Mar 23, 2026 Languages : ಕನ್ನಡ | English

ಬಾಡಿಗೆದಾರನ ಜೊತೆ ಅಕ್ರಮ ಸಂಬಂಧ - ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯ ಭೀಕರ ಹತ್ಯೆ!!

ಉತ್ತರ ಪ್ರದೇಶದ ಲಖನೌನಲ್ಲಿ ಮಾನವೀಯತೆ ಮರೆಸುವಂತಹ ಕ್ರೂರ ಘಟನೆಯೊಂದು ನಡೆದಿದೆ. ಅಕ್ರಮ ಸಂಬಂಧದ ಅಮಲಿನಲ್ಲಿ ಸೊಸೆ ಮತ್ತು ಆಕೆಯ ಪ್ರಿಯತಮ ಸೇರಿ ಹಿರಿಯ ಜೀವವೊಂದನ್ನು ಬಲಿ ಪಡೆದಿದ್ದಾರೆ. ಈ ಘಟನೆಯು ಅಕ್ರಮ ಸಂಬಂಧಗಳು ಹೇಗೆ ಸುಂದರ ಸಂಸಾರವನ್ನು ನಾಶ ಮಾಡುತ್ತವೆ ಮತ್ತು ಕೊಲೆಯಲ್ಲಿ ಅಂತ್ಯಗೊಳ್ಳುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಭೀಕರ ಹತ್ಯಾಕಾಂಡದ ಸುರುಳಿ ಬಿಚ್ಚಿದ ಪೊಲೀಸರು
ಉತ್ತರ ಪ್ರದೇಶದ ಭೀಕರ ಹತ್ಯಾಕಾಂಡದ ಸುರುಳಿ ಬಿಚ್ಚಿದ ಪೊಲೀಸರು

ಲಖನೌ ನಿವಾಸಿಗಳಾದ ತ್ರಿದೇಶ್ ಮತ್ತು ರಂಜನಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇವರ ಜೊತೆಯಲ್ಲಿ ತ್ರಿದೇಶ್ ಅವರ ತಾಯಿ, 69 ವರ್ಷದ ನಿರ್ಮಲಾ ದೇವಿ ಕೂಡ ವಾಸವಾಗಿದ್ದರು. ತ್ರಿದೇಶ್ ತಮ್ಮ ಕುಟುಂಬದ ಉತ್ತಮ ಜೀವನಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಅವರು ಹೆಚ್ಚಾಗಿ ಮನೆಯಿಂದ ಹೊರಗಿರಬೇಕಾಗುತ್ತಿತ್ತು, ಕೆಲವೊಮ್ಮೆ ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಇವರ ಎರಡು ಮಹಡಿಯ ಮನೆಯ ಮೇಲ್ಭಾಗವನ್ನು ರಾಜನ್ ಎಂಬ ಯುವಕನಿಗೆ ಬಾಡಿಗೆಗೆ ನೀಡಲಾಗಿತ್ತು. ಪತಿ ಮನೆಯಲ್ಲಿ ಇಲ್ಲದ ಸಮಯವನ್ನು ಬಳಸಿಕೊಂಡ ರಂಜನಾ, ತನಗಿಂತ ವಯಸ್ಸಿನಲ್ಲಿ ಕಿರಿಯನಾದ ಬಾಡಿಗೆದಾರ ರಾಜನ್ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು.

ಮಕ್ಕಳು ಶಾಲೆಗೆ ಹೋದ ನಂತರ ರಂಜನಾ ಪ್ರತಿದಿನ ರಾಜನ್ ಇರುವ ಮೇಲಿನ ಮಹಡಿಗೆ ಹೋಗಿ ಸಮಯ ಕಳೆಯುತ್ತಿದ್ದಳು. ಇವರ ಈ ಅಕ್ರಮ ವ್ಯವಹಾರದ ವಿಷಯ ಅತ್ತೆ ನಿರ್ಮಲಾ ದೇವಿ ಅವರಿಗೆ ತಿಳಿದುಬಂದಿದೆ. ಮಗನ ಸಂಸಾರ ಹಾಳಾಗಬಾರದು ಮತ್ತು ಮೊಮ್ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಿರ್ಮಲಾ ದೇವಿ ಅವರು ಸೊಸೆಗೆ ತಿಳಿಹೇಳಲು ಪ್ರಯತ್ನಿಸಿದರು. ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿ, ಸೊಸೆಯನ್ನು ಸರಿದಾರಿಗೆ ತರಲು ಅವರು ಮುಂದಾಗಿದ್ದರು. ಆದರೆ, ಸುಧಾರಿಸಿಕೊಳ್ಳುವ ಬದಲು ರಂಜನಾ ಮತ್ತು ಆಕೆಯ ಪ್ರಿಯತಮ ಅತ್ತೆಯನ್ನೇ ಮುಗಿಸಲು ಸಂಚು ರೂಪಿಸಿದರು.

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ರಂಜನಾ ಮತ್ತು ರಾಜನ್ ಸೇರಿ ನಿರ್ಮಲಾ ದೇವಿ ಅವರ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಹತ್ಯೆ ಮಾಡುವ ಮೊದಲು ವೃದ್ಧೆಗೆ ತೀವ್ರ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಪರೀಕ್ಷೆ ಮುಗಿಸಿ ಮನೆಗೆ ಬಂದ ಮೊಮ್ಮಗ, ಅಜ್ಜಿ ಕೋಣೆಯಲ್ಲಿ ಕೈಕಾಲು ಕಟ್ಟಲ್ಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ತಂದೆಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ತ್ರಿದೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತನಿಖೆ ನಡೆಸಿದಾಗ ರಂಜನಾ ಮತ್ತು ರಾಜನ್ ಅವರ ಅಕ್ರಮ ಸಂಬಂಧ ಹಾಗೂ ಈ ಕೊಲೆಯ ಹಿಂದಿನ ಭೀಕರ ಸತ್ಯ ಹೊರಬಂದಿದೆ. ಅತ್ತೆಯನ್ನು ಕಟ್ಟಿಹಾಕಿ ಅವರ ಮುಂದೆಯೇ ಈ ಜೋಡಿ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದಿದ್ದಾರೆ ಎಂಬ ಆಘಾತಕಾರಿ ವಿಷಯವೂ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳಾದ ಸೊಸೆ ರಂಜನಾ ಮತ್ತು ಪ್ರಿಯತಮ ರಾಜನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸುಂದರವಾಗಿದ್ದ ಸಂಸಾರವೊಂದು ಅಕ್ರಮ ಸಂಬಂಧದ ಕಿಚ್ಚಿಗೆ ಬಲಿಯಾಗಿ ಬೀದಿಗೆ ಬಿದ್ದಿದೆ.