ಇತಿಹಾಸ ಸೃಷ್ಟಿಸಿದ ಮೋದಿ - ನೆಹರು ಅವರ ದಶಕಗಳ ಹಿಂದಿನ ಮಹಾನ್ ದಾಖಲೆ ಇವತ್ತು ಬ್ರೇಕ್!!

ಭಾರತದ ರಾಜಕೀಯ ಇತಿಹಾಸದಲ್ಲೇ ಇವತ್ತು (ಜೂನ್ 10, 2026) ಒಂದು ಮರೆಯಲಾಗದ ದಿನ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್​ಲಾಲ್ ನೆಹರು ಅವರ ದಶಕಗಳ ಹಿಂದಿನ ದಾಖಲೆಯನ್ನು ಅಧಿಕೃತವಾಗಿ ಬ್ರೇಕ್ ಮಾಡಿದ್ದಾರೆ. ಈ ಮೂಲಕ ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿ ಅನ್ನೋ ಐತಿಹಾಸಿಕ ಕೀರ್ತಿಗೆ ಮೋದಿ ಭಾಜನರಾಗಿದ್ದಾರೆ.

ಭಾರತದ ರಾಜಕೀಯ ನಕಾಶೆಯಲ್ಲೇ ಸಂಚಲನ
ಭಾರತದ ರಾಜಕೀಯ ನಕಾಶೆಯಲ್ಲೇ ಸಂಚಲನ

ಬುಧವಾರದ ಇಂದಿನ ದಿನಕ್ಕೆ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ ಸತತ 4,399 ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.

ನೆಹರು ದಾಖಲೆ ಏನಾಗಿತ್ತು?

ಇತಿಹಾಸ ಪುಟಗಳನ್ನು ತಿರುವಿ ನೋಡಿದರೆ, 1952 ರಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದು ಪ್ರಧಾನಿಯಾಗಿ ಆಯ್ಕೆಯಾಗಿದ್ದ ಜವಾಹರಲಾಲ್ ನೆಹರು ಅವರು, ಆ ವರ್ಷ ಮೇ 13 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಅಲ್ಲಿಂದ ಮೇ 27, 1964 ರವರೆಗೆ (ಅವರು ನಿಧನರಾಗುವವರೆಗೆ) ಆ ಹುದ್ದೆಯಲ್ಲಿ 4,398 ದಿನಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿದ್ದರು. ಅದಕ್ಕೂ ಮುನ್ನ, ಅಂದರೆ 1947 ರಿಂದ 1952 ರವರೆಗೆ ನೆಹರು ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದರೇ ಹೊರತು, ಆಗ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಿರಲಿಲ್ಲ. ಹೀಗಾಗಿ, ಪ್ರಜಾಸತ್ತಾತ್ಮಕವಾಗಿ 'ಚುನಾಯಿತರಾದ' ಅವಧಿಯನ್ನು ಲೆಕ್ಕ ಹಾಕಿದರೆ ನೆಹರು ಅವರ ದಾಖಲೆಯನ್ನು ಮೋದಿ ಇವತ್ತು ದಾಟಿ ಮುನ್ನುಗ್ಗಿದ್ದಾರೆ.

ಮೋದಿಯವರ ವಿಜಯಯಾತ್ರೆ ನಡೆದಿದ್ದು ಹೇಗೆ?

ಕಳೆದ ಹನ್ನೆರಡು ವರ್ಷಗಳಿಂದ ದೇಶದ ಜನಸಾಮಾನ್ಯರ ಆಕಾಂಕ್ಷೆಗಳ ಪ್ರತಿರೂಪವಾಗಿ ಮೋದಿ ಅಧಿಪತ್ಯ ಮುಂದುವರಿದಿದೆ.

ಮೊದಲ ಅವಧಿ: ಮೇ 26, 2014 ರಂದು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.

ಎರಡನೇ ಅವಧಿ: ಅವರ ಜನಪ್ರಿಯತೆ ಮತ್ತು ಅಭಿವೃದ್ಧಿ ಆಡಳಿತಕ್ಕೆ ಮನಸೋತ ಭಾರತದ ಜನತೆ, 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತಷ್ಟು ಭಾರಿ ಬಹುಮತದೊಂದಿಗೆ ಮೇ 30, 2019 ರಂದು ಎರಡನೇ ಬಾರಿಗೆ ಅವರ ಕೈಗೆ ದೇಶದ ಚುಕ್ಕಾಣಿ ನೀಡಿದರು.

ಮೂರನೇ ಅವಧಿ: ಇನ್ನು ಇತ್ತೀಚೆಗೆ, ಅಂದರೆ ಜೂನ್ 9, 2024 ರಂದು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದೇಶದಲ್ಲಿ ರಾಜಕೀಯ ಸ್ಥಿರತೆಯ ಹೊಸ ಯುಗಕ್ಕೆ ಅವರು ನಾಂದಿ ಹಾಡಿದ್ದಾರೆ.

ಭಾರತ್ ಮಂಟಪದಲ್ಲಿ ಬೃಹತ್ ಸಂಭ್ರಮಾಚರಣೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸುತ್ತಾ ಬಂದಿರುವುದು ಮತ್ತು ಅವರು ದೇಶದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿರುವುದನ್ನು ಸಂಭ್ರಮಿಸಲು ಎನ್​ಡಿಎ (NDA) ದೆಹಲಿಯ ಭಾರತ್ ಮಂಟಪದಲ್ಲಿ ಒಂದು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ.

ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಉನ್ನತ ಮಟ್ಟದ ಸಭೆಯಲ್ಲಿ ದೇಶದ 22 ಎನ್​ಡಿಎ ಆಡಳಿತವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದಾರೆ. ಇದರೊಂದಿಗೆ ಮೈತ್ರಿಕೂಟದ ಎಲ್ಲಾ ಘಟಕ ಪಕ್ಷಗಳ ಅಧ್ಯಕ್ಷರು ಸೇರಿದಂತೆ 25ಕ್ಕೂ ಹೆಚ್ಚು ಪ್ರಮುಖ ರಾಜಕೀಯ ಮುಖಂಡರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

ರಾಜಕೀಯ ವಿಶ್ಲೇಷಕರು ಏನಂತಾರೆ?

ನರೇಂದ್ರ ಮೋದಿ ಅವರು ಕೇವಲ ಒಂದು ರಾಜಕೀಯ ಪಕ್ಷದ ನಾಯಕರಾಗಿ ಉಳಿದಿಲ್ಲ. ದೇಶದ ಪ್ರತಿಯೊಂದು ವರ್ಗದ, ಅದರಲ್ಲೂ ಮುಖ್ಯವಾಗಿ ಯುವಕರು, ಮಹಿಳೆಯರು ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದ ಸಾಮಾನ್ಯ ವ್ಯಕ್ತಿಯೊಬ್ಬರು ಸಾರ್ವತ್ರಿಕ ಚುನಾವಣೆಗಳ ಮೂಲಕವೇ ಜಾಗತಿಕ ಮಟ್ಟದ ಈ ಅತ್ಯುನ್ನತ ಮೈಲಿಗಲ್ಲನ್ನು ತಲುಪಿರುವುದು ಇಡೀ ನವ ಭಾರತದ ಹೆಮ್ಮೆಯ ಸಂಕೇತ ಎಂದು ರಾಜಕೀಯ ವಿಶ್ಲೇಷಕರು ಕೊಂಡಾಡಿದ್ದಾರೆ.

2014 ರಿಂದ ಆರಂಭವಾದ ಮೋದಿಯವರ ಈ ಆಡಳಿತದ ಸರಣಿ, ಭಾರತದ ರಾಜಕೀಯ ನಕಾಶೆಯಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ.

Latest News