Feb 16, 2026 Languages : ಕನ್ನಡ | English

ಅಭ್ಯರ್ಥಿ ಘೋಷಣೆ ಮಾಡಲು ನಿಖಿಲ್ ಕುಮಾರಸ್ವಾಮಿ ಯಾರು? - ಕಟುವಾಗಿ ಟೀಕಿಸಿದ ಪ್ರೀತಂ ಗೌಡ!!

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಯೊಳಗಿನ ಭಿನ್ನಮತ ಇದೀಗ ಬಹಿರಂಗವಾಗಿ ಸ್ಫೋಟಗೊಂಡಿದೆ. ಕೆ.ಆರ್.ಪೇಟೆ ಕ್ಷೇತ್ರದ ಅಭ್ಯರ್ಥಿ ಘೋಷಣೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಕಟಣೆ ನೀಡಿದ್ದು, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಾರಾಯಣಗೌಡ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಹಾಲಿ ಶಾಸಕ ಇದ್ದರೂ ಬಿಜೆಪಿ ಅಭ್ಯರ್ಥಿ ಘೋಷಿಸಿರುವುದು ಜೆಡಿಎಸ್‌ಗೆ ದೊಡ್ಡ ಶಾಕ್ ಆಗಿದೆ.

ಮಂಡ್ಯ ರಾಜಕೀಯದಲ್ಲಿ ನೇರ ಟಕ್ಕರ್: ನಿಖಿಲ್ vs ಪ್ರೀತಂ
ಮಂಡ್ಯ ರಾಜಕೀಯದಲ್ಲಿ ನೇರ ಟಕ್ಕರ್: ನಿಖಿಲ್ vs ಪ್ರೀತಂ

ಇದಕ್ಕೆ ವಿರುದ್ಧವಾಗಿ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಎಂಎಲ್‌ಎ ಮಂಜು ಮುಂದಿನ ಅಭ್ಯರ್ಥಿ ಎಂದು ಘೋಷಿಸಿದ್ದರು. ಆದರೆ ಬಿಜೆಪಿ ಜೊತೆ ಯಾವುದೇ ಚರ್ಚೆ ನಡೆಸದೇ ಈ ಘೋಷಣೆ ಮಾಡಿರುವುದನ್ನು ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕಟುವಾಗಿ ಟೀಕಿಸಿದ್ದಾರೆ. “ಅಭ್ಯರ್ಥಿ ಘೋಷಣೆ ಮಾಡಲು ನಿಖಿಲ್ ಕುಮಾರಸ್ವಾಮಿ ಯಾರು?” ಎಂದು ಪ್ರಶ್ನಿಸಿರುವ ಪ್ರೀತಂ ಗೌಡ, “ಟಿಕೆಟ್ ವಿಚಾರದಲ್ಲಿ ಮಾತಾಡಬೇಡ ಎಂದು ನಿಖಿಲ್‌ಗೆ ಎಚ್ಚರಿಕೆ ನೀಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಮೂಲಕ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರೀತಂ ಗೌಡ ನಡುವೆ ನೇರ ಟಕ್ಕರ್ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಯ ಭವಿಷ್ಯ ಪ್ರಶ್ನಾರ್ಥಕವಾಗಿ ಪರಿಣಮಿಸಿದೆ ಎನ್ನಬಹುದು. ಮೈತ್ರಿಯೊಳಗಿನ ಭಿನ್ನಮತ ಮುಂದಿನ ಚುನಾವಣಾ ತಂತ್ರಗಳಿಗೆ ದೊಡ್ಡ ಸವಾಲು ಎತ್ತಿದೆ. ರಾಜಕೀಯ ವಿಶ್ಲೇಷಕರ ಅಭಿಪ್ರಾಯದಲ್ಲಿ, ಅಭ್ಯರ್ಥಿ ಘೋಷಣೆ ಕುರಿತ ಈ ವಿವಾದವು ಮೈತ್ರಿಯ ವಿಶ್ವಾಸಾರ್ಹತೆಯನ್ನು ಕುಂದಿಸುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದೆಯೇ ಅಥವಾ ಭಿನ್ನಮತದಿಂದ ಬಿರುಕು ಬೀಳುತ್ತದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.   

Latest News