೆನ್ಸ್ ಮಾಡೋದು ಈಗ ಸರ್ಕಾರದ ಮುಂದೆ ಇರೋ ದೊಡ್ಡ ಚಾಲೆಂಜ್. ಈ ತಜ್ಞರ ವರದಿ ಬಂದ ಮೇಲೆ ಲಾಲ್‌ಬಾಗ್ ಸುರಂಗ ರಸ್ತೆಯ ಭವಿಷ್ಯ ಏನು ಅನ್ನೋದು ಗೊತ್ತಾಗಲಿದೆ.