Mar 29, 2026 Languages : ಕನ್ನಡ | English

ಜಾತ್ರೆ ಮುಗಿಸಿ ಮದುವೆ ಮಾಡಬೇಕಿದ್ದ ತಂದೆಗೆ ಕಾದಿತ್ತು ಆಘಾತ - ಚಂದ್ರು ಹತ್ಯೆ ಹಿಂದೆ ಅಡಗಿದೆ ಭಯಾನಕ ಸತ್ಯ!!

ಐಪಿಎಲ್ ಸೀಸನ್ 19 ಶುರುವಾಗಿದ್ದೇ ತಡ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಮೊದಲ ಪಂದ್ಯದಲ್ಲೇ ಆರ್‌ಸಿಬಿ ಭರ್ಜರಿ ಜಯ ಸಾಧಿಸಿ ಫ್ಯಾನ್ಸ್‌ಗೆ ಫುಲ್ ಜೋಶ್ ನೀಡಿದೆ. ಬಲಿಷ್ಠ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ 6 ವಿಕೆಟ್‌ಗಳ ಗೆಲುವು ದಾಖಲಿಸಿದ ಆರ್‌ಸಿಬಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆದರೆ ಈ ಸೋಲಿನ ನಂತರ ಹೈದರಾಬಾದ್ ತಂಡದ ಹಂಗಾಮಿ ಕ್ಯಾಪ್ಟನ್ ಇಶಾನ್ ಕಿಶನ್ ಮಾತ್ರ, "ವಿರಾಟ್ ಕೊಹ್ಲಿ ಅನ್ನೋ ಮನುಷ್ಯನ ವಿಕೆಟ್ ಬೇಗ ಸಿಕ್ಕಿದ್ರೆ ನಾವು ಏನಾದ್ರೂ ಮಾಡಬಹುದಿತ್ತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗದಗ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು!!
ಗದಗ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು!!

ಚಿನ್ನಸ್ವಾಮಿಯಲ್ಲಿ 'ಕಿಂಗ್' ಕೊಹ್ಲಿ ದರ್ಬಾರ್!

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಮಾಡೋಕೆ ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡಕ್ಕೆ ಆರ್‌ಸಿಬಿ ಬೌಲರ್‌ಗಳು ಆರಂಭದಲ್ಲೇ ಶಾಕ್ ಕೊಟ್ಟರು. ಆದರೂ ಹೇಗೋ ಚೇತರಿಸಿಕೊಂಡ ಹೈದರಾಬಾದ್ ಪಡೆ 20 ಓವರ್‌ಗಳಲ್ಲಿ 201 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಆದರೆ, ಚೇಸಿಂಗ್‌ಗೆ ಇಳಿದ ಕಿಂಗ್ ಕೊಹ್ಲಿ ಮೂಡ್ ಹೇಗಿತ್ತು ಅಂದ್ರೆ, ಬೌಲರ್‌ಗಳು ಎಲ್ಲಿ ಹಾಕಿದ್ರೂ ಬಾಲ್ ಬೌಂಡರಿ ದಾಟುತ್ತಿತ್ತು. ಕೇವಲ 38 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಫೋರ್‌ಗಳ ನೆರವಿನಿಂದ ಅಜೇಯ 69 ರನ್ ಚಚ್ಚಿದ ಕೊಹ್ಲಿ, ಪಂದ್ಯವನ್ನು ಏಕಪಕ್ಷೀಯವಾಗಿ ಮುಗಿಸಿದರು. ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲೇ ಈ ಗುರಿಯನ್ನು ಮುಟ್ಟಿ 'ಹೈದರಾಬಾದ್ ಬಿರಿಯಾನಿ'ಯನ್ನು ಸಲೀಸಾಗಿ ಜೀರ್ಣಿಸಿಕೊಂಡಿತು!

ಸೋಲಿನ ನಂತರ ಮಾತನಾಡಿದ ಇಶಾನ್ ಕಿಶನ್ ಅವರ ಮಾತುಗಳಲ್ಲಿ ಕೊಂಚ ನಿರಾಸೆ ಎದ್ದು ಕಾಣುತ್ತಿತ್ತು. "ನೋಡಿ, ನಾವು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದು ನಮಗೆ ದೊಡ್ಡ ಹೊಡೆತ ನೀಡಿತು. ಮೊದಲ 3-4 ಓವರ್ ಆರ್‌ಸಿಬಿ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಅಲ್ಲಿ ನಾವು ಎಡವಿದ್ವು. ನಾವು ಬ್ಯಾಟಿಂಗ್ ಮಾಡುವಾಗ ಶಾಟ್ ಸೆಲೆಕ್ಷನ್ ಬಗ್ಗೆ ಇನ್ನಷ್ಟು ಬುದ್ಧಿವಂತಿಕೆ ಪ್ರದರ್ಶಿಸಬೇಕಿತ್ತು," ಎಂದು ಒಪ್ಪಿಕೊಂಡರು.

ಇನ್ನು ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ ಕಿಶನ್, "ವಿರಾಟ್ ಭಾಯ್ ಚೇಸಿಂಗ್ ಮಾಡುತ್ತಿದ್ದಾರೆ ಅಂದ್ರೆ ಅದು ಬೇರೆ ಲೆವೆಲ್. ಅಂತಹ ಪಂದ್ಯಗಳಲ್ಲಿ ಅವರ ವಿಕೆಟ್ ಆರಂಭದಲ್ಲೇ ಪಡೆಯುವುದು ಎಷ್ಟು ಮುಖ್ಯ ಅನ್ನೋದು ನಮಗೆ ಗೊತ್ತು. ಒಂದು ವೇಳೆ ಅವರ ವಿಕೆಟ್ ಬೇಗ ಸಿಕ್ಕಿದ್ರೆ ನಮಗೆ ಪಂದ್ಯದ ಮೇಲೆ ಹಿಡಿತ ಸಿಗುತ್ತಿತ್ತು. ಆದರೆ ಅವರು ಒಮ್ಮೆ ಸೆಟ್ ಆದ್ರೆ ಆಮೇಲೆ ಯಾರ ಕೈಯಲ್ಲೂ ನಿಲ್ಲಿಸೋಕೆ ಆಗಲ್ಲ," ಎಂದು ಕೊಹ್ಲಿ ಆಟಕ್ಕೆ ಫಿದಾ ಆದರು.

ಹಾಗಂತ ಹೈದರಾಬಾದ್ ತಂಡ ಅಷ್ಟಕ್ಕೇ ಸುಮ್ಮನಾಗುವ ಲಕ್ಷಣ ಕಾಣುತ್ತಿಲ್ಲ. "202 ರನ್ ಕಲೆಹಾಕಿದ್ದು ನಮಗೆ ಪಾಸಿಟಿವ್ ಅಂಶ. ಆದರೆ ಬೌಲಿಂಗ್‌ನಲ್ಲಿ ನಾವು ಸ್ವಲ್ಪ ಎಚ್ಚರದಿಂದ ಇರಬೇಕಿತ್ತು. ಇದು ಮೊದಲ ಪಂದ್ಯ ಆಗಿರೋದ್ರಿಂದ ಸಣ್ಣಪುಟ್ಟ ತಪ್ಪುಗಳು ಸಹಜ. ಈ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡ್ತೀವಿ ಅನ್ನೋ ನಂಬಿಕೆ ಇದೆ," ಎಂದು ಕಿಶನ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರ ಈ ವರ್ಷದ ಆರಂಭ ಸಖತ್ ಆಗಿಯೇ ಸಿಕ್ಕಿದೆ. ಕೊಹ್ಲಿ ಫಾರ್ಮ್ ನೋಡಿದ್ರೆ ಈ ಬಾರಿ 'ಈ ಸಲ ಕಪ್ ನಮ್ದೇ' ಅನ್ನೋ ಘೋಷಣೆ ಇನ್ನಷ್ಟು ಜೋರಾಗಿ ಕೇಳಿಬರೋದು ಗ್ಯಾರಂಟಿ!

Latest News