Mar 25, 2026 Languages : ಕನ್ನಡ | English

ರೈತರಿಗೆ ಕಂದಾಯ ಇಲಾಖೆಯ ಬಂಪರ್ ಗಿಫ್ಟ್ - ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಈಗ ಜಮೀನು ಖಾತೆ ನಿಮ್ಮ ಹೆಸರಿಗೆ!!

ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ಜಮೀನಿನ ಪಹಣಿಯನ್ನು (RTC) ನಿಮ್ಮ ಹೆಸರಿಗೆ ವರ್ಗಾವಣೆ ಮಾಡಲು ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿದ್ದೀರಾ? ‘ಡೆತ್ ಸರ್ಟಿಫಿಕೇಟ್ (ಮರಣ ಪ್ರಮಾಣಪತ್ರ) ಇಲ್ಲ, ವಂಶವೃಕ್ಷ ತನ್ನಿ’ ಅಂತ ಅಧಿಕಾರಿಗಳು ನಿಮ್ಮನ್ನು ಸತಾಯಿಸುತ್ತಿದ್ದಾರಾ? ಹಾಗಿದ್ದರೆ ರೈತ ಬಾಂಧವರೇ, ನಿಮ್ಮ ಈ ಎಲ್ಲಾ ಟೆನ್ಶನ್‌ಗಳಿಗೆ ಈಗ ಬ್ರೇಕ್ ಬಿದ್ದಿದೆ.

ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಜಮೀನು ಪಹಣಿ ವರ್ಗಾವಣೆ ;
ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಜಮೀನು ಪಹಣಿ ವರ್ಗಾವಣೆ ;

ಕೃಷಿ ಭೂಮಿಯ ಮಾಲೀಕರು ಮರಣ ಹೊಂದಿದ ನಂತರ, ಜಮೀನನ್ನು ಅವರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ (ಮ್ಯುಟೇಶನ್) ಮಾಡಿಸಿಕೊಳ್ಳಲು ರೈತರು ಪಡುತ್ತಿದ್ದ ಪಾಡನ್ನು ತಪ್ಪಿಸಲು ಕಂದಾಯ ಇಲಾಖೆ ಈಗ ದೊಡ್ಡ ರಿಲೀಫ್ ನೀಡಿದೆ. ಪೌತಿ ವಾರಸಾ ಖಾತೆ ಪ್ರಕ್ರಿಯೆಯನ್ನು ಸಂಪೂರ್ಣ ಸರಳಗೊಳಿಸಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮರಣ ಪ್ರಮಾಣಪತ್ರ ಇಲ್ಲದಿದ್ದರೂ ನೋ ಟೆನ್ಶನ್

ಹೌದು, ಇದುವರೆಗೆ ಜಮೀನು ವರ್ಗಾವಣೆಗೆ ಮೃತರ ಡೆತ್ ಸರ್ಟಿಫಿಕೇಟ್ ಕಡ್ಡಾಯವಾಗಿತ್ತು. ಆದರೆ ಹಳೆಯ ಕಾಲದಲ್ಲಿ ತೀರಿಕೊಂಡವರ ಸರ್ಟಿಫಿಕೇಟ್ ಸಿಗುವುದು ಬಹಳ ಕಷ್ಟದ ಕೆಲಸ. ಹೀಗಾಗಿ, ಒಂದು ವೇಳೆ ನಿಮ್ಮ ಬಳಿ ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಈಗ ಗಾಬರಿಯಾಗಬೇಕಿಲ್ಲ. ಸ್ಥಳೀಯ ಗ್ರಾಮ ಆಡಳಿತಾಧಿಕಾರಿ (VA) ಮಾಡುವ ತನಿಖೆ, ಸ್ಥಳೀಯ ಮಹಜರ್ ಮತ್ತು ನಿಮ್ಮಿಂದ ಪಡೆಯುವ ಒಂದು ಅಫಿಡವಿಟ್ ಆಧಾರದ ಮೇಲೆಯೇ ಖಾತೆ ಬದಲಾವಣೆ ಮಾಡಿಕೊಡಲು ಸರ್ಕಾರ ಅವಕಾಶ ನೀಡಿದೆ.

ಫ್ರೀ.. ಫ್ರೀ.. 35 ರೂ. ಶುಲ್ಕವೂ ಮನ್ನಾ

ಇನ್ನು ಮುಂದೆ ವಾರಸುದಾರರು ಪೌತಿ ಖಾತೆಗಾಗಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಗ್ರಾಮ ಆಡಳಿತಾಧಿಕಾರಿಗಳೇ ಆಧಾರ್ ಸೀಡಿಂಗ್ ಮಾಡುವ ಸಮಯದಲ್ಲಿ ತೀರಿಕೊಂಡ ಮಾಲೀಕರ ವಿವರಗಳನ್ನು ಪತ್ತೆಹಚ್ಚಿ, ಅವರೇ ಸ್ವತಃ ‘ಇ-ಪೌತಿ’ (e-Pauti) ತಂತ್ರಾಂಶದಲ್ಲಿ ಮಾಹಿತಿ ಅಪ್‌ಲೋಡ್ ಮಾಡಲಿದ್ದಾರೆ. ವಿಶೇಷವೆಂದರೆ, ಈ ಪ್ರಕ್ರಿಯೆಗಾಗಿ ಈ ಮೊದಲು ಪಾವತಿಸುತ್ತಿದ್ದ 35 ರೂ. ಮ್ಯುಟೇಶನ್ ಶುಲ್ಕವನ್ನು ಸರ್ಕಾರ ಈಗ ಸಂಪೂರ್ಣವಾಗಿ ಮನ್ನಾ ಮಾಡಿದೆ. ಇದು ರೈತರಿಗೆ ಉಚಿತವಾಗಿ ಸಿಗುವ ಸೇವೆಯಾಗಿದೆ. 

ಹೊಸ ನಿಯಮಗಳ ಹೈಲೈಟ್ಸ್

ಪ್ರಮುಖ ಅಂಶಗಳು ಹೊಸ ನಿಯಮದ ಅನ್ವಯ ಮಾಹಿತಿ
ಅರ್ಜಿ ಶುಲ್ಕ ಸಂಪೂರ್ಣ ಉಚಿತ (35 ರೂ. ಮನ್ನಾ)
ಮರಣ ಪ್ರಮಾಣಪತ್ರ? ಇಲ್ಲದಿದ್ದರೆ ಸ್ಥಳೀಯ ಮಹಜರ್ ಮತ್ತು ಅಫಿಡವಿಟ್ ಸಾಕು
ವಂಶವೃಕ್ಷ (Family Tree)? ನೋಟರಿ ಸಮಕ್ಷಮ ಸಹಿ ಮಾಡಿದ ಮನವಿ ಪತ್ರ ಸಾಕು
ವಿಲೇವಾರಿ ಸಮಯ ಕೇವಲ 15 ದಿನಗಳ ನೋಟಿಸ್ ಅವಧಿಯ ನಂತರ ದಾಖಲಾತಿ

15 ದಿನದಲ್ಲಿ ಪಹಣಿಯಲ್ಲಿ ನಿಮ್ಮ ಹೆಸರು

ನೀವು ಅರ್ಜಿ ಸಲ್ಲಿಸಿದ ಮೇಲೆ ಕೇವಲ 15 ದಿನಗಳ ಕಾಲ ನೋಟಿಸ್ ಅವಧಿ ಇರುತ್ತದೆ. ಈ ಸಮಯದಲ್ಲಿ ಬೇರೆ ಯಾರಿಂದಲೂ ಆಕ್ಷೇಪಣೆ ಬಾರದಿದ್ದರೆ, ತಕ್ಷಣವೇ ‘ಭೂಮಿ’ ತಂತ್ರಾಂಶದ ಮೂಲಕ ಹೊಸ ವಾರಸುದಾರರ ಹೆಸರು ನಿಮ್ಮ ಪಹಣಿಯಲ್ಲಿ (RTC) ದಾಖಲಾಗುತ್ತದೆ. ಇದರಿಂದ ನೀವು ಬ್ಯಾಂಕ್ ಸಾಲ ಪಡೆಯಲು ಅಥವಾ ಸರ್ಕಾರದ ಸವಲತ್ತು ಪಡೆಯಲು ಕಾಯುವ ಪ್ರಮೇಯ ಇರುವುದಿಲ್ಲ.

ಯಾಕೆ ಇದು ಮುಖ್ಯ?: ಪಿಎಂ ಕಿಸಾನ್ (PM Kisan) ಸಮ್ಮಾನ್ ನಿಧಿ, ಬೆಳೆ ವಿಮೆ ಪರಿಹಾರ ಮತ್ತು ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಪಡೆಯಲು ಪಹಣಿಯಲ್ಲಿ ನಿಮ್ಮ ಹೆಸರು ಇರುವುದು ಕಡ್ಡಾಯ. ಆದ್ದರಿಂದ ವಿಳಂಬ ಮಾಡದೆ, ಕೂಡಲೇ ನಿಮ್ಮ ಹಳ್ಳಿಯ ಗ್ರಾಮ ಆಡಳಿತ ಅಧಿಕಾರಿಯನ್ನು (VA) ಭೇಟಿಯಾಗಿ ನಿಮ್ಮ ಜಮೀನಿನ ಇ-ಪೌತಿ ಮಾಡಿಸಿಕೊಳ್ಳಿ.

ನಮ್ಮದೊಂದು ಪುಟ್ಟ ಸಲಹೆ

ನೀವು ಅಧಿಕಾರಿಗಳನ್ನು ಭೇಟಿಯಾಗುವ ಮುನ್ನ, ನಿಮ್ಮ ಕುಟುಂಬದ ಎಲ್ಲಾ ವಾರಸುದಾರರ (ಅಣ್ಣ-ತಮ್ಮ, ಅಕ್ಕ-ತಂಗಿ, ತಾಯಿ) ಒಪ್ಪಿಗೆಯಿರುವ ಒಂದು ಜಂಟಿ ಅಫಿಡವಿಟ್ (Affidavit) ಮತ್ತು ಎಲ್ಲರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ಮೊದಲೇ ರೆಡಿ ಇಟ್ಟುಕೊಳ್ಳಿ. ಇದರಿಂದ ಒಂದೇ ದಿನದಲ್ಲಿ ನಿಮ್ಮ ಕೆಲಸ ಶುರುವಾಗುತ್ತದೆ ಮತ್ತು ಕೆಲಸ ಬೇಗ ಮುಗಿಯುತ್ತದೆ. 

Latest News