ಇನ್ಮುಂದೆ ಕರ್ನಾಟಕದ ಕಾಡುಗಳಲ್ಲಿ ಓಪನ್ ಜೀಪ್ ಸಫಾರಿ ಕಂಪ್ಲೀಟ್ ಬ್ಯಾನ್ - ಅರಣ್ಯ ಇಲಾಖೆಯ ಕಡಕ್ ಆರ್ಡರ್‌ನ ಅಸಲಿ ವಿವರ ಇಲ್ಲಿದೆ!!

ಕಾಡು, ಪ್ರಾಣಿಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ವೀಕೆಂಡ್ ಬಂತು ಅಂದ್ರೆ ಸಾಕು, ಸಿಟಿಯ ಜಂಜಾಟದಿಂದ ದೂರ ಹೋಗಿ ಓಪನ್ ಜೀಪ್‌ನಲ್ಲಿ ಗಾಳಿ ಮುಖಕ್ಕೆ ಸವರುತ್ತಾ, ಹುಲಿ-ಸಿಂಹಗಳನ್ನು ನೋಡೋಕೆ ಜನ ಮುಗಿಬೀಳ್ತಾರೆ. ಆದರೆ ಇನ್ಮುಂದೆ ನಮ್ಮ ಕರ್ನಾಟಕದ ಯಾವುದೇ ಕಾಡುಗಳಲ್ಲಿ ನೀವು ಓಪನ್ ಜೀಪ್ ಅಥವಾ ಓಪನ್ ಕ್ಯಾಂಪರ್ ಗಾಡಿಗಳಲ್ಲಿ ಕೂತು ರಾಜಾರೋಷವಾಗಿ ಸಫಾರಿ ಮಾಡೋ ಹಾಗಿಲ್ಲ! ಇಂಥದ್ದೊಂದು ಕಡಕ್ ಆರ್ಡರ್ ಅನ್ನು ನಮ್ಮ ರಾಜ್ಯ ಅರಣ್ಯ ಇಲಾಖೆ ಹೊರಡಿಸಿದೆ!

ಪ್ರವಾಸಿಗರ ಪ್ರಾಣ ರಕ್ಷಣೆಗೆ ಅಖಾಡಕ್ಕಿಳಿದ ಅರಣ್ಯ ಸಚಿವ
ಪ್ರವಾಸಿಗರ ಪ್ರಾಣ ರಕ್ಷಣೆಗೆ ಅಖಾಡಕ್ಕಿಳಿದ ಅರಣ್ಯ ಸಚಿವ

ಇದಕ್ಕೆಲ್ಲಾ ಕಾರಣ ಇತ್ತೀಚೆಗೆ ಕೊಡಗಿನ ಫೇಮಸ್ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ನಡೆದ ಆ ಒಂದು ಭೀಕರ ದುರ್ಘಟನೆಯೇ ಕಾರಣ. ಪ್ರವಾಸಿಗರ ಪ್ರಾಣ ರಕ್ಷಣೆಗಾಗಿ ಸಫಾರಿ ನಿಯಮಗಳನ್ನೇ ಸರ್ಕಾರ ಈಗ ಕಂಪ್ಲೀಟ್ ಆಗಿ ಬದಲಾಯಿಸಿದೆ.

ಅಸಲಿಗೆ ದುಬಾರೆಯಲ್ಲಿ ಏನಾಗಿತ್ತು?

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ಎರಡು ಆನೆಗಳ ನಡುವೆ ಭೀಕರ ಕಾದಾಟ ನಡೆದಿತ್ತು. ಈ ಜಗಳದ ನಡುವೆ ಒಂದು ಆನೆ ಬ್ಯಾಲೆನ್ಸ್ ತಪ್ಪಿ ಸಡನ್ನಾಗಿ ಕೆಳಗೆ ಬಿದ್ದಿತ್ತು. ದುರಾದೃಷ್ಟವಶಾತ್, ಆನೆ ಬೀಳುವ ಜಾಗದಲ್ಲೇ ಇದ್ದ ಮಹಿಳಾ ಪ್ರವಾಸಿಯೊಬ್ಬರು ಅದರ ಕೆಳಗೆ ಸಿಲುಕಿಕೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಈ ಶಾಕಿಂಗ್ ಘಟನೆ ಇಡೀ ವನ್ಯಜೀವಿ ಪ್ರವಾಸೋದ್ಯಮದಲ್ಲಿ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಆತಂಕವನ್ನು ಹುಟ್ಟುಹಾಕಿತ್ತು.!

ಈ ಘಟನೆ ನಡೆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. "ನಮಗೆ ಪ್ರವಾಸಿಗರ ಮಜಾಕ್ಕಿಂತ ಅವರ ಪ್ರಾಣದ ಸುರಕ್ಷತೆಯೇ ಮೊದಲ ಆದ್ಯತೆ" ಅಂತ ಹೇಳಿ ಹೊಸ ಗೈಡ್‌ಲೈನ್ಸ್ ರಿಲೀಸ್ ಮಾಡಿದ್ದಾರೆ.

ಓಪನ್ ಜೀಪ್‌ಗಳಿಗೆ ನೋ ಎಂಟ್ರಿ; ಬಸ್ ಸಫಾರಿಗೆ ಗ್ರೀನ್ ಸಿಗ್ನಲ್;

ನಮ್ಮ ರಾಜ್ಯದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ (BRT) ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಮುಂತಾದ ಕಡೆ ದಿನದಿಂದ ದಿನಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಇಲ್ಲಿಯವರೆಗೆ ಜನ ಓಪನ್ ಜೀಪ್‌ಗಳಲ್ಲಿ ಹೋಗಿ ಪ್ರಾಣಿಗಳನ್ನು ತುಂಬಾ ಹತ್ತಿರದಿಂದ ನೋಡಿ ಎಂಜಾಯ್ ಮಾಡ್ತಿದ್ರು.

ಆದರೆ ಇನ್ಮುಂದೆ ಆ ತರಹದ ಓಪನ್ ವಾಹನಗಳನ್ನು ಬಳಸುವ ಹಾಗಿಲ್ಲ. ಅದರ ಬದಲಿಗೆ ಸಂಪೂರ್ಣವಾಗಿ ಕವರ್ ಆಗಿರೋ ಸುರಕ್ಷಿತ ಬಸ್ ಸಫಾರಿಗಳನ್ನು ಮಾತ್ರ ನಡೆಸಬೇಕು ಎಂದು ಸಚಿವರು ಆದೇಶ ಕೊಟ್ಟಿದ್ದಾರೆ.

ಹಳೇ ಜೀಪ್ ಇರಬೇಕಾದ್ರೆ ಜಾಲರಿ ಕಡ್ಡಾಯ!

ಒಂದು ವೇಳೆ ಈಗ ಚಾಲ್ತಿಯಲ್ಲಿರೋ ಹಳೇ ಕ್ಯಾಂಪರ್ ಅಥವಾ ಜೀಪ್‌ಗಳನ್ನೇ ಬಳಸಲೇಬೇಕು ಅನ್ನೋ ಅನಿವಾರ್ಯತೆ ಇದ್ದರೆ, ಅದಕ್ಕೆ ಕೆಲವು ಕಠಿಣ ಕಂಡೀಷನ್ ಹಾಕಲಾಗಿದೆ:

  • ವಾಹನಗಳ ಸುತ್ತಲೂ ಕಬ್ಬಿಣದ ಗಟ್ಟಿ ಸರಳುಗಳಿಂದ ಮಾಡಿದ ಜಾಲರಿ (Mesh) ಅಳವಡಿಸಬೇಕು.
  • ಇಲ್ಲವೇ ಒಡೆಯಲು ಸಾಧ್ಯವಿಲ್ಲದ ಕಡಕ್ ಗ್ಲಾಸ್ ಕಿಟಕಿಗಳನ್ನು (Toughened Glass) ಹಾಕಿ ಗಾಡಿಯನ್ನು ಪೂರ್ತಿ ಕವರ್ ಮಾಡಬೇಕು.
  • ಇವೆರಡೂ ಇಲ್ಲದಿದ್ದರೆ ಅಂತಹ ಗಾಡಿಗಳಿಗೆ ಸಫಾರಿ ಮಾಡಲು ಪರ್ಮಿಷನ್ ಸಿಗಲ್ಲ.
  • ಸುರಕ್ಷತೆ ವಿಷಯದಲ್ಲಿ ನೋ ಕಾಂಪ್ರಮೈಸ್ - ಸಚಿವರ ವಾರ್ನಿಂಗ್

"ನಮ್ಮ ಕಾಡುಗಳಿಗೆ ಬರೀ ರಾಜ್ಯದವರಷ್ಟೇ ಅಲ್ಲ, ವಿದೇಶಗಳಿಂದಲೂ ಪ್ರವಾಸಿಗರು ಬರ್ತಾರೆ. ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಎಲ್ಲಾ ಸಫಾರಿ ಗಾಡಿಗಳಲ್ಲೂ ಫರ್ಸ್ಟ್ ಏಡ್ ಕಿಟ್ ಇರಬೇಕು ಮತ್ತು ಸಫಾರಿ ಸೆಂಟರ್‌ಗಳ ಹತ್ತಿರ ಯಾವಾಗಲೂ ಒಂದು ಆಂಬುಲೆನ್ಸ್ ರೆಡಿಯಾಗಿರಬೇಕು" ಎಂದು ಸಚಿವರು ಕಟ್ಟುನಿಟ್ಟಿನ ಆರ್ಡರ್ ಮಾಡಿದ್ದಾರೆ.

ಅಷ್ಟೇ ಅಲ್ಲ, ಸಫಾರಿ ಮಾಡುವಾಗ ಪ್ರವಾಸಿಗರು ಜೀಪಿನಿಂದ ಕೆಳಗಿಳಿಯುವುದು, ಪ್ರಾಣಿಗಳ ಹತ್ತಿರ ಹೋಗಿ ಸೆಲ್ಫಿ ತಗೊಳ್ಳೋಕೆ ಸಾಹಸ ಮಾಡುವುದನ್ನು ಕಟ್ಟುನಿಟ್ಟಾಗಿ ಬ್ಯಾನ್ ಮಾಡಲಾಗಿದೆ. ಜನರ ಈ ಓವರ್ ಕುತೂಹಲವೇ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರುತ್ತದೆ, ಹಾಗಾಗಿ ಗಾಡಿಯಿಂದ ಯಾರೂ ಕೆಳಗಿಳಿಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದಸರಾ ಜಂಬೂಸವಾರಿಯಿಂದ ‘ಕಂಚನ್’ ಆನೆ ಔಟ್!

ದುಬಾರೆ ಘಟನೆಯಲ್ಲಿ ಅತಿಯಾದ ಆಕ್ರಮಣಕಾರಿ ವರ್ತನೆ ತೋರಿಸಿ ರಂಪಾಟ ಮಾಡಿದ್ದ ‘ಕಂಚನ್’ ಹೆಸರಿನ ಆನೆಗೆ ಈಗ ದೊಡ್ಡ ಪೆನಾಲ್ಟಿ ಬಿದ್ದಿದೆ. ಇನ್ಮುಂದೆ ಮೈಸೂರಿನ ಪ್ರಸಿದ್ಧ ದಸರಾ ಜಂಬೂಸವಾರಿಯ ಮೆರವಣಿಗೆಯಿಂದ ಕಂಚನ್ ಆನೆಯನ್ನು ಕಂಪ್ಲೀಟ್ ಆಗಿ ಕೈಬಿಡಲು ನಿರ್ಧರಿಸಲಾಗಿದೆ. ಈ ಹಿಂದೆ ದಸರಾದಲ್ಲಿ ಭಾಗವಹಿಸಿದ್ದ ಕಂಚನ್, ಇನ್ಮುಂದೆ ಯಾವುದೇ ಲಿಸ್ಟ್‌ನಲ್ಲಿ ಇರಬಾರದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ದಸರಾ ನೋಡೋಕೆ ಬರೋ ಜನ ಕೂಡ ಆನೆಗಳ ತೀರಾ ಹತ್ತಿರ ಹೋಗದಂತೆ ಹೊಸ ಸುರಕ್ಷತಾ ನಿಯಮಗಳನ್ನು ರೆಡಿ ಮಾಡಲು ಇಲಾಖೆ ಪ್ಲಾನ್ ಮಾಡಿದೆ.

ಒಟ್ಟಿನಲ್ಲಿ ದುಬಾರೆ ದುರಂತದ ಬಳಿಕ ಸರ್ಕಾರ ತಗೊಂಡಿರೋ ಈ ಕಡಕ್ ನಿರ್ಧಾರಗಳು ಕಾಡಿನ ಸಫಾರಿ ಪ್ರಿಯರಿಗೆ ಸ್ವಲ್ಪ ಬೇಸರ ತರಿಸಿದ್ರು, ಪ್ರಾಣದ ರಕ್ಷಣೆ ದೃಷ್ಟಿಯಿಂದ ಇದು ತುಂಬಾ ಒಳ್ಳೆಯ ಹೆಜ್ಜೆ ಅಂತಾನೇ ಹೇಳಬಹುದು. ಇನ್ಮುಂದೆ ಸಫಾರಿಗೆ ಹೋಗುವಾಗ ಜಾಲರಿ ಜೀಪು ಅಥವಾ ಬಸ್ಸುಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತೆ..

Latest News