ಉಳ್ಳಾಲ ಮಸೀದಿ ಬಳಿ ಬಾಂಬ್ ಬೆದರಿಕೆ - ಸಾಮಾಜಿಕ ಜಾಲತಾಣದ ಕಿಡಿಗೇಡಿತನಕ್ಕೆ ಪೊಲೀಸರ ಬಿಸಿ!!

ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಕೋಮು ಸೌಹಾರ್ದತೆ ಕೆಡಿಸಲು ಇನ್‌ಸ್ಟಾಗ್ರಾಮ್ ಕಮೆಂಟ್ ಒಂದನ್ನು ಅಸ್ತ್ರವಾಗಿ ಬಳಸಲಾಗಿದೆ. ಸುಹಾಸ್ ಶೆಟ್ಟಿ ಎಂಬುವವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶಂಕರ್ ಎಂಬ ವ್ಯಕ್ತಿ, ಮಸೀದಿಯ ಮೇಲೆ ಬಾಂಬ್ ಹಾಕುವ ಬೆದರಿಕೆ ಒಡ್ಡಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಈ ಪ್ರಚೋದನಾಕಾರಿ ಸಂದೇಶ ವೈರಲ್ ಆಗುತ್ತಿದ್ದಂತೆಯೇ ಸಕ್ರಿಯರಾದ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಅವರು, ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿ ಸೈಬರ್ ತಜ್ಞರ ವಿಶೇಷ ತಂಡವನ್ನು ತನಿಖೆಗೆ ಇಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕುಳಿತು ಸಮಾಜದಲ್ಲಿ ಕಿಚ್ಚು ಹಚ್ಚುವವರನ್ನು ಜೈಲಿಗಟ್ಟಲು ಇಲಾಖೆ ಈಗ ಬಲೆ ಬೀಸಿದೆ.

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ - ಮಂಗಳೂರಿನಲ್ಲಿ ಬಾರಿ ಆತಂಕ!!
ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ - ಮಂಗಳೂರಿನಲ್ಲಿ ಬಾರಿ ಆತಂಕ!!

ಉಳ್ಳಾಲ ಮಸೀದಿ ಬಾಂಬ್ ಬೆದರಿಕೆ ಬೆನ್ನಲ್ಲೇ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದರ್ಗಾ ಮತ್ತು ಮಸೀದಿಯ ಸುತ್ತಮುತ್ತ ಪೊಲೀಸರು ಹಗಲಿರುಳು ಕಣ್ಗಾವಲು ಇಟ್ಟಿದ್ದು, ಸಿಸಿಟಿವಿ ಮೂಲಕ ಪ್ರತಿಯೊಂದು ಚಲನವಲನವನ್ನೂ ಗಮನಿಸುತ್ತಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಕಿಡಿಗೇಡಿತನವೇ ಅಥವಾ ಇದರ ಹಿಂದೆ ದೊಡ್ಡ ಸಂಚಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಸಾಗುತ್ತಿದೆ. ವದಂತಿಗಳಿಂದ ದೂರವಿರುವಂತೆ ಮನವಿ ಮಾಡಿರುವ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ ಕಾನೂನಿನ ಅಡಿ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಇಂದಿನ ಆನ್‌ಲೈನ್ ಕಾಲದಲ್ಲಿ ಒಂದು ಸಣ್ಣ ಮಾತು ಕೂಡ ದೊಡ್ಡ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು ಎಂಬ ಪಾಠವನ್ನು ಉಳ್ಳಾಲದ ಘಟನೆ ಕಲಿಸಿದೆ. ಜನರ ನೆಮ್ಮದಿ ಕೆಡಿಸಿದ ಕಿಡಿಗೇಡಿಯನ್ನು ಹಿಡಿಯಲು ಪೊಲೀಸರು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ದ್ವೇಷ ಬಿತ್ತುವ ಮನಸ್ಥಿತಿಗಳು ಬಹಳ ಅಪಾಯಕಾರಿ. ಈಗ ಪರಿಸ್ಥಿತಿ ಹತೋಟಿಯಲ್ಲಿದೆ, ಆದರೆ ನಮ್ಮ ಜವಾಬ್ದಾರಿ ಇಲ್ಲಿಗೆ ಮುಗಿಯುವುದಿಲ್ಲ. ಶಾಂತಿ ಕದಡುವ ಯಾವುದೇ ಪೋಸ್ಟ್‌ಗಳನ್ನು ಶೇರ್ ಮಾಡದೆ ಜಾಗರೂಕರಾಗಿರುವುದು ನಮ್ಮೆಲ್ಲರ ಕರ್ತವ್ಯ. 

ಉಳ್ಳಾಲ ಮಸೀದಿ ಬಾಂಬ್ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆರೋಪಿ ಶಂಕರ್ ಬಂಧನಕ್ಕೆ ಬಲೆ ಬೀಸಿದೆ. ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಯಾನಕ ಪೋಸ್ಟ್ ಹಾಕುವವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದ್ದು, ಸಮಾಜದಲ್ಲಿ ಸಂಘರ್ಷ ಹುಟ್ಟುಹಾಕುವ ಶಕ್ತಿಗಳ ವಿರುದ್ಧ ರಾಜಿ ಇಲ್ಲದ ಸಮರ ಸಾರುವುದಾಗಿ ಮಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ. 

Latest News