ನಿಮ್ಮ ಫೇವರೆಟ್ ಎಣ್ಣೆ ಬೆಲೆ ಈಗ ಎಷ್ಟಾಗಿದೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್!!

ಬೆಂಗಳೂರು: ರಾಜ್ಯದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ಬೆಲೆ ಏರಿಕೆಯ ಆತಂಕದ ಬೆನ್ನಲ್ಲೇ, ರಾಜ್ಯ ಸರ್ಕಾರ ಮದ್ಯದ ಬೆಲೆಯನ್ನು ಹೆಚ್ಚಿಸಿದೆ. ಇಂದಿನಿಂದಲೇ (ಮೇ 13, 2026) ಹೊಸ ದರಗಳು ಜಾರಿಗೆ ಬಂದಿದ್ದು, ಮದ್ಯಪ್ರಿಯರು ಸರ್ಕಾರದ ವಿರುದ್ಧ ಫುಲ್ ಆಕ್ರೋಶ ಹೊರಹಾಕುತ್ತಿದ್ದಾರೆ.

ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ | Photo Credit: CANVA
ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ | Photo Credit: CANVA

ಬೊಕ್ಕಸ ತುಂಬಿಸಲು ಬೆಲೆ ಏರಿಕೆ?

ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಖಾಲಿಯಾಗುತ್ತಿರುವ ಖಜಾನೆಯನ್ನು ತುಂಬಿಸಲು ಪದೇ ಪದೇ ಮದ್ಯದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ವಿಶೇಷವೆಂದರೆ, ಸಾಮಾನ್ಯ ಜನರು ಹೆಚ್ಚಾಗಿ ಬಳಸುವ ಕಡಿಮೆ ಬೆಲೆಯ ಮದ್ಯದ ಬ್ರ್ಯಾಂಡ್‌ಗಳ ಬೆಲೆ ಏರಿಸಲಾಗಿದ್ದು, ಪ್ರೀಮಿಯಂ ಅಥವಾ ದುಬಾರಿ ಮದ್ಯದ ಬೆಲೆಯನ್ನು ಸ್ವಲ್ಪ ಇಳಿಸಲಾಗಿದೆ!

ಯಾವುದು ಏರಿಕೆ? (ಹೊಸ ದರ ಪಟ್ಟಿ - 180ml ಗೆ)

ಸಾಮಾನ್ಯವಾಗಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್‌ಗಳ ಬೆಲೆ 20 ರಿಂದ 30 ರೂಪಾಯಿವರೆಗೆ ಹೆಚ್ಚಾಗಿದೆ:

MC ಬ್ರಾಂಡಿ: 185 ರೂ.ನಿಂದ 215 ರೂ.ಗೆ ಏರಿಕೆ.

8PM ವಿಸ್ಕಿ: 135 ರೂ.ನಿಂದ 165 ರೂ.ಗೆ ಏರಿಕೆ.

BP (ಸಿಗ್ನೇಚರ್): 135 ರೂ.ನಿಂದ 165 ರೂ.ಗೆ ಏರಿಕೆ.

DSP ಬ್ಲ್ಯಾಕ್: 185 ರೂ.ನಿಂದ 215 ರೂ.ಗೆ ಏರಿಕೆ.

OT (ಓಲ್ಡ್ ಟಾವೆರ್ನ್): 115 ರೂ.ನಿಂದ 145 ರೂ.ಗೆ ಏರಿಕೆ.

ಒರಿಜಿನಲ್ ಚಾಯ್ಸ್: 95 ರೂ.ನಿಂದ 120 ರೂ.ಗೆ ಏರಿಕೆ.

ಸಿಲ್ವರ್ ಕಪ್: 95 ರೂ.ನಿಂದ 120 ರೂ.ಗೆ ಏರಿಕೆ.

ಓಲ್ಡ್ ಮಾಂಕ್: 155 ರೂ.ನಿಂದ 175 ರೂ.ಗೆ ಏರಿಕೆ.

ಯಾವುದು ಇಳಿಕೆ? (ಸಿಹಿ ಸುದ್ದಿ ಯಾರಿಗೆ?)

ದುಬಾರಿ ಬ್ರ್ಯಾಂಡ್ ಇಷ್ಟಪಡುವವರಿಗೆ ಸರ್ಕಾರ ಸ್ವಲ್ಪ ರಿಲೀಫ್ ನೀಡಿದೆ. ಸುಮಾರು 5 ಪ್ರಮುಖ ಬ್ರ್ಯಾಂಡ್‌ಗಳ ಬೆಲೆ ಇಳಿಕೆಯಾಗಿದೆ:

ಮ್ಯಾನ್ಷನ್ ಹೌಸ್ (MH): 235 ರೂ.ನಿಂದ 215 ರೂ.ಗೆ ಇಳಿಕೆ.

ಇಂಪೀರಿಯಲ್ ಬ್ಲ್ಯೂ (IB): 235 ರೂ.ನಿಂದ 215 ರೂ.ಗೆ ಇಳಿಕೆ.

MC ವಿಸ್ಕಿ: 235 ರೂ.ನಿಂದ 215 ರೂ.ಗೆ ಇಳಿಕೆ.

ಆಫ್ಟರ್ ಡಾರ್ಕ್: 235 ರೂ.ನಿಂದ 215 ರೂ.ಗೆ ಇಳಿಕೆ.

ಬ್ಲ್ಯಾಕ್ ಅಂಡ್ ವೈಟ್: 585 ರೂ.ನಿಂದ 520 ರೂ.ಗೆ ಭಾರಿ ಇಳಿಕೆ.

ಮದ್ಯಪ್ರಿಯರ ಆಕ್ರೋಶ

"ಸರ್ಕಾರಕ್ಕೆ ದುಡ್ಡು ಬೇಕಾದಾಗಲೆಲ್ಲಾ ನಮ್ಮ ಜೇಬಿಗೆ ಕೈ ಹಾಕುತ್ತಾರೆ" ಎಂದು ಮದ್ಯಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಡಿಮೆ ಬೆಲೆಯ ಮದ್ಯವನ್ನು ಅವಲಂಬಿಸಿರುವ ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರಿಗೆ ಈ ಬೆಲೆ ಏರಿಕೆ ದೊಡ್ಡ ಹೊರೆಯಾಗಲಿದೆ. ಆದರೆ, ದುಬಾರಿ ಮದ್ಯದ ಬೆಲೆ ಇಳಿಸಿರುವುದು ಶ್ರೀಮಂತರಿಗೆ ಅನುಕೂಲ ಮಾಡಿಕೊಡಲು ಎಂಬ ಆರೋಪವೂ ಕೇಳಿಬರುತ್ತಿದೆ.

Latest News