ಮಾರ್ಚ್ 3ರಂದು ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಮುಖ ಪುಣ್ಯಕ್ಷೇತ್ರಗಳ ದರ್ಶನ ಮತ್ತು ಸೇವಾ ಸಮಯಗಳಲ್ಲಿ ಭಾರಿ ಬದಲಾವಣೆಗಳಾಗದೆ. ಭಕ್ತಾದಿಗಳ ಅನುಕೂಲಕ್ಕಾಗಿ ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ
ಮಾರ್ಚ್ 3ರಂದು ಗ್ರಸ್ತೋದಯ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದ ಪೂರ್ವ ಭಾಗದಲ್ಲಿ ಸ್ಪಷ್ಟವಾಗಿ ಹಾಗೂ ದಕ್ಷಿಣ ಭಾಗದಲ್ಲಿ ಆಂಶಿಕವಾಗಿ ಗೋಚರಿಸುವುದರಿಂದ, ಧಾರ್ಮಿಕ ವಿಧಿವಿಧಾನಗಳ ಪ್ರಕಾರ ದೇಗುಲಗಳ ದರ್ಶನ ಸಮಯದಲ್ಲಿ ವ್ಯತ್ಯಾಸ ಮಾಡಲಾಗಿದೆ.
ಗ್ರಹಣದ ಸಮಯ (ಸಂಗ್ರಹ)
ಸ್ಪರ್ಶ ಕಾಲ: ಮಧ್ಯಾಹ್ನ 3:13
ಮಧ್ಯಕಾಲ: ಸಂಜೆ 5:00
ಮೋಕ್ಷಕಾಲ: ಸಂಜೆ 6:47
ಪ್ರಮುಖ ಕ್ಷೇತ್ರಗಳ ವಿವರ
1. ಶ್ರೀ ಕ್ಷೇತ್ರ ಧರ್ಮಸ್ಥಳ
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಗ್ರಹಣದ ಪ್ರಯುಕ್ತ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
- ದರ್ಶನ ಲಭ್ಯತೆ: ಬೆಳಗ್ಗೆ 6:30ರಿಂದ ಮಧ್ಯಾಹ್ನ 1:30ರವರೆಗೆ ಮಾತ್ರ.
- ದರ್ಶನ ಸ್ಥಗಿತ: ಮಧ್ಯಾಹ್ನ 1:30ರಿಂದ ಸಂಜೆ 7:30ರವರೆಗೆ ದರ್ಶನವಿರುವುದಿಲ್ಲ.
- ಪುನರಾರಂಭ: ರಾತ್ರಿ 8:00 ಗಂಟೆಯ ನಂತರ ಭಕ್ತರಿಗೆ ಎಂದಿನಂತೆ ದರ್ಶನಕ್ಕೆ ಅವಕಾಶವಿರುತ್ತದೆ.
2. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾರ್ಚ್ 2 ಮತ್ತು 3 ಎರಡೂ ದಿನಗಳ ಸೇವೆಯಲ್ಲಿ ವ್ಯತ್ಯಯವಿರಲಿದೆ.
- ಸೇವೆಗಳು: ಮಾರ್ಚ್ 2 ಮತ್ತು 3ರಂದು ಸರ್ಪ ಸಂಸ್ಕಾರ ಹಾಗೂ ಇತರ ಪ್ರಮುಖ ಪೂಜೆಗಳು ನಡೆಯುವುದಿಲ್ಲ.
- ಮಾರ್ಚ್ 3ರ ದರ್ಶನ: ಬೆಳಗ್ಗೆ 9:00 ಗಂಟೆಯ ನಂತರ ದೇವರ ದರ್ಶನಕ್ಕೆ ಅವಕಾಶವಿಲ್ಲ.
- ಊಟೋಪಹಾರ - ಬೆಳಗ್ಗೆ 9:00 ಗಂಟೆಯವರೆಗೆ ಮಾತ್ರ ಉಪಾಹಾರ ಲಭ್ಯವಿದ್ದು, ಮಧ್ಯಾಹ್ನದ ಭೋಜನ ವ್ಯವಸ್ಥೆ ಇರುವುದಿಲ್ಲ.
- ಮಹಾಪೂಜೆ: ಸಂಜೆ 7:00 ಗಂಟೆಯ ನಂತರ ದೇವರಿಗೆ ವಿಶೇಷ ಮಹಾಪೂಜೆ ನಡೆಯಲಿದೆ.
3. ತಿರುಪತಿ ತಿರುಮಲ ದೇವಸ್ಥಾನ
ವಿಶ್ವಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ಗ್ರಹಣದ ಕಾರಣದಿಂದ ಸುಮಾರು 10 ಗಂಟೆಗಳ ಕಾಲ ದರ್ಶನ ಸ್ಥಗಿತಗೊಳ್ಳಲಾಗಿತ್ತದೆ.
- ದರ್ಶನ ಸ್ಥಗಿತ - ಬೆಳಗ್ಗೆ 9:00ರಿಂದ ರಾತ್ರಿ 7:30ರವರೆಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ.
- ದರ್ಶನ ಪುನರಾರಂಭ - ರಾತ್ರಿ 8:00 ಗಂಟೆಯ ನಂತರ ಭಕ್ತರು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಬಹುದು.
ಭಕ್ತಾದಿಗಳು ಈ ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕೆಂದು ದೇಗುಲದ ಆಡಳಿತ ಮಂಡಳಿಗಳು ವಿನಂತಿಸಿವೆ. ಶ್ರೀಶೈಲ ಮತ್ತು ಕಣಿಪಾಕಂ ದೇಗುಲಗಳಲ್ಲೂ ಸಹ ಇದೇ ಮಾದರಿಯ ಬದಲಾವಣೆಗಳು ಇರಲಿವೆ.