ಒಬ್ಬ ಮಹಿಳೆ ನಾಯಿಮರಿಗಳಿಗೆ ನೀಡಿರುವ ಹಿಂಸೆಯ ವರದಿ ಕೇಳಿ ಇಡೀ ತಮಿಳುನಾಡು ಬೆಚ್ಚಿಬಿದ್ದಿದೆ. ಈ ಘಟನೆ ಮನುಷ್ಯರಲ್ಲಿ ಕರುಣೆ ಮಾಯವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮೂಕ ಪ್ರಾಣಿಗಳ ಮೇಲೆ ಇಷ್ಟೊಂದು ಕ್ರೂರವಾಗಿ ವರ್ತಿಸಿರುವುದು ಅತ್ಯಂತ ಅಮಾನವೀಯ ಮತ್ತು ಕೆಟ್ಟ ಕೆಲಸವಾಗಿದೆ.
ಯಾವುದೇ ತಪ್ಪು ಮಾಡದ ನಾಯಿಮರಿಗಳ ಮಹಿಳೆಯೊಬ್ಬರು ಕ್ರೂರವಾಗಿ ನೆಲಕ್ಕೆ ಅಪ್ಪಳಿಸಿ ಕೊಂ*ದ ಘಟನೆ ಮಧುರೈನಲ್ಲಿ ನಡೆದಿದೆ. ಈ ಅಮಾನವೀಯ ದಾಳಿಯಲ್ಲಿ ಎರಡು ನಾಯಿಮರಿಗಳು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿರುವ ಇತರ ಮರಿಗಳ ಸ್ಥಿತಿ ತುಂಬಾ ಚಿಂತಾಜನಕವಾಗಿದೆ.
ನಾಯಿಮರಿಗಳನ್ನು ಸಾ*ಯಿಸಿದ ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯ ಕ್ರೌರ್ಯವು ವಿಡಿಯೋದಲ್ಲಿ ಬಯಲಾಗಿದೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಮಾತನಾಡಲಾರದ ಈ ಪುಟ್ಟ ಜೀವಿಗಳ ಮೇಲೆ ಇಂತಹ ರಾಕ್ಷಸೀ ಪ್ರವೃತ್ತಿ ಬೇಕಿತ್ತಾ? ಎಂದು ಜನರು ಕೇಳುತ್ತಿದ್ದಾರೆ.
ಮಧುರೈನಲ್ಲಿ ನಡೆದ ಈ ಅಮಾನವೀಯ ಕೃತ್ಯದ ವಿರುದ್ಧ ಪ್ರಾಣಿ ದಯಾ ಸಂಘಟನೆಗಳು ಸಿಡಿದೆದ್ದಿವೆ. ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಲಾಗುತ್ತಿದೆ. ಇಂತಹ ಘಟನೆಗಳು ಮತ್ತೆ ನಡೆಯಬಾರದು ಎಂದರೆ ಆಕೆಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಹೇಳುತ್ತಿದ್ದಾರೆ.
ಈ ಘಟನೆಯನ್ನು ನೋಡಿದಾಗ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆಯೇ ಇದು. ಪ್ರೀತಿ ಮತ್ತು ಕರುಣೆಯ ಬದಲು ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಇಷ್ಟೊಂದು ದ್ವೇಷ ಹೇಗೆ ತುಂಬಿರಲು ಸಾಧ್ಯ? ಸಾಮಾನ್ಯವಾಗಿ ಸಣ್ಣ ಮಕ್ಕಳು ಅಥವಾ ಪ್ರಾಣಿಗಳನ್ನು ನೋಡಿದಾಗ ನಮಗೆ ಪ್ರೀತಿ ಉಕ್ಕುತ್ತದೆ. ಆದರೆ, ಸಹಾಯ ಮಾಡಲಾರದ ಮುಗ್ಧ ಜೀವಿಗಳನ್ನು ಪ್ರಾಣ ಹೋಗುವಂತೆ ಹೊಡೆಯುವುದು ಮಾನಸಿಕ ವಿಕೃತಿಯ ಲಕ್ಷಣವಾಗಿದೆ. ಕೋಪ ಅಥವಾ ಕಿರಿಕಿರಿ ಇದ್ದರೂ ಅದನ್ನು ಪ್ರಾಣಿಗಳ ಮೇಲೆ ತೋರಿಸುವುದು ಅತ್ಯಂತ ಹೇಡಿಗಳ ಕೆಲಸ.
Madurai, Tamil Nadu
— ︎ ︎venom (@venom1s) March 6, 2026
> A woman harmed several puppies
> Two puppies lost their lives
> The incident was recorded on a nearby CCTV camera
> People are demanding strict action against the woman
How can someone be so cruel?
Are women really the kinder gender? pic.twitter.com/yeYud7c081
ಸಾಮಾನ್ಯವಾಗಿ ಸಮಾಜದಲ್ಲಿ ಒಂದು ನಂಬಿಕೆಯಿದೆ: "ಮಹಿಳೆಯರು ಪುರುಷರಿಗಿಂತ ಹೆಚ್ಚು ಮೃದು ಸ್ವಭಾವದವರು ಮತ್ತು ಕರುಣಾಮಯಿಗಳು" ಎಂದು. ಆದರೆ ಇಂತಹ ಘಟನೆಗಳು ಆ ನಂಬಿಕೆಯನ್ನು ಸುಳ್ಳು ಮಾಡುತ್ತವೆ. ಕ್ರೌರ್ಯಕ್ಕೆ ಯಾವುದೇ ಲಿಂಗಭೇದವಿಲ್ಲ. ಕ್ರೂರತನವು ವ್ಯಕ್ತಿಯ ಮನಸ್ಥಿತಿಯನ್ನ ಅವಲಂಬಿಸಿರುತ್ತದೆಯೇ ಹೊರತು ಅವರು ಗಂಡು ಅಥವಾ ಹೆಣ್ಣು ಎಂಬುದರ ಮೇಲಲ್ಲ. ಒಬ್ಬ ತಾಯಿಯಾಗಿ ಅಥವಾ ಒಬ್ಬ ಮಹಿಳೆಯಾಗಿ ಜೀವದ ಬೆಲೆ ತಿಳಿದಿರಬೇಕಾದವರು ಇಂತಹ ಕೆಲಸ ಮಾಡುವುದು ನಿಜಕ್ಕೂ ಆಘಾತಕಾರಿ. ಕರುಣೆ ಎನ್ನುವುದು ಹೃದಯದಲ್ಲಿದ್ದರೆ ಮಾತ್ರ ಅದು ಲಿಂಗಕ್ಕೆ ಸಂಬಂಧಿಸಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.