ಬೆಂಗಳೂರು ನಗರದ ಆಸ್ತಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಕರ್ನಾಟಕ ಸರ್ಕಾರ ಒಂದು ಬಂಪರ್ ಸಿಹಿಸುದ್ದಿ ನೀಡಿದೆ. ಸರ್ಕಾರದ 6ನೇ ಗ್ಯಾರಂಟಿ ಎನ್ನಲಾದ ‘ಭೂ ಗ್ಯಾರಂಟಿ’ ಯೋಜನೆಯಡಿ ಇಂದಿನಿಂದ (ಮೇ 16) ನಗರದಾದ್ಯಂತ ಭರ್ಜರಿ ‘ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ’ಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.
ಸಾಮಾನ್ಯವಾಗಿ ತಮ್ಮ ಬಿ-ಖಾತಾ ಆಸ್ತಿಯನ್ನು ಎ-ಖಾತಾಗೆ ಪರಿವರ್ತಿಸಲು ಮಾಲೀಕರು ನಿಯಮದಂತೆ ಶೇ. 5 ರಷ್ಟು ಆಸ್ತಿ ಮಾರ್ಗಸೂಚಿ ಮೌಲ್ಯವನ್ನು (Guidance Value) ಪಾವತಿಸಬೇಕಿತ್ತು. ಆದರೆ ಈ ವಿಶೇಷ ಅಭಿಯಾನದಲ್ಲಿ ಜನರಿಗೆ ಶೇ. 60 ರಷ್ಟು ಭಾರಿ ರಿಯಾಯಿತಿ ನೀಡಲಾಗಿದ್ದು, ಕೇವಲ ಶೇ. 2 ರಷ್ಟು ಮಾತ್ರ ಶುಲ್ಕ ಪಾವತಿಸಿ ಖಾತೆ ಬದಲಾಯಿಸಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಲಾಗಿದೆ. ಮುಂದಿನ 100 ದಿನಗಳವರೆಗೆ (ಆಗಸ್ಟ್ 23 ರವರೆಗೆ) ಮಾತ್ರ ಈ ಆಫರ್ ಲಭ್ಯವಿರಲಿದೆ ಎಂದು ಜಿಬಿಎ ಮಾಹಿತಿ ನೀಡಿದೆ.
ಏನಿದು ‘ನನ್ನ ಇ-ಖಾತಾ ನನ್ನ ಹಕ್ಕು’ ಅಭಿಯಾನ?
ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂದಿನಿಂದ ಪ್ರತಿ ಶನಿವಾರ ಈ ಬೃಹತ್ ಇ-ಖಾತಾ ಮೇಳ ಅಥವಾ ಓಪನ್ ಹೌಸ್ ಕ್ಯಾಂಪ್‌ಗಳು ನಡೆಯಲಿವೆ. ಆಸ್ತಿ ದಾಖಲೆಗಳಲ್ಲಿರುವ ತಪ್ಪುಗಳ ತಿದ್ದುಪಡಿ, ಹಳೇ ಖಾತೆಯನ್ನು ಇ-ಖಾತಾಗೆ ಬದಲಾಯಿಸುವುದು ಹಾಗೂ ಬಿ-ಖಾತಾದಿಂದ ಎ-ಖಾತಾ ಕನ್ವರ್ಷನ್ ಮಾಡಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪ್ರತಿ ಶನಿವಾರ ನಗರದ 52 ಆಯ್ದ ಕೇಂದ್ರಗಳಲ್ಲಿ ಈ ಸೇವೆ ಸಿಗಲಿದ್ದು, ಒಂದು ಕೇಂದ್ರದಲ್ಲಿ ಕನಿಷ್ಠ 200 ಜನರಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಗುರಿ ಹೊಂದಲಾಗಿದೆ. ಒಂದು ವೇಳೆ ಜನದಟ್ಟಣೆ ಹೆಚ್ಚಾದರೆ ಟೋಕನ್ ನೀಡಿ ಮುಂದಿನ ವಾರ ಆದ್ಯತೆಯ ಮೇಲೆ ಕೆಲಸ ಮಾಡಿಕೊಡಲಾಗುತ್ತದೆ. ಇ-ಖಾತಾ ರೆಡಿ ಇರುವವರಿಗೆ ಮುಂಚಿತವಾಗಿಯೇ ಎಸ್‌ಎಂಎಸ್ ಕಳುಹಿಸಲಾಗುತ್ತಿದ್ದು, ಅವರು ನೇರವಾಗಿ ಬಂದು ಪ್ರಿಂಟ್ ಪಡೆದುಕೊಳ್ಳಬಹುದು.
ಈ ಯೋಜನೆಯ ಮುಖ್ಯ ಉದ್ದೇಶಗಳೇನು?
ವಂಚನೆಗೆ ಬ್ರೇಕ್: ಮ್ಯಾನುಯಲ್ ರಿಜಿಸ್ಟರ್ ಹಾಗೂ ಹಳೇ ಪೇಪರ್ ಫೈಲ್‌ಗಳನ್ನು ಡಿಜಿಟಲ್ ಮಾಡುವ ಮೂಲಕ ಆಸ್ತಿ ಕದಿಯುವ ಮಾಫಿಯಾ ಮತ್ತು ನಕಲಿ ದಾಖಲೆ ಸೃಷ್ಟಿಗೆ ಕಂಪ್ಲೀಟ್ ಬ್ರೇಕ್ ಹಾಕುವುದು.
ಸಾರ್ವಜನಿಕರಿಗೆ ಸುಲಭ ಸೇವೆ: ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಪಾರದರ್ಶಕ ಮತ್ತು ಸರಳವಾಗಿ ಇ-ಖಾತಾ ತಲುಪಿಸುವುದು.
ಬಾಕಿ ಪ್ರಕರಣಗಳ ವಿಲೇವಾರಿ: ವರ್ಷಗಟ್ಟಲೆಯಿಂದ ನೆನೆಗುದಿಗೆ ಬಿದ್ದಿರುವ ಆಸ್ತಿ ವಿವಾದ ಹಾಗೂ ತಿದ್ದುಪಡಿ ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸುವುದು.
'ನನ್ನ ಇ-ಖಾತಾ ನನ್ನ ಹಕ್ಕು' ಅಭಿಯಾನದ 52 ಕೇಂದ್ರಗಳ ಹೊಸ ಪಟ್ಟಿ:
-
ಜೆಪಿ ನಗರ 2ನೇ ಹಂತ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಮಾರೆನಹಳ್ಳಿ, ರೇಣುಕಾ ಪ್ರಸನ್ನ ಥಿಯೇಟರ್ ಎದುರು (ದಕ್ಷಿಣ ವಲಯ).
-
ವೈಟ್ ಫೀಲ್ಡ್: ವೈಟ್ ಫೀಲ್ಡ್ ಕ್ಲಬ್ (ಪೂರ್ವ ವಲಯ).
-
ಮಲ್ಲೇಶ್ವರಂ ಮತ್ತು ಮತ್ತಿಕೆರೆ: ಮಲ್ಲೇಶ್ವರಂ ವಿಭಾಗ ಕಂದಾಯಾಧಿಕಾರಿಗಳ ಕಚೇರಿ ಸಭಾಂಗಣ, ಪಾಲಿಕೆ ಕಟ್ಟಡ, ಎಂ.ಕೆ.ಕೆ ರಸ್ತೆ (ಪಶ್ಚಿಮ ವಲಯ).
-
ವಿದ್ಯಾರಣ್ಯಪುರ: ಬಿಬಿಎಂಪಿ ಸಮುದಾಯಭವನ ಕಟ್ಟಡ, ಎಚ್‌ಎಂಟಿ ಲೇಔಟ್, 1ನೇ ಬ್ಲಾಕ್, ಎನ್‌ಟಿಐ ಮೈದಾನದ ಎದುರು (ಉತ್ತರ ವಲಯ).
-
ಶಾಂತಿನಗರ ಮತ್ತು ಲಾಂಗ್ಫೋರ್ಡ್ ಟೌನ್: ಶಾಂತಿನಗರ ಸರ್ಕಾರಿ ಮಾದರಿ ಪ್ರಾಥಮಿಕ ತಮಿಳು ಬಾಲಕಿಯರ ಶಾಲೆ, ಶಾಂತಿನಗರ ಮುಖ್ಯ ರಸ್ತೆ (ಕೇಂದ್ರ ವಲಯ).
-
ಉತ್ತರಹಳ್ಳಿ: ಕರ್ನಾಟಕ ಪಬ್ಲಿಕ್ ಸ್ಕೂಲ್, ಬಸ್ ನಿಲ್ದಾಣದ ಹಿಂಭಾಗ (ದಕ್ಷಿಣ ವಲಯ).
-
ಹೂಡಿ ಮತ್ತು ದೊಡ್ಡನೆಕ್ಕುಂದಿ: ಪಾಲಿಕೆ ವಾರ್ಡ್ ಕಚೇರಿ, ಎಇಸಿಎಸ್ ಲೇಔಟ್ (ಪೂರ್ವ ವಲಯ).
-
ರಾಜಾಜಿನಗರ ಮತ್ತು ಶ್ರೀರಾಮಮಂದಿರ: ರಾಜಾಜಿನಗರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, ಸರ್ ಎಂ. ವಿಶ್ವೇಶ್ವರಯ್ಯ ಸಂಕೀರ್ಣ, 2ನೇ ಬ್ಲಾಕ್ (ಪಶ್ಚಿಮ ವಲಯ).
-
ದಾಸರಹಳ್ಳಿ ಮತ್ತು ಹೆಸರಘಟ್ಟ ರಸ್ತೆ: ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎಕ್ಸ್ಟೆನ್ಷನ್ (ಉತ್ತರ ವಲಯ).
-
ದೊಮ್ಮಲೂರು ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ: ಇಂಡಿಕ್ಯೂಬ್ ಪಾರ್ಕ್ (1ನೇ ಮಹಡಿ), ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಯಲು ರಂಗಮಂಟಪ (ಕೇಂದ್ರ ವಲಯ).
-
ಬೇಗೂರು: ವಿದ್ಯಾ ವಿಕಾಸ್ ಸರ್ಕಾರಿ ಪ್ರೌಢಶಾಲೆ, ವಿಶ್ವಪ್ರಿಯಾ ನಗರ (ದಕ್ಷಿಣ ವಲಯ).
-
ಮಾರತಹಳ್ಳಿ ಮತ್ತು ಬೆಳ್ಳಂದೂರು: ನ್ಯೂ ಹಾರಿಜಾನ್ ಕಾಲೇಜು, ಕಾಡುಬೀಸನಹಳ್ಳಿ (ಪೂರ್ವ ವಲಯ).
-
ಗೋವಿಂದರಾಜನಗರ ಮತ್ತು ಚಂದ್ರ ಲೇಔಟ್: ಜ್ಞಾನಸೌಧ, ಕಲ್ಯಾಣನಗರ, ನಾಗರಭಾವಿ, मूಡಲಪಾಳ್ಯ (ಪಶ್ಚಿಮ ವಲಯ).
-
ಹೆಬ್ಬಾಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬಾಳ (ಉತ್ತರ ವಲಯ).
-
ಚಿಕ್ಕಪೇಟೆ ಮತ್ತು ಮಾಗಡಿ ರಸ್ತೆ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಆರೋಗ್ಯ ಸೌಧ ಸಮೀಪ (ಕೇಂದ್ರ ವಲಯ).
-
ಕೋರಮಂಗಲ ಮತ್ತು ಅಡುಗೋಡಿ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸಿಇಆರ್‌ಪಿ ಪೊಲೀಸ್ ಕ್ವಾರ್ಟರ್ಸ್ (ದಕ್ಷಿಣ ವಲಯ).
-
ಕೆ.ಆರ್.ಪುರಂ: ಐಟಿಐ ಶಾಲೆ, ಐಟಿಐ ಕಾಲೋನಿ (ಪೂರ್ವ ವಲಯ).
-
ಬಸವನಗುಡಿ ಮತ್ತು ಗಿರಿನಗರ: ಬಸವನಗುಡಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, #19, ಚೆನ್ನಮ್ಮನಕೆರೆ ಅಚ್ಚುಕಟ್ಟು (ಪಶ್ಚಿಮ ವಲಯ).
-
ಯಲಹಂಕ: ಮಿನಿ ವಿಧಾನಸೌಧ (3ನೇ ಮಹಡಿ), NES ಸಮೀಪ, ಸುಗ್ಗಪ್ಪ ಲೇಔಟ್ (ಉತ್ತರ ವಲಯ).
-
ಕೆಂಪೇಗೌಡ ನಗರ ಮತ್ತು ಬಸವನಗುಡಿ: ನ್ಯಾಷನಲ್ ಹೈ ಸ್ಕೂಲ್, ಕೆ.ಆರ್ ರಸ್ತೆ (ಕೇಂದ್ರ ವಲಯ).
-
ಬಿಟಿಎಂ ಲೇಔಟ್: ಶ್ರೀ ಸಾಯಿ ಇಂಗ್ಲಿಷ್ ಶಾಲೆ, 2ನೇ ಮುಖ್ಯರಸ್ತೆ, ನ್ಯೂ ಮೈಕೊ ಲೇಔಟ್ ರಸ್ತೆ (ದಕ್ಷಿಣ ವಲಯ).
-
ಹೆಚ್.ಎ.ಎಲ್ ಏರ್ಪೋರ್ಟ್ ವಿಭಾಗ: ಎಸ್.ಸಿ.ಟಿ ಪಾಲಿಟೆಕ್ನಿಕ್, ಕಗ್ಗದಾಸಪುರ ಮುಖ್ಯ ರಸ್ತೆ (ಪೂರ್ವ ವಲಯ).
-
ವಿಜಯನಗರ ಮತ್ತು ಗಾಳಿ ಆಂಜನೇಯ ದೇವಸ್ಥಾನ: ಪಾಲಿಕೆ ವಾರ್ಡ್ ಕಚೇರಿ, ಹಂಪಿನಗರ, ಶಾಸಕರ ಕಚೇರಿ (ಪಶ್ಚಿಮ ವಲಯ).
-
ಜೆ.ಸಿ.ನಗರ: ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, ಆರ್.ಟಿ.ನಗರ (ಉತ್ತರ ವಲಯ).
-
ಹೊಂಬೇಗೌಡನಗರ ಮತ್ತು ಜಯನಗರ: ರಾಣಿ ಸರಳಾ ದೇವಿ ವಿದ್ಯಾ ಸಂಸ್ಥೆ, ನಂ.281, 7ನೇ ಕ್ರಾಸ್ ರಸ್ತೆ (ಕೇಂದ್ರ ವಲಯ).
-
ಅಂಜನಾಪುರ: ಬುದ್ಧ ಭವನ, ಜೆಪಿ ನಗರ 8ನೇ ಹಂತ, ರಾಘವ ನಗರ (ದಕ್ಷಿಣ ವಲಯ).
-
ಹೊರಮಾವು: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಕೆರೆ ಅಗ್ರ ಮುಖ್ಯ ರಸ್ತೆ (ಪೂರ್ವ ವಲಯ).
-
ಪದ್ಮನಾಭನಗರ ಮತ್ತು ಬನಶಂಕರಿ: ಪದ್ಮನಾಭನಗರ ಶಾಸಕರ ಕಚೇರಿ, ಸಿದ್ದಣ್ಣ ಲೇಔಟ್, ಬನಶಂಕರಿ 2ನೇ ಹಂತ (ಪಶ್ಚಿಮ ವಲಯ).
-
ಕೊಡಿಗೆಹಳ್ಳಿ ಮತ್ತು ಅಮೃತಹಳ್ಳಿ: ಸರ್ಕಾರಿ ಪ್ರಾಥಮಿಕ ಶಾಲೆ, ಬ್ಯಾಟರಾಯನಪುರ (ಉತ್ತರ ವಲಯ).
-
ಶಿವಾಜಿನಗರ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಡಿಸ್ಪೆನ್ಸರಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಹಿಂಭಾಗ (ಕೇಂದ್ರ ವಲಯ).
-
ಯಲಚೇನಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚುಂಚಘಟ್ಟ, ಆರ್‌ಬಿಐ ಲೇಔಟ್ (ದಕ್ಷಿಣ ವಲಯ).
-
ಆರ್.ಆರ್.ನಗರ, ಲಗ್ಗೆರೆ ಮತ್ತು ಲಕ್ಷ್ಮೀದೇವಿನಗರ: ಗಂಗಮ್ಮ ತಿಮ್ಮಯ್ಯ ಶಿಕ್ಷಣ ಸಂಸ್ಥೆ, ಸುಂಕದಕಟ್ಟೆ, ಮಾಗಡಿ ಮುಖ್ಯರಸ್ತೆ (ಪಶ್ಚಿಮ ವಲಯ).
-
ಪುಲಿಕೇಶಿನಗರ: ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ಸನ್ ರಸ್ತೆ, ಕ್ಲೀವ್‌ಲ್ಯಾಂಡ್ ಟೌನ್ (ಉತ್ತರ ವಲಯ).
-
ವಸಂತನಗರ: ಸರ್ದಾರ್ ಪಟೇಲ್ ಭವನ, ನಂ.16, ತಿಮ್ಮಯ್ಯ ರಸ್ತೆ, ಕ್ವೀನ್ಸ್ ರಸ್ತೆ (ಕೇಂದ್ರ ವಲಯ).
-
ಬೊಮ್ಮನಹಳ್ಳಿ ಮತ್ತು ರೂಪೇನ ಅಗ್ರಹಾರ: ಶ್ರೀ ಸದ್ಗುರು ಸಾಯಿಬಾಬಾ ಕನ್ನಡ ಪ್ರಾಥಮಿಕ ಶಾಲೆ, ಪೊಲೀಸ್ ಠಾಣೆ ಸಮೀಪ (ದಕ್ಷಿಣ ವಲಯ).
-
ಕೆಂಗೇರಿ ಮತ್ತು ಹೇರೋಹಳ್ಳಿ: ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್, ಕೊಮ್ಮಘಟ್ಟ ರಸ್ತೆ, ಕೆಂಗೇರಿ ಸ್ಯಾಟಲೈಟ್ ಟೌನ್ (ಪಶ್ಚಿಮ ವಲಯ).
-
ಕೆ.ಜಿ. ಹಳ್ಳಿ: ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ಸನ್ ರಸ್ತೆ, ಫ್ರೆಜರ್ ಟೌನ್ (ಉತ್ತರ ವಲಯ).
-
ಚಾಮರಾಜಪೇಟೆ: ಪಾಲಿಕೆ ಪಿಯು ಕಾಲೇಜು, 2ನೇ ಮುಖ್ಯ ರಸ್ತೆ, 6ನೇ ಕ್ರಾಸ್ (ಕೇಂದ್ರ ವಲಯ).
-
ಅರಕೆರೆ: ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪುಟ್ಟೇನಹಳ್ಳಿ, ಜಂಬೂಸವಾರಿ ದಿನ್ನೆ ಮುಖ್ಯರಸ್ತೆ (ದಕ್ಷಿಣ ವಲಯ).
-
ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಹೆಗ್ಗನಹಳ್ಳಿ: ಹೆಗ್ಗನಹಳ್ಳಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, ಎಚ್‌ಎಂಟಿ ಲೇಔಟ್ (ಪಶ್ಚಿಮ ವಲಯ).
-
ಮಾರುತಿಸೇವಾನಗರ: ಸೀತಾರಾಮ ಕಲ್ಯಾಣ ಮಂಟಪ, ಬಾಣಸವಾಡಿ ಮುಖ್ಯರಸ್ತೆ (ಉತ್ತರ ವಲಯ).
-
ಜೆ.ಜೆ.ಆರ್ ನಗರ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಪಾದರಾಯನಪುರ (ಕೇಂದ್ರ ವಲಯ).
-
ಎಚ್‌ಎಸ್‌ಆರ್ ಲೇಔಟ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೆಕ್ಟರ್-1 (ದಕ್ಷಿಣ ವಲಯ).
-
ಮಹಾಕ್ಷ್ಮೀ ಲೇಔಟ್ ಮತ್ತು ನಾಗಪುರ: ಮಹಾಲಕ್ಷ್ಮೀಪುರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, ಪಾಲಿಕೆ ಸಂಕೀರ್ಣ, ವೆಸ್ಟ್ ಆಫ್ ಕಾರ್ಡ್ ರಸ್ತೆ (ಪಶ್ಚಿಮ ವಲಯ).
-
ಎಚ್.ಬಿ.ಆರ್. ಲೇಔಟ್: ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಾಥಮಿಕ ಶಾಲೆ, 7ನೇ ಮುಖ್ಯರಸ್ತೆ (ಉತ್ತರ ವಲಯ).
-
ಸಿ.ವಿ.ರಾಮನ್ ನಗರ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, 9ನೇ ಎ ಮುಖ್ಯ ರಸ್ತೆ, ಜೀವನ್ ಭೀಮಾ ನಗರ (ಕೇಂದ್ರ ವಲಯ).
-
ಜಯನಗರ 4ನೇ ಬ್ಲಾಕ್: ಬಹುಉದ್ದೇಶ ಕಾರ್ಪೊರೇಷನ್ ಕಟ್ಟಡ, 2ನೇ ಕ್ರಾಸ್ ರಸ್ತೆ, ಸಿಎಚ್‌ಸಿಎಸ್ ಲೇಔಟ್ (ದಕ್ಷಿಣ ವಲಯ).
-
ಯಶವಂತಪುರ: ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹೆಸರಘಟ್ಟ ರಸ್ತೆ (ಉತ್ತರ ವಲಯ).
-
ಜೀವನ್ ಭೀಮಾ ನಗರ: ಜೀವನ್ ಭೀಮಾ ನಗರ, ತಮಿಳು ಸರ್ಕಾರಿ ಶಾಲೆ (ಕೇಂದ್ರ ವಲಯ).
-
ಪದ್ಮನಾಭನಗರ: ಎಆರ್‌ಒ ಕಚೇರಿ, ಸಿಜೆ ವೆಂಕಟದಾಸ್ ರಸ್ತೆ, ಲಕ್ಷ್ಮೀಕಾಂತ ಪಾರ್ಕ್ ಎದುರು (ದಕ್ಷಿಣ ವಲಯ).
-
ಗಾಂಧಿನಗರ: ಗುಂಡೂರಾವ್ ಮೈದಾನ, ಸಿರೂರ್ ಪಾರ್ಕ್ ರಸ್ತೆ, ಮಲ್ಲೇಶ್ವರಂ (ಕೇಂದ್ರ ವಲಯ).
-
ಶೆಟ್ಟಿಹಳ್ಳಿ: ಆರ್‌ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಚಿಕ್ಕಬಾಣಾವರ ರೈಲು ನಿಲ್ದಾಣ ರಸ್ತೆ, ಮೇಡರಹಳ್ಳಿ (ಉತ್ತರ ವಲಯ).
ನಿಮ್ಮ ಬಿ-ಖಾತಾ ಆಸ್ತಿಯನ್ನು ಎ-ಖಾತಾಗೆ ಬದಲಾಯಿಸಿಕೊಂಡರೆ ಬ್ಯಾಂಕ್ ಲೋನ್ ಪಡೆಯುವುದು, ಸೈಟ್ ಅಥವಾ ಮನೆ ಮಾರಾಟ ಮಾಡುವುದು ತುಂಬಾ ಈಜಿಯಾಗುತ್ತದೆ. ಹಾಗಾಗಿ ಬೆಂಗಳೂರಿನ ಪ್ರತಿಯೊಬ್ಬ ಆಸ್ತಿ ಮಾಲೀಕರು ಈ 100 ದಿನಗಳ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳದೆ ಇಂದೇ ಹತ್ತಿರದ ಕೇಂದ್ರಕ್ಕೆ ಭೇಟಿ ನೀಡಿ ಡಿಜಿಟಲ್ ಇ-ಖಾತಾ ಪಡೆದುಕೊಳ್ಳಿ!