ಸಾಮಾನ್ಯವಾಗಿ ಐಟಿ ಕಂಪನಿ ಅಂದ್ರೆ ಅಲ್ಲಿ ಕೆಲಸ, ಪ್ರಾಜೆಕ್ಟ್, ಟಾರ್ಗೆಟ್ ಇರುತ್ತೆ ಅಂತ ನಾವೆಲ್ಲಾ ಅನ್ಕೊಳ್ತೀವಿ. ಆದ್ರೆ ಮಹಾರಾಷ್ಟ್ರದ ನಾಸಿಕ್‌ನಲ್ಲಿರೋ ಟಿಸಿಎಸ್ (TCS) ಬಿಲ್ಡಿಂಗ್ ಒಳಗೆ ನಡೀತಿದ್ದ ಆಟ ಕೇಳಿದ್ರೆ ನೀವು ಅಕ್ಷರಶಃ ಹೌಹಾರಿ ಹೋಗ್ತೀರಾ. ಇದು ಯಾವುದೋ ಒಂದು ಲವ್ ಸ್ಟೋರಿ ಅಲ್ಲ, ಬದಲಿಗೆ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ನಡೆಸುತ್ತಿದ್ದ ಒಂದು ಪೈಶಾಚಿಕ ಮತಾಂತರದ ಜಾಲ. 'ಲವ್ ಜಿಹಾದ್' ಅನ್ನೋದು ಬರೀ ಕಟ್ಟುಕಥೆ ಅಂತ ಹೇಳೋ ಬುದ್ಧಿಜೀವಿಗಳ ಬಾಯಿ ಮುಚ್ಚಿಸುವಂತಹ ಸತ್ಯ ಈಗ ಪೊಲೀಸರ ತನಿಖೆಯಿಂದ ಹೊರಬಂದಿದೆ.
ಕಳೆದ ಫೆಬ್ರವರಿಯಲ್ಲಿ ಒಬ್ಬ ಹಿಂದೂ ಯುವತಿ ಧೈರ್ಯ ಮಾಡಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದಾಗ ಈ ಮಹಾ ಹಗರಣದ ಮೊದಲ ಎಳೆ ಸಿಕ್ಕಿತು. ಆಕೆ ಕೊಟ್ಟ ದೂರು ಕೇಳಿ ಪೊಲೀಸರೇ ಶಾಕ್ ಆದ್ರು. 'ಆಫೀಸಿನಲ್ಲಿ ನನ್ನನ್ನ ಪ್ರೀತಿಸೋ ತರ ನಟಿಸಿ, ಮದುವೆ ಆಗ್ತೀನಿ ಅಂತ ನಂಬಿಸಿ ಲೈಂ*ಗಿಕ ದೌರ್ಜನ್ಯ ಎಸಗಿದ್ದಾರೆ. ಅಷ್ಟೇ ಅಲ್ಲ, ಬಲವಂತವಾಗಿ ಬೀಫ್ (ದನದ ಮಾಂಸ) ತಿನ್ನಿಸಿ, ನಮಾಜ್ ಮಾಡಿಸಿ, ಮತಾಂತರ ಆಗೋಕೆ ಪ್ರೆಶರ್ ಹಾಕಿದ್ದಾರೆ. ಈಗ ಮದುವೆ ಆಗು ಅಂದ್ರೆ, ನಿನ್ನ ವೀಡಿಯೋ ಲೀಕ್ ಮಾಡ್ತೀನಿ ಅಂತ ಬೆದರಿಸ್ತಿದ್ದಾರೆ. ಆಫೀಸಿನಲ್ಲಿ ದೂರು ನೀಡಿದ್ರೆ ಕೆಲಸದಿಂದ ತೆಗಿಸ್ತೀವಿ ಅಂತ ಅಲ್ಲಿನವರೂ ಹೆದರಿಸ್ತಿದ್ದಾರೆ' ಅಂತ ಆಕೆ ಕಣ್ಣೀರಿಟ್ಟಿದ್ದಳು.
ಟಿಸಿಎಸ್ ಅಂತಹ ದೊಡ್ಡ ಕಂಪನಿಯ ಮೇಲೆ ಸುಮ್ಮನೆ ಕೈ ಹಾಕೋಕೆ ಆಗಲ್ಲ ಅಂತ ಪೊಲೀಸರು ಒಂದು ಸಖತ್ ಪ್ಲಾನ್ ಮಾಡಿದ್ರು. ಸುಮಾರು 7 ಜನ ಮಹಿಳಾ ಪೊಲೀಸರು ಎಂಪ್ಲಾಯಿಗಳಾಗಿ, ಹೌಸ್ ಕೀಪಿಂಗ್ ಸ್ಟಾಫ್ ಆಗಿ ಆ ಕಂಪನಿಯೊಳಗೆ ಕೆಲಸಕ್ಕೆ ಸೇರಿಕೊಂಡ್ರು. ಅಲ್ಲಿ ಇವರು ನೋಡಿದ ದೃಶ್ಯಗಳು ಭಯಾನಕವಾಗಿದ್ದವು. ಅದು ಆಫೀಸ್ ತರ ಇರಲಿಲ್ಲ, ಬದಲಿಗೆ ಜಿಹಾದಿಗಳ ಹೆಡ್‌ಕ್ವಾರ್ಟರ್ಸ್ ತರ ಇತ್ತು ಎನ್ನಲಾಗಿದೆ.
ಜಿಹಾದಿಗಳ 'ಆಪರೇಷನ್ ಲವ್' ನಡೆಯುತ್ತಿದ್ದುದು ಹೀಗೆ
ಈ ಜಾಲ ಎಷ್ಟು ವ್ಯವಸ್ಥಿತವಾಗಿತ್ತು ಅಂದ್ರೆ, ಅಲ್ಲಿ ಕೆಲಸ ನಡೆಯುತ್ತಿದ್ದದ್ದೇ ಒಂದು ಪ್ಲಾನ್ ಪ್ರಕಾರ. ಮೊದಲು ಕೆಲಸಕ್ಕೆ ಸೇರೋ ಯುವತಿಯರಲ್ಲಿ ಯಾರು ಬಡವರು, ಯಾರಿಗೆ ಕೆಲಸದ ಅನಿವಾರ್ಯತೆ ತುಂಬಾ ಇದೆ ಅನ್ನೋದನ್ನ ಲಿಸ್ಟ್ ಮಾಡ್ತಿದ್ರು. ಆ ಯುವತಿಯನ್ನ ಒಂದು ನಿರ್ದಿಷ್ಟ ಟೀಮ್‌ಗೆ ಹಾಕಲಾಗುತ್ತಿತ್ತು. ಆ ಟೀಮ್‌ನ ಲೀಡರ್ ಈ ಜಿಹಾದಿ ಜಾಲದ ಮುಖ್ಯಸ್ಥನಾಗಿರುತ್ತಿದ್ದ. ಇನ್ನುಳಿದ ಟೀಮ್ ಮೆಂಬರ್ಸ್ ಎಲ್ಲರೂ ಮುಸ್ಲಿಮರೇ ಇರುತ್ತಿದ್ದರು ಎನ್ನಲಾಗಿ ಕೇಳಿ ಬಂದಿದೆ. ಒಂಟಿಯಾದ ಆ ಯುವತಿಯನ್ನ ಸುತ್ತುವರೆದು ಫ್ರೆಂಡ್ಸ್ ತರ ನಟಿಸಿ, ನಿಧಾನಕ್ಕೆ ಧರ್ಮದ ಬಗ್ಗೆ ಮಾತಾಡಿ ಬ್ರೈನ್ ವಾಶ್ ಮಾಡೋದು ಇವರ ಕೆಲಸವಾಗಿತ್ತು.
ಪೊಲೀಸರ ತನಿಖೆಯಲ್ಲಿ ತಿಳಿದುಬಂದ ಇನ್ನೊಂದು ಕಹಿ ಸತ್ಯ ಅಂದ್ರೆ, ಇಂತಹ ಏಳು ಬೇರೆ ಬೇರೆ ಟೀಮ್‌ಗಳನ್ನು ಮಾಡಿಕೊಂಡು, ಪ್ರತಿ ಟೀಮ್‌ನಲ್ಲೂ ಒಬ್ಬೊಬ್ಬ ಹಿಂದೂ ಯುವತಿಯನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಇದು 2021 ರಿಂದಲೇ ಸದ್ದಿಲ್ಲದೆ ನಡೆಯುತ್ತಿದ್ದು, ನೂರಾರು ಯುವತಿಯರು ಈ ಜಾಲಕ್ಕೆ ಸಿಕ್ಕಿ ನಲುಗಿ ಹೋಗಿದ್ದಾರೆ ಎನ್ನಲಾಗಿದೆ. ಈ ಘಟನೆ ಈಗ ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿ ಅನ್ನೋದು ಯಾರ ನಡುವೆ ಬೇಕಾದರೂ ಆಗಬಹುದು ಅನ್ನೋದು ನಿಜ. ಆದ್ರೆ, ಒಂದು ವ್ಯವಸ್ಥಿತ ಜಾಲ ಮಾಡಿಕೊಂಡು, ಉದ್ಯೋಗದ ಆಸೆ ತೋರಿಸಿ, ಹೆದರಿಸಿ, ಮತಾಂತರ ಮಾಡೋದು ಪ್ರೀತಿಯಲ್ಲ, ಅದು ಕ್ರಿಮಿನಲ್ ಕೃತ್ಯ.
ಹೊಸದಾಗಿ ಕೆಲಸಕ್ಕೆ ಸೇರೋ ಯುವತಿಯರು ಮತ್ತು ಅವರ ಪೋಷಕರು ತುಂಬಾ ಎಚ್ಚರಿಕೆಯಿಂದ ಇರಬೇಕು. ಆಫೀಸಿನಲ್ಲಿ ಯಾರೋ ಅತಿಯಾದ ಕಾಳಜಿ ತೋರಿಸ್ತಿದ್ದಾರೆ ಅಂದ ಕೂಡಲೇ ನಂಬಬೇಡಿ. ಯಾವುದಾದರೂ ಒತ್ತಡ ಅಥವಾ ಬೆದರಿಕೆ ಬಂದರೆ ತಕ್ಷಣ ಮನೆಯವರಿಗೆ ತಿಳಿಸಿ ಅಥವಾ ಪೊಲೀಸರ ಸಹಾಯ ಪಡೆಯಿರಿ. ಸಮಾಜದಲ್ಲಿ ಇಂತಹ ವಿಷಕಾರಿ ಜಾಲಗಳು ಇರೋದು ಈಗ ಸಾಬೀತಾಗಿದೆ, ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ. ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸಿ. ಈ ಲೇಖನವನ್ನ ಎಲ್ಲರಿಗೂ ಶೇರ್ ಮಾಡಿ.