Apr 7, 2026 Languages : ಕನ್ನಡ | English

ಮತ್ತೊಂದು ಲವ್ ಜಿಹಾದ್ ವಿಡಿಯೋ ವೈರಲ್ - 'ನನ್ನ ಅಬ್ದುಲ್ ತುಂಬಾನೇ ಸ್ಪೆಷಲ್' ಎಂದಿದ್ದ ಯುವತಿಯ ಇಂದಿನ ಸ್ಥಿತಿ ನೋಡಿ!!

ಇಂದಿನ ಕಾಲದಲ್ಲಿ 'ಪ್ರೀತಿ' ಅನ್ನೋದು ಎಷ್ಟು ಕುರುಡು ಅಂದ್ರೆ, ಅದರಲ್ಲಿ ಬಿದ್ದವರಿಗೆ ಹೆತ್ತವರ ಕಣ್ಣೀರು ಕಾಣಿಸಲ್ಲ, ಅವರ ಅನುಭವದ ಮಾತುಗಳು ಕಿವಿಗೆ ಬೀಳಲ್ಲ. ಇಲ್ಲೊಬ್ಬಳು ಉದಾರವಾದಿ (Liberal) ಹಿಂದೂ ಹುಡುಗಿಯ ಕಥೆಯೂ ಹಾಗೆಯೇ ಆಗಿದೆ. ಮನೆಯವರು ಎಷ್ಟೇ ಬೇಡಿಕೊಂಡರೂ, "ನನ್ನ ಅಬ್ದುಲ್ ತುಂಬಾನೇ ಸ್ಪೆಷಲ್, ಅವನ ಬಗ್ಗೆ ನಿಮಗೆ ಗೊತ್ತಿಲ್ಲ" ಅಂತ ಹೆತ್ತವರನ್ನೇ ಹೀಯಾಳಿಸಿ, ಅವರ ವಿರೋಧದ ನಡುವೆಯೂ ಅಬ್ದುಲ್ ಎಂಬ ಯುವಕನನ್ನು ಮದುವೆಯಾದಳು. ತಾನು ಅಂದುಕೊಂಡಿದ್ದೇ ಸರಿ ಎಂಬ ಅಹಂಕಾರ ಅವಳಲ್ಲಿ ಮನೆಮಾಡಿತ್ತು.

ಹೆತ್ತವರ ಕಣ್ಣೀರು ಹಾಕಿಸಿ ಹೋದ ಮಗಳಿಗೆ ಸಿಕ್ಕಿದ 'ಸ್ಪೆಷಲ್' ಉಡುಗೊರೆ!! | Photo Credit: https://x.com/RadharamnDas
ಹೆತ್ತವರ ಕಣ್ಣೀರು ಹಾಕಿಸಿ ಹೋದ ಮಗಳಿಗೆ ಸಿಕ್ಕಿದ 'ಸ್ಪೆಷಲ್' ಉಡುಗೊರೆ!! | Photo Credit: https://x.com/RadharamnDas

ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯ 'ಸ್ಪೆಷಲ್ ಅಬ್ದುಲ್' ಅಸಲಿ ರೂಪ ಹೊರಬಂದಿದೆ. ಯಾವ ಸ್ವಾತಂತ್ರ್ಯದ ಬಗ್ಗೆ ಅವಳು ಮಾತನಾಡುತ್ತಿದ್ದಳೋ, ಅದೇ ಸ್ವಾತಂತ್ರ್ಯಕ್ಕೆ ಈಗ ಬೀಗ ಬಿದ್ದಿದೆ. ಹೊರಗೆ ಹೋಗುವಾಗ ಬುರ್ಖಾ ಅಥವಾ ಹಿಜಾಬ್ ಧರಿಸಬೇಕು ಎಂಬ ಒತ್ತಡ ಈಗ ಶುರುವಾಗಿದೆ. ಅವಳು ಅದನ್ನು ನಿರಾಕರಿಸಿದಾಗ, ಅದೇ 'ಪ್ರೇಮಿ' ಈಗ ಆಕೆಯ ಮೇಲೆ ಕೈ ಮಾಡುತ್ತಿದ್ದಾನೆ. ಹೆತ್ತವರು ಯಾವುದರ ಬಗ್ಗೆ ಎಚ್ಚರಿಕೆ ನೀಡಿದ್ದರೋ, ಅದೇ ನರಕಯಾತನೆ ಈಗ ಆಕೆಗೆ ಶುರುವಾಗಿದೆ. ಮನೆಯವರನ್ನು ನೋಯಿಸಿ ಹೋದವಳಿಗೆ ಈಗ ನೋವು ಹಂಚಿಕೊಳ್ಳಲು ಯಾರೂ ಇಲ್ಲದಂತಾಗಿದೆ.

ವಾಸ್ತವದಲ್ಲಿ, ಹೆತ್ತವರು ಮಗಳ ಮೇಲೆ ದ್ವೇಷದಿಂದ ಮದುವೆಗೆ ಬೇಡ ಅನ್ನಲ್ಲ. ಸಮಾಜದ ರೀತಿ-ರಿವಾಜುಗಳು, ಬದಲಾಗುವ ಸಂಸ್ಕೃತಿ ಮತ್ತು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕಠಿಣ ಸವಾಲುಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಆದರೆ, ಇಂದಿನ ಯುವತಿಯರು ಪ್ರೀತಿಯ ಅಮಲಿನಲ್ಲಿ ಹೆತ್ತವರನ್ನು ಶತ್ರುಗಳಂತೆ ಕಾಣುತ್ತಾರೆ. "ನನ್ನವನು ಹಾಗಲ್ಲ, ಎಲ್ಲರೂ ಒಂದೇ ಅಲ್ಲ" ಎಂಬ ಭ್ರಮೆಯಲ್ಲೇ ಬದುಕು ಹಾಳು ಮಾಡಿಕೊಳ್ಳುತ್ತಾರೆ. ಈ ಹುಡುಗಿಗೆ ಅಂದು ಹೆತ್ತವರು ಎಷ್ಟೇ ವಿವರಿಸಿದರೂ ಅರ್ಥವಾಗಲಿಲ್ಲ, ಆದರೆ ಇಂದು ಗಂಡನ ಪೆಟ್ಟುಗಳು ಆಕೆಗೆ ಬದುಕಿನ ಪಾಠವನ್ನು ಸರಿಯಾಗಿ ಕಲಿಸುತ್ತಿವೆ.

ಇಂತಹ ಘಟನೆಗಳು ಸಮಾಜದಲ್ಲಿ ಪದೇ ಪದೇ ನಡೆಯುತ್ತಿದ್ದರೂ, ಇಂದಿನ ಪೀಳಿಗೆಯ ಹುಡುಗಿಯರು ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆ. ಪ್ರೀತಿ ಮಾಡುವುದು ತಪ್ಪಲ್ಲ, ಆದರೆ ಆ ಪ್ರೀತಿ ತನ್ನ ಧರ್ಮ, ಸಂಸ್ಕೃತಿ ಮತ್ತು ಅತಿಮುಖ್ಯವಾಗಿ ತನ್ನ ಆತ್ಮಗೌರವವನ್ನು ಬಲಿ ತೆಗೆದುಕೊಳ್ಳುವಂತಿರಬಾರದು. ಸಂಕುಚಿತ ಮನೋಭಾವದ ಸಂಸ್ಕೃತಿಗೆ ಹೊಂದಿಕೊಳ್ಳಲು ಹೋಗಿ, ತನ್ನ ಸ್ವಂತ ಅಸ್ತಿತ್ವವನ್ನೇ ಕಳೆದುಕೊಳ್ಳುವುದು ಎಷ್ಟು ಸರಿ? ಅಂದು ತಂದೆ-ತಾಯಿ ಕಾಲು ಹಿಡಿದು ಬೇಡಿಕೊಂಡಾಗ ಮಗಳ ಮನಸ್ಸು ಕರಗಲಿಲ್ಲ, ಆದರೆ ಇಂದು ಅನಿವಾರ್ಯವಾಗಿ ಅದೇ ಸಂಸ್ಕೃತಿಗೆ ತಲೆಬಾಗಬೇಕಾದ ಪರಿಸ್ಥಿತಿ ಬಂದಿದೆ.

ಅಬ್ದುಲ್ ಇಂದು ಆಕೆಗೆ ಬದುಕಿನ ಕಹಿ ಸತ್ಯವನ್ನು ಪರಿಚಯಿಸಿದ್ದಾನೆ. ಹೆತ್ತವರು ಪ್ರೀತಿಯಿಂದ ಹೇಳಿದಾಗ ಅರ್ಥವಾಗದ ವಿಷಯ, ಇಂದು ಸಂಕಷ್ಟದ ಮೂಲಕ ಅರಿವಿಗೆ ಬರುತ್ತಿದೆ. ಇಂತಹ ಮೊಂಡುತನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುಡುಗಿಯರು ತಾವು ಅನುಭವಿಸುವ ನೋವಿಗೆ ತಾವೇ ಹೊಣೆಗಾರರು ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಇನ್ನಾದರೂ ನಮ್ಮ ಯುವತಿಯರು ಕಣ್ಣು ಬಿಟ್ಟು ನೋಡಿ, ಭಾವನಾತ್ಮಕ ನಿರ್ಧಾರಗಳಿಗಿಂತ ವಾಸ್ತವದ ಚಿಂತನೆ ಮಾಡುವುದು ಒಳಿತು. ಹೆತ್ತವರ ಹಾರೈಕೆ ಇಲ್ಲದ ಮದುವೆ ಯಾವತ್ತಿದ್ದರೂ ಕಷ್ಟದ ಹಾದಿಯೇ ಎಂಬುದಕ್ಕೆ ಈ ಕಥೆಯೇ ಸಾಕ್ಷಿ.

Latest News