Feb 16, 2026 Languages : ಕನ್ನಡ | English

11 ತಿಂಗಳ ಈ ಟಗರು ಮರಿಗೆ ಕೊಟ್ಟಿದ್ದು ಬರೋಬ್ಬರಿ ಎಷ್ಟು ಲಕ್ಷ ಗೊತ್ತಾ ? ಈ ತಳಿಯ ವಿಶೇಷತೆ ಹೀಗಿದೆ!!

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಬಂಡೂರು ಕುರಿಯೊಂದು ದಾಖಲೆ ಬೆಲೆಗೆ ಮಾರಾಟವಾಗಿರುವುದಾಗಿ ಕೇಳಿ ಬಂದಿದೆ. ಹೌದು ಬರಿ ಕೇವಲ 11 ತಿಂಗಳ ಟಗರು 1 ಲಕ್ಷ 35 ಸಾವಿರ ರೂಪಾಯಿಗೆ ಮಾರಾಟವಾಗಿದ್ದು, ಈ ಸುದ್ದಿ ಸ್ಥಳೀಯವಾಗಿ ಮಾತ್ರವಲ್ಲದೆ ರಾಜ್ಯದಾದ್ಯಂತ ಕುತೂಹಲ ಮೂಡಿಸಿದೆ ಎನ್ನಬಹುದು. ಈ ಕುರಿ ಕಿರುಗಾವಲು ಗ್ರಾಮದ ರೈತ ಉಲ್ಲಾಸ್ ಗೌಡ ಎಂಬುವವರಿಗೆ ಸೇರಿದ್ದು, ಅವರು ಸಾಕಿದ ಬಂಡೂರು ತಳಿ ಕುರಿ ತನ್ನ ಗುಣಮಟ್ಟ ಮತ್ತು ಆರೋಗ್ಯದಿಂದ ಗಮನ ಸೆಳೆದಿತ್ತು. 

ಮಂಡ್ಯದಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಬಂಡೂರು ಕುರಿ
ಮಂಡ್ಯದಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಬಂಡೂರು ಕುರಿ

ಬಂಡೂರು ಕುರಿ ತಳಿ ಕರ್ನಾಟಕದಲ್ಲಿ ಪ್ರಸಿದ್ಧವಾಗಿದೆ. ಅದರ ದೇಹದ ಬಲ, ತೂಕ ಮತ್ತು ಆಕರ್ಷಕ ರೂಪವು ಮಾರುಕಟ್ಟೆಯಲ್ಲಿ ಸಕತ್  ಹೆಚ್ಚಿನ ಬೆಲೆ ಪಡೆಯಲು ಕಾರಣವಾಗಿದೆ ಎನ್ನುತ್ತಾರೆ ಈ ಕುರಿಯ ಕಡೆಯವರು. ಹೌದು ಈ ಕುರಿಯನ್ನು ಖರೀದಿಸಿದವರು ಬೆಂಗಳೂರಿನ ಇಂಜಿನಿಯರ್ ಹರೀಶ್. ಕುರಿ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವ ಹರೀಶ್, ಬಂಡೂರು ತಳಿ ಅಭಿವೃದ್ದಿಗಾಗಿ ಈ ಟಗರನ್ನು ಖರೀದಿಸಿದ್ದಾರೆ. ಬಂಡೂರು ಕುರಿ ತಳಿ ಉತ್ತಮ ಗುಣಮಟ್ಟ ಹೊಂದಿದೆ. ಇದರ ಸಂರಕ್ಷಣೆ ಮತ್ತು ವಿಸ್ತರಣೆ ಅಗತ್ಯ ಹೆಚ್ಚು ಇದೆ. ಅದಕ್ಕಾಗಿ ನಾನು ಈ ಟಗರನ್ನು ಖರೀದಿಸಿದ್ದೇನೆ ಎಂದು ಹರೀಶ್ ಅವರು ಅಭಿಪ್ರಾಯಪಟ್ಟಿದ್ದಾರೆ.

1 ಲಕ್ಷ 35 ಸಾವಿರ ರೂಪಾಯಿ ನೀಡಿ ಟಗರನ್ನು ಖರೀದಿಸಿದ ಹರೀಶ್ ಅವರಿಗೆ ರೈತ ಉಲ್ಲಾಸ್ ಗೌಡರು ಸನ್ಮಾನ ಮಾಡಿದರು. ಟಗರನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಬಿಳ್ಕೊಡಿಗೆ ನೀಡಿ ಗೌರವ ಸಲ್ಲಿಸಿದರು. ಈ ಸನ್ನಿವೇಶವು ಗ್ರಾಮಸ್ಥರಿಗೂ ಸಂತೋಷ ತಂದಿತು. ಬಂಡೂರು ಕುರಿ ತಳಿ ಕರ್ನಾಟಕದ ಪಶುಸಂಗೋಪನಾ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆದಿದೆ. ಉತ್ತಮ ತಳಿ, ಆರೋಗ್ಯಕರ ದೇಹ, ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಈ ಎಲ್ಲಾವೂ  ಕಾರಣಗಳಿಂದ ಬಂಡೂರು ಕುರಿ ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗಿದೆ. ಈ ದಾಖಲೆ ಬೆಲೆಯ ಮಾರಾಟವು ಬಂಡೂರು ಕುರಿ ತಳಿಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಗ್ರಾಮಸ್ಥರು, “ಉಲ್ಲಾಸ್ ಗೌಡರು ಸಾಕಿದ ಕುರಿ ಇಷ್ಟು ದೊಡ್ಡ ಬೆಲೆಗೆ ಮಾರಾಟವಾಗಿರುವುದು ನಮ್ಮ ಗ್ರಾಮಕ್ಕೆ ಹೆಮ್ಮೆ ತಂದಿದೆ. ಇದು ಬಂಡೂರು ಕುರಿ ತಳಿಯ ಶಕ್ತಿ ಮತ್ತು ಮೌಲ್ಯವನ್ನು ತೋರಿಸುತ್ತದೆ” ಎಂದು ಅಭಿಪ್ರಾಯ ಹಂಚಿಕೊಂಡರು. ಹೌದು ಮಂಡ್ಯದಲ್ಲಿ ನಡೆದ ಈ ದಾಖಲೆ ಬೆಲೆಯ ಕುರಿ ಮಾರಾಟವು ರೈತರ ಪರಿಶ್ರಮ, ಬಂಡೂರು ತಳಿಯ ಮಹತ್ವ ಮತ್ತು ಪಶುಸಂಗೋಪನಾ ಕ್ಷೇತ್ರದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಇಂಜಿನಿಯರ್ ಹರೀಶ್ ಅವರ ಖರೀದಿ ಬಂಡೂರು ಕುರಿ ತಳಿಯ ಸಂರಕ್ಷಣೆ ಮತ್ತು ಅಭಿವೃದ್ದಿಗೆ ಹೊಸ ದಾರಿ ತೆರೆದಿದೆ.

Latest News